10ನೇ ತರಗತಿ ಕನ್ನಡ ವ್ಯಾಘ್ರಗೀತೆ ಪಾಠದ ನೋಟ್ಸ್ ಪ್ರಶ್ನೋತ್ತರಗಳು,10th Vyagra Geethe Kannada Lesson Notes Question Answer Pdf Download 2022
ತರಗತಿ : 10ನೇ ತರಗತಿ
ಪಾಠದ ಹೆಸರು : ವ್ಯಾಘ್ರಗೀತೆ
ಕೃತಿಕಾರರ ಹೆಸರು : ಎ . ಎನ್ . ಮೂರ್ತಿರಾವ್
Table of Contents
ಲೇಖಕರ ಪರಿಚಯ :
ಎ . ಎನ್ . ಮೂರ್ತಿರಾವ್ ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್ ಅವರು ಕ್ರಿ . ಶ . ೧೯೦೦ ರಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಜನಿಸಿದರು ಇವರು ಸಮಗ್ರ ಲಲಿತ ಪ್ರಬಂಧಗಳು , ದೇವರು , ಹಗಲುಗನಸು , ಅಲೆಯುವಮನ , ಚಂಡಮಾರುತ , ಮಿನುಗು – ಮಿಂಚು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ . ಶ್ರೀಯುತರು ದೇವರು ಎಂಬ ಕೃತಿಗೆ ಪಂಪ ಪ್ರಶಸ್ತಿ , ಚಿತ್ರಗಳು – ಪತ್ರಗಳು ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಮೈಸೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್ ಪದವಿ ಗಳನ್ನು ಪಡೆದಿದ್ದಾರೆ .
Vyagra Geethe Kannada Notes Question Answer
ಅ ] ಒಂದು ವಾಕ್ಯದಲ್ಲಿ ಉತ್ತರಿಸಿ ,
1. ಶಾನುಭೋಗರ ಬ್ರಹ್ಮಾಸ್ತ್ರ ಯಾವುದು ?
ಶಾನುಭೋಗರ ಬ್ರಹ್ಮಾಸ್ತ್ರ ಖಿರ್ದಿ ಪುಸ್ತಕ
2. ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು ?
ಹಸಿದು ಮಲಗಿದ್ದ ಹುಲಿಯು ವಿಧಿ ಅಹಾರಕ್ಕೆ ಏನನ್ನು ಒದಗಿಸುವುದೋ ಎಂದು ಯೋಚಿಸಿತು .
3. ಭಗವದ್ಗೀತೆಯನ್ನು ರಚಿಸಿದವರು ಯಾರು ?
ಉ : ಭಗವದ್ಗೀತೆಯನ್ನು ರಚಿಸಿದವರು ಮಹರ್ಷಿ ವೇದವ್ಯಾಸರು
4. ಹುಲಿಗೆ ಪರಮಾನಂದವಾಗಲು ಕಾರಣವೇನು ?
ಉ : ಭಗವದ್ಗೀತೆಯನ್ನು ರಚಿಸಿದವರು ಮಹರ್ಷಿ ವೇದವ್ಯಾಸರು ಶಾನುಭೋಗರ ದುಂಡುದುಂಡಾದ ಶರೀರವನ್ನು ನೋಡಿ ಹುಲಿಗೆ ಪರಮಾನಂದವಾಯಿತು .
5. ತಾನುಭೋಗರಿಗೆ ತಲೆ ಸುತ್ತಲು ಕಾರಣವೇನು ?
ಹುಲಿಗೆ ತಮ್ಮ ಮುಖದರ್ಶನವಾಗದಂತೆ ತಪ್ಪಿಸಿಕೊಳ್ಳುವ ದೊಂಬರಾಟದಲ್ಲಿ ಶಾನುಭೋಗರಿಗೆ ತಲೆ ಸುತ್ತಲಾರಂಭಿಸಿತು .
ಆ ] ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ
1. ಹುಲಿಯು ಹಿಂದಿನಿಂದ ಹಾರಿ ಕೊಲ್ಲದಿರಲು ಕಾರಣಗಳೇನು ?
ಭರತಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ . ಏಕೆಂದರೆ ಶತ್ರುಗಳಾದರೂ ಸರಿಯೆ , ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ . ಆದ್ದರಿಂದ ಹುಲಿಯು ಶಾನುಭೋಗರ ಬೆನ್ನ ಹಿಂದಿನಿಂದ ಹಾರಿ ಕೊಲ್ಲಲಿಲ್ಲ .
2. ಮದಲಿಂಗನ ಕಣಿವೆಯಲ್ಲಿ ಬರುವಾಗ ಶಾನುಭೋಗರು ಏನೆಂದು ಯೋಚಿಸಿದರು ?
ಶಾನುಭೋಗರು ಮದಲಿಂಗನ ಕಣಿವೆಯನ್ನು ದಾಟಿ ಹೋಗಬೇಕಿತ್ತು , ಅದು ಕಾಡುದಾರಿಯಾಗಿತ್ತು , ಆದಿನ ಬೆಳುದಿಂಗಳಿನ ರಾತ್ರಿ ಆದರೂ ಶಾನುಭೋಗರ ಮನಸ್ಸಿನಲ್ಲಿ ಭಯ ಆವರಿಸಿತ್ತು . ಹೊಟ್ಟೆಯೂ ಹಸಿಯುತ್ತಿತ್ತು . “ ಸ್ವಲ್ಪ ದೊಡ್ಡ ಹೆಜ್ಜೆ ಹಾಕಿ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹದು ” ಎಂದು ಶಾನುಭೋಗರು ಯೋಚಿಸಿದರು .
3. ಶಾನುಭೋಗರು ಮೂರ್ಛಯಲ್ಲಿದ್ದಾಗ ನಡೆದ ಘಟನೆಗಳನ್ನು ವಿವರಿಸಿ ,
ಚಿಕ್ಕನಾಯಕನಹಳ್ಳಿಗೆ ತೆಂಗಿನಕಾಯಿ ತುಂಬಿಕೊಂಡು ಹೋಗಿದ್ದ ರೈತರ ಗಾಡಿಯ ಎತ್ತುಗಳು ಮುಂದೆ ಹೋಗದೆ ನಿಂತವು ಹುಲಿಯ ಗರ್ಜನೆ ಕೇಳಿಸಿತು . ಎತ್ತುಗಳ ಗಂಟೆಯ ಸದ್ದನ್ನು ಕೇಳಿದ ಹುಲಿಯು ಕೆಲವು ನಿಮಿಷ ತಡೆದು ರೈತರ ಮಾತು ಕೇಳಿಬಂದ ಮೇಲೆ ನಿರಾಶೆಯಿಂದ ಪಲಾಯನಮಾಡಿತು . ಅನಂತರ ರೈತರು ತಮ್ಮಲ್ಲಿದ್ದ ಕೋವಿಯಿಂದ ಒಂದೆರಡು ತೋಟಾ ಹಾರಿಸಿ , ಸಾಧ್ಯವಾದಷ್ಟು ಗಲಭೆ ಮಾಡುತ್ತಾ ತೆಂಗಿನ ಗರಿಯ ಪಂಜು ಹೊತ್ತಿಸಿಕೊಂಡು ಜಾಗರೂಕತೆಯಿಂದ ಮುಂದೆ ಬಂದರು . ಮೂರ್ಛಯಲ್ಲಿ ಬಿದ್ದಿದ್ದ ಶಾನುಭೋಗರನ್ನು ಕಂಡು , ಮುಖದ ಮೇಲೆ ನೀರೆರಚಿ ಎಚ್ಚರಿಸಿದರು .
ಇ ] ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,
1. ಶಾನುಭೋಗರನ್ನು ರಕ್ಷಿಸಿದುದು ಖಿರ್ದಿ ಪುಸ್ತಕವೇ ? ಹುಲಿಯ ಧರ್ಮವೇ ? ಸಮರ್ಥನೆಯೊಂದಿಗೆ ವಿವರಿಸಿ ,
ಹುಲಿಗಳು ಹಿಂದಿನಿಂದ ಮೇಲೆ ಬೀಳುವುದಿಲ್ಲ ಎಂದು ಅರಿತಿದ್ದ ಶಾನುಭೋಗರು ಉಪಾಯವಾಗಿ ಹಲಿಗೆ ಬೆನ್ನು ತಿರುಗಿಸಿ ನಡೆದು ನಡೆದು ದಣಿದರು , ಆ ವಿಪತ್ತಿನ ಸನ್ನಿವೇಶದಲ್ಲಿ ಅವರಿಗೆ ನೆನಪಾಗಿದ್ದು ಅವರ ಬಳಿಯಿದ್ದ ಖಿರ್ದಿ ಪುಸ್ತಕ . ಅದು ಸಧ್ಯಕ್ಕೆ ಅವರ ಬಳಿಯಿದ್ದ ಬ್ರಹ್ಮಾಸ್ತ್ರ . ಆದ್ದರಿಂದ ಹುಲಿಯ ಮುಖಕ್ಕೆ ಬಡಿದಾಗ ಏನಾಯಿತೆಂದು ಅರಿಯಲು ಆರ ನಿಮಿಷ ಹಿಡಿಯಿತು . ಅದನ್ನೇ ಉಪಯೋಗಿಸಿಕೊಂಡು ಓಡಿದ ಅವರು ಕಲ್ಲು ಎಡವಿ ಬಿದ್ದು ಮೂರ್ಛ ಹೋದಾಗ ಅಷ್ಟರಲ್ಲಿ ಅಲ್ಲಿಗೆ ಬರುತ್ತಿದ್ದ ರೈತರ ಶಬ್ದ ಕೇಳಿ ಹುಲಿ ಪಲಾಯನ ಮಾಡಿತು . ಅವರಿಗೆ ಆ ಅರೆನಿಮಿಷದ ಅವಕಾಶವನ್ನು ಒದಗಿಸಿಕೊಟ್ಟು ಪಾಣವನ್ನು ಕಾಪಾಡಿದ ಖಿರ್ದಿ ಪುಸ್ತಕದ ಮೇಲೆ ಅವರಿಗೆ ಕೃತಜ್ಞತಾ ಭಾವವಿದೆ . ಖರ್ದಿ ಪುಸ್ತಕವೇ ತಮ್ಮ ಜೀವ ಉಳಿಸಿತು ಎಂಬುದು ಅವರ ನಂಬಿಕೆ , ಆದರೆ ನಿಜವಾಗಿ ನೋಡಿದರೆ ಶಾನುಭೋಗರು . ಉಳಿದದ್ದು ಖಿರ್ದಿ ಪುಸ್ತಕದಿಂದಲ್ಲ , ಹಲಿಯ ಧರ್ಮಶ್ರದ್ಧೆಯಿಂದ , ಏಕೆಂದರೆ ಭರತಖಂಡದ ಮಲಿಗಳು ಹಿಂದಿನಿಂದ ದಾಳಿಮಾಡಿ ಕೊಲ್ಲದಿರುವ ಧರ್ಮಶ್ರದ್ಧೆಯ ಗುಣ , ಮನಸ್ಸು ಮಾಡಿದ್ದರೆ ಹುಲಿ ಯಾವಾಗಲೋ ಶಾನುಭೋಗರನ್ನು ಕೊಲ್ಲಬಹುದಿತ್ತು . ಆದರೆ ಹುಲಿಯ ಶ್ರದ್ಧೆಯೇ ಶಾನುಭೋಗರು ಹಲಿಯಿಂದ ಪಾರಾಗಲು ಕಾರಣವಾಯಿತು ಎಂದು ಹೇಳಬಹುದು ,
2. ಮೂರ್ತಿರಾಯರ ದೃಷ್ಟಿಯಲ್ಲಿ ಹುಲಿಯು ಬೇಟೆಯಾಡುವ ಬಗೆಯನ್ನು ವಿವರಿಸಿ .
“ ಶಾಕಾಹಾರವನ್ನು ತಿಂದು ಬದುಕಬಹುದಾದ ಮಾನವನೇ ಮಾರಿಸವನ್ನು ತಿನ್ನ ಬಹುದಾದರೆ ಆಹಾರಕ್ಕಾಗಿ ಹುಲಿಯು ಪ್ರಾಣಿಗಳನ್ನು ಕೊಂದು ತಿನ್ನುವುದರಲ್ಲಿ ತಪ್ಪಿಲ್ಲ . ಆದರೆ ಹಾಗೆ ಕೊಲ್ಲುವಾಗ ಯಾವುದಾರೂ ಒಂದು ಧರ್ಮವನ್ನು ಅನುಸರಿಸಿ ಕೊಲ್ಲುವುದೋ ಅಥವಾ ಧರ್ಮಾಧರ್ಮಗಳ ಲೆಕ್ಕ ಇಡದೆ ಸ್ವಚ್ಛಂದದಿಂದ ವರ್ತಿಸುತ್ತದೆಯೇ ಎಂಬುದೇ ಮುಖ್ಯ ಪ್ರಶ್ನೆ , ಇತರ ದೇಶಗಳಲ್ಲಿ ಇರುವ ಹುಲಿಗಳ ವಿಷಯ ಹೇಗೋ ಗೊತ್ತಿಲ್ಲ . ಆದರೆ ಯಾವ ನಾಡಿನಲ್ಲಿ ಶ್ರೀರಾಮನಂಥ ದೊರೆಗಳು ಆಳಿದರೋ , ಭಗವದ್ಗೀತೆಯಂಥ ಗ್ರಂಥ ಉದ್ಭವಿಸಿತೋ , ಅಂತಹ ಭರತ ಭೂಮಿಯಲ್ಲಿ ಹುಲಿಗಳು ಅಧರ್ಮಕ್ಕೆ ಅವಕಾಶ ಮಾಡಿಕೊಡುವುದಿಲ್ಲ . ಭರತಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ ಏಕೆಂದರೆ ಶತ್ರುಗಳಾದರೂ ಸರಿಯೆ , ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ . ಭಗವದ್ಗೀತೆಯ ‘ ಸ್ವಧರ್ಮೇ ನಿಧನಂ ಶ್ರೇಯಃ ‘ ಎಂಬ ಮಾತಿನಂತೆ ಹುಲಿಗಳು ಧರ್ಮಪರತೆಯಿಂದ ಬೇಟೆಯಾಡುತ್ತವೆ ” ಎಂದು ಮೂರ್ತಿರಾಯರು ಅಭಿಪ್ರಾಯಪಡುತ್ತಾರೆ .
