10ನೇ ತರಗತಿ ಮೃಗ ಮತ್ತು ಸುಂದರಿ ಕನ್ನಡ ನೋಟ್ಸ್ , 10th Class Standard Kannada Mruga Mathu Sundari Notes Question answer Pdf Download
ತರಗತಿ : 10ನೇ ತರಗತಿ
ಪಾಠದ ಹೆಸರು : ಮೃಗ ಮತ್ತು ಸುಂದರಿ
Table of Contents
Mruga Mattu Sundari Kannada Notes Question Answer
ಕೆಳಗಿ ಪ್ರಶ್ನೆಗಳಿಗೆ ಉತ್ತರಿಸಿ :
1. ಯಾರು ತಾಪಗೊಂಡು ಮೃಗವಾಗಿದ್ದರು ?
ಉತ್ತರ : ರಾಜಕುಮಾರನು ಶಾಪಗೊಂಡು ಮೃಗವಾಗಿದ್ದನು .
2. ಕನ್ಯ ಕೊಟ್ಟ ಶಾಪವೇನು ?
ಉತ್ತರ : ‘ ನಿನ್ನನ್ನು ಕನೈಯೊಬ್ಬಳು ಮನಸಾರೆ ಒಪ್ಪಿ ಪ್ರೀತಿಸುವವರೆಗೆ ಮೃಗವಾಗಿಯೇ ಇರು ‘ ಎಂದು ಕನ್ಯ ಶಾಪ ಹಾಕಿದ್ದಳು .
3. ಶಾಪ ವಿಮೋಚನೆಯ ಫಲವೇನು ?
ಉತ್ತರ : ಶಾಪ ವಿಮೋಚನೆಯ ನಂತರ ಮೃಗದ ಆಕಾರವೇ ಬದಲಾಯಿತು . ಅದು ಸುಂದರ ರಾಜಕುಮಾರನಾಗಿ ಬದಲಾಯಿತು .
4. ಬಡತನ ಸುಂದರಿ ಹಾಗೂ ಅವಳ ತಂದೆಗೆ ಕಷ್ಟವಾಗಲಿಲ್ಲ ಏಕೆ ?
ಉತ್ತರ : ಬಡತನ ಸುಂದರಿ ಹಾಗೂ ಅವಳ ತಂದೆಗೆ ಕಷ್ಟವಾಗಲಿಲ್ಲ . ಏಕೆಂದರೆ ಅವರ ಜೀವನ ಸರಳವಾಗಿತ್ತು .
5. ಮೃಗದ ಬಾಹ್ಯ ಆಕಾರ ಹೇಗಿತ್ತು ?
ಉತ್ತರ : ಮೃಗದ ಬಾಹ್ಯ ಆಕಾರ ಭೀಕರವಾಗಿತ್ತು . ಕೋರೆ ಹಲ್ಲು , ಹಂದಿಯ ದೇಹ , ತೋಳದ ಚಲನೆಯನ್ನು ಪಡೆದಿತ್ತು .
6 ಮೃಗದ ಬಗೆಗೆ ಸುಂದರಿಯ ಮನ ಕರಗುತ್ತಿತ್ತು ಏಕೆ ?
ಉತ್ತರ : ಮೃಗದ ಒರಟು ಮಾತು , ತಿಕ್ಕಲು ನಡವಳಿಕೆ ಮನಸ್ಸಿನಲ್ಲೇ ನಗು ತರುತ್ತಿದ್ದವು . ಹಾಗೂ ಆತನ ಕಾಳಜಿಯನ್ನು ನೆನೆದು ಮನ ಕರಗುತ್ತಿತ್ತು .
ಹೆಚ್ಚುವರಿ ಪ್ರಶ್ನೆಗಳು
7. ವರ್ತಕನು ಬಡವನಾಗಲು ಕಾರಣವೇನು ?
ವರ್ತಕನಿಗೆ ಹಣಕಾಸಿನ ತೊಂದರೆ ಉಂಟಾಗಲು ಕಾರಣವೇನು ?
ವರ್ತಕನು ಹಳ್ಳಿಗೆ ವಲಸೆ ಹೋಗಲು ಕಾರಣವೇನು ?
ಉತ್ತರ : ವರ್ತಕನ ವ್ಯಾಪಾರ ಕುಸಿದು ಬಿತ್ತು . ಬರಬೇಕಾಗಿದ್ದ ಹಣ ಬರಲಿಲ್ಲ . ಸರಕುಗಳನ್ನು ತರಲು ದೂರದ ದೇಶಕ್ಕೆ ಪ್ರಯಾಣಿಸಿದ್ದ ಹಡಗುಗಳು ಹಿಂದಿರುಗಲಿಲ್ಲ . ಅವನ ಸಾಲಗಳು ಅವನನ್ನು ಬಾಧಿಸತೊಡಗಿದವು . ಇದ್ದಬದ್ದ ಸ್ಥಿರಾಸ್ತಿ , ಚರಾಸ್ತಿಯನ್ನೆಲ್ಲ ಮಾರಿ ಸಾಲತೀರಿಸಿದನು . ಆದ್ದರಿಂದ ಬಡವನಾದ ಅವನು ತನ್ನ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿ ಹಳ್ಳಿಯಲ್ಲಿ ನೆಲೆಸಿದನು .
8. ವರ್ತಕನ ಮೂವರು ಹೆಣ್ಣು ಮಕ್ಕಳ ಸ್ವಭಾವ ಹೇಗಿತ್ತು ?
ಉತ್ತರ : ವರ್ತಕನ ಮೂವರು ಹೆಣ್ಣು ಮಕ್ಕಳಲ್ಲಿ ಹಿರಿಯರಾದ ಇಬ್ಬರು ಬಿಂಕ , ಬಡಿವಾರದ ಹುಡುಗಿಯರು , ಫ್ಯಾಷನ್ . ಪಾರ್ಟಿ , ಗೆಳೆಯರೆಂದರೆ ಪಂಚಪ್ರಾಣ . ಆದರೆ ಮೂರನೆಯ ಹುಡುಗಿ ತಂದೆಯಷ್ಟೇ ಮೃದು ಸ್ವಭಾವದವಳಾಗಿದ್ದಳು . ಆಕೆಗೆ ತಂದೆಯ ನೆಮ್ಮದಿ ಮುಖ್ಯ ರೂಪವತಿಯಾಗಿದ್ದ ಆಕೆಯನ್ನು ಎಲ್ಲರೂ ಸುಂದರಿ ಎಂದೇ ಕರೆಯುತ್ತಿದ್ದರು .
9. ವರ್ತಕನು ಹಡಗನ್ನು ಸ್ವಾಗತಿಸಲು ನಗರಕ್ಕೆ ಹೊರಟಾಗ ಮೂವರು ಹೆಣ್ಣು ಮಕ್ಕಳು ಏನೇನು ತರಲು ಹೇಳಿದರು ?
ಉತ್ತರ : ವರ್ತಕನು ಹಡಗನ್ನು ಸ್ವಾಗತಿಸಲು ನಗರಕ್ಕೆ ಹೊರಟಾಗ ಅವನ ಇಬ್ಬರು ಹಿರಿಯ ಹೆಣ್ಣು ಮಕ್ಕಳು ಬಟ್ಟೆ , ಒಡವೆ . ಅಲಂಕಾರದ ವಸ್ತುಗಳ ಪಟ್ಟಿ ನೀಡಿದರು . ಆದರೆ ಸುಂದರಿ ತನಗೊಂದು ಗುಲಾಬಿ ಹೂಗಳ ಗೊಂಚಲು ತರಬೇಕೆಂದು ಕೇಳಿಕೊಂಡಳು .
10. ವರ್ತಕನು ಅರಮನೆಯಲ್ಲಿ ಊಟಮಾಡಿ , ಹೂಗಳನ್ನು ಕಿತ್ತಿದ್ದರಿಂದ ಮೃಗ ಅವನಿಗೆ ಏನೆಂದು ಎಚ್ಚರಿಕೆ ನೀಡಿತು ?
ಉತ್ತರ : ವರ್ತಕನು ಆರಮನೆಯಲ್ಲಿ ಊಟಮಾಡಿ , ಹೂಗಳನ್ನು ಕಿತ್ತಿದ್ದರಿಂದ ಮೃಗ ಸಿಟ್ಟಿನಿಂದ ಅಬ್ಬರಿಸಿ “ ಕೇಳು ನಿನ್ನ ಬದಲಾಗಿ ನಿನ್ನ ಮುದ್ದು ಮಗಳನ್ನು ತಂದು ಕೊಟ್ಟರೆ ನಿನ್ನನ್ನು ಕೊಲ್ಲುವುದಿಲ್ಲ . ನೀನು ತಪ್ಪಿಸಿಕೊಳ್ಳಲಾರೆ , ಈ ಬುಟ್ಟಿ ತೆಗೆದುಕೋ , ಇದರೊಂದಿಗೆ ಹೋಗು ನಾಳೆ ಸಂಜೆ ಒಳಗೆ ನಿನ್ನ ಮಗಳನ್ನು ಕರೆತರದಿದ್ದರೆ ನಿನ್ನನ್ನು ನಿನ್ನ ಮಗಳನ್ನು ಒಟ್ಟಿಗೇ ಮುಗಿಸುತ್ತೇನೆ ! ” ಅಂದಿತು .
11. ವರ್ತಕನು ನಿರ್ಜನ ಪ್ರದೇಶದಲ್ಲಿ ನೋಡಿದ ಅರಮನೆಯಲ್ಲಿ ಏನು ಮಾಡಿದನು ?
ಉತ್ತರ : ವರ್ತಕನು ಅಂಜಿಕೆಯಿಂದ ಆರಮನೆ ಪ್ರವೇಶಿಸಿದನು . ಆ ಅರಮನೆಯ ಒಂದು ಕೋಣೆಯಲ್ಲಿ ಭಕ್ಷ್ಯ ಭೋಜ್ಯಗಳನ್ನು ಇಡಲಾಗಿತ್ತು . ಹಸಿವೆ ತಾಳಲಾರದೆ ಉಂಡ , ಭೋಜನ ಸವಿದು ಹೊರಬಂದ . ಪುಷ್ಪವನದ ಗುಲಾಬಿಗಳನ್ನು ನೋಡಿದ . ತನ್ನ ಮಗಳು ಸುಂದರಿಗಾಗಿ ಒಂದು ಗೊಂಚಲು ಕಿತ್ತುಕೊಂಡ .
12. ಮೃಗವು ” ನನ್ನ ಹೃದಯ ಒಳ್ಳೆಯದಿರಬಹುದು , ಆದರೂ ನಾನು ಮೃಗ ” ಎಂಬ ಮಾತಿಗೆ ಸುಂದರಿಯ ಪ್ರತಿಕ್ರಿಯೆ ಏನು ?
ಉತ್ತರ : ಮೃಗವು ” ನನ್ನ ಹೃದಯ ಒಳ್ಳೆಯದಿರಬಹುದು . ಆದರೂ ನಾನು ಮೃಗ ” ಎಂದು ಹೇಳಿದ ಮಾತಿಗೆ ಸುಂದರಿ ಮೃಗ ಒಳ್ಳೆಯ ಹೃದಯ ಹೊಂದಿದ್ದರೂ ಮೃಗದ ಆಕಾರ ಹೊಂದಿರುವುದು ಸಹಜ . ಆದರೆ ಜಗತ್ತಿನ ಅನೇಕ ಮನುಷ್ಯರು ಸುಂದರ ಆಕಾರ ಪಡೆದು , ಮೃಗದ ಹೃದಯ ಹೊಂದಿರುತ್ತಾರೆ ” ಎಂದು ಪ್ರತಿಕ್ರಿಯಿಸಿದಳು .
10th Class Standard Kannada Mruga Mathu Sundari Notes Question answer Pdf
ಇತರೆ ಪಾಠಗಳು :