10ನೇ ತರಗತಿ ಎದೆಗೆ ಬಿದ್ದ ಅಕ್ಷರ ಪಾಠದ ನೋಟ್ಸ್ ಪ್ರಶ್ನೋತ್ತರಗಳು, Edege Bidda Akshara Kannada Lesson Notes Question Answer Pdf Download 2023
ತರಗತಿ : 10ನೇ ತರಗತಿ
ಪಾಠದ ಹೆಸರು : ಎದೆಗೆ ಬಿದ್ದ ಅಕ್ಷರ
ಕೃತಿಕಾರರ ಹೆಸರು : ದೇವನೂರು ಮಹಾದೇವ
Table of Contents
ಲೇಖಕರ ಪರಿಚಯ :
ದೇವನೂರ ಮಹಾದೇವ ( ಕ್ರಿ.ಶ .೧೯೪೮ ) ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ದೇವನೂರಿನವರು. ಆಡುಮಾತಿನ ಇವರು . ಮೈಸೂರಿನ ಭಾರತೀಯ ಭಾಷಾಸಂಸ್ಥಾನದಲ್ಲಿಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಬಂಡಾಯ ಮತ್ತು ದಲಿತ ಸಾಹಿತ್ಯದ ಪ್ರಮುಖರಲ್ಲಿ ಒಬ್ಬರು, ಆಡುಮಾತಿನ ಧ್ವನಿಶಕ್ತಿಯನ್ನು ಎತ್ತರಿಸಿದ ಶಬ್ದಶಿಲ್ಪಿ ಇವರು.
ದ್ಯಾವನೂರು , ಒಡಲಾಳ, ಗಾಂಧಿ ಮತ್ತು ಮಾವೊ , ನಂಬಿಕೆಯನೆಂಟ , ನೋಡು ಮತ್ತು ಕೂಡು , ಎದೆಗೆ ಬಿದ್ದ ಅಕ್ಷರ ಶ್ರೀಯುತರ ಪ್ರಮುಖ ಕೃತಿಗಳು . ಇವರ ಕುಸುಮಬಾಲೆ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಒಡಲಾಳ ಕೃತಿಗೆ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ .
Edege Bidda Akshara Kannada Notes Question Answer
ಆ ] ಒಂದು ವಾಕ್ಯದಲ್ಲಿ ಉತ್ತರಿಸಿ .
1. ಮನೆಮಂಚಮ್ಮನ ಕತೆ ಹೇಳಿದ ಕವಿ ಯಾರು ?
ಮನೆಮಂಚಮ್ಮನ ಕತೆ ಹೇಳಿದ ಕವಿ ಸಿದ್ಧಲಿಂಗಯ್ಯ
2. ‘ ಶಿವಾನುಭವ ಶಬ್ದಕೋಶ ‘ ಪುಸ್ತಕ ಬರೆದವರು ಯಾರು ?
‘ ಶಿವಾನುಭವ ಶಬ್ದಕೋಶ ‘ ಪುಸ್ತಕ ಬರೆದವರು ಹಳಕಟ್ಟಿಯವರು ,
3. ಇಂದಲ್ಲ – ನಾಳೆ ಫಲ ಕೊಡುವ ಅಂಶಗಳು ಯಾವುವು ?
‘ ಭೂಮಿಗೆ ಬಿದ್ದ ಬೀಜ ಮತ್ತು ಎದೆಗೆ ಬಿದ್ದ ಅಕ್ಷರ ‘ ಇಂದಲ್ಲ ನಾಳೆ ಫಲ ಕೊಡುವ ಅಂಶಗಳಾಗಿವೆ .
4. ಮನೆ ಮಂಚಮ್ಮ ಯಾರು ?
ಕವಿ ಸಿದ್ಧಲಿಂಗಯ್ಯ ಅವರು ದೇವನೂರು ಮಹಾದೇವ ಅವರಿಗೆ ಹೇಳಿದ ಕತೆಯಲ್ಲಿನ ಗ್ರಾಮದೇವತೆ ಮನೆ ಮಂಚಮ್ಮ .
5. ವಚನಕಾರರಿಗೆ ಯಾವುದು ದೇವರಾಗಿತ್ತು ?
ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು .
6. ಅಶೋಕ ಪೈ ಅವರ ವೃತ್ತಿಯಾವುದು ?
