10ನೇ ತರಗತಿ ಕನ್ನಡ ಲಂಡನ್‌ ನಗರ ನೋಟ್ಸ್‌ | 10th Standard Kannada London Nagara Notes

10ನೇ ತರಗತಿ ಕನ್ನಡ ಲಂಡನ್‌ ನಗರ ನೋಟ್ಸ್‌ ಪ್ರಶ್ನೆ ಉತ್ತರಗಳು ,10th Kannada 3rd Lesson Notes, Chapter 3 Question Answer Pdf Download Kseeb Solutions 2022

ತರಗತಿ : 10ನೇ ತರಗತಿ

ಪಾಠದ ಹೆಸರು : ಲಂಡನ್‌ ನಗರ

ಕೃತಿಕಾರರ ಹೆಸರು : ವಿ.ಕೃ.ಗೋಕಾಕ್

10th Standard Kannada London Nagara Notes

10ನೇ ತರಗತಿ ಕನ್ನಡ ಲಂಡನ್‌ ನಗರ ನೋಟ್ಸ್‌  10 th Standard Kannada London Nagara Notes
10th class Kannada London Nagara Notes

ಲೇಖಕರ ಪರಿಚಯ :

ಡಾ.ವಿ.ಕೃ.ಗೋಕಾಕ್ ವಿನಾಯಕ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಡಾ . ವಿನಾಯಕ ಕೃಷ್ಣ ಗೋಕಾಕ ( ಕ್ರಿಶ .೧೯೦೯ ) ಇವರು ಹಾವೇರಿ ಜಿಲ್ಲೆಯ ಸವಣೂರಿನವರು . ವಿ.ಕೃ.ಗೋಕಾಕ ಅವರು ಸಮುದ್ರಗೀತೆಗಳು , ಪಯಣ , ಉಗಮ , ಇಷ್ಟೊಡು , ಸಮರಸವೇ ಜೀವನ , ಭಾರತ ಸಿಂಧುರಶ್ಮಿ ಮೊದಲಾದ ಕೃತಿಗಳನನ್ನು ರಚಿಸಿದ್ದಾರೆ . ಇವರ ‘ ದ್ಯಾವಾ ಪೃಥಿವೀ ‘ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ . ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ , ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ , ಸಮಗ್ರ ಸಾಹಿತ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿ , ಭಾರತ ಸರ್ಕಾರ ಪದ್ಮಶ್ರೀ : ಮುಂತಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ .

10th Kannada 3rd Lesson Notes Question Answer

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

1. ‘ ವೆಸ್ಟ್ ಮಿನ್‌ಸ್ಟರ್ ಆಬೆ ‘ ಯಾರ ಸ್ಮಾರಕವಾಗಿದೆ ?

ಉ : ವೆಸ್ಟ್ ಮಿನ್‌ಸ್ಟರ್ ಅಬೆ ‘ ಸತ್ತುಹೋಗಿರುವ ಸಾರ್ವಭೌಮರ , ಕವಿಪುಂಗವರ ಸ್ಮಾರಕವಾಗಿದೆ .

2. ಆಂಗ್ಲ ಸಾಮ್ರಾಜ್ಯದ ವೈಭವ ಕಂಡುಬರುವ ಓಣಿ ಯಾವುದು ?

ಉ : ” ಚೇರಿಂಗ್ ಕ್ರಾಸ್ ‘ ಎಂಬುದು ಅಂಗ್ಲ ಸಾಮಾಜ್ಯದ ವೈಭವ ಕಂಡುಬರುವ ಓಣಿಯಾಗಿದೆ .

3. ಲಂಡನ್ನಿನ ರಸ್ತೆಗಳಲ್ಲಿ ನಿಲ್ಲುವುದನ್ನು ತಪ್ಪಿಸಲು ಮಾಡಿರುವ ವ್ಯವಸ್ಥೆಯೇನು ?

ಉ : ಲಂಡನ್ನಿನ ರಸ್ತೆಗಳಲ್ಲಿ ನಿಲ್ಲುವುದನ್ನು ತಪ್ಪಿಸಲು ಭೂಗರ್ಭದಲ್ಲಿ ಗಾಡಿಗಳನ್ನು ಹಾಕಿದ್ದಾರೆ .

4. ನೆಲ್ಸನ್‌ರವರ ಮೂರ್ತಿಯಿರುವ ಸ್ಥಳದ ಹೆಸರೇನು ?

ಉ : ನೆಲ್ಸನ್‌ರವರ ಮೂರ್ತಿಯಿರುವ ಸ್ಥಳದ ಹೆಸರು ‘ Trafalgar Square ‘ ( ತ್ರಾಫಲ್ಗಾರ್‌ ಸ್ಕ್ವೇರ್) ,

ಆ ) ಕೊಟ್ಟಿರುವ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ

1. ಟೊಪ್ಪಿಗೆಯ ವಿಶೇಷತೆಯನ್ನು ಲೇಖಕರು ಹೇಗೆ ದಾಖಲಿಸಿದ್ದಾರೆ ?

ಉ : ಲಂಡನ್ನಿನಲ್ಲಿ ಹೆಣ್ಣುಮಕ್ಕಳು ಧರಿಸುವ ಟೊಪ್ಪಿಗೆಯ ವಿಶೇಷತೆಯನ್ನು ತಿಳಿಸುತ್ತಾ ಲೇಖಕರು “ ಒಂದು ಟೊಪ್ಪಿಗೆಯಂತೆ ಇನ್ನೊಂದಿರುವುದಿಲ್ಲ . ಸಿಕ್ಕಿಸಿದ ಪುಚ್ಚವಾದರೂ ಕನಿಷ್ಠಪಕ್ಷಕ್ಕೆ ಬೇರೆಯಾಗಿರುತ್ತದೆ . ಕೋಟ್ಯಾವಧಿ ಟೊಪ್ಪಿಗೆಗಳನ್ನು ಬೇಕಾದರೆ ಪರೀಕ್ಷಿಸಿ ಇದನ್ನು ಮನಗಾಣಬಹುದು . ಮನುಷ್ಯನಂತೆ ಟೊಪ್ಪಿಗೆಯಲ್ಲವೆ ? ಒಬ್ಬ ಮನುಷ್ಯಳಂತೆ ಇನ್ನೊಬ್ಬಳಿಲ್ಲ . ” ಎಂದು ದಾಖಲಿಸಿದ್ದಾರೆ .

2. ವೂಲವರ್ಥ ಅಂಗಡಿಯಲ್ಲಿ ಸಿಗುವ ವಸ್ತುಗಳಾವುವು ?

ಉ : ‘ ವೂಲವರ್ಥ ‘ ಎಂಬ ಸ್ಟೇಷನರಿ ಅಂಗಡಿಯಲ್ಲಿ ಬೂಟು , ಕಾಲುಚೀಲ , ಚಣ್ಣ , ಸಾಬೂನು , ಔಷಧ , ಮಸ್ತಕ , ಆಡಿಗೆಯ ಪಾತ್ರೆ , ಇಲೆಕ್ಟಿಕ್ ದೀಪದ ಸಾಮಾನು , ಫೋಟೋ , ಅಡವಿಯ ಹೂವು , ಯುದ್ಧಸಾಮಗ್ರಿ ಎಲ್ಲವೂ ಇಲ್ಲಿ ದೊರೆಯುತ್ತವೆ .

3. ಲಂಡನ್ನಿನ ಹೆಣ್ಣು ಮಕ್ಕಳು ಯಾವ ಯಾವ ಕೆಲಸದಲ್ಲಿ ನಿಯುಕ್ತರಾಗಿರುತ್ತಾರೆ ?

ಉ : ಲಂಡನ್ನಿನ ಯಾವುದಾದರೊಂದು ದೊಡ್ಡ ಅಂಗಡಿಗೆ ಹೋದರೆ ಅಲ್ಲಿಯ ಟೈಪಿಸ್ ಕಾರಕೂನ , ಒಬ್ಬ ಹೆಣ್ಣು ಮಗಳು , ಸಿನಿಮಾ ಗೃಹದಲ್ಲಿ ನಿಮ್ಮ ಜಾಗವನ್ನು ಹುಡುಕಿಕೊಡುವವರು ಹೆಣ್ಣು ಕಾಲೇಜಿನಲ್ಲಿ ಸಹ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಸಿಪಾಯಿಣಿಯರನ್ನು ಇಟ್ಟಿದ್ದಾರೆ !

4. ಪೊಯೆಟ್ ಕಾರ್ನರ್ ನಲ್ಲಿ ಯಾವ ಯಾವ ಕವಿಗಳ ಸಮಾಧಿಗಳಿವೆ ?

ಉ : ಪೊಯೆಟ್ ಕಾರ್ನ‌ರ್ ನಲ್ಲಿ ಕಿಪ್ಲಿಂಗ್ , ಹಾರ್ಡಿ , ಮ್ಯಾಕಾಲೆ , ಜಾನ್ಸನ್ , ಗೋಲ್ಡ್‌ಸ್ಟಿಕ್‌ , ಡ್ರಾಯ್ಡನ್ , ಬೆನ್‌ಜಾನ್ಸನ್ , ವರ್ಡ್ಸ್‌ವರ್ತ್ , ಮೊದಲಾದ ಕವಿಗಳ ಸಮಾಧಿಗಳಿವೆ .

5. ಸಾಮ್ರಾಟರ ರಾಜ್ಯಾಭಿಷೇಕವಾಗುವ ಸಿಂಹಾಸನದ ಮೇಲಿರುವ ಕಲ್ಲುಪಾಟಿಯ ವಿಶೇಷತೆಯೇನು ?

ಸಾಮ್ರಾಟರ | ರಾಜ್ಯಾಭಿಷೇಕವಾಗುವಾಗ ಅವರ ಸಿಂಹಾಸನದ ಮೇಲೆ ಒಂದು ಕಲ್ಲು ಪಾಟಿಯನ್ನು ಹಾಕುತ್ತಾರೆ . ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮಾಟರು . ಇದರ ಮೇಲೆ ಕೂಡಬೇಕು . ಈ ಶಿಲೆಯನ್ನು ಒಳಗೊಂಡ ಸಿಂಹಾಸನವು ವೆಸ್ಟ್‌ಮಿನ್‌ಸ್ಟರ್ ಮಂದಿರದಲ್ಲಿಯ ಒಂದು ಭಾಗದಲ್ಲಿದೆ . ‘ ಸ್ಟೋನ್ ಆಫ್ ಸೈನ್ ‘ ಎಂದು ಇದರ ಹೆಸರು , ೩ ನೇ ಎಡ್ವರ್ಡನು ಸ್ಕಾಟ್‌ಲೆಂಡಿನ ಅರಸರಿಂದ ಇದನ್ನು ಕಿತ್ತುಕೊಂಡು ಬಂದಂತೆ ಕಾಣುತ್ತದೆ . ಅಂದಿನಿಂದ ಎಲ್ಲ ಸಾಮ್ರಾಟರ ಅಭಿಷೇಕವು ಈ ಕಲ್ಲಿನ ಮೇಲೆಯೇ ಆಗಿದೆ .

ಇ ) ಈ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

1. ಲಂಡನ್ ನಗರ ವೀಕ್ಷಣೆಯಲ್ಲಿ ಲೇಖಕರು ಗುರುತಿಸಿರುವ ವಿಶೇಷತೆಗಳೇನು ?

ಉ : ವಿ.ಕೃ.ಗೋಕಾಕ್ ಅವರು ಲಂಡನ್ ನಗರದಲ್ಲಿ ಹಲವಾರು ವಿಶೇಷತೆಗಳನ್ನು ಕಂಡರು . ಲಂಡನ್ ಪಟ್ಟಣವೆಂದರೆ ಒಂದು ಸ್ವತಂತ್ರ ಜಗತ್ತು . ಅಲ್ಲಿಯ ರಸ್ತೆಗಳಲ್ಲಿ ವ್ಯಾಪಾರವು ತುಂಬಿ ಟಾಮ್ ಬಸ್ಸುಗಳಿಗೆ ಸುಗಮವಾಗಿ ಸಂಚರಿಸಲು ಸಾಧ್ಯವಾಗುವುದಿಲ್ಲ : ಬಹಳ ಹೊತ್ತು ನಡುನಡುವೆ ನಿಲ್ಲಬೇಕಾಗುತ್ತದೆ . ಅದನ್ನು ತಪ್ಪಿಸುವುದಕ್ಕಾಗಿ ಭೂಗರ್ಭದಲ್ಲಿ ಗಾಡಿಯನ್ನು ಓಡಿಸುತ್ತಾರೆ . ‘ ವೂಲವರ್ಥ ‘ ಎಂಬ ಸ್ಟೇಷನರಿ ” ಅಂಗಡಿಯು ವಿಶೇಷವಾಗಿದ್ದು ಅಲ್ಲಿ ಬೂಟು , ಕಾಲುಚೀಲ , ಚಣ್ಣ , ಸಾಬೂನು , ಔಷಧ , ಪುಸ್ತಕ , ಅಡಿಗೆಯ ಪಾತ್ರೆ , ಇಲೆಕ್ಟಿಕ್ ದೀಪದ ಸಾಮಾನು , ಫೋಟೋ , ಅಡವಿಯ ಹೂವು , ಯುದ್ಧಸಾಮಗ್ರಿ ಎಲ್ಲವೂ ದೊರೆಯುತ್ತವೆ . ಎಲ್ಲ ಅಂಗಡಿಗಳಲ್ಲಿ ಸಾಮಾನ್ಯವಾಗಿ ಸ್ತ್ರೀಯರೇ ಕೆಲಸ ಮಾಡುತ್ತಾರೆ . ‘ ಚೇರಿಂಗ್ ಕ್ರಾಸ್ ‘ ಎಂಬ ಓಣಿಯಲ್ಲಿ ಆಂಗ್ಲರ ಸಾಮಾಜ್ಯ ವೈಭವವು ಕಂಡುಬರುತ್ತದೆ . ಇಂಡಿಯಾ ಆಫೀಸಿನ ಹತ್ತಿರ ಆಫ್ರಿಕನ್ ಕಚೇರಿ , ಇನ್ನೊಂದು ವಸಾಹತಿನ ಕಚೇರಿ , ನೂರೆಂಟು ಬ್ಯಾಂಕ್‌ಗಳು ದೊಡ್ಡ ಕಂಪೆನಿಗಳ ಕಚೇರಿಗಳು , ಎಲ್ಲವೂ ದಂಗುಬಡಿಸುವಂತೆ ನೆರೆದಿವೆ . ನಗರದ ಪ್ರತಿಯೊಂದು ಕೂಟಕ್ಕೆ ಒಂದು ಹೆಸರೇನಾದರೂ ಇದ್ದೇ ಇರುತ್ತದೆ . ಅಲ್ಲಿನ ಹೆಣ್ಣುಮಕ್ಕಳು ಧರಿಸುವ ಟೊಪ್ಪಿಗೆಗಳು ವಿಶೇಷವಾಗಿದ್ದು ಒಂದು ಟೊಪ್ಪಿಗೆಯಂತೆ ಇನ್ನೊಂದಿರುವುದಿಲ್ಲ . ‘ ವೆಸ್ಟ್ ಮಿನ್ಸ್ಟರ್ ಆದೆ ‘ ಎಂಬ ಪ್ರಾರ್ಥನಾ ಮಂದಿರ ಕನಿಷ್ಠ ಒಂದು ಸಾವಿರ ವರ್ಷದಷ್ಟು ಮರಾತನವಾದ ಮಂದಿರ . ಅಲ್ಲಿ ಪ್ರಸಿದ್ಧ ಕವಿಗಳ , ಸಾರ್ವಭೌಮರ , ವಿಜ್ಞಾನಿಗಳ ಸ್ಮಾರಕಗಳಿವೆ .ಅಲ್ಲಿನ ಅರಸರ ಅರಮನೆ ವಿಶೇಷವಾಗಿದ್ದು , ಅದಕ್ಕೆ Royal Chapel ( ರಾಜವಿಭಾಗ ) ಎಂದು ಹೆಸರು . ಸಾಮಾಟರ ರಾಜ್ಯಾಭಿಷೇಕವಾಗುವಾಗ ಅವರ ಸಿಂಹಾಸನದ ಮೇಲೆ ಒಂದು ಕಲ್ಲುಪಾಟಿಯನ್ನು ಹಾಕುತ್ತಾರೆ . ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮಾಟರು ಇದರ ಮೇಲೆ ಕೂಡಬೇಕು . ‘ ಸ್ಟೋನ್ ಆಫ್ ಸ್ಕೋನ್ ‘ ಎಂದು ಇದರ ಹೆಸರು .

2. ‘ ವೆಸ್ಟ್ ಮಿನ್‌ಸ್ಟರ್‌ ಅಭೆ ‘ ಪ್ರಾರ್ಥನಾ ಮಂದಿರ ಒಂದು ವಿಶೇಷ ಸ್ಮಾರಕ ವಿವರಿಸಿ ,

ಉ : ‘ ವೆಸ್ಟ್ ಮಿನ್‌ಸ್ಟರ್‌ ಅಜೆ ‘ ಎಂಬ ಪ್ರಾರ್ಥನಾ ಮಂದಿರ ಕನಿಷ್ಟ ಒಂದು ಸಾವಿರ ವರ್ಷದಷ್ಟು ಪುರಾತನವಾದ ಮಂದಿರ , ಕೆಲವೊಂದು ಭಾಗಗಳ ದುರಸ್ತಿಯನ್ನು ಬಿಟ್ಟರೆ ಇಂದಿಗೂ ಅಚ್ಚಳಿಯದೆ ಉಳಿದಿದೆ . ಇಲ್ಲಿ ಸಂತ , ಸಾರ್ವಭೌಮರು ಮಲಗಿರುವರು ; ಕವಿಪುಂಗವರು ಒರಗಿರುವರು . ಸತ್ತವರ ಸ್ಮಾರಕವೆಂದು ಇದಕ್ಕಿಂತ ಘನತರವಾದ ಮಂದಿರವು ಜಗತ್ತಿನಲ್ಲಿ ಇನ್ನೆಲ್ಲಿಯೂ ಇರಲಾರದು . ” Mortality behold and fear What a litt’r of tombs is here . ” ( ಮರ್ತ್ಯತ್ವವೇ ಎಷ್ಟು ಗೋರಿಗುಂಪುಗಳಿವೆ ನೋಡಿ ಅಂಜು ) ಎಂದು ೩೦೦ ವರ್ಷಗಳ ಹಿಂದೆ ಬ್ಯೂಮಾಂಟ್ ಎಂಬ ಕವಿಯು ಹಾಡಿದನು , ಗೋಲ್ಡ್‌ಸ್ಟಿತ್ ಹಾಗು ಎಡಿಸನ್ ಎಂಬ ಪ್ರಖ್ಯಾತ ಸಾಹಿತಿಗಳು Visit to West Minster Abbey . ( ವೆಸ್ಟ್‌ಮಿನ್‌ಸ್ಟರ್ ಅಬೆಯ ಸಂದರ್ಶನ ) ಎಂಬ ವಿಷಯದ ಮೇಲೆ ಉತ್ತಮವಾದ ನಿಬಂಧಗಳನ್ನು ಬರೆದಿದ್ದಾರೆ . ಇಂದಿಗೂ ಇದು ಕಬ್ಬಿಗರ ಸ್ಫೂರ್ತಿಯ ತವರುಮನೆಯಾಗಿದೆ . ಹೊರಗಿನಿಂದ ಉತ್ತಮವಾಗಿ ಶೃಂಗರಿಸಲಾಗಿದ್ದು ಒಳಗೆ ಕಟ್ಟಡವು ಭವ್ಯವಾಗಿದೆ . ಅಲ್ಲಿ ಸಾಗುವ ಹಾದಿಯ ಎಡಬಲಕ್ಕೆ ರಾಜಕಾರಣ ಚತುರರ ಶಿಲಾಮೂರ್ತಿಗಳಿವೆ . ಅಲ್ಲಿ Earl of Chatham ( ಅರ್ಲ್ ಆಫ್ ಚಾಟ್ಹಾಂ ) ಗ್ಯಾಡ್‌ಸ್ಟನ್ , ಮಾಲ್ಟ್ ಡಿಸ್‌ರೇಲಿ ಮೊದಲಾದವರ ಪ್ರತಿಮೆಗಳಿವೆ . ಪಾದ್ರಿಯ ಆಸನದ ಕಡೆಗೆ ಉತ್ತಮವಾದ ಕೆತ್ತನೆಯ ಕೆಲಸವು ಕಣ್ಣಗೆ ಬಿತ್ತು , ಬಂಗಾರದ ಬಣ್ಣವನ್ನು ಅದಕ್ಕೆ ಕೊಟ್ಟಿದ್ದರು .

ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

1 , ” ಹೊತ್ತು ! ಹೊತ್ತು ! ಹೊತ್ತೇ ಹಣ “

ಉ : ಆಯ್ಕೆ : ಈ ವಾಕ್ಯವನ್ನು ವಿ.ಕೃ. ಗೋಕಾಕ ಆವರ ‘ ಸಮುದ್ರದಾಚೆಯಿಂದ ‘ ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ ‘ ಲಂಡನ್ ನಗರ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಲಂಡನ್ ನಗರದ ಬೀದಿಯಲ್ಲಿ ಲಕ್ಷಾನುಲಕ್ಷ ಜನರು ಅವಸರದಿಂದ ಓಡಾಡುತ್ತಿರುವುದನ್ನು ನೋಡಿ time ! timel time is money ( ಹೊತ್ತು ಹೊತ್ತು ಹೊತ್ತೇ ಹಣ ) ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ .

ಸ್ವಾರಸ್ಯ : ಸಮಯಕ್ಕೆ ಬಹಳ ಪ್ರಾಮುಖ್ಯತೆ ಇದೆ . ಅದರಲ್ಲೂ ವಿದೇಶಗಳಲ್ಲಿ ಸಮಯವೇ ಹಣ ಎಂಬ ಮಾತು ಅಕ್ಷರಶಃ ನಿಜವಾಗಿದೆ ಎಂಬ ಮಾತು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

2. ” ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ ”

ಉ : ಆಯ್ಕೆ : ಈ ವಾಕ್ಯವನ್ನು ವಿ.ಕೃ.ಗೋಕಾಕ ಅವರ ‘ ಸಮುದ್ರದಾಚೆಯಿಂದ ‘ ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ ‘ ಲಂಡನ್ ನಗರ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ ; ಲಂಡನ್ ನಗರ ಪ್ರವಾಸ ಕಥನದ ಕೊನೆಯಲ್ಲಿ ಪ್ರವಾಸದ ಶೈಕ್ಷಣಿಕ ಮಹತ್ವವನ್ನು ತಿಳಿಸುವ ಸಂದರ್ಭದಲ್ಲಿ ಪ್ರವಾಸದಿಂದ ತಮ್ಮ ಮನಸ್ಸು ವಿಕಾಸಹೊಂದಿ , ದೃಷ್ಟಿಕೋನ ವಿಶಾಲವಾದ ಬಗ್ಗೆ ‘ ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ ‘ ಎಂದು ಬೇಕನ್ ಹೇಳಿದ ಮಾತನ್ನು ಇಲ್ಲಿ ಲೇಖಕರು ಉದಾಹರಿಸಿದ್ದಾರೆ .

ಸ್ವಾರಸ್ಯ : ‘ ದೇಶ ಸುತ್ತು ಕೋಶ ಓದು ‘ ಎಂಬ ಮಾತಿನಂತೆ ಪರಿಪೂರ್ಣ ಶಿಕ್ಷಣಕ್ಕೆ ಪ್ರವಾಸ ಅತಿ ಮುಖ್ಯ . ಆದ್ದರಿಂದ ಈ ಮಾತು ಪ್ರವಾಸದ ಮಹತ್ವವನ್ನು ತಿಳಿಸುತ್ತದೆ .

3. “ ಯಾರನ್ನು ತುಳಿದರೇನು ! ಎಲ್ಲಿ ಹೆಜ್ಜೆ ಹಾಕಿದರೇನು ? ಎಲ್ಲವೂ ಅಷ್ಟೆ ! ಮಣ್ಣು ಮಣ್ಣು ! ”

ಉ : ಆಯ್ಕೆ : ಈ ವಾಕ್ಯವನ್ನು ವಿ.ಕೃ.ಗೋಕಾಕ ಅವರ ‘ ಸಮುದ್ರದಾಚೆಯಿಂದ ‘ ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ ‘ ಲಂಡನ್ ನಗರ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ‘ ವೆಸ್ಟ್ ಮಿನ್‌ಸ್ಟರ್‌ ಅಬೆ ‘ ಎಂಬ ಪಾರ್ಥನಾ ಮಂದಿರದ ಆವರಣದಲ್ಲಿ ಸ್ಥಾಪಿಸಲಾಗಿದ್ದ ಕವಿಗಳ , ಸಾರ್ವಭೌಮರ ನೆನಪಿಗಾಗಿ ಕಲ್ಲುಹಾಸುಗಳನ್ನು ಇಟ್ಟಿದ್ದು ಅವುಗಳ ಮೇಲೆ ನಡೆದು ಹೋಗಬೇಕಾಗಿತ್ತು . ಅವುಗಳ ಬಳಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಲೇಖಕರು ” ಯಾರನ್ನು ತುಳಿದರೇನು ? ಎಲ್ಲಿ ಹೆಜ್ಜೆ ಹಾಕಿದರೇನು ? ಎಲ್ಲವೂ ಅಷ್ಟೆ ಮಣ್ಣು , ಮಣ್ಣು ! ಎಂದು ಮನಸ್ಸಿಗೆ ಬಂದಂತೆ ಮನುಷ್ಯನು ನಡೆಯಹತ್ತುತ್ತಾನೆ ” ಎಂದು ಹೇಳಿದ್ದಾರೆ .

ಸ್ವಾರಸ್ಯ : ಸಾಧಕರ ಮಾರ್ಗದಲ್ಲಿ ನಡೆವಾಗ ಮಾನವನ್ನು ದಿಕ್ಕುತಪ್ಪಿದಂತಾದಾಗ “ ಎಲ್ಲವೂ ಅಷ್ಟೇ ! ಬರಿಯ ಮಣ್ಣು ” ಎಂದು ಮನಸ್ಸಿನಲ್ಲಿ ಮೂಡುತ್ತದೆ . ನಶ್ವರವಾಗಿ ಕಾಣುತ್ತದೆ ಎಂಬುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

4. “ ನಿಮ್ಮ ದೇಶದ ಗೌರವವನ್ನು ಕಾಯಿರಿ ! ಇದು ದೊಡ್ಡದಾದ ರಾಷ್ಟ್ರ

” ಉ : ಆಯ್ಕೆ : ಈ ವಾಕ್ಯವನ್ನು ವಿ.ಕೃ. ಗೋಕಾಕ ಅವರ ‘ ಸಮುದ್ರದಾಚೆಯಿಂದ ‘ ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ ಲಂಡನ್ ನಗರ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಲೇಖಕರು ಲಂಡನ್ ನಗರದ ಬೀದಿಬೀದಿಯಲ್ಲೂ ಇತಿಹಾಸ ಪ್ರಸಿದ್ಧ ಪುರುಷರ ಪ್ರತಿಮೆಗಳನ್ನು ನೋಡಿ ‘ ತಮ್ಮ ದೇಶಕ್ಕಾಗಿ ಜೀವನವನ್ನು ಲೆಕ್ಕಿಸದೆ ದುಡಿದವರು ನಿಂತು ಕೈಯೆತ್ತಿ “ ನಿಮ್ಮ ದೇಶದ ಗೌರವವನ್ನು ಕಾಯಿರಿ ! ಇದು ದೊಡ್ಡದಾದ ರಾಷ್ಟ್ರ ” ಎಂದು ಹೇಳುತ್ತಿರುವಂತೆ ತೋರುತ್ತದೆ ‘ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ .

ಸ್ವಾರಸ್ಯ : ರಾಷ್ಟ್ರಕ್ಕಾಗಿ ದುಡಿದ ಮಹನೀಯರಿಗೆ ಲಂಡನ್ ನಗರದಲ್ಲಿ ಅಲ್ಲಿನ ಜನ ತೋರಿಸಿರುವ ಗೌರವಭಾವನೆ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

ಉ ) ಇಲ್ಲಿ ಬಿಟ್ಟಿರುವ ಪದಗಳನ್ನು ಸರಿಯಾದ ಪದಗಳಿಂದ ತುಂಬಿರಿ ,

1. ಲಂಡನ್ ಪಟ್ಟಣವೆಂದರೆ ಒಂದು ಸ್ವತಂತ್ರ ಜಗತ್ತು .

2. ವೂಲವರ್ಥ ಎಂಬುದು ಸ್ಟೇಷನರಿ ಅಂಗಡಿ ,

3. ಮನೆ ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ್ದೇ

4, ಅಬೆಯಲ್ಲಿರುವ ಸಿಂಹಾಸನಕ್ಕೆ ಸ್ಟೋನ್ ಆಫ್ ಸ್ಕೋನ್ ಎಂದು ಹೆಸರು .

ಊ ) ಈ ಪದಗಳನ್ನು ಬಿಡಿಸಿ ಸಂಧಿಯ ಹೆಸರನ್ನು ಬರೆಯಿರಿ ,

1. ಒಮ್ಮೊಮ್ಮೆ = ಒಮ್ಮೆ + ಒಮ್ಮೆ – ಲೋಪಸಂಧಿ

2. ಜಾಗವನ್ನು = ಜಾಗ + ಅನ್ನು – ಆಗಮ ಸಂಧಿ ( ವ್ )

3. ಅತ್ಯಾದರ = ಅತಿ + ಆದರ – ಯಣ್‌ ಸಂಧಿ

4. ವಾಚನಾಲಯ = ವಾಚನ + ಆಲಯ – ಸವರ್ಣದೀರ್ಘಸಂಧಿ

5. ಸಂಗ್ರಹಾಲಯ = ಸಂಗ್ರಹ + ಆಲಯ – ಸವರ್ಣದೀರ್ಘಸಂಧಿ ,

6 , ಓಣಿಯಲ್ಲಿ = ಓಣಿ + ಅಲ್ಲಿ – ಆಗಮ ಸಂಧಿ

ಭಾಷಾ ಚಟುವಟಿಕೆ

ಕೊಟ್ಟಿರುವ ಸೂಚನೆಯಂತೆ ಉತ್ತರಿಸಿ ,

1. ವೆಸ್ಟ್‌ಮಿನ್‌ಸ್ಟರ್‌ ಆಬೆ ನೋಡಿಕೊಂಡು ಬಂದೆವು . ( ಭವಿಷ್ಯತ್ ಕಾಲಕ್ಕೆ ಪರಿವರ್ತಿಸಿ )

ಉ : ವೆಸ್ಟ್‌ಮಿನ್‌ಸ್ಟರ್ ಆಜಿ ನೋಡಿಕೊಂಡು ಬರುವವು .

2. ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುವರು . ( ವರ್ತಮಾನಕಾಲಕ್ಕೆ ಪರಿವರ್ತಿಸಿ )

ಉ : ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುತ್ತಾರೆ .

3. ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆಯುತ್ತವೆ . ( ಭೂತಕಾಲಕ್ಕೆ ಪರಿವರ್ತಿಸಿ )

ಉ : ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆತವು .

10ನೇ ತರಗತಿ ಕನ್ನಡ ಲಂಡನ್‌ ನಗರ ನೋಟ್ಸ್‌ ಪ್ರಶ್ನೆ ಉತ್ತರಗಳು ,10th Kannada 3rd Lesson Notes, Chapter 3 Question Answer Pdf Download

ಇತರೆ ಪಾಠಗಳು :

ಯುದ್ಧ ಪಾಠದ ನೋಟ್ಸ್

ಶಬರಿ ಪಾಠದ ನೋಟ್ಸ್

Leave your vote

21 Points
Upvote Downvote

1 thoughts on “10ನೇ ತರಗತಿ ಕನ್ನಡ ಲಂಡನ್‌ ನಗರ ನೋಟ್ಸ್‌ | 10th Standard Kannada London Nagara Notes

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh