9ನೇ ತರಗತಿ ಕನ್ನಡ ಪಾರಿವಾಳ ಪದ್ಯದ ಪ್ರಶ್ನೋತ್ತರಗಳು ನೋಟ್ಸ್, 9th Parivala Poem Notes Question Answer Pdf Download, 9th Class Parivala Poem Notes
ತರಗತಿ : 9ನೇ ತರಗತಿ
ಪದ್ಯದ ಹೆಸರು : ಪಾರಿವಾಳ
ಕೃತಿಕಾರರ ಹೆಸರು : ಸು . ರಂ . ಎಕ್ಕುಂಡಿ
Table of Contents
ಕೃತಿಕಾರರ ಪರಿಚಯ :
ಸು . ರಂ . ಎಕ್ಕುಂಡಿ
ಸು . ರಂ . ಎಕ್ಕುಂಡಿ ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ . ಇವರು ಹುಟ್ಟಿದ್ದು ೧೯೨೩ ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ . ಇವರ ಕೃತಿಗಳು : ಕವನ ಸಂಕಲನ : ಶ್ರೀ ಆನಂದ ತೀರ್ಥರು , ಸಂತಾನ , ಹಾವಾಡಿಗರ ಹುಡುಗ , ಮತ್ಸ ಗಂಧಿ , ಬಕುಳದ ಹೂಗಳು . ಕಥಾಸಂಕಲನ : ನೆರಳು , ಕಾದಂಬರಿ : ಪ್ರತಿಬಿಂಬಗಳು . ಪ್ರಶಸ್ತಿಗಳು : ಸೋವಿಯತ್ ಲ್ಯಾಂಡ್‌ನ ನೆಹರು ಪುರಸ್ಕಾರ , ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ , ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿವೆ . ಪ್ರಸ್ತತ ‘ ಪಾರಿವಾಳ ‘ ಪದ್ಯವನ್ನು ಸು . ರಂ . ಎಕ್ಕುಂಡಿ ಅವರ ‘ ಸಮಗ್ರ ಕಥನ ಕವನಗಳು ‘ ಎಂಬ ಕೃತಿಯಿಂದ ಆರಿಸಲಾಗಿದೆ .
9th Class Parivala Poem Notes Question Answer
ಅ ] ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1 ) ಬಲೆಯಲ್ಲಿದ್ದ ಮರಿಗಳು ಹೊರಗೆ ಬರಲು ಏನು ಮಾಡಿದವು ?
ಉತ್ತರ : ಬಲೆಯಲ್ಲಿದ್ದ ಮರಿಗಳು ಹೊರಗೆ ಬರಲು ಕಿರುಚತೊಡಗಿದವು .
2) ಏನನ್ನು ತೊರೆದು ಬಾಳಬೇಕು ?
ಉತ್ತರ : ವ್ಯಾಮೋಹವನ್ನು ತೊರೆದು ಬಾಳಬೇಕು .
3 ) ಮುದ್ದು ಪಾರಿವಾಳಗಳ ಜೋಡಿ ಎಲ್ಲಿ ಸಂಸಾರ ಹೂಡಿದ್ದವು ?
ಉತ್ತರ : ಮುದ್ದು ಪಾರಿವಾಳಗಳ ಜೋಡಿ ದಟ್ಟಕಾಡಿನಲ್ಲಿ ಹೆಮ್ಮರದ ಪೊಟರೆಯಲ್ಲಿ ಸಂಸಾರ ಹೂಡಿತ್ತು .
4 ) ಜೋಡಿ ಪಾರಿವಾಳಗಳು ಹೇಗೆ ಬಾಳುತ್ತಿದ್ದವು ?
ಉತ್ತರ : ಜೋಡಿ ಪಾರಿವಾಳಗಳು ಹಗಲಿರುಳು ಜೊತೆಗೂಡಿ ಬಾಳಿದವು .
ಆ ] ಈ ಪ್ರಶ್ನೆಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1 ) ಬೇಡ ಏನು ಮಾಡಿದನು ?
ಉತ್ತರ : ಹಸಿದಿದ್ದ ಬೇಡನೊಬ್ಬನು ಪಾರಿವಾಳಗಳು ವಾಸವಾಗಿದ್ದ ಮರದ ಬಳೆಬಂದು ಬಲೆಯನ್ನು ಹರಡಿದನು . ಆ ಬಲೆಗೆ ಬಿದ್ದ ಪಾರಿವಾಳಗಳ ಸಂಸಾರವನ್ನು ಹೊತ್ತುಕೊಂಡು ಹೋದನು .
2 ) ಪಾರಿವಾಳಗಳ ಆನಂದಕ್ಕೆ ಕಾರಣವೇನು ?
