10ನೇ ತರಗತಿ ವೃಕ್ಷಸಾಕ್ಷಿ ಕನ್ನಡ ನೋಟ್ಸ್ | 10th Standard Vruksha sakshi Kannada Notes

10ನೇ ತರಗತಿ ಕನ್ನಡ ವೃಕ್ಷಸಾಕ್ಷಿ ಪಾಠದ ನೋಟ್ಸ್ ಪ್ರಶ್ನೋತ್ತರಗಳು, Vruksha Sakshi 10th Class Kannada Notes Question Answer Pdf Download 2023

ತರಗತಿ : 10ನೇ ತರಗತಿ

ಪಾಠದ ಹೆಸರು : ವೃಕ್ಷಸಾಕ್ಷಿ

ಕೃತಿಕಾರರ ಹೆಸರು : ದುರ್ಗಸಿಂಹ

10ನೇ ತರಗತಿ ವೃಕ್ಷಸಾಕ್ಷಿ ಕನ್ನಡ ನೋಟ್ಸ್

Table of Contents

ಕವಿ ಪರಿಚಯ : –

ದುರ್ಗಸಿಂಹ : ದುರ್ಗಸಿಂಹನು ಕ್ರಿ . ಶ . ಸುಮಾರು ೧೦೩೧ ರಲ್ಲಿ ಕಿಸುಕಾಡು ನಾಡಿನ ಸಯ್ಯಡಿಯಲ್ಲಿ ಜನಿಸಿದನು . ಇವನು ಒಂದನೆಯ ಜಗದೇಕಮಲ್ಲನ ಆಸ್ಥಾನದಲ್ಲಿ ದಂಡನಾಯಕನೂ ಸಂಧಿವಿಗ್ರಹಿಯೂ ಆಗಿದ್ದನು . ಮತಧರ್ಮ ಸಮನ್ವಯನಾದ ಈತ ಸಯ್ಯಡಿಯಲ್ಲಿ ಹಲವಾರು ಹರಿಹರ ಭವನಗಳನ್ನು ನಿರ್ಮಿಸಿದ್ದಾನೆ . ಈತನು ‘ ಕರ್ಣಾಟಕ ಪಂಚತಂತ್ರ ‘ ಎಂಬ ಚಂಪೂ ಕಾವ್ಯವನ್ನು ರಚಿಸಿದ್ದಾನೆ .‌

Vruksha Sakshi Kannada Notes Question Answer

ಅ ] ಒಂದು ವಾಕ್ಯದಲ್ಲಿ ಉತ್ತರಿಸಿ ,

1. ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು ?

ದುಷ್ಟಬುದ್ಧಿ ಮತ್ತು ಧರ್ಮಬುದ್ಧಿಯ ನಡುವಿನ ವ್ಯಾಜ್ಯವನ್ನು ಪರಿಹರಿಸಲು , ವೃಕ್ಷಸಾಕ್ಷಿಯನ್ನು ಕೇಳಲುಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಬಂದರು .

2. ‘ ವೃಕ್ಷಸಾಕ್ಷಿ ‘ ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ ?

‘ವೃಕ್ಷಸಾಕ್ಷಿ ‘ ಕತೆಯನ್ನು ದುರ್ಗಸಿಂಹನ ‘ ಕರ್ನಾಟಕ ಪಂಚತಂತ್ರ ‘ ಕೃತಿಯಿಂದ ಆರಿಸಲಾಗಿದೆ .

3. ಧರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು ?

ದುಷ್ಟಬುದ್ಧಿಯು “ ಆ ಸ್ಥಳದಲ್ಲಿ ಹೊನ್ನನ್ನು ಇಡುವಾಗ ಈತ ಮತ್ತು ನಾನು ಅಲ್ಲದೆ ಬೇರೆ ಯಾರು ಮನುಷ್ಯರು ಇರಲಿಲ್ಲ . ಆಸ್ಥಳದಲ್ಲಿ ಇದ್ದ ಆಲದ ಮರವೇ ಸಾಕ್ಷಿ ” ಎಂದು ಹೇಳಿದ್ದನ್ನು ಕೇಳಿ ಧರ್ಮಾಧಿಕರಣರು ವಿಸ್ಮಯ ಹೊಂದಿದರು .

4. ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು ?

ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನುದೇವರು , ಗುರುಗಳು , ವೇದಾಧ್ಯಯನ ನಿರತರನ್ನು ಪೂಜೆ ಮಾಡುತ್ತಕಳೆದನು .

5. ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು ?

ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಹೊನ್ನಿನ ಕಳ್ಳತನದ ಆರೋಪವನ್ನು ಹೊರಿಸಿದನು .

ಆ ] ಮೂರು / ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1. ಧರ್ಮಾಧಿಕರಣರು ವಟವೃಕ್ಷಕ್ಕೆ ಏನು ಹೇಳಿದರು ?

ಧರ್ಮಾಧಿಕರಣರು ವಟವೃಕ್ಷಕ್ಕೆ “ ನೀನಾದರೋ , ಯಕ್ಷಾದಿ ದಿವ್ಯ ದೇವತೆಗಳು ವಾಸ ಮಾಡುವಂತಹ ಮತ್ತು ಅವರಸೇವೆಯನ್ನು ಮಾಡುವಂತಹವನು ಆಗಿದ್ದೀಯಾ , ಆ ಕಾರಣದಿಂದ ನಿನ್ನನ್ನು ಸಾಕ್ಷಿ ಮಾಡಿ ಕೇಳುತ್ತಿದ್ದೇವೆ , ನೀನು ತಪ್ಪದೆಸಾಕ್ಷಿಯನ್ನು ನುಡಿ ” ಎಂದು ಹೇಳಿದರು .

2. ಧರ್ಮಬುದ್ಧಿಗೆ ದುಷ್ಟಬುದ್ಧಿಯು ಯಾವ ಸಲಹೆಯಿತ್ತನು ?

ಅರ್ಧರಾತ್ರಿಯಲ್ಲಿ ಧರ್ಮಬುದ್ಧಿಯು ದುರ್ಬುದ್ಧಿಯಾದ ದುಷ್ಟಬುದ್ಧಿಯನ್ನು ಕರೆದು , “ ಚಿನ್ನವನ್ನು ಹಂಚಿಕೊಳ್ಳೋಣ ” ಎಂದಾಗ ದುಷ್ಟಬುದ್ಧಿಯು ಪಾಪಬುದ್ಧಿಯವನಾಗಿ “ ನಾವು ಈ ಹೊನ್ನನ್ನು ಹಂಚಿಕೊಂಡು ಮನೆಯಲ್ಲಿ ಸ್ಟೇಚ್ಛೆಯಿಂದ ಇರುವವರಲ್ಲ . ಮತ್ತೆ ವ್ಯಾಪಾರಕ್ಕೆ ಹೋಗಬೇಕಾಗುತ್ತದೆ . ಆಕಾರದಿಂದ ನಿನಗೂ ನನಗೂ ಖರ್ಚಿಗೆ ತಕ್ಕಷ್ಟು ಹೊನ್ನನ್ನು ತೆಗೆದುಕೊಂಡು , ಉಳಿದ ಹೊನ್ನೆಲ್ಲವನ್ನು ಇಲ್ಲಿಯೇ ಇಟ್ಟು ಬಿಡೋಣ ” ಎಂದು ಸಲಹೆಯಿತ್ತನು ,

3. ದುಷ್ಟಬುದ್ಧಿಯು ತನ್ನ ತಂದೆಗೆ ಏಕಾಂತದಲ್ಲಿ ಏನೆಂದು ಹೇಳಿದನು ?

ದುಷ್ಟಬುದ್ಧಿಯು ತನ್ನ ತಂದೆಯ ಕೈ ಹಿಡಿದು , ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗಿ “ ನಿನ್ನ ಒಂದು ಮಾತಿನಿಂದ ನಮ್ಮ ಕಷ್ಟಗಳೆಲ್ಲವೂ ಪರಿಹಾರವಾಗಿ , ಹಲವು ಕಾಲ ಹಸಿಯದ ಊಟಮಾಡಿ ಬಾಳುವಂತಹ ಸಾಧನೆಯನ್ನು ಮಾಡಬಹುದು . ನೀನು ಆ ಮರದ ಪೊಟರೆಯಲ್ಲಿ ಅಡಗಿದ್ದು , ಧರ್ಮಬುದ್ಧಿಯೇ ಹೊನ್ನು ತೆಗೆದುಕೊಂಡು ಹೋದನೆಂದು ಹೇಳು ” ಎಂದು ಹೇಳಿದನು .

ಇ ] ಎಂಟು / ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,

1. ‘ ವೃಕ್ಷಸಾಕ್ಷಿ ‘ ಪಾಠದಲ್ಲಿ ನೀವು ಮೆಚ್ಚುವ ಪಾತ್ರ ಯಾವುದು ? ಏಕೆ ?

