8ನೇ ತರಗತಿ ಮಗ್ಗದ ಸಾಹೇಬ ಕನ್ನಡ ನೋಟ್ಸ್ | 8th Standard Maggada Saheba Kannada Notes

8ನೇ ತರಗತಿ ಮಗ್ಗದ ಸಾಹೇಬ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 8th Standard 1st Lesson Maggada Saheba Kannada Notes Question Answer Pdf Download, 8th Class

ತರಗತಿ : 8ನೇ ತರಗತಿ

ಪಾಠದ ಹೆಸರು : ಮಗ್ಗದ ಸಾಹೇಬ

ಕೃತಿಕಾರರ ಹೆಸರು : ಬಾಗಲೋಡಿ ದೇವರಾಯ

Table of Contents

ಕೃತಿಕಾರರ ಪರಿಚಯ :

ಬಾಗಲೋಡಿ ದೇವರಾಯ

ಬಾಗಲೋಡಿ ದೇವರಾಯ ಅವರು ಕ್ರಿ.ಶ. ೧೯೨೭ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದರು . ಅವರ ಕಥಾಸಂಗ್ರಹಗಳೆಂದರೆ ಹುಚ್ಚು ಮುನಸೀಫ ಮತ್ತು ಇತರ ಕತೆಗಳು , ಆರಾಧನಾ , ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು , ಬಾಗಲೋಡಿ ದೇವರಾಯ ಅವರು ಒಟ್ಟು ೨೬ ಕತೆಗಳನ್ನು ಬರೆದಿದ್ದಾರೆ . ಇವರು ೧೯೮೫ ರಲ್ಲಿ ನಿಧನರಾದರು . ಮಗ್ಗದ ಸಾಹೇಬ ಕಥೆಯನ್ನು ಬಾಗಲೋಡಿ ದೇವರಾಯ ಅವರ ಸಮಗ್ರ ಕತೆಗಳು ಎಂಬ ಕಥಾಸಂಕಲನದಿಂದ ಆರಿಸಿಕೊಳ್ಳಲಾಗಿದೆ .

Maggada Saheba Kannada Notes Question Answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

1 ) ರಹೀಮ್ ಮಗ್ಗವನ್ನು ಮುಟ್ಟದೆ ಎಷ್ಟು ವರ್ಷಗಳಾಗಿತ್ತು ?

ಉತ್ತರ : ರಹೀಮ ಮಗ್ಗವನ್ನು ಮುಟ್ಟದೆ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಾಗಿತ್ತು .

2 ) ಹುಸೇನ್ ಸಾಹೇಬರ ಮನೆತನದವರಿಗೆ ದೇವಾಲಯದಲ್ಲಿದ್ದ ಹಕ್ಕು ಯಾವುದು ?

ಉತ್ತರ : ದೇವಸ್ಥಾನದಲ್ಲಿ ರಥೋತ್ಸವದ ಸಮಯದಲ್ಲಿ ಅವರ ಮನೆತನದ ಹಿರಿಯ ಪ್ರತಿನಿಧಿಗೆ ಎಲ್ಲರಿಗಿಂತಲೂ ಮುಂದಾಗಿ ಪ್ರಸಾದವನ್ನು ಪಡೆಯುವ ಹಕ್ಕಿದೆ .

3 ) ಅಬ್ದುಲ್ ರಹೀಮನ ಹಠವೇನು ?

ಉತ್ತರ : ತನ್ನ ಮೂವರು ಗಂಡುಮಕ್ಕಳಿಗೆ ಒಂದಿಷ್ಟಾದರೂ ವಿದ್ಯಾಭ್ಯಾಸ ಕೊಡಿಸಿ ಸರಕಾರಿ ನೌಕರರನ್ನಾಗಿ ಮಾಡಬೇಕು ಅಬ್ದುಲ್ ರಹೀಮನ ಹಠವಾಗಿತ್ತು .

4 ) ತಂದೆಯ ಆಸೆಯನ್ನು ಮೊದಲೆರಡು ಮಕ್ಕಳು ನೆರವೇರಿಸಿದ ಬಗೆ ಹೇಗೆ ?

ಉತ್ತರ : ತಂದೆಯ ಆಸೆಯಂತೆ ಒಬ್ಬ ಮಗ ಸರಕಾರಿ ಕಚೇರಿಯಲ್ಲಿ ಗುಮಾಸ್ತನಾದ . ಇನ್ನೊಬ್ಬ ಪೋಸ್ಟ್ ಮಾಸ್ತರನಾದ .

5 ) ರಹೀಮ ಮಗನನ್ನು ಶಾಲೆಯಿಂದ ಬಿಡಿಸಿದ್ದೇಕೆ ?

ಉತ್ತರ : ರಹೀಮನು ತನ್ನ ಮಗನಿಗೆ ಮಗ್ಗದ ಹುಚ್ಚನ್ನು ಬಿಡಿಸಬೇಕೆಂದು ಶಾಲೆಯಿಂದಲೇ ಬಿಡಿಸಿಬಿಟ್ಟನು .

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .

1 ) ಮಿಠಾಯಿ ಕೊಟ್ಟಿದ್ದಕ್ಕೆ ಅತಿಥಿಗಳ ಆಕ್ಷೇಪವೇನು ?

ಉತ್ತರ : ಅಂಗಡಿಯಿಂದ ಲಡ್ಡುಗಳನ್ನು ಕೊಂಡು ಕೊಟ್ಟುದಕ್ಕೆ ಅತಿಥಿಗಳಿಗೆ ಬಹಳ ಸಿಟ್ಟು ಬಂತು . ಅವರು ‘ ರಾಯರೆ , ಅಂಗಡಿಯಿಂದ ತೆಗೆದುಕೊಳ್ಳಲು ನಮ್ಮಲ್ಲಿ ಹಣವಿಲ್ಲವೆ ? ಮನೆಯಲ್ಲಿ ಕಾಯಿಲೆಯಿದ್ದರೆ ಒಂದು ತುಂಡು ಬೆಲ್ಲವನ್ನೂ ಕಲ್ಲುಸಕ್ಕರೆ ಹರಳನ್ನೋ ಕೊಡಿ . ನಿಮ್ಮ ಹಬ್ಬದ ಪೂಜೆಯ ಪ್ರಸಾದವನ್ನು ನಾವು ತೆಗೆದುಕೊಳ್ಳುವುದು ತಲತಲಾಂತರದಿಂದ ಬಂದ ಹಳೆಯ ಸಂಪ್ರದಾಯ , ಅಂಗಡಿಯ ಮಿಠಾಯಿಯನ್ನು ಪ್ರಸಾದವೆಂದು ಕೊಡುವುದು ಸರಿಯೇ ? ‘ ಎಂದು ಆಕ್ಷೇಪಿಸಿದರು .

2 ) ಹುಸೇನ್ ಸಾಹೇಬರ ವ್ಯಕ್ತಿತ್ವವನ್ನು ವಿವರಿಸಿ ,

ಉತ್ತರ : ಸಾಹೇಬ್ ಬಹಾದ್ದೂರ್‌ ಮಗ್ಗದ ಹುಸೇನ್ ಸಾಹೇಬರು ಜನಪ್ರಿಯ ಮತ್ತು ಧನವಂತ ವ್ಯಕ್ತಿಯಾಗಿದ್ದರು . ಅವರು ಮಸೀದಿ ಮಾತ್ರವಲ್ಲ : ದೇವಸ್ಥಾನವನ್ನೂ ಕಟ್ಟಿಸಿದ್ದರು .

3 ) ಶಾಲಾ ವಾರ್ಷಿಕೋತ್ಸವದಂದು ಕರೀಮ್ ಮಾಡಿದ ಕೆಲಸವೇನು ?

ಉತ್ತರ : ಶಾಲೆಯ ವಾರ್ಷಿಕೋತ್ಸವ ಸಮಾರೋಪದಲ್ಲಿ ಹಳೆಯ ವಿದ್ಯಾರ್ಥಿಗಳ ಒಂದು ನಾಟಕವಿತ್ತು . ಅದರಲ್ಲಿ ಕರೀಮನದು ಸ್ತ್ರೀಪಾತ್ರ , ಅದಕ್ಕಾಗಿ ತಾಯಿಯಿಂದ ಗೌಪ್ಯವಾಗಿ ಹಳೆಕಾಲದ ಚಿನ್ನದ ಸರವನ್ನು ಪಡೆದುಕೊಂಡ . ಆದರೆ ನಾಟಕ ಮುಗಿದ ನಂತರ ಮನೆಗೆ ಬರಲಿಲ್ಲ . ಎಲ್ಲೋ ಮಾಯವಾಗಿ ಹೋದ .

4 ) ಲೇಖಕರ ಹುಟ್ಟೂರಿನಲ್ಲಿದ್ದ ಮುಸ್ಲಿಂ ಧಾರ್ಮಿಕ ಉತ್ಸವದ ಸಂಪ್ರದಾಯವೇನು ?

ಉತ್ತರ : ಲೇಖಕರ ಹುಟ್ಟೂರಿನ ಪಕ್ಕದಲ್ಲಿ ಮುಸಲ್ಮಾನರ ವಸತಿ ಇದೆ . ಅದರೊಳಗೆ ಒಂದು ಪವಿತ್ರ ಸ್ಥಾನವಿದೆ . ಅಲ್ಲಿ ಉರ್ಸ್ ‘ ಎಂಬ ಮುಸಲ್ಮಾನರ ಧಾರ್ಮಿಕ ಉತ್ಸವದ ಕಾಲದಲ್ಲಿ ನಮ್ಮ ಮನೆತನದ ಒಬ್ಬ ಪ್ರತಿನಿಧಿ ಇದ್ದೇ ಇರಬೇಕೆಂಬ ಸಂಪ್ರದಾಯ ಇತ್ತು .

5 ) ಕರೀಮನಿಗೆ ಶಾಲೆಯಲ್ಲಿ ಮಗ್ಗ ಕಲಿತುದರಿಂದ ಆದ ಪ್ರಯೋಜನವೇನು ?

ಉತ್ತರ : ಕರೀಮ್ ಶಾಲೆಯ ಮಗ್ಗದಲ್ಲಿ ಒಂದು ಪರಿವರ್ತನೆಯನ್ನು ತನ್ನದೇ ಬುದ್ಧಿವಂತಿಕೆ ಹಾಗೂ ಕೌಶಲದಿಂದ ಮಾಡಿದ್ದ . ಅದನ್ನು ಶಂಕರಪ್ಪ ಅವರು ಪಶಂಸೆ ಮಾಡಿ ಮೇಲಧಿಕಾರಿಗಳಿಗೆ ವರದಿ ಮಾಡಿದ್ದರು . ಅದರ ಫಲಸ್ವರೂಪವಾಗಿ ಸರಕಾರದಿಂದ ಅವನಿಗೆ ಒಂದು ಬೆಳ್ಳಿಯ ಪದಕವೂ ಒಂದು ನೂರು ರೂಪಾಯಿಯ ಬಹುಮಾನವೂ ದೊರೆಯಿತು .

ಇ ] ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು – ಐದು ವಾಕ್ಯಗಳಲ್ಲಿ ಉತ್ತರಿಸಿ .

1 ) ಶಂಕರಪ್ಪ ಅವರು ರಹೀಮನ ಬಳಿಗೆ ಸಂಧಾನಕ್ಕಾಗಿ ಬಂದ ಪ್ರಸಂಗವನ್ನು ತಿಳಿಸಿ .

ಉತ್ತರ : ಕರೀಮನು ಶಂಕರಪ್ಪ ಅವರ ಮನೆಗೆ ಹೋಗಿ ತನ್ನ ತಂದೆಯೊಡನೆ ಸಂಧಾನ ಮಾಡಿಸಿರಿ ಎಂದು ಕೇಳಿಕೊಂಡನು . ಆಗ ಅಲ್ಲಿಗೆ ಹೋಗಿ ಶಂಕರಪ್ಪ ಅವರು ರಹೀಮನೊಡನೆ ಒಂದು ಗಂಟೆ ಗೋಗರೆದರು . ನಿವೇದಿಸಿದರು . ತರ್ಕಿಸಿದರು . ಚರ್ಚಿಸಿದರು . ಆದರೆ ರಹೀಮ ಒಂದು ಪದವನ್ನೂ ತಾಳ್ಮೆಯಿಂದ ಕೇಳಲಿಲ್ಲ . “ ಸಾಹೇಬ್ ಬಹಾದ್ದೂರ್ ಹುಸೇನ್ ಸಾಹೇಬರ ಕೀರ್ತಿಗೆ ಮಸಿಹಚ್ಚಿದ್ದಾನೆ . ನೀವು ಕಲಿಸಿದ ಪಾಠದಿಂದಲೇ ಈ ಪಠಮಾರಿ ನಮ್ಮ ವಂಶದ ಕೀರ್ತಿಯನ್ನು ಮಣ್ಣುಪಾಲು ಮಾಡಿದ . ಹಣ ತಂದಿದ್ದಾನಂತೆ , ಕಳವಿನ ಹಣವೋ ದರೋಡೆಯ ಹಣವೋ ? ‘ ಎಂದು ಸಿಡುಕಿದ . ಶಂಕರಪ್ಪ ಅವರು ಮುಖಬಾಡಿಸಿಕೊಂಡು ಹಿಂತೆರಳಿದರು .

2 ) ನವೀನ ಶಿಕ್ಷಣದ ವೈಶಿಷ್ಟ್ಯಗಳೇನು ?

ಉತ್ತರ : ಮಹಾತ್ಮಾ ಗಾಂಧಿಯವರ ಪ್ರೇರಣೆಯಿಂದ ಕೆಲವು ಶಾಲೆಗಳಲ್ಲಿ ‘ ನವೀನ ಶಿಕ್ಷಣ ‘ ಆರಂಭವಾಯಿತು . ಈ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹಲವು ತರಹದ ಔದ್ಯೋಗಿಕ ಶಿಕ್ಷಣವನ್ನು ಕೊಡುವುದು , ಅವರಲ್ಲಿ ಹಸ್ತಕೌಶಲವನ್ನು , ದೇಹಶಮದಲ್ಲಿ ಗೌರವ – ಭಾವವನ್ನು ಉಂಟು ಮಾಡುವುದು ಒಂದು ಭಾಗವಾಗಿತ್ತು . ಕೆಲವರಿಗೆ ಬಡಗಿಯ ಕೆಲಸ , ಕೆಲವರಿಗೆ ಬೆತ್ತದ ಕುರ್ಚಿ ಕೆಲಸ ಇತ್ಯಾದಿ ಸಾಮಗ್ರಿಗಳನ್ನು ಮಾಡುವ , ಕೆಲವರಿಗೆ ಕೃಷಿ , ಕೆಲವರಿಗೆ ಮಗ್ಗದ ಕೆಲಸವನ್ನು ಕಲಿಸಲಾಗುತ್ತಿತ್ತು .

ಈ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

1 ) ಕರೀಮ ಧನವಂತನಾದ ಬಗೆ ಹೇಗೆ ? ವಿವರಿಸಿ .

ಉತ್ತರ : ಮಹಾತ್ಮಾ ಗಾಂಧಿಯವರ ಪ್ರೇರಣೆಯಿಂದ ಕೆಲವು ಶಾಲೆಗಳಲ್ಲಿ ‘ ನವೀನ ಶಿಕ್ಷಣ ‘ ಆರಂಭವಾಯಿತು . ಆ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹಲವು ತರಹದ ಔದ್ಯೋಗಿಕ ಶಿಕ್ಷಣವನ್ನು ಕೊಡುವುದು , ಕೆಲವರಿಗೆ ಮಗ್ಗದ ಕೆಲಸವನ್ನು ಕಲಿಸತೊಡಗಿದ್ದರು . ಹುಡುಗ ಕರೀಮ್ ಮಗ್ಗದ ಕೆಲಸವನ್ನು ಮೀನು ನೀರಿನಲ್ಲಿ ಈಜುವಷ್ಟೇ ಸುಲಭವಾಗಿ ಕಲಿತು ಬಹು ನಿಮಣನಾಗಿಬಿಟ್ಟ . ಕರೀಮ್ ಶಾಲೆಯ ಮಗ್ಗದಲ್ಲಿ ಒಂದು ಪರಿವರ್ತನೆಯನ್ನು ತನ್ನದೇ ಬುದ್ಧಿವಂತಿಕೆ ಹಾಗೂ ಕೌಶಲದಿಂದ ಮಾಡಿಬಿಟ್ಟಿದ್ದ . ಅದರ ಫಲಸ್ವರೂಪವಾಗಿ ಸರಕಾರದಿಂದ ಅವನಿಗೆ ಒಂದು ಬೆಳ್ಳಿಯ ಪದಕವೂ ಒಂದು ನೂರು ರೂಪಾಯಿಯ ಬಹುಮಾನವೂ ಬಂದವು . ತಂದೆ ಅವನ ಮಗ್ಗದ ಹುಚ್ಚನ್ನು ಬಿಡಿಸಬೇಕೆಂದು ಶಾಲೆಯಿಂದಲೇ ಬಿಡಿಸಿಬಿಟ್ಟನು . ಒಂದು ದಿನ ಶಾಲೆಯ ವಾರ್ಷಿಕೋತ್ಸವದಲ್ಲಿ ನಾಟಕವಿತ್ತು . ಅದರಲ್ಲಿ ಕರೀಮನದು ಸ್ತ್ರೀಪಾತ್ರ . ಅದಕ್ಕೆಂದು ತಾಯಿಯಿಂದ ಗೌಪ್ಯವಾಗಿ ಹಳೆಕಾಲದ ಚಿನ್ನದ ಸರವನ್ನು ತೆಗೆದುಕೊಂಡ . ಆದರೆ ನಾಟಕ ಮುಗಿದ ಎಲ್ಲೋ ಮಾಯವಾಗಿ ಹೋದ . ಸಣ್ಣಪ್ರಾಯದಲ್ಲೇ ಮಗ್ಗದ ಸಹಕಾರಿ ಸಂಘವೊಂದನ್ನು ಸ್ಥಾಪಿಸಿ ಅವನೀಗ ಅದರ ಅಧ್ಯಕ್ಷನಾಗಿ ಸಾಕಷ್ಟು ಯಶಸ್ವಿಯೂ ಧನವಂತನೂ ಆದನು . ಅದೂ ಅಲ್ಲದೆ ಮಗ್ಗದ ಯಂತ್ರದ ಪ್ರಯೋಗದಲ್ಲಿ ಹೊಸ ಹೊಸ ಸುಧಾರಣೆಗಳನ್ನೂ ಪರಿವರ್ತನೆಗಳನ್ನೂ ತಂದು ಹೆಸರು ಮಾಡಿದನು .

2 ) ರಹೀಮನಿಗೆ ಮಗ್ಗದ ಬಗ್ಗೆ ದ್ವೇಷ ಉಂಟಾಗಲು ಕಾರಣವೇನು ?

ಅಬ್ದುಲ್ ರಹೀಮನಿಗೆ ‘ ಮಗ್ಗದ ಸಾಹೇಬ ‘ ಎಂದು ಹೇಳಿದರೆ ಬಹು ಸಿಟ್ಟು ಬರುತ್ತಿತ್ತು . “ ಅನಿಷ್ಟ ಮಗ್ಗದ ಹೆಸರೆತ್ತಬೇಡಿ ” – “ ಮಗ್ಗವಲ್ಲ ಕೊರಳಿಗೆ ಹಗ್ಗ ! ” ಎಂದು ರೋಷದಿಂದ ಹೇಳುತ್ತಿದ್ದನು . ಏಕೆಂದರೆ ಅವನ ಅಜ್ಜನ ಕಾಲದಲ್ಲಿ ಬ್ರಿಟಿಷರು ಅಗ್ಗದ ವಿಲಾಯತಿ ಮಿಲ್ಲಿನ ಬಟ್ಟೆಗಳನ್ನು ನಮ್ಮ ದೇಶದಲ್ಲಿ ಹೇರಿಬಿಟ್ಟರು . ಅವೇನೋ ನಿಜಕ್ಕೂ ನಿಕೃಷ್ಣ ವಸ್ತುಗಳು , ಒಂದು ವರ್ಷದೊಳಗೇ ಕಳೇಬರಗಳಾಗಿ ಹರಕು ಚಿಂದಿಯಾಗುತ್ತಿದ್ದವು . ಒಂದೇ ತಿಂಗಳಲ್ಲಿ ಬಣ್ಣ ವಿವರ್ಣವಾಗಿ ಎರಡೇ ತಿಂಗಳಲ್ಲಿ ಮಾಯವಾಗುತ್ತಿತ್ತು . ಆದರೆ ಜನರಿಗೆ ಬೇಕಾದುದು ಅಗ್ಗದ ವಸ್ತು . ಆದ್ದರಿಂದ ಅಗ್ಗದ ಮಾಲಿನದೇ ಅಧಿಪತ್ಯವಾಯಿತು . ಮಗ್ಗದವರು ಭಿಕಾರಿಗಳಾದರು . ಅವರ ಅನ್ನಕ್ಕೆ ಸಂಚಕಾರವಾಯಿತು . ಇದರಿಂದ ಅಬ್ದುಲ್ ರಹೀಮನಿಗೆ ಬಹಳ ಕಷ್ಟವಾಯಿತು . ಅವನ ಮಗ್ಗಗಳೆಲ್ಲಾ ಧೂಳು ತುಂಬಿ ಜೇಡನ ಬಲೆಗಳಿಂದ ಹಾಳುಬಿದ್ದವು . ಮನೆಯಲ್ಲಿ ಊಟಕ್ಕೆ ಇದೆಯೋ ಇಲ್ಲವೋ ಎಂಬಂತಾಯಿತು . ಆದ್ದರಿಂದ ಅವನಿಗೆ ಮಗ್ಗದ ಬಗ್ಗೆ ದ್ವೇಷ ಉಂಟಾಯಿತು .

ಉ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

1 ) “ ಮಗ್ಗವಲ್ಲ ಕೊರಳಿಗೆ ಹಗ್ಗ ! ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಬಾಗಲೋಡಿ ದೇವರಾಯ ಅವರು ಬರೆದಿರುವ ಸಮಗ್ರ ಕತೆಗಳು ಕೃತಿಯಿಂದ ತೆಗೆದುಕೊಳ್ಳಲಾದ ಮಗ್ಗದ ಸಾಹೇಬ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ರಹೀಮನಿಗೆ ಮಗ್ಗದ ಸಾಹೇಬ ಎಂದು ಹೇಳಿದರೆ ಸಿಟ್ಟುಬರುತ್ತಿತ್ತು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ . ರಹೀಮನಿಗೆ ಮಗ್ಗವೆಂದರೆ ದ್ವೇಷ , ಅವನನ್ನು ಮಗ್ಗದ ಸಾಹೇಬ ಎಂದು ಕರೆದರೆ ಅವನು ಕೋಪದಿಂದ “ ಅನಿಷ್ಟ ಮಗ್ಗದ ಹೆಸರೆತ್ತಬೇಡಿ ” – “ ಮಗ್ಗವಲ್ಲ ಕೊರಳಿಗೆ ಹಗ್ಗ ! ” ಎಂದು ರೋಷದಿಂದ ಹೇಳುತ್ತಿದ್ದನು .

ಸ್ವಾರಸ್ಯ : ಬ್ರಿಟಿಷರ ವಿಲಾಯಿತಿ ಮಿಲ್ಲಿನ ಬಟ್ಟೆಗಳಿಂದಾಗಿ ಕೈಮಗ್ಗದ ಬಟ್ಟೆಗಳು ಬೆಲೆಕಳೆದುಕೊಂಡದ್ದರಿಂದ ಅವನು ಮಗ್ಗದ ಬಗ್ಗೆ ಸಿಟ್ಟಾಗಿರುವುದು ಇಲ್ಲಿ ಸ್ವಾರಸ್ಯವಾಗಿದೆ .

2 ) “ ಕಳ್ಳನಾದವನು , ಮನೆ ಬಿಟ್ಟು ಓಡಿ ಹೋದವನು ಮಗನೇ ಅಲ್ಲ ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಬಾಗಲೋಡಿ ದೇವರಾಯ ಅವರು ಬರೆದಿರುವ ಸಮಗ್ರ ಕತೆಗಳು ಕೃತಿಯಿಂದ ತೆಗೆದುಕೊಳ್ಳಲಾದ ಮಗ್ಗದ ಸಾಹೇಬ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕರೀಮನು ನಾಟಕದಲ್ಲಿ ಅಲಂಕಾರ ಮಾಡಿಕೊಳ್ಳಲೆಂದು ತಾಯಿಯಿಂದ ಹಳೆಕಾಲದ ಒಂದು ಚಿನ್ನದ ಸರವನ್ನು ತೆಗೆದುಕೊಂಡಿದ್ದನು . ಆದರೆ ನಾಟಕ ಮುಗಿದ ನಂತರ ಮನೆಗೆ ಬರಲಿಲ್ಲ . ಎಲ್ಲೋ ಮಾಯವಾಗಿ ಹೋದ . ಆ ಸಂದರ್ಭದಲ್ಲಿ ಕೋಪಗೊಂಡ ಆತನ ತಂದೆ ರಹೀಮನು ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : ರಹೀಮನ ಹಠ , ಮಗನ ನಡವಳಿಕೆಯ ಬಗ್ಗೆ ಆತನಿಗಿದ್ದ ಕೋಪ ಈ ಮಾತಿನಲ್ಲಿ ಸ್ವಾರಸ್ಯವಾಗಿ ಮೂಡಿಬಂದಿದೆ .

3 ) “ ನಿಮ್ಮ ಹಳೆಯ ಶಿಷ್ಯನಿಗೆ ಇದೊಂದು ಉಪಕಾರ ಮಾಡಿ ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಬಾಗಲೋಡಿ ದೇವರಾಯ ಅವರು ಬರೆದಿರುವ ಸಮಗ್ರ ಕತೆಗಳು ಕೃತಿಯಿಂದ ತೆಗೆದುಕೊಳ್ಳಲಾದ ಮಗ್ಗದ ಸಾಹೇಬ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕರೀಮನು ಹತ್ತು ಸಾವಿರ ರೂಪಾಯಿ ಮತ್ತು ತಾಯಿಯ ಸರದೊಂದಿಗೆ ಮನೆಗೆ ಬಂದಾಗ ಆತನ ತಂದೆ ಅವನನ್ನು ಮನೆಗೆ ಸೇರಿಸದೆ ಬಾಗಿಲು ಮುಚ್ಚಿದನು . ಆಗ ಕರೀಮನು ಶಂಕರಪ್ಪ ಮಾಸ್ತರರ ಬಳಿ ಹೋಗಿ ತನ್ನ ತಂದೆಯೊಡನೆ ಸಂಧಾನ ಮಾಡಿಸಿರಿ ಎಂದು ಕೇಳಿಕೊಳ್ಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : ಇಲ್ಲಿ ಕರೀಮನ ಸಾಧನೆ , ತಂದೆ – ತಾಯಿಯ ಮೇಲೆ ಇಟ್ಟಿದ್ದ ಪ್ರೀತಿ , ಮುಖ್ಯೋಪಾಧ್ಯಾಯರಲ್ಲಿ ಆತನು ವಿನಂತಿಸಿಕೊಳ್ಳುವ ರೀತಿ ಈ ಮಾತಿನಲ್ಲಿ ಸ್ವಾರಸ್ಯವಾಗಿ ಮೂಡಿಬಂದಿದೆ .

4 ) ” ದೇವರು ದೊಡ್ಡವನು ದೇವರು ದಯಾಳು ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಬಾಗಲೋಡಿ ದೇವರಾಯ ಅವರು ಬರೆದಿರುವ ಸಮಗ್ರ ಕತೆಗಳು ಕೃತಿಯಿಂದ ತೆಗೆದುಕೊಳ್ಳಲಾದ ಮಗ್ಗದ ಸಾಹೇಬ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : “ ನಿಮ್ಮ ಮಗ ಕರೀಮ್‌ನಿಗೆ ರಾಷ್ಟ್ರಪತಿ ಅವರು ಪದ್ಮಭೂಷಣ ಬಿರುದನ್ನು ಕೊಟ್ಟಿದ್ದಾರೆ . ಆ ವಿಷಯ ಪತ್ರಿಕೆಯಲ್ಲಿ ಬಂದಿದೆ ಎಂದು ಶಂಕರಪ್ಪ ಅವರು ಮುದುಕನಾಗಿದ್ದ ರಹೀಮನಿಗೆ ಹೇಳಿದಾಗ ರಹೀಮನು ಸಂತೋಷದಿಂದ ಹೆಮ್ಮೆಪಡುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : ತನ್ನ ಮಗ ಕರೀಮನ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಿದ್ದ ರಹೀಮನಿಗೆ ತನ್ನ ಮಗನ ಸಾಧನೆಯನ್ನು ಕೇಳಿ ಅವನ ಬಗ್ಗೆ ಹೆಮ್ಮೆಯ ಭಾವನೆ ಮೂಡಿದ್ದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿದೆ .

ಊ ] ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ .

1 ) ಅಬ್ದುಲ್ ರಹೀಮನಿಗೆ ಮಗ್ಗದ ಸಾಹೇಬ ಎಂದು ಹೇಳಿದರೆ ಬಹು ಸಿಟ್ಟು ಬರುತ್ತಿತ್ತು .

2 ) ಮನೆಯಲ್ಲಿ ಊಟಕ್ಕೆ ಇದೆಯೋ ಇಲ್ಲವೋ ಎಂಬಂತಾಗಿದೆ .

3 ) ಹುಡುಗನ ಉತ್ಸಾಹ ಆಕಾಶಕ್ಕೇರಿತು .

4 ) ಶಂಕರಪ್ಪ ಅವರು ಮುಖ ಬಾಡಿಸಿಕೊಂಡು ಹಿಂತೆರಳಿದರು .

5 ) ನನಗೆ ಎರಡೇ ಮಕ್ಕಳು ಕಳ್ಳರ ಪರಿಚಯ ನನಗಿಲ್ಲ .

8th Standard 1st Lesson Maggada Saheba Kannada Notes Question Answer Pdf

ಇತರೆ ಪಾಠಗಳು :

Leave your vote

124 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.