8ನೇ ತರಗತಿ ನೀರು ಕೊಡದ ನಾಡಿನಲ್ಲಿ ಕನ್ನಡ ನೋಟ್ಸ್ | 8th Standard Neeru Kodada Nadinalli Kannada Notes

8ನೇ ತರಗತಿ ನೀರು ಕೊಡದ ನಾಡಿನಲ್ಲಿ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 8th Standard 2nd Lesson Neeru Kodada Nadinalli Kannada Notes Question Answer Pdf Download,8th Class ನೀರು ಕೊಡದ ನಾಡಿನಲ್ಲಿ Notes

ತರಗತಿ : 8ನೇ ತರಗತಿ

ಪಾಠದ ಹೆಸರು : ನೀರು ಕೊಡದ ನಾಡಿನಲ್ಲಿ

ಕೃತಿಕಾರರ ಹೆಸರು : ನೇಮಿಚಂದ್ರ

Table of Contents

ಕೃತಿಕಾರರ ಪರಿಚಯ :

ನೇಮಿಚಂದ್ರ

ಶ್ರೀಮತಿ ನೇಮಿಚಂದ್ರ ಅವರು ಚಿತ್ರದುರ್ಗದಲ್ಲಿ ಜುಲೈ ೧೬ , ೧೯೫೯ ರಂದು ಜನಿಸಿದರು . ತಂದೆ ಪ್ರೊ ಜಿ . ಗುಂಡಣ್ಣ , ತಾಯಿ ತಿಮ್ಮಕ್ಕ . ಬೆಂಗಳೂರಿನ ಎಚ್.ಎ.ಎಲ್ . ಸಂಸ್ಥೆಯಲ್ಲಿ ಉನ್ನತ ತಂತ್ರಜ್ಞ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ . ಇವರ ಪ್ರಮುಖ ಕೃತಿಗಳೆಂದರೆ ಯಾದ್ ವಶೇಮ್ – ಕಾದಂಬರಿ , ನಮ್ಮ ಕನಸುಗಳಲ್ಲಿ ನೀವಿದ್ದೀರಿ , ಮತ್ತೆ ಬರೆದ ಕಥೆಗಳು , ನೇಮಿಚಂದ್ರರ ಕಥೆಗಳು ಮುಂತಾದ ಕಥಾಸಂಕಲನಗಳು , ಒಂದು ಕನಸಿನ ಪಯಣ , ಪೆರುವಿನ ಪವಿತ್ರ ಕಣಿವೆಯಲ್ಲಿ – ಪ್ರವಾಸ ಕಥನಗಳು , ಮೊದಲಾದವುಗಳು . ಪೆರುವಿನ ಪವಿತ್ರ ಕಣಿವೆಯಲ್ಲಿ ಕೃತಿಗೆ ಕರ್ನಾಟಕ ಸಾಹಿತ್ಯ ಪ್ರಶಸ್ತಿ , ನೃಪತುಂಗ ಪ್ರಶಸ್ತಿ , ಅತ್ತಿಮಬ್ಬೆ ಪ್ರಶಸ್ತಿಗಳು ಸಂದಿವೆ [ ಪ್ರಸ್ತುತ ‘ ನೀರು ಕೊಡದ ನಾಡಿನಲ್ಲಿ ಅಂಕಣ ಬರೆಹವನ್ನು ಶ್ರೀಮತಿ ನೇಮಿಚಂದ್ರ ಅವರ ‘ ಬದುಕು ಬದಲಿಸಬಹುದು ‘ ಕೃತಿಯಿಂದ ಆಯ್ದು ಸಂಪಾದಿಸಿ ನಿಗದಿಪಡಿಸಿದೆ .

Neeru Kodada Nadinalli Notes Question Answer

ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

1 ) ಸರ್ವರಿಗೂ ವೇದ್ಯವಾಗಿರುವ ಅಂಶಗಳಾವುವು ?

ಉತ್ತರ : ‘ ಮದರ್ಸ್‌ಡೇ , ‘ ‘ ಫಾದರ್ಸ್ ಡೇ ‘ , ‘ ವ್ಯಾಲೆಂಟೈನ್ ಡೇ ‘ ಆಚರಿಸುವುದು ‘ ಗಿಫ್ಟ್ ‘ , ‘ ಗ್ರೀಟಿಂಗ್ ಕಾರ್ಡ್ ‘ ಮಾರುವ ಹೊಸ ಹುನ್ನಾರಗಳೆಂದು ಸರ್ವರಿಗೂ ವೇದ್ಯವಾಗಿದೆ .

2 ) ಲೇಖಕಿಗೆ ಹೋಟೆಲ್‌ನಲ್ಲಿ ನಾಲ್ಕು ಲೋಟ ನೀರು ತಂದಿಟ್ಟಾಗ ಆದ ಅನುಭವವೇನು ?

ಉತ್ತರ : ಲೇಖಕಿಗೆ ಹೋಟೆಲ್‌ನಲ್ಲಿ ನಾಲ್ಕು ಲೋಟ ನೀರು ತಂದಿಟ್ಟಾಗ ಬರೀ ಬಾಯಲ್ಲ ಮನ ತಂಪಾಯಿತು .

3 ) ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ಸಿಗುವುದೇನು ?

ಉತ್ತರ : ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ಕೋಲಾ ಸಿಗುತ್ತದೆ .

4 ) ಭಾರತದಲ್ಲಿ ಇತ್ತೀಚೆಗೆ ಯಾವ ಹುನ್ನಾರ ನಡೆದಿದೆ ?

ಉತ್ತರ : ಪ್ರತಿಯೊಬ್ಬರೂ ಪ್ರತಿಯೊಬ್ಬರೂ ನೀರನ್ನು ಕೊಂಡು ಕುಡಿಯುವಂತೆ ಮಾಡುವ ಹುನ್ನಾರ ಭಾರತದಲ್ಲಿ ಇತ್ತೀಚೆಗೆ ನಡೆದಿದೆ .

5 ) ಎಲ್ಲೆಲ್ಲಿ ನೀರು ಕೊಡುವ ಸಂಪ್ರದಾಯವಿಲ್ಲ ?

ಉತ್ತರ : ಯೂರೋಪಿನಲ್ಲಾಗಲಿ , ಅಮೇರಿಕದಲ್ಲಾಗಲಿ ನೀರು ಕೊಡುವ ಸಂಪ್ರದಾಯವಿಲ್ಲ .

6 ) ಮನೆಗೆ ಬಂದವರನ್ನು ಹೇಗೆ ಸತ್ಕರಿಸುವ ಸಂಪ್ರದಾಯ ನಮ್ಮಲ್ಲಿದೆ ?

ಉತ್ತರ : ಮನೆಗೆ ಬಂದವರಿಗೆ ಮೊದಲು ನೀರು ಕೊಡುವ ‘ ಸಂಪ್ರದಾಯವಿದೆ .

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ

1 ) ನಾಗರೀಕತೆಯ ದೊಡ್ಡ ಅನಾಹುತಗಳಾಗಿ ಕಾಣಿಸಿಕೊಳ್ಳುತ್ತಿರುವ ಆಚರಣೆಗಳಾವುವು ?

ಉತ್ತರ : ‘ ಮದರ್ಸ್‌ಡೇ , ‘ ‘ ಫಾದರ್ಸ್ ಡೇ ‘ , ‘ ವ್ಯಾಲೆಂಟೈನ್ ಡೇ ‘ ಆಚರಿಸುವುದು ದೊಡ್ಡ ಅನಾಹುತಗಳಾಗಿ ಕಾಣಿಸಿಕೊಳ್ಳುತ್ತಿವೆ . ಈ ಹೊಸ ಹೊಸ ದಿನಗಳೆಲ್ಲ ಉಕ್ಕಿದ ಪ್ರೀತಿಯ ದ್ಯೋತಕವಲ್ಲ . ‘ ಗಿಫ್ಟ್ ‘ , ‘ ಗ್ರೀಟಿಂಗ್ ಕಾರ್ಡ್ ‘ ಮಾರುವ ಹೊಸ ಹುನ್ನಾರಗಳೆಂಬುದು ಎಲ್ಲರಿಗೂ ತಿಳಿದಿದೆ .

2 ) ಜನಪ್ರಿಯ ಹೋಟಲಿನ ಮಾಲೀಕನಿಗೆ ತಂಪುಪಾನೀಯ ಕಂಪನಿ ಹೇಳಿದ್ದೇನು ?

ಉತ್ತರ : ತಂಪು ಪಾನೀಯದ ಕಂಪನಿಯೊಂದು ಜನಪ್ರಿಯ ಹೋಟೆಲಿನ ಮಾಲೀಕರೊಬ್ಬರನ್ನು ಸಂಪರ್ಕಿಸಿ ನೀವು ಗ್ರಾಹಕರಿಗೆ ಬಂದೊಡನೆ ನೀರು ಕೊಡುವುದನ್ನು ನಿಲ್ಲಿಸಿದರೆ , ಇಷ್ಟು ಹಣ ಕೊಡುವುದಾಗಿ ‘ ಹೇಳಿತ್ತು .

3 ) ಕೋಲಾಗಳ ಆಸೆಯಿಂದ ನಾವು ಏನೆಲ್ಲವನ್ನು ತೊರೆಯುತ್ತಿದ್ದೇವೆ ?

ಉತ್ತರ : ಕೋಲಾಗಳ ಆಸೆಯಿಂದ ನಾವು ಎಳನೀರು , ಮಜ್ಜಿಗೆ , ಪಾನಕ , ಕಬ್ಬಿನ ಹಾಲು , ತಾಜಾ ಹಣ್ಣಿನ ರಸ ಎಲ್ಲವನ್ನು ತೊರೆಯುತ್ತಿದ್ದೇವೆ

4 ) ವಿದೇಶಗಳಲ್ಲಿ ಬಾಯಾರಿಕೆಗೆ ಧಾರಾಳವಾಗಿ ಏನೇನು ದೊರೆಯುವವು ?

ಉತ್ತರ : ಬಾಯಾರಿಕೆ , ಕೋಲಾಗಳು , ಫ್ರೆಂಚ್ ವೈನ್ , ಬಿಯರ್ , ಬಾಟಲಿಯಲ್ಲಿ ಹಣ್ಣಿನ ರಸ ಧಾರಾಳವಾಗಿ ದೊರೆಯುತ್ತವೆ . ಆದರೆ ಕುಡಿಯಲು ನೀರು ಸಿಗುವುದಿಲ್ಲ .

5 ) ಗುರುದ್ವಾರಗಳ ಬಳಿ ಸ್ವಯಂ ಸೇವಕರು ಏನು ಮಾಡುತ್ತಿದ್ದರು ?

ಉತ್ತರ : ಗುರುದ್ವಾರಗಳ ಬಳಿ , ಸ್ವಯಂ ಸೇವಕರು ನೀರಿನ ದೊಡ್ಡ ಕೊಳಾಯಿ ಹಿಡಿದು , ನಿಲ್ಲಿಸಿದ ಆಟೋ , ಬಸ್ಸು ಹಾಗೂ ದಾರಿಹೋಕರಿಗೆಲ್ಲ ಕುಡಿಯಲು ನೀರು ತುಂಬಿ ತುಂಬಿ ಕೊಡುತ್ತಿದ್ದರು .

ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .

1 ) ಕಂಪನಿಗಳು ಅಪ್ಪಟ ಅಗತ್ಯದ ವಸ್ತುಗಳನ್ನು ಇವಿಲ್ಲದೆ ಬದುಕಿಲ್ಲ ‘ ಎಂಬಂತೆ ಹೇಗೆ ಬಿಂಬಿಸುತ್ತಿವೆ ?

ಉತ್ತರ : ನಮ್ಮ ಭಾರತೀಯ ಸಂಸ್ಕೃತಿಯ ಬುನಾದಿಯನ್ನು ಜೀವನಶೈಲಿಯನ್ನು , ನಂಬಿಕೆಗಳನ್ನು , ಮೌಲ್ಯಗಳನ್ನು , ಸಂಸ್ಕೃತಿಯ ಬುನಾದಿಯನ್ನು ಅಲುಗಿಸುವ ‘ ಕೊಳ್ಳುಬಾಕತನ ‘ , ಅಗತ್ಯಗಳಲ್ಲಿ ನಡೆದು ಹೋಗುತ್ತಿದ್ದ ಬದುಕು , ಇಂದು ‘ ಬೇಕು’ಗಳ ಬಲೆಗೆ ಬಿದ್ದಿದೆ . ಬೇಕುಗಳನ್ನು ‘ ಆಗತ್ಯ’ಗಳಾಗಿ , ಹಾಗೂ ಅತ್ಯಗತ್ಯ’ಗಳಾಗಿ ಬಲು ಜಾಣತನದಿಂದ ಬದಲಿಸುವ ಜಾಹೀರಾತುಗಳು ಮತ್ತೆ ಮತ್ತೆ ಬಿತ್ತರಿಸುತ್ತವೆ . ಕಂಪನಿಗಳು ಆರಾಮ , ಐಷಾರಾಮದ , ಅಪ್ಪಟ ಅನಗತ್ಯದ ವಸ್ತುಗಳನ್ನು ‘ ಇವಿಲ್ಲದೆ ಬದುಕಿಲ್ಲ ‘ ಎಂಬಂತೆ ಬಿಂಬಿಸುತ್ತವೆ . ‘ ಡಿಓಡರೆಂಟ್ ‘ ಹಾಕಿಕೊಳ್ಳದೆ ಇದ್ದರೆ ‘ ತಾನು ನಾತ ಬಡಿಯುತ್ತೇನೆ ‘ ಎಂಬಷ್ಟು ಕೀಳರಿಮೆಯನ್ನು ಕಂಪನಿಗಳು ಹುಟ್ಟಿಸಬಲ್ಲವು . ಕೊನೆಗೆ ಎಲ್ಲವೂ ನಮ್ಮನ್ನು ಕೊಳ್ಳುವಂತೆ ಪ್ರೇರೇಪಿಸುತ್ತವೆ .

2 ) ಲೇಖಕಿಗೆ ಬೆಂಗಳೂರಿನಲ್ಲಿ ನೀರು ಕೊಡದ ಸಂಸ್ಕೃತಿಯ ಬಗ್ಗೆ ಆದ ಅನುಭವನ್ನು ಬರೆಯಿರಿ .

ಉತ್ತರ : ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯ ‘ ಬಾಂಬೆ ಬಜಾರ್ ‘ ಎದುರಿನ ಪುಟ್ಟ ಜಾಯಿಂಟ್‌ನಲ್ಲಿ ಲೇಖಕಿ ಮತ್ತು ಅವರ ಮಗಳು ಕುಳಿತಿದ್ದರು . ಅಲ್ಲಿ ನೀರು ತಂದಿಡಲಿಲ್ಲ . ಅವರು ಐಸ್ಕ್ರೀಂ ತಿಂದ ನೀರು ಬೇಕು ‘ ಎಂದು ಕೇಳಿದರು . ಅದಕ್ಕೆ ವೇಟರ್ ‘ ಮಿನಿರಲ್ ವಾಟರ್ ಬೇಕೆ ? ‘ ಎಂದು ಪ್ರಶ್ನಿಸಿದನು . ಅದಕ್ಕೆ ಲೇಖಕಿಯವರು ‘ ಇಲ್ಲಪ್ಪ ಸಾಮಾನ್ಯ ನೀರು ‘ ಎಂದರು . ಹೋದ ವೇಟರ್ ಹದಿನೈದು ನಿಮಿಷ ಕಾದರೂ ಬರಲೇ ಇಲ್ಲ . ಕಾದು ಕಾದು ಸುಸ್ತಾಗಿ ಕೊನೆಗೆ ಬಿಲ್ಲು ಕೊಟ್ಟು ಹೊರಬಂದರು . ಅದೇ ವೇಟರ್ , ಪುಟ್ಟ ಪುಟ್ಟ ಬಾಟಲಿಗಳಲ್ಲಿ ಮಿನರಲ್ ವಾಟರುಗಳನ್ನು ಬೇರೆ ಬೇರೆ ಮೇಜಿಗೆ ಸರಬರಾಜು ಮಾಡುತ್ತಿದ್ದುದು ಕಂಡುಬಂತು .

3 ) ದುಡ್ಡಿಲ್ಲದೇ ಕುಡಿಯಬಲ್ಲ ನೀರು ಸಿಗುತ್ತಿದ್ದ ಕಾಲದ ಬಗ್ಗೆ ಲೇಖಕರ ಅಭಿಪ್ರಾಯವೇನು ?

ಉತ್ತರ : ನೀರು ಸಲೀಸಾಗಿ ಎಲ್ಲೆಂದರಲ್ಲಿ ಪುಕ್ಕಟ್ಟೆಯಾಗಿ ವಿದೇಶಗಳಲ್ಲಿ ಖಂಡಿತ ಸಿಗುವುದಿಲ್ಲ . ನಮ್ಮಲ್ಲಿಯಂತೆ ರೈಲು ನಿಲ್ದಾಣಗಳಲ್ಲಿ , ಬಸ್ಸು ನಿಲ್ದಾಣಗಳಲ್ಲಿ , ವಿಮಾನ ನಿಲ್ದಾಣಗಳಲ್ಲೂ ‘ ದುಡ್ಡಿಲ್ಲದೆ ಕುಡಿಯಬಲ್ಲ ನೀರನ್ನು ಇರಿಸುವುದಿಲ್ಲ . ಬಾಯಾರಿದಾಗ ಈಗಲೂ ಹೋಟೆಲ್ ಒಂದಕ್ಕೆ ಹೊಕ್ಕು , ನೀರು ಮಾತ್ರ ಕುಡಿದು ಹೊರ ಬರಬಹುದಾದ ಸವಲತ್ತು ಇಲ್ಲಿಲ್ಲ . ಮನೆಯ ಹೊರಗೆ ಕಾಂಪೌಡ್ ಗೋಡೆಗೆ ಸಣ್ಣ ತೊಟ್ಟಿ ಕಟ್ಟಿ , ‘ ದನಕರುಗಳು ಕುಡಿದು ಹೋಗಲಿ ‘ ಎಂದು ನೀರು ತುಂಬಿಡುತ್ತಿದ್ದ ಬಾಲ್ಯದ ದಿನಗಳು ನನಗಿನ್ನೂ ನೆನಪಿವೆ . ದಿಲ್ಲಿಯಲ್ಲೂ ಯಾರೋ ಪುಣ್ಯಾತ್ಮರು ದೊಡ್ಡ ಮಣ್ಣಿನ ಮಡಕೆಗಳಲ್ಲಿ ನೀರು ತುಂಬಿಟ್ಟಿರುತ್ತಿದ್ದರು . ಅನೇಕ ಗುರುದ್ವಾರಗಳ ಬಳಿ , ಸ್ವಯಂ ಸೇವಕರು ನೀರಿನ ದೊಡ್ಡ ಕೊಳಾಯಿ ಹಿಡಿದು , ನಿಲ್ಲಿಸಿದ ಆಟೋ , ಬಸ್ಸು ಹಾಗೂ ದಾರಿಹೋಕರಿಗೆಲ್ಲ ನೀರು ತುಂಬಿ ತುಂಬಿ ಕುಡಿಸುತ್ತಿದ್ದರು ‘ ಎಂದು ದುಡ್ಡಿಲ್ಲದೇ ಕುಡಿಯಬಲ್ಲ ನೀರು ಸಿಗುತ್ತಿದ್ದ ಕಾಲದ ಬಗ್ಗೆ ಲೇಖಕರು ಅಭಿಪ್ರಾಯಪಟ್ಟಿದ್ದಾರೆ .

ಈ) ಖಾಲಿಬಿಟ್ಟ ಜಾಗಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿರಿ .

1 ) ಭಾರತದಿಂದ ಹೊರಗೆ ಕಾಲಿಟ್ಟರೆ ಉಳಿದೆಲ್ಲವೂ ‘ ನೀರು ಕೊಡದ ನಾಡುಗಳು

2 ) ಈ ದೇಶಗಳಲ್ಲಿ ಮನೆಯ ನಲ್ಲಿಯಲ್ಲಿ ಬರುವ ನೀರನ್ನು ಕುಡಿಯುವುದಿಲ್ಲ .

3 ) ಗ್ರೀಟಿಂಗ್ ಕಾರ್ಡ್ ಮಾರುವ ಹೊಸ ಹುನ್ನಾರ ಗಳೆಂದು ಸರ್ವರಿಗೂ ವೇದ್ಯವಾಗಿದೆ .

4 ) ಸ್ಯಾಂಡ್ವಿಚ್  ಬರ್ಗರ್ ಜೊತೆಗೆ ದೊಡ್ಡ ಗಾತ್ರದ ಕೋಲಾ ನೀಡುತ್ತಾರೆ .

ಉ ] ಕೊಟ್ಟಿರುವ ಪದಗಳ ತದ್ಭವ ರೂಪ ಬರೆಯಿರಿ

ವರ್ಷ ವರ್ಷ ,

ಪ್ರಾಣ ಹರಣ ,

ಶಕ್ತಿ – ಸಕುತಿ ,

ಮಣ್ಯ – ಹೂನ್ಯ

8th Standard Neeru Kodada Nadinalli Kannada Notes Question Answer Pdf

ಇತರೆ ಪಾಠಗಳು :

ಮಗ್ಗದ ಸಾಹೇಬ ಕನ್ನಡ ನೋಟ್ಸ್

Leave your vote

50 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.