‘ ವೃಕ್ಷಸಾಕ್ಷಿ ‘ ಪಾಠದಲ್ಲಿ ನಾವು ಮೆಚ್ಚುವ ಪಾತ್ರ ಧರ್ಮಬುದ್ಧಿಯದು . ಧರ್ಮಬುದ್ಧಿಯು ವ್ಯಾಪಾರಿ ಆದರೂ ಕಪಟವರಿಯದ ಸತ್ಯವಂತ , ಆಧ್ಯಾತ್ಮಿಕ ಮನೋಭಾವವುಳ್ಳವನು . ಸೂರ್ಯೋದಯಕ್ಕೆ ಮೊದಲೇ ಎದ್ದು ನಿತ್ಯಕರ್ಮ ಮುಗಿಸಿ ದೇವರು , ಗುರುಗಳು , ವೇದಾಧ್ಯಯನ ನಿರತರನ್ನು ಪೂಜಿಸುವವನು , ದುಷ್ಟಬುದ್ಧಿಯು ಮರದ ಪೊಟರೆಯೊಳಗೆ ತಂದೆಯನ್ನು ಕೂರಿಸಿ ಧರ್ಮಬುದ್ಧಿಯೇ ಚಿನ್ನ ಕದ್ದನೆಂದು ಹೇಳಿಸಿದಾಗಲೂ ಧರ್ಮಬುದ್ಧಿ ಕೂಗಾಡಲಿಲ್ಲ . ಶಾಂತನಾಗಿಯೇ ಇದ್ದನು . ಅವನಿಗೆ ದೇವರ ಮೇಲೆ ನಂಬಿಕೆ , ದೇವರಿದ್ದರೆ ಸತ್ಯವೇ ಹೊರಬರಬೇಕಿತ್ತು ಎಂಬುದು ಅವನ ಅನಿಸಿಕೆ , ಮರವನ್ನು ಪರೀಕ್ಷಿಸಬೇಕೆಂದು ಮರವನ್ನು ಸುತ್ತಿದಾಗ ಅಲ್ಲಿ ಮನುಷ್ಯ ಸಂಚಾರವಾಗಿರುವುದನ್ನು ಬುದ್ಧಿವಂತಿಕೆಯಿಂದ ಕಂಡುಕೊಂಡನು . ದುಷ್ಟಬುದ್ಧಿಗೆ ಬುದ್ಧಿಕಲಿಸುವ ಚಾಣಾಕ್ಷತನವನ್ನು ಮೆರೆಯುತ್ತಾನೆ . “ ಸುಳ್ಳನ್ನು ಸುಳ್ಳಿನಿಂದಲೇ : ಮುಳ್ಳನ್ನು ಮುಳ್ಳಿನಿಂದಲೇ ಜಯಿಸುವಂತೆ ” ಧರ್ಮಬುದ್ಧಿಯು ತಂತಬುದ್ಧಿಯಿಂದ ತನಗೆ ಒದಗಿದ್ದ ಕೆಟ್ಟ ಹೆಸರನ್ನು ಹೋಗಲಾಡಿಸಿ ಕೊಂಡನು . ಆದ್ದರಿಂದ ಸತ್ಯವಂತನಾದ ಧರ್ಮಬುದ್ಧಿ ಮೆಚ್ಚುಗೆಗೆ ಪಾತ್ರನಾಗುತ್ತಾನೆ .

2. ದುಷ್ಟಬುದ್ಧಿಯ ತಂತ್ರ ಅವನಿಗೆ ತಿರುಗುಬಾಣವಾದ ಬಗೆಯನ್ನು ತಿಳಿಸಿ ,

ದುಷ್ಟಬುದ್ಧಿಯು ಧರ್ಮಬುದ್ಧಿಯೊಡನೆ ಸೇರಿ ವ್ಯಾಪಾರ ಮಾಡಿ , ಲಾಭ ಗಳಿಸಿದ್ದ ಹೊನ್ನನ್ನು ತಾನೇ ದೋಚಿ , ಕಳ್ಳತನವನ್ನು ಧರ್ಮಬುದ್ಧಿಯ ಮೇಲೆ ಹೊರಿಸಿ , ಇದಕ್ಕೆ ವಟವೃಕ್ಷವೇ ಸಾಕ್ಷಿ ಎಂದು ಧರ್ಮಾಧಿಕಾರಿಗಳ ಮುಂದೆ ಹೇಳುತ್ತಾನೆ . ಇದರಿಂದ ಧರ್ಮಬುದ್ಧಿ ಮತ್ತು ಧರ್ಮಾಧಿಕಾರಿಗಳಿಗೆ ಆಶ್ಚರ್ಯವಾಗುತ್ತದೆ . ದುಷ್ಟಬುದ್ಧಿಯು ತಂದೆಯ ಬುದ್ಧಿ ಮಾತನ್ನು ಆಲಿಸದೇ , ಮರದಿಂದ ಸಾಕ್ಷಿ ಹೇಳಿಸಲು ತನ್ನ ತಂದೆಯನ್ನೇ ಮೊಟರೆಯಲ್ಲಿ ಕೂರಿಸಿ , ಅವನಿಂದ ಧರ್ಮಬುದ್ಧಿಯೇ ಚಿನ್ನ ಕದ್ದನೆಂದು ಸುಳ್ಳು ಹೇಳಿಸುತ್ತಾನೆ . ಧರ್ಮಬುದ್ಧಿಯು ದೈವ ಭಕ್ತನಾಗಿದ್ದು ಸತ್ಯ ಹೊರ ಬರುತ್ತದೆ ಎಂದು ನಂಬಿದ್ದನು . ಅವನ ನಂಬಿಕೆಯು ಸುಳ್ಳಾದಾಗ ಮಠದ ಬಳಿ ಪರೀಕ್ಷಿಸಿ ಮೊಟರೆಯೊಳಗೆ ಮನುಷ್ಯ ಸಂಚಾರವಾಗಿರುವುದನ್ನು ಕಂಡುಕೊಳ್ಳುತ್ತಾನೆ . ಧರ್ಮಾಧಿಕಾರಿಗಳಿಗೆ ತಾನು ವ್ಯಾಪಾರಿಯ ಮನೋಭಾವದಂತೆ ಸುಳ್ಳು ಹೇಳಿದ್ದಾಗಿ , ಚಿನ್ನವನ್ನು ತಾನೇ ತೆಗೆದುಕೊಂಡುದ್ದಾಗಿ ತಿಳಿಸಿ , ಈಗ ಆ ಚಿನ್ನಕ್ಕೆ ಹಾವು ಸುತ್ತುಕೊಂಡಿದೆ ಎಂದು ಹೇಳಿ , ಚಿನ್ನವನ್ನು ತೆಗೆಯಲು ಮರದ ಪೊಟರೆಗೆ ಹುಲ್ಲುಕಡ್ಡಿಯಿಟ್ಟು ಬೆಂಕಿ ಇಡುತ್ತಾನೆ . ಮೊಟರೆಗೆ ಹೋಗಿ ತುಂಬಿ ದುಷ್ಟಬುದ್ಧಿಯ ತಂದೆ ಪೇಮಮತಿ ಉಸಿರು ಕಟ್ಟಿಕೂಗಾಡುತ್ತ ಮೊಟರೆಯಿಂದ ಉರುಳಿ ಪ್ರಾಣಬಿಡುತ್ತಾನೆ . ದುಷ್ಟಬುದ್ಧಿಯ ಕುಟಿಲತ ಧರ್ಮಾಧಿಕಾರಿಗಳಿಗೆ ತಿಳಿಯುತ್ತದೆ . ಹೀಗೆ ದುಷ್ಟಬುದ್ಧಿಯ ತಂತ್ರ ಅವನಿಗೆ ತಿರುಗು ಬಾಣವಾಯಿತು ,

ಈ ] ಸಂದರ್ಭಾನುಸಾರ ಸ್ವಾರಸ್ಯ ಬರೆಯಿರಿ .

1, “ ಪ್ರಕೃತಿ ವಿಕೃತಿಯಾದ ಮನುಷ್ಯನಾಯುಷ್ಯಂ ಕುಂದುಗುಂ ”

ಸಂದರ್ಭ : ಮರದ ಪೊಟರೆಯೊಳಗೆ ಅಡಗಿದ್ದ ದುಷ್ಟಬುದ್ಧಿಯ ತಂದೆ ಪ್ರೇಮಮತಿಯು ಮತಿಗೆಟ್ಟು , ಧರ್ಮದಹಾದಿಯನ್ನು ಬಿಟ್ಟು “ ಧರ್ಮಬುದ್ಧಿಯೇ ಹೊನ್ನನ್ನು ತೆಗೆದುಕೊಂಡನೆಂದು ” ನುಡಿದ ಸಂದರ್ಭದಲ್ಲಿ ಕವಿಯು ಈಮಾತನ್ನು ಹೇಳುತ್ತಾನೆ .

ಸ್ವಾರಸ್ಯ : – ಪಾಪಕರ್ಮನಾದ ದುಷ್ಪ ಮಗನ ಮಾತನ್ನು ಕೇಳಿ ತಂದೆಯು ತೊಂದರೆಗೆ ಒಳಗಾದನು ಎಂಬುದನ್ನು ಪ್ರಕೃತಿ ವಿಕೃತಿಯಾದ ಮನುಷ್ಯನ ಆಯುಷ್ಯವು ಕಡಿಮೆಯಾಗುತ್ತದೆ ‘ ಎಂಬ ಮಾತು ಸ್ವಾರಸ್ಯಪೂರ್ಣವಾಗಿ ವರ್ಣಿಸಲ್ಪಟ್ಟಿದೆ .

2. ಹುಸಿಯದ ಬೇಹಾರಿಯೇ ಇಲ್ಲ ”

ಸಂದರ್ಭ : – ಧರ್ಮಬುದ್ಧಿಯು ಆಲದ ಮರದ ಬಳಿ ಬಂದು ನೋಡಿ , ಮರವನ್ನು ಸುತ್ತು ಹಾಕಿ , ದೊಡ್ಡದಾದ ಮೊಟರೆಯನ್ನು , ಮನುಷ್ಯ ಸಂಚಾರವಾಗಿರುವುದನ್ನು ಕಂಡು ನಿಶ್ಚಯಿಸಿದ ಸಂದರ್ಭದಲ್ಲಿ ಧರ್ಮಾಧಿಕಾರಿಗಳಿಗೆ ಈಮಾತನ್ನು ಹೇಳುತ್ತಾನೆ .

ಸ್ವಾರಸ್ಯ : – ವ್ಯಾಪಾರಿ ವೃತ್ತಿಧರ್ಮದಲ್ಲಿ ಧರ್ಮಬುದ್ಧಿಯು ಅಧರ್ಮಬುದ್ಧಿಯಾಗಿ ಸುಳ್ಳು ಹೇಳುವ ಮನಸ್ಸು ಉಂಟಾಗುತ್ತದೆ ಎಂಬುದನ್ನು ಈ ಮಾತಿನಲ್ಲಿ ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ .

3. “ ಸೊನ್ನನೆಲ್ಲಮಂ ನೀನೆ ಕೊಂಡ ”

ಆಯ್ಕೆ : ಈ ಮಾತನ್ನು ಕವಿ ದುರ್ಗಸಿಂಹನು ರಚಿಸಿರುವ “ ಕರ್ನಾಟಕ ಪಂಚತಂತ್ರ ” ಕೃತಿಯಿಂದ ಆಯ್ದ ‘ ವೃಕ್ಷಸಾಕ್ಷಿ ‘ ಎಂಬ ಗದ್ಯಪಾಠದಿಂದ ಆರಿಸಲಾಗಿದೆ . ಸಂದರ್ಭ : – ದುಷ್ಟಬುದ್ಧಿಯು ಧರ್ಮಬುದ್ಧಿಯನ್ನು ಮೋಸಗೊಳಿಸಿ ಹೂತಿಟ್ಟ ಹೊನ್ನೆಲ್ಲವನ್ನು ತೆಗೆದುಕೊಂಡು ಗುಳಿಯನ್ನು ಮೊದಲಿನಂತೆ ಮುಚ್ಚಿ ತಾನೇ ಧರ್ಮಬುದ್ಧಿಯ ಹತ್ತಿರ ಬಂದು “ ಖರ್ಚಿಗೆ ಹೊನ್ನು ಇಲ್ಲ , ಸ್ವಲ್ಪ ಹೊನ್ನನ್ನು ತೆಗೆದುಕೊಳ್ಳೋಣ ಬಾ ” ಎಂದು ಜೊತೆಯಲ್ಲಿ ಕರೆದುಕೊಂಡು ಹೋಗಿ , ಹೊತಿಟ್ಟ ಸ್ಥಳದಲ್ಲಿ ಹೊನ್ನನ್ನು ಕಾಣದೆ ಇದ್ದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : – ದುಷ್ಟಬುದ್ಧಿಯು ಇನ್ನು ಮಾತನಾಡದಿದ್ದರೆ ಅಪವಾದವು . ತನ್ನ ಮೇಲೆ ಬರುವುದೆಂದು ಹೊನ್ನೆಲ್ಲವನ್ನು ನೀನೆ ತೆಗೆದುಕೊಂಡಿದ್ದೀಯೆ ” ಎಂದನು ಎಂದು ಕವಿ ಸ್ವಾರಸ್ಯಪೂರ್ಣವಾಗಿ ವರ್ಣಿಸುತ್ತಾನೆ .

4 , “ ಈತನ ಮಾತು ಅಶ್ರುತ ಪೂರ್ವಮ್ ”

ಸಂದರ್ಭ : – ದುಷ್ಟಬುದ್ಧಿಯು “ ಆ ಸ್ಥಳದಲ್ಲಿ ಹೊನ್ನನ್ನು ಇಡುವಾಗ ಈತ ಮತ್ತು ನಾನು ಅಲ್ಲದೆ ಬೇರೆ ಯಾರು ಮನುಷ್ಯರು ಇರಲಿಲ್ಲ . ಆ ಸ್ಥಳದಲ್ಲಿ ಇದ್ದ ಆಲದ ಮರವೇ ಸಾಕ್ಷಿ ” ಎಂದ ಸಂದರ್ಭದಲ್ಲಿ ಧರ್ಮಾಧಿಕರಣರು ಆಶ್ಚರ್ಯಗೊಂಡು ಈ ಮಾತನ್ನು ಹೇಳುತ್ತಾರೆ .

ಸ್ವಾರಸ್ಯ : – ಧರ್ಮಾಧಿಕರಣರು “ ವೃಕ್ಷವು ಸಾಕ್ಷಿಯನ್ನು ಹೇಳುವುದು ಎಂಬುದನ್ನು ಹಿಂದೆ ಎಂದೂ ಕೇಳಿಲ್ಲ ಎಂದು ವಿಸ್ಮಯದಿಂದ ಹೇಳುವುದು ಬಹುಸ್ವಾರಸ್ಯಪೂರ್ಣವಾಗಿದೆ .

5. “ ನಿನ್ನ ಪಟುವಗೆ ನಮ್ಮ ಕುಲಮನೆಲ್ಲಮನವ ಬಗೆ ”

ಸಂದರ್ಭ : – ದುಷ್ಟಬುದ್ಧಿಯು ತನ್ನ ಮನೆಗೆ ಬಂದು ತನ್ನ ತಂದೆಯ ಕೈ ಹಿಡಿದು , ಏಕಾಂತ ಸ್ಥಳಕ್ಕೆ ಕರೆದುಕೊಂಡುಹೋಗಿ , ನೀನು ಆ ಮರದ ಪೊಟರೆಯಲ್ಲಿ ಅಡಗಿದ್ದು , ಧರ್ಮಬುದ್ಧಿಯೇ ಹೊನ್ನು ತೆಗೆದುಕೊಂಡು ಹೋದನೆಂದು ಹೇಳು ” ಎಂದು ಹೇಳಿದ ಸಂದರ್ಭದಲ್ಲಿ ಅವನಿಗೆ ಬುದ್ಧಿಯನ್ನು ಹೇಳುತ್ತ ತಂದೆಯು ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : – ದುಷ್ಟಬುದ್ಧಿಯನ್ನು ಕುರಿತು ಅವನ ತಂದೆಯು “ ನಿನ್ನ ಕೆಟ್ಟತನ ನಮ್ಮ ಕುಲವನ್ನು ನಾಶಮಾಡುವ ರೀತಿಯದಾಗಿದೆ ” ಎಂದು ಹೇಳುವುದು ಸ್ವಾರಸ್ಯಪೂರ್ಣವಾಗಿದೆ .

ಉ ] ಮೊದಲೆರಡು ಪದಗಳಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ .

೧) ವಡ್ಡಾರಾಧನೆ : : ಶಿವಕೋಟ್ಯಾಚಾರ್ಯ : : ಪಂಚತಂತ್ರ  : ದುರ್ಗಸಿಂಹ

೨) ಕಬ್ಬ : ಕಾವ್ಯ : : ಬೇಹಾರಿ : ವ್ಯಾಪಾರಿ

೩) ಅನೃತ : ಸುಳ್ಳು : : ಕೃತ್ರಿಮ : ಮೋಸ , ವಂಚನೆ

೪) ಬಂದಲ್ಲದೆ : ಲೋಪಸಂದಿ  : : ಧೃತಿಗೆಟ್ಟು : ಆದೇಶ ಸಂಧಿ

೫) ದೈವಭಕ್ತಿ – ತತ್ಪುರುಷ ಸಮಾಸ  : : ಅಬ್ಜೋದರ : ಬಹುವ್ರೀಹಿ ಸಮಾಸ

ಊ. ಈ ಪದಗಳನ್ನು ವಿಂಗಡಿಸಿ ಸಂಧಿಯ ಹೆಸರು ಬರೆಯಿರಿ.

ಕೊಟ್ಟಿರುವ ಪದಗಳನ್ನು ವಿಗ್ರಹಿಸಿ ಸಮಾಸವನ್ನು ಹೆಸರಿಸಿ.

ಅತಿಕುಟಿಲ, ಕೈಕೊಳ್ವುದು, ಕಟ್ಟೇಕಾಂತ, ಸ್ವಾಮಿದ್ರೋಹ, ಪರಧನ , ಧನಹರಣ , ಸಾಕ್ಷಿಮಾಡಿ, ಬಲವಂದು.

ಅತಿಕುಟಿಲ      –  ಅತಿಯಾದ   +   ಕುಟಿಲ           =ಕರ್ಮಧಾರೆಯ ಸಮಾಸ

ಕೈಕೊಳ್ವುದು    –   ಕೈಯನ್ನು    +   ಕೊಳ್ವುದು     =ಕ್ರಿಯಾ ಸಮಾಸ

ಕಟ್ಟೇಕಾಂತ      –      ಕಡಿದು      +   ಏಕಾಂತ       =ಕರ್ಮಧಾರೆಯ ಸಮಾಸ

ಸ್ವಾಮಿದ್ರೋಹ    –  ಸ್ವಾಮಿಗೆ     +    ದ್ರೋಹ       =ತತ್ಪುರಷ ಸಮಾಸ

ಪರಧನ             –    ಪರರ           +     ಧನ            =ತತ್ಪುರಷ ಸಮಾಸ

ಧನಹರಣ         –    ಧನದ            +   ಹರಣ         =ತತ್ಪುರಷ ಸಮಾಸ

ಸಾಕ್ಷಿಮಾಡಿ       –   ಸಾಕ್ಷಿಯನ್ನು   +     ಮಾಡಿ      = ಕ್ರಿಯಾ ಸಮಾಸ

ಬಲವಂದು       –       ಬಲಕ್ಕ        +      ಬಂದು      = ಕ್ರಿಯಾ ಸಮಾಸ

ಋ. ಕೊಟ್ಟಿರುವ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ ಛಂದಸ್ಸನ್ನು ಹೆಸರಿಸಿ ಲಕ್ಷಣ ಬರೆಯಿರಿ.

ಅ) ಅತಿಕುಟಿಲಮನಂ ಧನಲು ಬ್ಧತೆಯಿಂದ೦ ದುಷ್ಟಬುದ್ಧಿ ನುಡಿದಂ ಪುಸಿಯಂ

ಛಂದಸ್ಸು  – ಕಂದ ಪದ್ಯ

ಲಕ್ಷಣ :

ಒಂದನೇ ಸಾಲಿನಲ್ಲಿ ೪ ಮಾತ್ರೆಯ ೩ ಗಣಗಳು ಮತ್ತು ಎರಡನೆಯ ಸಾಲಿನಲ್ಲಿ ೪ ಮಾತ್ರೆಯ ೫ ಗಣಗಳು ಬಂದಿದ್ದು ಕಂದಪದಪೂರ್ವಾರ್ಧದ ಲಕ್ಷಣ ಹೊಂದಿದೆ

ಆದ್ದರಿಂದ ಇದು ಕಂದಪದ್ಯ ಛಂದಸ್ಸಾಗಿದೆ

ಆ)ಮೇದಿನಿಯಂ ಕ್ರಮಕ್ರಮದೆ ಪರ್ವಿದುದಾತನಭೋ  ವಿಭಾಗಮಾ

ಛಂದಸ್ಸು  – ಉತ್ಪಲ ಮಾಲಾ ವೃತ್ತ

ಲಕ್ಷಣ : 

ಈ ಪಾದದಲ್ಲಿ ೨೦ ಅಕ್ಷರಗಳು, ೨೮ ಮಾತ್ರೆಗಳು ,

ಭರನಭಭರಲಗ ಗಣಗಳು ಹಾಗೂ ಪಾದದ ಆದಿಯಲ್ಲಿ ಒಂದು ಗುರುಬಂದಿದ್ದುಇದು ಉತ್ಪಲ ಮಾಲಾ ವೃತ್ತ ಛಂದಸ್ಸಿನ ಲಕ್ಷಣವನ್ನು ಹೊಂದಿದೆ.

ಆದ್ದರಿಂದ ಇದು ಉತ್ಪಲ ಮಾಲಾ ವೃತ್ತ ಛಂದಸ್ಸಾಗಿದೆ.

ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ :

1. ಕಬ್ಬ : ಕಾವ್ಯ : ಬೇಹಾರಿ : : ವ್ಯಾಪಾರ

2 : ೨. ಅನೃತ : ಸುಳ್ಳು : : ಕೃತ್ರಿಮ : ಮೋಸ

3. ಬಂದಲ್ಲದೆ : ಲೋಪ ಸಂಧಿ : : ಧೃತಿಗೆಟ್ಟು : ಆದEೇಶ ಸಂಧಿ

4, ದೈವ ಭಕ್ತಿ : ತತ್ಪುರುಷ : : ಶಿತಿಕಂಠ : ಬಹುವ್ರೀಹಿ

5. ಸಂದೆಯ : ಸಂದೇಹ : :ಕೋಕಿಲಾ : ಕೋಗಿಲೆ

6. ನೇಸರ : ಸೂರ್ಯ : : ಮೇದಿನಿ : ಭೂಮಿ

7. ಮೊರೆ : ಪ್ರಾರ್ಥನೆ : : ಮೊೞಿ : ಗೋಳಾಟ

8. ನೆೞಿ : ಪ್ರವಾಹ : : ನೆರೆ : ಸಮೀಪ

9. ಕಂದಪದ್ಯ : ಮಾತ್ರಾಗಣ : : ವೃತ್ತಗಳು : ಅಕ್ಷರಗಣ

10 ಏರ್‌ : ಹತ್ತು : : ಏೞ್ : ಗಾಯ

11. ಕಟ್ಟೇಕಾಂತ : ಲೋಪಸಂಧಿ : : ಬಾಳುವಷ್ಟು : ಆಗಮಸಂಧಿ

12 ಆತಿಕುಟಿಲ : ಕರ್ಮಧಾರಯ : : ಕೈಕೊಳ್ವುದು : ಕ್ರಿಯಾಸಮಾಸ

13. ಪರಧನ : ತತ್ಪುರುಷ : : ಸಾಕ್ಷಿಮಾಡಿ : ಕ್ರಿಯಾಸಮಾಸ

14. ಕಟ್ಟೇಕಾಂತ : ಕರ್ಮಧಾರಯ : : ಸ್ವಾಮಿದ್ರೋಹ : ತತ್ಪುರುಷ ಸಮಾಸ

15 , ಶಿತಿಕಂಠ : ಬಹುವ್ರೀಹಿ ಸಮಾಸ : : ಅಬ್ಜೋದರ : ಬಹುವ್ರೀಹಿ ಸಮಾಸ

ಕೆಳಗೆ ಕೊಟ್ಟಿರುವ ಹೇಳಿಕೆಗಳಿಗೆ ನಾಲ್ಕು ಉತ್ತರಗಳನ್ನು ಕೊಡಲಾಗಿದೆ . ಅವುಗಳಲ್ಲಿ ಸೂಕ್ತವಾದುದನ್ನು ಆರಿಸಿ ಬರೆ :

೧. ‘ ಪರದು ‘ ಪದದ ಅರ್ಥ : ವ್ಯಾಪಾರ

೨. ‘ ಬೀಯ ‘ ಪದದ ಅರ್ಥ : ವ್ಯಯ

೩. ‘ ಕೆಲದೊಳ್ ‘ ಪದದಲ್ಲಿರುವ ವಿಭಕ್ತಿ ಪ್ರತ್ಯಯ : ಸಪ್ತಮಿ ವಿಭಕ್ತಿ

೪ .. ‘ ವ್ಯಾಪಾರಿ ‘ ಪದದ ತದ್ಭವ ರೂಪ : ಬೇಹಾರಿ

೫. ‘ ಪೂಳ್ಡೆಡೆ ‘ ಪದದಲ್ಲಿರುವ ಸಂಧಿ : ಲೋಪಸಂಧಿ

೬. ‘ ಧರ್ಮಾಧಿಕರಣ ‘ ಪದದಲ್ಲಿರುವ ಸಂಧಿ : ಸವರ್ಣದೀರ್ಘಸಂಧಿ

೭. ‘ ಭಂಗೋದರ ‘ ಪದದಲ್ಲಿರುವ ಸಂಧಿ : ಗುಣಸಂಧಿ

೮ ‘ ಮನುಷ್ಯನಾಯುಶ್ಯಂ ‘ ಪದದಲ್ಲಿರುವ ವಿಭಕ್ತಿ ಪ್ರತ್ಯಯ : ಪ್ರಥಮ ವಿಭಕ್ತಿ

೯. ‘ ಆದಿತ್ಯೋದಯ ‘ ಪದದಲ್ಲಿರುವ ಸಂಧಿ : ಗುಣಸಂಧಿ

೧೦ , ಮಹಾಸತ್ಪರಾ ವೃತ್ತದ ಒಂದು ಸಾಲಿನಲ್ಲಿರುವ ಅಕ್ಷರಗಳ ಸಂಖ್ಯೆ : ೨೨

೧೧ ಪ್ರತ್ಯರ್ಥಿ ‘ ಪದದಲ್ಲಿರುವ ಸಂಧಿ : ಯಣ್‌ ಸಂಧಿ

೧೨ , ‘ ಚೋದ್ಯಂಬಟ್ಟ ‘ ಪದದಲ್ಲಿರುವ ಸಂಧಿ : ಆದೇಶಸಂದಿ

೧೩ ಕಂದ ಪದ್ಯದ ನಾಲ್ಕು ಸಾಲುಗಳಲ್ಲಿರುವ ಮಾತ್ರೆಗಳ ಸಂಖ್ಯೆ ೬೪

೧೪, ಜಾಗದ ‘ ಪದವು ಈ ಗಣಕ್ಕೆ ಉದಾಹರಣೆಯಾಗಿದೆ : ಭ-ಗಣ

೧೫ , ಉತ್ಪಲಮಾಲಾವೃತ್ತದ ಗಣವಿನ್ಯಾಸ : ಭರನಭಭರ

೧೬ , ‘ ಅಬ್ಜೋದರ ‘ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ : ಬಹುವ್ರೀಹಿ ಸಮಾಸ

೧೭. ‘ ಕಿಚ್ಚನಿಕ್ಕು ‘ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ : ಕಗರಿಯಾ ಸಮಾಸ

10ನೇ ತರಗತಿ ಕನ್ನಡ ವೃಕ್ಷಸಾಕ್ಷಿ ಪಾಠದ ನೋಟ್ಸ್ ಪ್ರಶ್ನೋತ್ತರಗಳು, Vruksha Sakshi 10th Class Kannada Notes Question Answer Pdf Download 2023

ಇತರೆ ಪಾಠಗಳು:

ವ್ಯಾಘ್ರಗೀತೆ ನೋಟ್ಸ್‌

ಎದೆಗೆ ಬಿದ್ದಅಕ್ಷರ ನೋಟ್ಸ್‌

Leave your vote

11 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh