10ನೇ ತರಗತಿ ಕನ್ನಡ ಜನಪದ ಒಗಟುಗಳು ನೋಟ್ಸ್ , 10th Standard Kannada Janapada Ogatugalu Notes Question Answer Pdf Download
ತರಗತಿ : 10ನೇ ತರಗತಿ
ಪಾಠದ ಹೆಸರು : ಒಗಟುಗಳು
Table of Contents
Janapada Ogatugalu 10th Kannada Notes Question Answer
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
1. ಕೆಸರಿಗೂ ಕಮಲಕ್ಕೂ ಇರುವ ಸಂಬಂಧವನ್ನು ಒಗಟು ಹೇಗೆ ವಿವರಿಸುತ್ತದೆ ?
ಉತ್ತರ : ಕಮಲದ ಹೂವು ಬೆಳೆಯಲು ಕೆಸರು ಬೇಕು . ಆದ್ದರಿಂದ ಅದು ಕೆಸರಿನಲ್ಲಿ ಹುಟ್ಟಿ ಮತ್ತು ಕೆಸರಿನಲ್ಲಿ ಬೆಳೆಯುವ ಒಂದು ವಿಧವಾದ ಗಿಡವಾಗಿದೆ . ಎಂದು ವರ್ಣಿಸಿರುವುದು ಸೂಕ್ತವಾಗಿದೆ .
2. ಹೊಲದಲ್ಲಿ ಹುಟ್ಟಿದ ಉತ್ತರಾಣಿ ಹಾಗೂ ಗರಿಕೆ ಕೊಡುವ ತೊಂದರೆಯನ್ನು ಒಗಟುಗಳು ಹೇಗೆ ವಿವರಿಸುತ್ತವೆ ?
ಉತ್ತರ : ಹೊಲದ ಬದುವಿನಲ್ಲಿ ಹುಟ್ಟುವ ಉತ್ತರಾಣಿ ಗಿಡದಲ್ಲಿ ಬೆಳೆಯುವ ಬೀಜಗಳು ಮುಳ್ಳಿನಂತಿದ್ದು ಆ ಗಿಡವಿರುವ ಬದುವಿನಲ್ಲಿ ನಡೆದುಕೊಂಡು ಹೋಗುವವರ ಅದರಲ್ಲೂ ಗ್ರಾಮೀಣ ಮಹಿಳೆಯರ ಸೀರೆಯ ಸೆರಗನ್ನು ಹಿಡಿದುಕೊಳ್ಳುತ್ತವೆ . ರೈತನಿಗೆ ಬಹಳ ತೊಂದರೆ ಕೊಡುವ ಗರಿಕೆಯನ್ನು ಎಷ್ಟೇ ಉತ್ತರೂ ಹೊಲದಲ್ಲಿ ನಾಶಪಡಿಸಲು ಸಾಧ್ಯವಿಲ್ಲ : ಅದು ಮತ್ತೆ ಚಿಗುರಿಕೊಳ್ಳುತ್ತದೆ . ರೈತನ ಪ್ರಯತ್ನವನ್ನು ಕಂಡು ನಿನ್ನದು ವ್ಯರ್ಥ ಪ್ರಯತ್ನ . ನನ್ನನ್ನು ನಾಶಪಡಿಸಲು ನಿನ್ನಿಂದ ಸಾಧ್ಯವಿಲ್ಲ ‘ ಎಂಬಂತೆ ನಗುತ್ತದೆ ಎಂದು ಒಗಟಿನಲ್ಲಿ ಸ್ವಾರಸ್ಯಕರವಾಗಿ ಹೇಳಲಾಗಿದೆ .
3. ‘ ಅಂಗಿ ‘ ಎಂಬ ಉತ್ತರ ಬರುವ ಬೆಡಗಿನ ಪ್ರಶ್ನೆಯನ್ನು ತಿಳಿಸಿ .
ಉತ್ತರ : “ ಕೈಯುಂಟು ಕಾಲಿಲ್ಲ ಶಿರಹರಿದ ಮುಂಡ ಮೈಯೊಳಗೆ ನವಗಾಯ ಒಂಬತ್ತು ತುಂಡ ಒಯ್ಯನೊಯ್ಯನೇ ಬಂದು ಹೆಗಲೇರಿಕೊಂಡ ರಾಯ ರಾಯರಿಗೆಲ್ಲ ತಾನೇ ಪ್ರಚಂಡ
4. ಉಪ್ಪಿನ ವಿಶೇಷತೆ ಒಗಟಿನಲ್ಲಿ ಹೇಗೆ ವ್ಯಕ್ತವಾಗಿದೆ ?
ಉತ್ತರ : ಉಪ್ಪನ್ನು ನೀರಿನಲ್ಲೇ ಇರುವ ಅಂಶವಾಗಿದೆ . ಅದನ್ನು ನೀರಿನಿಂದಲೇ ತಯಾರಿಸಲಾಗುತ್ತದೆ . ಆದರೆ ಅದಕ್ಕೆ ನೀರು ತಾಕಿದರೆ ಕರಗಿ ಮಾಯವಾಗುತ್ತದೆ . ಎಂದು ನೀರಿನ ವಿಶಿಷ್ಟ ಗುಣವನ್ನು ಕುರಿತು ಒಗಟಿನಲ್ಲಿ ಹೇಳಲಾಗಿದೆ .
5. ಒಗಟುಗಳಿಂದ ಶೈಕ್ಷಣಿಕವಾಗಿ ಏನು ಲಾಭ ?
ಉತ್ತರ : ಜನಪದ ಒಗಟುಗಳು ಗ್ರಾಮೀಣ ಜನರ ಕಲ್ಪನಾ ಚಾತುರ್ಯಕ್ಕೆ ನಿದರ್ಶನವಾಗಿದ್ದು ಅವುಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕಲ್ಪನಾಶೀಲತೆ , ಆಲೋಚನಾ ಶಕ್ತಿ ಹಾಗೂ ಸೃಜನಶೀಲತೆ ವೃದ್ಧಿಸುತ್ತದೆ . ಜನಪದ ಬೆಡಗಿನ ಒಗಟುಗಳಲ್ಲಿ ಪ್ರಶ್ನೆಗೆ ಉತ್ತರಿಸುವ ಮತ್ತು ಪದ್ಯದಲ್ಲಿಯೇ ಎದುರಾಳಿಗೆ ಮತ್ತೊಂದು ಒಗಟನ್ನು ಒಡ್ಡುವ ಕ್ರಮ ವೈಶಿಷ್ಟ್ಯಪೂರ್ಣವಾಗಿದ್ದು ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಸಹಕಾರಿಯಾಗಿದೆ . ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಒಗಟುಗಳನ್ನು ಬಿಡಿಸುವುದರಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬುದ್ಧಿ ಕೌಶಲ ಬೆಳೆಯುತ್ತದೆ .
6. ಬೀಸುವ ಕಲ್ಲನ್ನು ಕುರಿತ ಒಗಟನ್ನು ವಿವರಿಸಿರಿ .
ಉತ್ತರ : ಬೀಸುವ ಕಲ್ಲಿನ ಮೇಲೆ ಮಧ್ಯಭಾಗದಲ್ಲಿರುವ ಬಾಯಿಗೆ ಧಾನ್ಯವನ್ನು ಹಾಕಲಾಗುತ್ತದೆ . ಬೀಸುತ್ತಿದ್ದಂತೆ ಅದು ಕಲ್ಲಿನ ಒಳಗೆ ಹೋಗುತ್ತದೆ . ಅದನ್ನೇ ಒಗಟಿನಲ್ಲಿ ‘ ಬಾಯಲ್ಲಿ ತಿಂಬೋದು ‘ ಎನ್ನಲಾಗಿದೆ . ಹಾಗೆಯೇ ಅದರಲ್ಲಿ ಬೀಸುವಾಗ ಅದರ ಸುತ್ತ ಹಿಟ್ಟು ಚೆಲ್ಲುತ್ತದೆ , ಇದನ್ನೆ ಕುಕ್ಕುವುದು ( ಕಕ್ಕುವುದು ) ಎಂದು ಹೇಳಲಾಗಿದೆ .
ಒಗಟುಗಳು:
1 ಅಂಗಳದಲ್ಲಿ ಹುಟ್ಟುವುದು , ಅಂಗಳದಲ್ಲಿ ಬೆಳೆಯುವುದು , ತನ್ನ ಮಕ್ಕಳ ಹಂಗಿಸಿ ಮಾತಾಡುವುದು ಇದು ಏನು ? ಕೋಳಿ
2 ಇದ್ದಲು ನುಂಗುತ್ತ , ಗದ್ದಲ ಮಾಡುತ್ತಾ , ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ ನಾನ್ಯಾರು ? – ರೈಲು
3. ಊಟಕ್ಕೆ ಕುಳಿತವರು ಹನ್ನೆರಡು ಜನರು , ಬಡಿಸುವವರು ಇಬ್ಬರು , ಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ : ಗಡಿಯಾರ
4. ಹಸಿರು ಹಾವರಾಣಿ , ತುಂಬಿದ ತತ್ರಾಣಿ , ಹೇಳದಿದ್ದರೆ ನಿಮ್ಮ ದೇವರಾಣಿ – ಕಲ್ಲಂಗಡಿ ಹಣ್ಣು
5. ಮೊಟ್ಟೆ ಒಡೆಯೋ ಹಾಗಿಲ್ಲ ಕೊಡ ಮುಳುಗಿಸೋ ಹಾಗಿಲ್ಲ ಬರಿ ಕೊಡೆ ತಗೊಂಡು ಬಾರೋ ಹಾಗಿಲ್ಲ : ತೆಂಗು
6. ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ : ಕಣ್ಣು
7. ಕಾಸಿನ ಕುದುರೆಗೆ ಬಾಲದ ಲಗಾಮು : ಸೂಜಿ ದಾರ .
8. ಎಲೆ ಇಲ್ಲ , ಸುಣ್ಣ ಇಲ್ಲ , ಬಣ್ಣವಿಲ್ಲ ತುಟಿ ಕೆಂಪಗಾಗಿದೆ . ಮಳೆಯಲ್ಲಿ ಬೆಲೆಯಿಲ್ಲ , ಮೈ ಹಸಿರಾಗಿದೆ : ಗಿಳಿ
9.ಮನೆ , ಮನೆಗೆರಡು ಬಾಗಿಲು , ಬಾಗಿಲ ಮುಂದೆ , ಮುಚ್ಚಿದರೆ ಹಾನಿ ಇದೇನು ? ಮೂಗು , ಬಾಯಿ
10. ಸುತ್ತ ಮುತ್ತ ಸುಣ್ಣದ ಗೋಡೆ , ಎತ್ತ ನೋಡಿದರೂ ಬಾಗಿಲಿಲ್ಲ ಇದು ಏನು ? – ಮೊಟ್ಟೆ-
11. ಕಡಿದರೆ ಕಟ್ಟೋಕೆ ಆಗೋಲ್ಲ , ಹಿಡದ್ರೆ ಮುಟ್ಟೋಕೆ ಸಿಗೋಲ್ಲ – ನೀರು
12. ಒಂದು ರುಮಾಲು . ನಮ್ಮಪ್ಪನೂ ಸುತ್ತಲಾರ . ನಿಮ್ಮಪ್ಪನೂ ಸುತ್ತಲಾರ , = ದಾರಿ –
13. ಅಬ್ಬಬ್ಬ ಹಬ್ಬ ಬಂತು , ಸಿಹಿಕಹಿ ಎರಡೂ ತಂತು : ಯುಗಾದಿ
14 , ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ : ಬದನೆಕಾಯಿ
15. ಸಾಗರ ಪುತ್ರ , ಸಾರಿನ ಮಿತ್ರ : ಉಪ್ಪು
10th Standard Kannada Janapada Ogatugalu Notes Question Answer Pdf Download
ಇತರೆ ಪಾಠಗಳು:
ಸುಕುಮಾರಸ್ವಾಮಿಯ ಕಥೆ ಕನ್ನಡ ನೋಟ್ಸ್