ಅಶೋಕ ಪೈ ಅವರು ಮನೋವೈದ್ಯರು .
7. ದೇವನೂರರ ‘ ನನ್ನ ದೇವರು ‘ ಯಾರೆಂಬುದನ್ನು ಸ್ಪಷ್ಟಿಕರಿಸಿ ,
ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದು ದೇವನೂರು ಮಹಾದೇವ ಅವರ ದೇವರಾಗುತ್ತದೆ .
ಆ ] ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1 , ಅಶೋಕ ಪೈ ಅವರು ಹೇಳಿದ ಸಂಶೋಧನಾ ಸತ್ಯವೇನು ?
ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿರುವಾಗ , ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಇನ್ನೊಂದು ಪಕ್ಕದ ಕೊಠಡಿಯಲ್ಲಿ ಏನೋ ಮಾತುಕತೆ ಆಡುತ್ತ ತಮ್ಮಷ್ಟಕ್ಕೆ ತಾವು ಇರುವಾಗ , ಟೆಲಿವಿಷನ್‌ನಲ್ಲಿ ಯಾವುದಾದರೂ ಕೊಲೆ ದೃಶ್ಯ ಬಂದಾಗ ಇಲ್ಲಿ ಇದನ್ನು ನೋಡುತ್ತಿದ್ದವರ ದುಃಖದ ಭಾವನೆಯು ಇದನ್ನು ನೋಡದೆ ಇರುವ ಪಕ್ಕದ ಕೊಠಡಿಯಲ್ಲಿ ಇರುವವರ ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದೆ . ಅದೇ ಟೆಲಿವಿಷನ್‌ನಲ್ಲಿ ಯಾವುದಾರೊಂದು ನೃತ್ಯದೃಶ್ಯ ಬಂದಾಗ ಅದನ್ನು ನೋಡುತ್ತಿರುವವರ ಮಿಷಿ ಭಾವನೆಯು ಪಕ್ಕದ ಕೊಠಡಿಯಲ್ಲಿ ಇದನ್ನು ನೋಡದೆ ತಮ್ಮಷ್ಟಕ್ಕೆ ತಾವೇ ಇದ್ದವರ ಮನಸ್ಸಿನ ಮೇಲೂ ಪರಿಣಾಮ ಬೀರಿ ಸ್ವಲ್ಪಮಟ್ಟಿಗೆ ಸಂತೋಷದ ಭಾವನೆ ಉಂಟಾಗುತ್ತದೆ . ಇದು ಆಶೋಕ ಪೈ ಅವರು ಹೇಳಿದ ಸಂಶೋಧನಾ ಸತ್ಯ .
2. ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ಏನು ? ವಿವರಿಸಿ ,
ವಚನಕಾರರ ದೃಷ್ಟಿಯಲ್ಲಿ ಅರಿವು ಅಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳಿವಳಿಕೆ , ಜ್ಞಾನ ಮಾತ್ರ ಅಲ್ಲ ; ಅದು ಕ್ರಿಯೆಯ ಅನುಭವದಿಂದ ಒಡಮೂಡುವುದು , ಅದು ಕೇಳಿ ತಿಳಿದಿದ್ದಲ್ಲ . ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ , ಅದು ತರ್ಕವಲ್ಲ . ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು , ‘ ಅಂದರೆ ಜ್ಞಾನ – ನಡೆ – ನುಡಿ – ಕ್ರಿಯೆಯಿಂದ ಏಕರೂಪವಾಗಿ ಒಡಮೂಡಿದ ತಿಳಿವಳಿಕೆಯೇ ಅರಿವು ‘ ಎಂಬುದು ಅವರ ಅಭಿಮತ .
ಇ ] ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
1. ಕವಿ ಸಿದ್ಧಲಿಂಗಯ್ಯನವರು ಹೇಳಿದ ಕತೆಯನ್ನು ಬರೆಯಿರಿ ,
ಕವಿ ಸಿದ್ಧಲಿಂಗಯ್ಯನವರು ಹೇಳಿದ ಕತೆಯೆಂದರೆ- ಭೂಮಿಗೆ ಬಿದ್ದ ಬೀಜ , ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು ಎಂಬ ನೀತಿಯನ್ನು ಹೇಳುವ ಕಾರುಣ್ಯ ಸಮತೆಯ ಕತೆಯನ್ನು ಹೇಳಿದ್ದಾರೆ . ಅದೆಂದರೆ ಒಮ್ಮೆ ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ . ಗುಡಿಯ ಕಟ್ಟಡ ಚಾವಣಿಯವರೆಗೂ ಮೇಲೇಳುತ್ತದೆ . ಆಗ ಇದ್ದಕ್ಕಿದ್ದಂತೆಯೇ ಮಂಚಮ್ಮದೇವಿ ಭಕ್ತನೊಬ್ಬನ ಮೇಲೆ ಆವಾಹನೆಯಾಗಿ “ ಏನ್ ಮಾಡ್ತಾ ಇದ್ದೀರಿ ? ” ಎಂದು ಕೇಳುತ್ತಾಳೆ . “ ನಿನಗೊಂದು ಗುಡಿಕಡ್ತಾ ಇದ್ದೀವಿ , ತಾಯಿ ” ಎಂದು ಹೇಳಿದಾಗ ‘ ನಿಮಗೆಲ್ಲಾ ಮನೆ ಉಂಟಾ ? ‘ ಎಂದು ಕೇಳುತ್ತಾಳೆ . ಅದಕ್ಕೆ ಉತ್ತರವಾಗಿ ಅಲ್ಲೊಬ್ಬ “ ನನಗಿಲ್ಲತಾಯಿ ‘ ಎಂದು ಹೇಳುತ್ತಾನೆ . ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೂ ನನಗೂ ಬೇಡ ಎಂದು ಮಂಚಮೃತಾಯಿ ಹೇಳುತ್ತಾಳೆ . ಅಂದಿನಿಂದ ಮಂಚಮ್ಮ ‘ ಮನೆ ಮಂಚಮ್ಮ ‘ ಎಂದೇ ಪ್ರಸಿದ್ಧಳಾದ ತಾಯಿ ಚಾವಣಿ ಇಲ್ಲದ ಗುಡಿಯಲ್ಲಿ ಪೂಜಿತಳಾಗಿ ಎಲ್ಲರನ್ನೂ ಅನುಗ್ರಹಿಸುತ್ತಿದ್ದಾಳೆ .
ಈ ] ಸಂದರ್ಭದೊಂದಿಗೆ ಸ್ವಾರಸ್ಯ ಬರೆಯಿರಿ ,
1. “ ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ . ”
ಆಯ್ಕೆ : – ಈ ವಾಕ್ಯವನ್ನು ದೇವನೂರು ಮಹಾದೇವ ಅವರು ರಚಿಸಿರುವ ‘ ಎದೆಗೆ ಬಿದ್ದ ಅಕ್ಷರ ‘ ಕೃತಿಯಿಂದ ಆಯ್ದ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ಗದ್ಯಪಾಠದಿಂದ ಆರಿಸಲಾಗಿದೆ . ಸಂದರ್ಭ : – ಗ್ರಾಮದೇವತೆ ಮಂಚಮ್ಮನಿಗೆ ಗುಡಿಕಟ್ಟಲು ಜನ ಪ್ರಾರಂಭಿಸಿದಾಗ , ಒಬ್ಬನ ಮೈ ಮೇಲೆ ಗ್ರಾಮದೇವತೆ ಮಂಚಮ್ಮ ಆವಾಹಿಸಿಕೊಂಡು ಬಂದು ಜನರೊಡನೆ ಮಾತನಾಡುವ ಸಂದರ್ಭದಲ್ಲಿ ಈ ಮಾತನ್ನು ಗ್ರಾಮದೇವತೆ ಮಂಚಮ್ಮ ಜನರಿಗೆ ಹೇಳುತ್ತಾಳೆ .
ಸ್ವಾರಸ್ಯ : – ತನ್ನ ಭಕ್ತರಿಗೆ ಮನೆ ಇಲ್ಲದ ಮೇಲೆ ನನಗೂ ಮನೆ ಬೇಡ ಎಂಬ ಮಂಚಮೃದೇವತೆಯ ಮಾತು , ಕಾರುಣ್ಯ ಮತ್ತು ಸಮಾನತೆಯ ದ್ಯೋತಕವಾಗಿರುವುದು ಈ ಮಾತಿನ ಸ್ವಾರಸ್ಯವಾಗಿದೆ .
2. “ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ . ”
ಆಯ್ಕೆ : – ಈ ವಾಕ್ಯವನ್ನು ದೇವನೂರು ಮಹಾದೇವ ಅವರು ರಚಿಸಿರುವ ‘ ಎದೆಗೆ ಬಿದ್ದ ಅಕ್ಷರ ‘ ಕೃತಿಯಿಂದ ಆಯ್ದ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ಗದ್ಯಪಾಠದಿಂದ ಆರಿಸಲಾಗಿದೆ . ಸಂದರ್ಭ : – ಲೇಖಕರಾದ ದೇವನೂರು ಮಹಾದೇವ ಅವರು ಡಾ . ಆಶೋಕ ಪೈ ಅವರ ಒಂದು ಸಂಶೋಧನಾ ಸತ್ಯಕತೆಯನ್ನು ಉದಾಹರಣೆ ನೀಡುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ .
ಸ್ವಾರಸ್ಯ : – “ ಯಾವುದೇ ಒಂದು ಜೀವಿಗೆ ಆಗುವ ದುಃಖ – ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ , ಎಲ್ಲಾ ಜೀವಿಗಳಲ್ಲೂ ಕಂಪನ ಉಂಟುಮಾಡುತ್ತಿರುತ್ತದೆ ” ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ .
3. “ ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು ”
ಆಯ್ಕೆ : – ಈ ವಾಕ್ಯವನ್ನು ದೇವನೂರು ಮಹಾದೇವ ಅವರು ರಚಿಸಿರುವ ‘ ಎದೆಗೆ ಬಿದ್ದ ಅಕ್ಷರ ‘ ಕೃತಿಯಿಂದ ಆಯ್ದ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ಗದ್ಯಪಾಠದಿಂದ ಆರಿಸಲಾಗಿದೆ . ಸಂದರ್ಭ : ಲೇಖಕರು ವಚನಕಾರರ ಪ್ರಕಾರ ದೇವರೆಂದರೆ ಏನು ಎಂದು ಹೇಳುವ ಸಂದರ್ಭದಲ್ಲಿ , ‘ ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರುಗಳನ್ನು ದೇವರು ಅಂದುಕೊಂಡಿರಲಿಲ್ಲ . ಪ್ರತಿಯೊಬ್ಬ ವಚನಕಾರರಿಗೂ ಅವರವರದೇ ಇಷ್ಟದೈವ . ಅಂದರೆ ಅವರಿಗೆ ಅವರವರ ಪ್ರಶ್ನೆಯೇ ದೇವರಾಗಿತ್ತು . ‘ ಎಂದು ಹೇಳಿದ್ದಾರೆ
ಸ್ವಾರಸ್ಯ : ಪ್ರಜ್ಞೆಯ ಮುಂದೆ ಸುಳ್ಳು ಹೇಳಲು ಸಾಧ್ಯವಿಲ್ಲ . ಆದ್ದರಿಂದ ವಚನಕಾರರು ಬೆಂಕಿಯಂತಹ ಪ್ರಜ್ಞೆಯನ್ನೇ ಪ್ರಮಾಣವಾಗಿಸಿಕೊಂಡು ಸತ್ಯಕ್ಕೆ ಆದ್ಯತೆ ನೀಡಿದರು ಎಂಬುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
4. “ ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ . ”
ಆಯ್ಕೆ : – ಈ ವಾಕ್ಯವನ್ನು ದೇವನೂರು ಮಹಾದೇವ ಅವರು ರಚಿಸಿರುವ ‘ ಎದೆಗೆ ಬಿದ್ದ ಅಕ್ಷರ ‘ ಕೃತಿಯಿಂದ ಆಯ್ದ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ಗದ್ಯಪಾಠದಿಂದ ಆರಿಸಲಾಗಿದೆ . ಸಂದರ್ಭ : – ಲೇಖಕರಾದ ದೇವನೂರು ಮಹಾದೇವ ಅವರು “ ಕೊಲೆ , ಸುಲಿಗೆ , ದ್ವೇಷ , ಅಸೂಯೆಗಳಿಂದ ಶೋಭೆಗೊಂಡು ನರಳುತ್ತಿರುವ ಜಗತ್ತು ತನ್ನ ಆಳದ ಒಳ ಸಮಷ್ಟಿ ಮನಸ್ಸನ್ನು ಘಾಸಿಗೊಳಿಸುತ್ತಿದೆ ” ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ .
ಸ್ವಾರಸ್ಯ : ಸಮಷ್ಟಿ ಮನಸ್ಸಿನಲ್ಲಿ ಎಲ್ಲರೂ ಇರುವುದರಿಂದ ಕಾರುಣ್ಯ ಹಾಗೂ ಸರ್ವಸಮಾನತೆ ಮನೋಭಾವ ಮೂಡಿಸಿಕೊಂಡು ಬದುಕಬೇಕು ಎಂಬುದು ಈ ಮಾತಿನಲ್ಲಿ ಸ್ವಾರಸ್ವಪೂರ್ಣವಾಗಿ ಅಭಿವ್ಯಕ್ತಗೊಂಡಿದೆ .
ಈ ] ಭಾಷಾಚಟುವಟಿಕೆ :
ಜಾಣತನ ‘ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ :
ಎ) ತದ್ದಿತಾಂತ ನಾಮ ಬಿ) ತದ್ದಿತಾಂತ ಅವ್ಯಯ ಸಿ) ಕೃದಾಂತಭಾವನಾಮ ಡಿ) ತದ್ದಿತಾಂತಭಾವನಾಮ
ವಿರುದ್ಧಾರ್ಥಕ ಪದಗಳು :
೧. ಒಳಿತು X ಕೆಡುಕು , ೨. ಸಮಷ್ಟಿ X ವೃಷ್ಟಿ ೩ , ಪುಣ್ಯ X ಪಾಪ ೪ , ಬೆಳಕು X ಕತ್ತಲು . ೫. ಧರ್ಮ X ಆಧರ್ಮ
೨. ‘ ಸಮಷ್ಟಿ ‘ ಪದದ ವಿರುದ್ಧಾರ್ಥಕ ರೂಪ :
ಎ ) ಸಮಾನದೃಷ್ಟಿ ಬಿ ) ವ್ಯಷ್ಟಿ ಸಿ ) ಸಮದೃಷ್ಟಿ ಡಿ) ಸಮಪುಷ್ಟಿ
೩. ಅವನು ಭೀಮನಿಗಿಂತ ಬಲಶಾಲಿಯಾದ ಹುಡುಗ ಈ ವಾಕ್ಯದಲ್ಲಿ ತದ್ಧಿತಾಂತಾವ್ಯಯ ಪದವಿದು :
ಎ ) ಭೀಮನಿಗಿಂತ ಬಿ ) ಅವನು ಸಿ ) ಹುಡುಗ ಡಿ ) ಬಲಶಾಲಿ
೪. ‘ ವಿಜ್ಞಾನ ‘ ಪದದ ತದ್ಭವ ರೂಪ :
ಎ) ವಿನಂತಿ ಏ) ಜ್ಞಾನ ಇ) ಬಿನ್ನಾಣ ಈ) ವೈಜ್ಞಾನಿಕ
೫. ‘ ಸಚ್ಚಿಂತನೆ ‘ ಪದವು ಈ ಸಂದಿಯ ಪದವಾಗಿದೆ :
ಎ ) ಆಗಮಸಂಧಿ ಬಿ ) ಶ್ಚುತ್ವಸಂಧಿ ಸಿ) ಅನುನಾಸಿಕ ಸಂಧಿ ಡಿ) ಜಶ್ತ್ವ ಸಂಧಿ
* ಬಳೆಗಾರ ‘ ಪದದ ಸ್ತ್ರೀಲಿಂಗ ತದ್ದಿತಾಂತ ಪದ :
ಎ ) ಬಳೆವಂತೆ ಬಿ ) ಬಳೆಗಾರುತಿ ಸಿ) ಬಳೆಗಾರ್ತಿ ಡಿ ) ಬಳೆ ಮಾರುವವಳು
೧೦. ” ಗುಡಿಕಟ್ಟು ‘ ಪದವು ಈ ಸಮಾಸ ಪದವಾಗಿದೆ :
ಎ ) ತತ್ಪುರುಸಮಾಸ ಬಿ ) ಕ್ರಿಯಾಸಮಾಸ ಸಿ ) ಅಂಶಿಸಮಾಸ ಡಿ) ದ್ವಂದ್ವಸಮಾಸ
೧೧. * ಗಳಿಗೆಗಳಿಗೆಗೆ * ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ :
ಎ ) ಅನುಕರಣಾವ್ಯಯ ಬಿ ) ದ್ವಿರುಕ್ತಿ ಸಿ ) ಜೋಡಿಪದ ಡಿ) ನಾಮಪದ
೧೨. * ಮಹೋನ್ನತ ‘ ಪದವು ಈ ಸಂಧಿಗೆ ಉದಾಹರಣೆಯಾಗಿದೆ :
ಎ ) ಆಗಮಸಂಧಿ ಸಿ ) ಅನುನಾಸಿಕಸಂಧಿ ಸಿ ) ಬಳೆಗಾರಿ ಡಿ) ಗುಣಸಂಧಿ
೭. ‘ ಅವಳಿಗೋಸ್ಕರ ನನ್ನ ಬದುಕನ್ನೇ ತ್ಯಾಗಮಾಡಿದೆ ‘ ಈ ವಾಕ್ಯದಲ್ಲಿರುವ ತದ್ಧಿತಾಂತಾವ್ಯಯ ಪದ :
ಎ) ನನ್ನ ಬಿ) ತ್ಯಾಗಮಾಡು ಸಿ) ಬದುಕನ್ನೇ ಡಿ) ಅವಳಿಗೋಸ್ಕರ
೮. ‘ ಬಿಳಿಕೂದಲು ‘ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ :
ಎ ) ತತ್ಪುರುಸಮಾಸ ಬಿ ) ಕರ್ಮಧಾರೆಯ ಸಮಾಸ ಸಿ ) ಅಂಶಿಸಮಾಸ ಡಿ) ದ್ವಂದ್ವಸಮಾಸ
೯. * ಮನೆ ‘ ಪದವು ಈ ವ್ಯಾಕರಣಾಂಶವಾಗಿದೆ :
ಎ) ಅಂಕಿತನಾಮ ಬಿ) ಅನ್ವರ್ಥನಾಮ ಸಿ) ಕೃದಾಂತನಾಮ ಡಿ) ರೂಢನಾಮ
ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮಾರನೆ ಪದಕ್ಕೆ ಸಂಬಂಧ ಪದ ಬರೆಯಿರಿ :
೧. ಬಿಡುಬಿಡು : ದ್ವಿರುಕ್ತಿ : : ಕೊಲೆಸುಲಿಗೆ : ಜೋಡಿನುಡಿ
೨. ನಾಟಕಕಾರ: ತದ್ಧಿತಾಂತನಾಮ : : ಚೆಲುವಿಕೆ : ತದ್ಧಿತಾಂತನಾಮ
೩. ಗುಡಿ : : ರೂಢನಾಮ : : ಮೈಸೂರು :ಅಂಕಿತನಾಮ
೪. ಹಣ : ಹಣವಂತ :: ಬಳೆ:ಬಳೆಗಾರ
೫. ಧರ್ಮ: ಅಧರ್ಮ :: ಪುಣ್ಯ : ಪಾಪ
೬. ಅದಕ್ಕಿಂತ : ತದ್ಧಿತಾಂತಾವ್ಯಯ ::ಕಪ್ಪು: ತದ್ದಿತಾಂತ ಭಾವನಾಮ
೭. ಜೀವಸಂಕುಲ : ತತ್ಪುರುಷಸಮಾಸ :: ಆ ದೇವತೆ: ಗಮಕಸಮಾಸ
೮. ಕವಿ : ಕಬ್ಬಿಗ :: ಶಿಲ್ಪಿ: ಚಿಪ್ಪಿಗ
೯. ಸಿರಿವಂತ : ಸಿರಿವಂತೆ ::ಕನ್ನಡಿಗ : ಕನ್ನಡತಿ
೧೦. ಅಲ್ಲೊಬ್ಬ : ಲೋಪಸಂಧಿ :: ಗುಡಿಯನ್ನು: ಆಗಮಸಂಧಿ
10ನೇ ತರಗತಿ ಎದೆಗೆ ಬಿದ್ದ ಅಕ್ಷರ ಪಾಠದ ನೋಟ್ಸ್ ಪ್ರಶ್ನೋತ್ತರಗಳು, Edege Bidda Akshara Kannada Lesson Notes Question Answer Pdf Download 2023
ಇತರೆ ವಿಷಯಗಳು: