8ನೇ ತರಗತಿ ತಲಕಾಡಿನ ವೈಭವ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 8th Class Kannada 3rd Lesson Talakadina Vaibhava Kannada Notes Question Answer Guide Pdf Download
ತರಗತಿ : 8ನೇ ತರಗತಿ
ಪಾಠದ ಹೆಸರು : ತಲಕಾಡಿನ ವೈಭವ
ಕೃತಿಕಾರರ ಹೆಸರು : ಹೀರೇಮಲ್ಲೂರು ಈಶ್ವರನ್
Table of Contents
ಕೃತಿಕಾರರ ಪರಿಚಯ :
ಹೀರೇಮಲ್ಲೂರು ಈಶ್ವರನ್
* ಹಿರೇಮಲ್ಲೂರು ಈಶ್ವರನ್ ಅವರ ಜನನ : ೧೧.೦೧.೧೯೨೨ ಊರು : ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹಿರೇಮಲ್ಲೂರು , * ಇವರ ಪ್ರಮುಖ ಕೃತಿಗಳೆಂದರೆ : ಕವಿ ಕಂಡ ನಾಡು ( ಪ್ರವಾಸ ಕಥನ ) , ವಿಷನಿಮಿಷಗಳು , ಭಾರತದ ಹಳ್ಳಿಗಳು , ವಲಸೆ ಹೋದ ಕನ್ನಡಿಗನ ಕತೆ , ಪಾಲಾಹಲ , ರಾಜಾರಾಣಿ ದೇಖೋ , ಶಿವನ ಬುಟ್ಟಿ , ತಾಯಿನೋಟ ಮೊದಲಾದವು . * ಪ್ರಶಸ್ತಿ ಪುರಸ್ಕಾರಗಳು : ಶ್ರೀಯುತರ ಹರಿಹರನ ಕೃತಿಗಳು ಒಂದು ಸಂಖ್ಯಾನಿರ್ಣಯ ಮಹಾಪ್ರಬಂಧಕ್ಕೆ ಡಾಕ್ಟರೇಟ್ ದೊರಕಿದೆ . ಹಿರೇಮಲ್ಲೂರು ಈಶ್ವರನ್ ಅವರ ‘ ಕವಿಕಂಡ ನಾಡು ‘ ಪ್ರವಾಸ ಕಥನ ದಿಂದ ಈ ಗದ್ಯಭಾಗವನ್ನು ಆರಿಸಿಕೊಳ್ಳಲಾಗಿದೆ .
Vaibhava Kannada Notes Question Answer
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ವಿಷ್ಣುವರ್ಧನ ವೀರನಾರಾಯಣ ದೇಗುಲವನ್ನು ಕಟ್ಟಿಸಲು ಕಾರಣವೇನು ?
ಉತ್ತರ : ವಿಷ್ಣುವರ್ಧನನು ವಿಕ್ರಮ ಚೋಳನ ಸೇನಾನಿ , ಆದಿಯಮನನ್ನು ಸೋಲಿಸಿ ಗೆಲುವಿನ ಸ್ಮಾರಕವಾಗಿ ತಲಕಾಡಿನ ನೆಲದ ಮೇಲೆ ವಿಜಯನಾರಾಯಣನ ಗುಡಿಕಟ್ಟಿದನು .
2. ರಾಷ್ಟ್ರದ ಚಾರಿತ್ರ್ಯದ ಹೆಗ್ಗುರುತು ಯಾವುದು ?
ಉತ್ತರ : ನಮ್ಮ ದೇವಾಲಯಗಳೇ ನಮ್ಮ ರಾಷ್ಟ್ರದ ಚಾರಿತ್ರದ ಹೆಗ್ಗುರುತುಗಳು , ರಾಷ್ಟ್ರದ ಚಾಲ
3 , ‘ ರಾಯ ‘ , ‘ ಅಣ್ಣ ‘ ಎಂದು ಯಾರನ್ನು ಕರೆಯುತ್ತಿದ್ದರು ?
ಉತ್ತರ : ಚಾವುಂಡರಾಯನನ್ನು ‘ ರಾಯ ‘ , ‘ ಅಣ್ಣ ‘ ಎಂದು ಕರೆಯುತ್ತಿದ್ದರು .
4. ಚಾವುಂಡರಾಯ ಕನ್ನಡಕ್ಕೆ ಕೊಟ್ಟ ಕಾಣೆ ಏನು ?
ಉತ್ತರ : ಚಾವುಂಡರಾಯ ಕನ್ನಡಕ್ಕೆ ಕೊಟ್ಟ ಕಾಣೆ ‘ ಚಾವುಂಡರಾಯ ಪುರಾಣ ‘ ಎಂಬ ಹೆಸರಿನ ಅರವತ್ತಮೂರು ಸುಣ್ಯಪುರುಷರ ಚರಿತ್ರೆ
5. ಲೇಖಕರು ಪ್ರವಾಸದ ವಿವರವನ್ನು ಬರೆಯಲು ಆರಂಭಿಸಿದ್ದು ಎಲ್ಲಿ ?
ಉತ್ತರ : ಲೇಖಕರು ಪ್ರವಾಸದ ವಿವರವನ್ನು ಬರೆಯಲು ಆರಂಭಿಸಿದ್ದು ಶಿವನಸಮುದ್ರದಲ್ಲಿ ,
6. ಗಂಗರ ಮೊದಲ ರಾಜಧಾನಿ ಯಾವುದು ?
ಉತ್ತರ : ಗಂಗರ ಮೊದಲ ರಾಜಧಾನಿ ಕೋಲಾರ ,
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ
1. ಚೋಳರ ಸಾಧನೆಯೇನು ?
ಉತ್ತರ : ಚೋಳರು ಗುಡಿಗೋಪುರಗಳನ್ನು ಕಟ್ಟಿಸಿದರು . ರಾಜೇಶ್ವರ , ವೈಕುಂಠನಾರಾಯಣ , ಮರಳೇಶ್ವರ , ಪಾತಾಳೇಶ್ವರ , ವೈದ್ಯೆಶ್ವರ ಗುಡಿಗಳನ್ನು ಕಟ್ಟಿಸಿದರು .
2. ಚಾವುಂಡರಾಯ ಯಾರು ? ಆತನ ವಿಶೇಷತೆಯೇನು ?
ಉತ್ತರ : ಚಾವುಂಡರಾಯನು ಮಾರಸಿಂಹ , ರಾಚಮಲ್ಲ , ರಸಗಂಗರ ಮಂತ್ರಿ , ಅವನನ್ನು ಜನ ಹೆಸರು ಹಿಡಿದು ಕರೆಯುತ್ತಿರಲಿಲ್ಲ , ‘ ರಾಯ ‘ , ‘ ಅಣ್ಣ ‘ ಎಂದು ಸಂಬೋಧಿಸುತ್ತಿದ್ದರು . ಅವನಿಗೆ ಕನ್ನಡದ ಏಳ್ಗೆಯ ಹಂಬಲವೇ ಹಂಬಲ , ಸ್ವತಃ ಕವಿಯಾಗಿದ್ದ ಅವನು ರಚಿಸಿದ ‘ ಚಾವುಂಡರಾಯ ಪುರಾಣ ‘ ಎಂಬ ಹೆಸರಿನ ಅರವತ್ತಮೂರು ಪುಣ್ಯಪುರುಷರ ಚರಿತೆಯು ಅವನು ಕನ್ನಡಕ್ಕೆ ಕೊಟ್ಟ ಕಾಣಿಕೆಯಾಗಿದೆ .
3. ಶಿವನಸಮುದ್ರದಲ್ಲಿ ಸುಬ್ರಹ್ಮಣ್ಯಮ್ ಮಾಡಿದ ವ್ಯವಸ್ಥೆಗಳಾವುವು ?
ಉತ್ತರ : ಶಿವನಸಮುದ್ರದಲ್ಲಿ ಸುಬ್ರಹ್ಮಣ್ಯಮ್ ಲೇಖಕರು ಮತ್ತು ಅವರ ಸ್ನೇಹಿತರನ್ನು ವಿಶ್ವಾಸದಿಂದ ಸ್ವಾಗತಿಸಿದರು . ನಿಲನೆಯನ್ನು ಕೂಡಲೆ ಖಾಲಿ ಮಾಡಿಸಿದರು . ಹಾಸಿಗೆ ಹಾಸಿಕೊಟ್ಟರು . ಊಟ ಉಪಚಾರದ ಬಗೆಗೆ ಕೇಳಿದರು . ಕೊನೆಗೆ ಹೋಗುವಾಗ ‘ ಗುಡ್ನಾಯಿಟ್ ಅಂದರು .
ಇ ] ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು ಐದು ವಾಕ್ಯಗಳಲ್ಲಿ ಉತ್ತರಿಸಿ .
1. ಸಳನ ವಂಶಕ್ಕೆ ‘ ಹೊಯ್ಸಳ ‘ ಹೆಸರು ಬರಲು ಕಾರಣವೇನು ?
ಉತ್ತರ : ಹೊಯ್ಸಳ ವಂಶದ ಮೂಲಪುರುಷನ ಹೆಸರು ಸಳ , ಮೂಡಿಗೆರೆ ತಾಲೂಕಿನಲ್ಲಿರುವ ಸೊಸೆವೂರು ಇವನ ಜನಸ್ಥಳ , ಆಗಿನ ಸೊಸೆವೂರಿಗೆ ಈಗ ‘ ಅಂಗಡಿ ‘ ಎಂದು ಕರೆಯುತ್ತಾರೆ . ಒಂದು ದಿನ ವಾಸಂತಿಕಾ ದೇವಾಲಯದ ಪೂಜೆಗೆಂದು ಹೋದ ಸಳನು ಸುದತ್ತ ಗುರುವಿನ ಬಳಿ ಉಪದೇಶ ಕೇಳುತ್ತಾ ಕುಳಿತಿದ್ದಾಗ ಹುಲಿಯೊಂದು ಅವನೆಡೆಗೆ ಜಿಗಿದು ಬಂದಿತು . ಆಗ ಸುದತ್ತ ಮುನಿ ತನ್ನ ಕೈಯೊಳಗಿನ ಬೆತ್ತವನ್ನು ಸಳನೆಡೆಗೆ ಚಾಚಿ “ ಹೊಯ್ಸಳ ” ಎಂದು ಆದೇಶವಿತ್ತನೆಂದೂ ಸಳ ಕೂಡಲೆ ಹುಲಿಯನ್ನು ಎದುರಿಸಿ ಅದರ ಗಂಟಲಲ್ಲಿ ಖಡ್ಗವನ್ನು ತುರುಕಿ ಹುಲಿಯನ್ನು ಹೊಯ್ದನೆಂದೂ ದಂತಕಥೆ ಇದೆ . ಅದರಂತೆ ಅಂದಿನಿಂದ ಸಳನ ಮನೆತನಕ್ಕೆ ‘ ಹೊಯ್ಸಳ ‘ ಎಂಬ ಹೆಸರು ಬಂದಿತು .
2. ವೈದ್ಧೇಶ್ವರ ದೇವಾಲಯದ ನಿರ್ಮಾಣದ ಕಾಲನಿರ್ಣಯಕ್ಕೆ ಸಹಕಾರಿಯಾಗುವ ಅಂಶಗಳಾವುವು ? ವಿವರಿಸಿ .
ಉತ್ತರ : ವೈದ್ಯಶ್ವರ ದೇವಾಲಯದ ರಚನೆಯ ಕಾಲ ನಿಶ್ಚಿತವಾಗಿ ತಿಳಿದು ಬಾರದಿದ್ದರೂ ಈಗ ಸಿಕ್ಕಿರುವ ಆಧಾರಗಳ ಅನ್ವಯ ಇದರ ಕಾಲವನ್ನು ಹದಿಮೂರನೆಯ ಶತಮಾನದ ಪೂರ್ವಕ್ಕೆ ನಿರ್ಧರಿಸಲಾಗಿದೆ . ದೇವಾಲಯದ ಹೊರವಲಯದಲ್ಲಿ ಇರುವ ಕಲಶಗಳೂ ಗರ್ಭಗುಡಿಯ ಗೋಪುರವೂ ಶಿಲ್ಪದ ನಿರ್ಮಾಣದಲ್ಲಿ ತೋರಿರುವ ಕೆಲವು ವಿಶಿಷ್ಟ ರೂಪಗಳೂ ಕಟ್ಟಡಕ್ಕೆ ಉಪಯೋಗಿಸಿರುವ ಸಾಮಗಿಯೂ ಈ ಕಾಲವನ್ನು ನಿರ್ಣಯಿಸುವುವು .
3. ಗಂಗದ ಇತಿಹಾಸದ ವಿಶೇಷತೆಯೇನು ?
ಉತ್ತರ : ಗಂಗರ ರಾಜ್ಯ ಗಂಗವಾಡಿ ಎಂದು ಹೆಸರಾಗಿದೆ . ಅವರ ಮೊದಲ ರಾಜಧಾನಿ ಕೋಲಾರ , ಸುಮಾರು ಕ್ರಿ.ಶ. ೫೦೦ ರ ಹೊತ್ತಿಗೆ ಕೋಲಾರದಿಂದ ಹರಿವರ್ಮ ರಾಜಧಾನಿಯನ್ನು ತಲಕಾಡಿಗೆ ತಂದನು , ಅಲ್ಲಿಂದ ಮುಂದಕ್ಕೆ ಐದು ಶತಮಾನಗಳವರೆಗೆ ಅಂದರೆ ಹತ್ತನೆಯ ಶತಮಾನದವರೆಗೂ ಗಂಗರು ಆಳ್ವಿಕೆ ನಡೆಸಿದರು . ಮಾರಸಿಂಹ , ರಾಚಮಲ್ಲ , ರಕ್ಕಸಗಂಗರ ತಲಕಾಡು ಮುಖ್ಯಭೂಮಿ . ಚಾವುಂಡರಾಯನು ಮಾರಸಿಂಹ , ರಾಚಮಲ್ಲ , ರಸಗಂಗರ ಮಂತ್ರಿಯಾಗಿದ್ದನು . ಅವನನ್ನು ಜನ ಹೆಸರು ಹಿಡಿದು ಕರೆಯುತ್ತಿರಲಿಲ್ಲ . ‘ ರಾಯ ‘ , ‘ ಅಣ್ಣ ‘ ಎಂದು ಸಂಬೋಧಿಸುತ್ತಿದ್ದರು . ಸ್ವತಃ ಕವಿಯಾಗಿದ್ದ ಅವನು ‘ ಚಾವುಂಡರಾಯ ಪುರಾಣ ‘ ಕೃತಿ ರಚಿಸಿದ್ದಾನೆ . ಹಾಗೆಯೇ ಮಹಾಕವಿ ರನ್ನನು ಚಾವುಂಡರಾಯ ಮತ್ತು ಅತ್ತಿಮಬ್ಬೆಯ ಆಶ್ರಯ ಪಡೆದಿದ್ದನು .
4 , ಲೇಖಕರು ‘ ಯುರೇಕಾ ‘ ಎಂದು ಕೂಗಿದ ಸಂದರ್ಭವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .
ಉತ್ತರ : ಲೇಖಕರು ವಾಹನ ಚಾಲಕನೊಡನೆ ಆರ್ಕಶ್ವರ ದೇವಾಲಯವನ್ನು ಹುಡುಕುತ್ತಾ ಹೊರಟರು . ಆಗ ರಾತ್ರಿ ಒಂದು ಗಂಟೆ . ಎಡಬಲಕ್ಕೆ ಭತ್ತದ ಗದ್ದೆಗಳು , ನರಿಗಳು ಕೂಗುತ್ತಲಿದ್ದವು . ಸ್ವಲ್ಪ ದೂರ ಹೋಗುವಷ್ಟರಲ್ಲಿ ಗಿಡ ಮರಗಳ ಮೊದೆಯಲ್ಲಿ ಏನೋ ಬೆಳ್ಳಬೆಳ್ಳಗೆ , ಮಸುಕುಮಸುಕಾಗಿ ಕಂಡಿತು . ಅವರ ಎದೆ ಜೋರಿನಿಂದ ಹಾರತೊಡಗಿತು . ಹತ್ತಿರ ಸಮೀಪಿಸಿದರು . ಅವರು ದೇವಾಲಯವನ್ನು ಕಂಡು ಹಿಡಿದ ಸಂತೋಷದಲ್ಲಿ ಆವೇಶದಿಂದ ” ಯುರೇಕಾ ಯುರೇಕಾ ” ಎಂದು ಅವರ ಸ್ನೇಹಿತರಿಗೆ ಕೇಳುವಂತೆ ಕಿರುಚುತ್ತಾ “ ಬರೋ ಗುಡಿ ಸಿಕ್ಕಿತು . ಬರೋ ದೇವಾಲಯ ದೊರೆಯಿತು ” ಎಂದು ಕೂಗಿದರು . ಅವರೆಲ್ಲಾ ಬಂದು ಇವರೊಡನೆ ಆರ್ಕೇಶ್ವರ ದೇವರ ಗುಡಿಯನ್ನು ನೋಡಿದರು .
ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,
1. “ ಮೋಟರು ಓಡಲೊಲ್ಲದು , ಸಾರಥಿ ನಿಲ್ಲಿಸಲಾರನು “
ಉತ್ತರ : ಆಯ್ಕೆ : ಹಿರೇಮಲ್ಲೂರು ಈಶ್ವರನ್ ಅವರ ‘ ಕವಿಕಂಡ ನಾಡು ‘ ಕೃತಿಯಿಂದ ತೆಗೆದುಕೊಳ್ಳಲಾದ “ ತಲಕಾಡಿನ ವೈಭವ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಲೇಖಕರು ಆರ್ಕೇಶ್ವರನ ದರ್ಶನವೊಂದು ಮುಗಿದರೆ ತಲಕಾಡಿನ ಪಂಚಲಿಂಗಗಳ ದರ್ಶನ ಪೂರಿಯಾಗುವುದೆಂದು ಕೊರಕಲು ದಾರಿಯಲ್ಲಿ ಹೋಗುತ್ತಿದ್ದಾಗ ಮೋಟಾರು ಓಡಲೊಲ್ಲದು , ಸಾರಥಿ ನಿಲ್ಲಿಸಲಾರ . ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ . ಅರ್ಕೇಶ್ವರ ದೇವಾಲಯ ಕಾಣದೆ ಹೋದರೆ ಮನಸ್ಸಿನಲ್ಲಿ ಕೊನೆಯವರೆಗೂ ಅತೃಪ್ತಿ ಉಳಿಯುತ್ತದೆ . ಎಂದು ಲೇಖಕರ ಅಭಿಪ್ರಾಯವಾಗಿತ್ತು .
ಸ್ವಾರಸ್ಯ : ಏನೇ ಆದರೂ ಸಂಕಲ್ಪದಂತೆ ಪ್ರವಾಸ ಪೂರ್ಣಗೊಳಿಸಬೇಕೆಂಬ ಲೇಖಕರ ಹಂಬಲ ಇಲ್ಲಿ ಸ್ವಾರಸ್ಯಪೂರ್ಣವಾಗಿದೆ .
2. “ ಸುತ್ತಣ ಲೋಕವೆಲ್ಲ ಮಲಗಿಕೊಂಡಿದೆ “
ಉತ್ತರ : ಆಯ್ಕೆ : ಹಿರೇಮಲ್ಲೂರು ಈಶ್ವರನ್ ಅವರ “ ಕವಿಕಂಡ ನಾಡು ಕೃತಿಯಿಂದ ತೆಗೆದುಕೊಳ್ಳಲಾದ ‘ ತಲಕಾಡಿನ ವೈಭವ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಲೇಖಕರು ಶಿವನಸಮುದ್ರದ ನಿಲನೆಯಲ್ಲಿ ತಂಗಿದ್ದಾಗ ಅಂದಿನ ಪ್ರವಾಸದ ವಿವರವನ್ನು ಬರೆಯಲು ಪ್ರಾರಂಭಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ . ಆಗ ಮಧ್ಯರಾತ್ರಿ ೧೨ ಗಂಟೆ ೧೫ ನಿಮಿಷವಾಗಿತ್ತು . ಆಗ ಎಲ್ಲರೂ ಮಲಗಿ ನಿದ್ರಿಸುತ್ತಿದ್ದ ಸಮಯ . ಅಂತಹ ಸಂದರ್ಭದಲ್ಲಿ ಲೇಖಕರು ಮಾತ್ರ ಬರೆಯುವುದರಲ್ಲಿ ತೊಡಗಿದ್ದರು .
ಸ್ವಾರಸ್ಯ : ಇಲ್ಲಿ ಲೇಖಕರು ಸಾಹಿತ್ಯ ಬರೆಯುವುದರಲ್ಲಿ ಹೊಂದಿದ್ದ ಆಸಕ್ತಿ ಮತ್ತು ಶ್ರಮ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ .
3. “ ಅದು ಕಲಾ ವಿಹರಿಸುವ ನಂದನವನ ”
ಉತ್ತರ : ಆಯ್ಕೆ : ಹಿರೇಮಲ್ಲೂರು ಈಶ್ವರನ್ ಅವರ ‘ ಕವಿಕಂಡ ನಾಡು ‘ ಕೃತಿಯಿಂದ ತೆಗೆದುಕೊಳ್ಳಲಾದ ‘ ತಲಕಾಡಿನ ವೈಭವ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಲೇಖಕರು ಗಂಗರ ಇತಿಹಾಸದ ಬಗ್ಗೆ ವಿವರಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ . ರನ್ನನು ತಲಕಾಡಿನ ಮಣ್ಣನ್ನು ನಂಬಿ ಮುದೊವೊಳಲಿನಿಂದ ಓಡಿ ಬಂದನು . ಆತನಿಗೆ ಇಲ್ಲಿ ರಾಯ ಮತ್ತು ಅತ್ತಿಮಬ್ಬೆಯ ಆಶ್ರಯ , ಅಜಿತಸೇನ ಗುರುಗಳ ಶಿಷ್ಯವೃಂದವಿತ್ತು , ತಲಕಾಡು ಅದು ಕಲಾ ವಿಹರಿಸುವ ನಂದನವನವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ .
ಸ್ವಾರಸ್ಯ : ತಲಕಾಡು ಕಲೆ , ಸಾಹಿತ್ಯ , ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದ್ದು ಕಲಾಲಕ್ಷ್ಮಿ ವಿಹಾರಮಾಡುತ್ತಾಳೆ ಎಂಬುದು ಸ್ವಾರಸ್ಯವಾಗಿದೆ .
4. ಬರೋ ಗುಡಿ ಸಿಕ್ಕಿತು ಬರೋ ದೇವಾಲಯ ದೊರಕಿತು ”
ಉತ್ತರ : ಆಯ್ಕೆ : ಹಿರೇಮಲ್ಲೂರು ಈಶ್ವರನ್ ಅವರ ‘ ಕವಿಕಂಡ ನಾಡು ‘ ಕೃತಿಯಿಂದ ತೆಗೆದುಕೊಳ್ಳಲಾದ ‘ ತಲಕಾಡಿನ ವೈಭವ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಅರ್ಕೇಶ್ವರ ದೇವಾಲಯ ಕಾಣದೆ ಹೋದರೆ ಮನಸ್ಸಿನಲ್ಲಿ ಕೊನೆಯವರೆಗೂ ಅತೃಪ್ತಿ ಉಳಿಯುತ್ತದೆ . ಎಂಬ ಕೊರಗಿನಲ್ಲಿ ಲೇಖಕರು ಹುಡುಕುತ್ತಾ ಹೋದಂತೆ ಅವರಿಗೆ ಗುಡಿ ಸಿಕ್ಕಿಬಿಟ್ಟಿತು . ಆಗ ಅವರು ತಮ್ಮ ಸ್ನೇಹಿತರನ್ನು ಕೂಗಿ ಕರೆಯುವ ಸಂದರ್ಭದಲ್ಲಿ ಹೀಗೆ ಹೇಳಿದರು .
ಸ್ವಾರಸ್ಯ : ಆರ್ಕೇಶ್ವರ ದೇವಾಲಯ ಸಿಕ್ಕಿದಾಗ ಲೇಖಕರಿಗಾದ ಸಂತೋಷ , ಆವೇಶಗಳು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
ಉ ] ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ,
1. ಸಾಹಿತ್ಯಾವಲೋಕನ, ಭಕ್ತಿಭಂಡಾರಿಬಸವಣ್ಣ, ಹಿರೇಮಲ್ಲೂರು, ವಚನಧರ್ಮಸಾರ.
ಉತ್ತರ : ಭಕ್ತಿಭಂಡಾರಿ ಬಸವಣ್ಣ,
4. ಮಾರಸಿಂಹ, ಚಾವುಂಡರಾಯ, ರಾಚಮಲ್ಲ, ರಕ್ಕಸಗಂಗ.
ಉತ್ತರ : ಚಾವುಂಡರಾಯ,
3. ರಾಜೇಶ್ವರ, ಮರಳೇಶ್ವರ, ಮಹಾಲಿಂಗೇಶ್ವರ, ಪಾತಾಳೇಶ್ವರ.
ಉತ್ತರ : ಮಹಾಲಿಂಗೇಶ್ವರ,
4.ಮುಚ್ಚಿಟ್ಟು, ಹಾಡುತ್ತಿರುವ, ಉದ್ಯಮವನ್ನು, ಬಾನಿನೆಡೆ.
ಉತ್ತರ : ಉದ್ಯಮವನ್ನು,
Talakadina Vaibhava Kannada Notes Question Answer Guide Pdf
ಇತರೆ ಪಾಠಗಳು :
ನೀರು ಕೊಡದ ನಾಡಿನಲ್ಲಿ ಕನ್ನಡ ನೋಟ್ಸ್