ಉತ್ತರ : ಪಾರಿವಾಳವು ಇಟ್ಟ ಮೊಟ್ಟೆ ಒಡೆದು ಮರಿಗಳು ಹೊರ ಬಂದಾಗ ಅವುಗಳ ಪ್ರೀತಿ ಹೆಚ್ಚಾಯಿತು . ಪ್ರತಿನಿತ್ಯ ಆ ಮರಿಗಳ ಮಧುರವಾದ ಚಿಲಿಪಿಲಿ ಸದ್ದು ಕೇಳುತ್ತಾ ಪಾರಿವಾಳಗಳಿಗೆ ಆನಂದವಾಯಿತು .
ಇ ] ಈ ಪ್ರಶ್ನೆಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ
1 ) ‘ ಪಾರಿವಾಳ ‘ ಪದ್ಯದ ಕಥೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .
ದಟ್ಟವಾದ ಕಾಡಿನ ಹೆಮ್ಮರದ ಪೊಟರೆಯಲ್ಲಿ ಪಾರಿವಾಳಗಳ ಜೋಡಿ ವಾಸವಾಗಿದ್ದವು . ಅವು ಪರಸ್ಪರ ಒಂದನ್ನೊಂದು ಬಿಟ್ಟಿರದಷ್ಟು ಪ್ರೀತಿ ಹೊಂದಿದ್ದವು . ಒಮ್ಮೆ ಹೆಣ್ಣು ಪಾರಿವಾಳವು ಮೊಟ್ಟೆಗಳನ್ನು ಇಟ್ಟಿತು . ಆ ಮೊಟ್ಟೆಗಳು ಒಡೆದು ಹೊರಬಂದು ಚಿಲಿಪಿಲಿ ಸದ್ದು ಮಾಡುವುದನ್ನು ಕೇಳುತ್ತಾ ಪಾರಿವಾಳಗಳು ಆನಂದದಿಂದ ಬಾಳುತ್ತಿದ್ದವು . ಹೀಗಿರುವಾಗ ಒಂದು ದಿನ ಒಬ್ಬ ಬೇಡನು ಬಲೆ ಹಾಕಿದನು . ಆಟವಾಡುತ್ತಿದ್ದ ಪುಟ್ಟಮರಿಗಳು ಬೇಡನು ಹಾಕಿದ್ದ ಬಲೆಗೆ ಸಿಕ್ಕಿಬಿದ್ದವು . ಬಿಡಿಸಿಕೊಳ್ಳಲು ಕಿರುಚಾಡತೊಡಗಿದವು . ಬಲೆಗೆ ಸಿಲುಕಿದ ಪುಟ್ಟ ಮರಿಗಳನ್ನು ಕಂಡ ತಾಯಿ ಪಾರಿವಾಳ ತಾನೂ ಬಲೆಗೆ ದುಮುಕಿತು . ಹೆಣ್ಣು ಪಾರಿವಾಳವನ್ನು ಬಿಟ್ಟಿರಲಾರದ ಗಂಡುಪಾರಿವಾಳವು ಕಣ್ಣೀರಿಡುತ್ತಾ ತಾನೂ ಬಲೆಯ ಒಳಗೆ ಹೋಯಿತು . ಹೀಗೆ ಜೋಡಿ ಪಾರಿವಾಳಗಳು ಕುರುಡು ವಾತ್ಸಲ್ಯದ ಅವಿವೇಕದಿಂದ ತಾವೂ ಬಲೆಗೆ ಸಿಲುಕಿ ಬೇಡನ ಪಾಲಾದವು . ‘ ಮೋಹ ‘ ಎಂಬುದು ಸರ್ವನಾಶಕ್ಕೆ ಕಾರಣ . ವ್ಯಾಮೋಹ ತೊರೆದು ತಾಳ್ಮೆಯಿಂದ ಯೋಚಿಸಿ ಕಾರ್ಯ ಸಾಧನೆ ಮಾಡಬೇಕು ಎಂಬುದೇ ಈ ಕಥನ ಕವನದ ಆಶಯವಾಗಿದೆ .
2 ) ಜೋಡಿ ಪಾರಿವಾಳಗಳ ದುಡುಕಿನ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ?
ಉತ್ತರ : ಜೋಡಿ ಪಾರಿವಾಳಗಳು ದುಡುಕಿನಿಂದ ತಮ್ಮ ಮರಿಗಳ ಮೇಲಿನ ವ್ಯಾಮೋಹದಿಂದ ತಾವೂ ಸಹ ಬೇಡನಿಗೆ ಆಹಾರವಾದದ್ದು ಸರಿಯಲ್ಲ . ತಮ್ಮ ಮರಿಗಳು ಬಲೆಗೆ ಸಿಕ್ಕಿಕೊಂಡದನ್ನು ನೋಡಿದ ಹೆಣ್ಣು ಪಾರಿವಾಳ ವಿವೇಚನೆಯಿಲ್ಲದೆ ಮರಿಗಳ ಮೇಲಿನ ಅತಿಯಾದ ವಾತ್ಸಲ್ಯದಿಂದ ತಾನೂ ಬಲೆಗೆ ಸಿಕ್ಕಿಕೊಂಡಿತು . ಹೆಣ್ಣು ಪಾರಿವಾಳವನ್ನು ಬಿಟ್ಟಿರದಷ್ಟು ಹಚ್ಚಿಕೊಂಡಿದ್ದ ಗಂಡು ಪಾರಿವಾಳವು ತಾನೂ ಕೂಡ ಬಲೆಗೆ ಸಿಕ್ಕಿಕೊಂಡಿತು . ಹೀಗೆ ಜೋಡಿ ಪಾರಿವಾಳಗಳು ಅತಿಯಾದ ವ್ಯಾಮೋಹದಿಂದ ಪ್ರಾಣ ಕಳೆದುಕೊಂಡವು . ಸಾಧ್ಯವಾದರೆ ತಮ್ಮನ್ನೂ ರಕ್ಷಿಸಿಕೊಂಡು ಮರಿಗಳನ್ನು ಕಾಪಾಡಲು ಯೋಚಿಸಬಹುದಿತ್ತು . ಸಾಧ್ಯವಾಗದಿದ್ದರೆ ತಾವಾದರೂ ಬದುಕಬಹುದಿತ್ತು . ಆದ್ದರಿಂದ ವ್ಯಾಮೋಹ ಒಳ್ಳೆಯದಲ್ಲ ಎಂದು ಹೇಳಬಹುದು .
ಈ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ .
1 ) “ ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ ”
ಉತ್ತರ : – ಆಯ್ಕೆ : ಈ ವಾಕ್ಯವನ್ನು ಸು.ರಂ.ಎಕ್ಕುಂಡಿ ಅವರ ‘ ಸಮಗ್ರ ಕಥನ ಕವನಗಳು ‘ ಎಂಬ ಕೃತಿಯಿಂದ ತೆಗೆದುಕೊಳ್ಳಲಾಗಿರುವ ‘ ಪಾರಿವಾಳ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಜೋಡಿ ಪಾರಿವಾಳಗಳು ಮರಿಗಳ ಮೇಲಿನ ಕುರುಡು ವಾತ್ಸಲ್ಯದ ಅವಿವೇಕದಿಂದ ತಾವೂ ಬಲೆಗೆ ಸಿಲುಕಿ ಬೇಡನ ಪಾಲಾದವು . ‘ ಮೋಹ ‘ ಎಂಬುದು ಸರ್ವನಾಶಕ್ಕೆ ಕಾರಣ ಎಂದು ಹೇಳುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ವ್ಯಾಮೋಹ ತೊರೆದು ತಾಳ್ಮೆಯಿಂದ ಯೋಚಿಸಿ ಕಾರ್ಯಸಾಧನೆ ಮಾಡಬೇಕು . ಅತಿಯಾದ ವ್ಯಾಮೋಹ ಒಳ್ಳೆಯದಲ್ಲ ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .
2 ) “ ಒಳಗೆ ಬಂದಿತು ಬಳಿಗೆ ಬಿಕ್ಕಿ ಬಿಕ್ಕಿ ”
ಉತ್ತರ : – ಆಯ್ಕೆ : ಈ ವಾಕ್ಯವನ್ನು ಸು.ರಂ.ಎಕ್ಕುಂಡಿ ಅವರ ‘ ಸಮಗ್ರ ಕಥನ ಕವನಗಳು ‘ ಎಂಬ ಕೃತಿಯಿಂದ ತೆಗೆದುಕೊಳ್ಳಲಾಗಿರುವ ‘ ಪಾರಿವಾಳ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಪಾರಿವಾಳಗಳ ಪುಟ್ಟಮರಿಗಳು ಬೇಡನ ಬಲೆಗೆ ಸಿಕ್ಕಿಬಿದ್ದವು . ಬಿಡಿಸಿಕೊಳ್ಳಲು ಕಿರುಚಾಡತೊಡಗಿದವು . ಬಲೆಗೆ ಸಿಲುಕಿದ ಪುಟ್ಟ ಮರಿಗಳನ್ನು ಕಂಡ ತಾಯಿ ಪಾರಿವಾಳ ತಾನೂ ಬಲೆಗೆ ದುಮುಕಿತು . ಹೆಣ್ಣು ಪಾರಿವಾಳವನ್ನು ಬಿಟ್ಟಿರಲಾರದ ಗಂಡುಪಾರಿವಾಳವು ಕಣ್ಣೀರಿಡುತ್ತಾ ತಾನೂ ಬಲೆಯ ಒಳಗೆ ಹೋಯಿತು ಎಂದು ಹೇಳುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಜೋಡಿ ಪಾರಿವಾಳಗಳ ಕುರುಡು ವಾತ್ಸಲ್ಯವು ಇಲ್ಲಿ ಸ್ವಾರಸ್ಯವಾಗಿ ಮೂಡಿಬಂದಿದೆ .
ಭಾಷಾ ಚಟುವಟಿಕೆ
1 .ರೂಪಕಾಲಂಕಾರವನ್ನು ನಿದರ್ಶನದ ಮೂಲಕ ವಿವರಿಸಿ
ಲಕ್ಷಣ : ಉಪಮೇಯ , ಉಪಮಾಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ
ಉದಾ : ಸೀತೆಯ ಮುಖ ಕಮಲ ಅರಳಿತು
ಉಪಮೇಯ : ಸೀತೆಯ ಮುಖ
ಉಪಮಾನ : ಕಮಲ
ಅಲಂಕಾರ : ರೂಪಕಾಲಂಕಾರ
ಸಮನ್ವಯ : ಉಪಮೇಯವಾದ ಸೀತೆಯ ಮುಖವನ್ನು ಉಪಮಾನವಾದ ಕಮಲಕ್ಕೆ ಅಭೇದವಾಗಿ ರೂಪಿಸಿದೆ ಹಾಗಾಗಿ ಸಮನ್ವಯ ಇದು ರೂಪಕಾಲಂಕಾರ
2 , “ಸಾವಿತ್ರಿಯ ಮುಖಕಮಲ ಅರಳಿತು” ಇಲ್ಲಿರುವ ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿರಿ
ಲಕ್ಷಣ : ಉಪಮೇಯ, ಉಪಮಾನಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ ,
ಉಪಮೇಯ : ಸಾವಿತ್ರಿಯ ಮುಖ
ಉಪಮಾನ : ಕಮಲ
ಅಲಂಕಾರ : ರೂಪಕಾಲಂಕಾರ
ಸಮನ್ವಯ : ಉಪಮೇಯವಾದ ಸಾವಿತ್ರಿಯ ಮುಖವನ್ನು ಉಪಮಾನವಾದ ಕಮಲ ಕೈ ಅಭೇದವಾಗಿ ರೂಪಿಸಿದೆ . ಹಾಗಾಗಿ ಇದು ರೂಪಕಾಲಂಕಾರ
3, “ಶಾಲೆಗೆ ಈ ವಿದ್ಯಾರ್ಥಿಯೊಂದು ರತ್ನ”
ಲಕ್ಷಣ : ಉಪಮೇಯ , ಉಪಮಾಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ
ಉಪಮೇಯ : ವಿದ್ಯಾರ್ಥಿ
ಉಪಮಾನ : ರತ್ನ
ಅಲಂಕಾರ : ರೂಪಕಾಲಂಕಾರ
ಸಮನ್ವಯ : ಉಪಮೇಯವಾದ ವಿದ್ಯಾರ್ಥಿಯನ್ನು ಉಪಮಾನವಾದ ರತ್ನ ಕೈ ಅಭೇದವಾಗಿ ರೂಪಿಸಿದೆ . ಹಾಗಾಗಿ ಇದು ರೂಪಕಾಲಂಕಾರ ,,
4, ” ಮನೆಯೇ ಧರ್ಮಾಶ್ರಮ “
ಲಕ್ಷಣ : ಉಪಮೇಯ , ಉಪಮಾಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ
ಉಪಮೇಯ : ಮನೆ
ಉಪಮಾನ : ಧರ್ಮಾಶ್ರಮ
ಅಲಂಕಾರ : ರೂಪಕಾಲಂಕಾರ
ಸಮನ್ವಯ : ಉಪಮೇಯವಾದ ಮನೆಯನ್ನು ಉಪಮಾನವಾದ ಧರ್ಮಾಶ್ರಮಕ್ಕೆ ಅಭೇದವಾಗಿ ರೂಪಿಸಿದೆ ಹಾಗಾಗಿ ಇದು ರೂಪಕಾಲಂಕಾರ
5. ‘ ಪಾರಿವಾಳ ‘ ಪದ್ಯದಲ್ಲಿರುವ ಅಂತ್ಯಪ್ರಾಸ ಪದಗಳನ್ನು ಪಟ್ಟಿಮಾಡಿ .
ಹೂಡಿ – ಜೋಡಿ
ಒಂದನೊಂದು – ಬಂದು
ಕೇಳಿ – ಬಾಳಿ
ಸೆರೆಗೆ – ಹೊರಗೆ
ಹಕ್ಕಿ – ಬಿಕ್ಕಿ
ಹಿಂಡು – ಕೊಂಡು
ಬಾಳಬೇಕು – ತಾಳಬೇಕು
9th Class Parivala Poem Notes Question Answer Pdf
ಇತರೆ ಪಾಠಗಳು :