ಈ ಸಂದರ್ಭದೊಂದಿಗೆ ಸ್ವಾರಸ್ಯವನ್ನು ಬರೆಯಿರಿ
1. “ ದೇವರೆ , ಮರ ಹತ್ತುವಷ್ಟು ಅವಕಾಶ ಕರುಣಿಸು “
ಆಯ್ಕೆ – : – ಈ ವಾಕ್ಯವನ್ನು ಶ್ರೀ ವಿ . ಎನ್ . ಮೂರ್ತಿರಾವ್ ಅವರು ರಚಿಸಿರುವ ‘ ಸಮಗ್ರ ಲಲಿತಪ್ರಬಂಧಗಳು ‘ ಕೃತಿಯಿಂದ ಆಯ್ದ ‘ ವ್ಯಾಘ್ರಗೀತೆ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಮದಲಿಂಗನ ಕಣಿವೆಯ ದಾರಿಯಲ್ಲಿ ಹುಲಿಯ ಆಕ್ರಮಣದಿಂದ ತಪ್ಪಿಸಿಕೊಳ್ಳಲು , ಶಾನುಭೋಗರು ಖಿರ್ದಿ ಪುಸ್ತಕವನ್ನು ಹುಲಿಯ ಮುಖದ ಮೇಲೆ ಎಸೆದು , ಮರದ ಕಡೆಗೆ ಓಡಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ .
ಸ್ವಾರಸ್ಯ : – ‘ ಸಂಕಟ ಬಂದಾಗ ವೆಂಕಟರಮಣ ‘ ಎಂಬಂತೆ ಶಾನುಭೋಗರು ಹುಲಿಯಿಂದ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡು ಎಂದು ದೇವರನ್ನು ಪ್ರಾರ್ಥಿಸುವುದು ಬಹು ಸ್ವಾರಸ್ಯಪೂರ್ಣವಾಗಿದೆ ,
2. “ ಮಲಿ ಈಗ ಎಷ್ಟು ಹಸಿದಿರಬೇಕು “
ಆಯ್ಕೆ : – ಈ ವಾಕ್ಯವನ್ನು ಶ್ರೀ ಎ . ಎನ್ . ಮೂರ್ತಿರಾವ್ ಅವರು ರಚಿಸಿರುವ ‘ ಸಮಗ್ರ ಲಲಿತಪ್ರಬಂಧಗಳು ‘ ಕೃತಿಯಿಂದ ಆಯ್ದ ‘ ವ್ಯಾಘ್ರಗೀತೆ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಮದಲಿಂಗನ ಕಣಿವೆಯ ದಾರಿಯಲ್ಲಿ ಹುಲಿಯ ಆಕ್ರಮಣದಿಂದ ತಪ್ಪಿಸಿಕೊಂಡ ಶಾನುಭೋಗರು ಜೀವ ಸಹಿತ ಮನೆಗೆ ಬಂದು ರಸದೂಟವನ್ನು ಮಾಡಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ ,
ಸ್ವಾರಸ್ಯ : – ನಾನು ಹಲಿಯಿಂದ ತಪ್ಪಿಸಿಕೊಂಡು ಬಂದು ರಸದೂಟವನ್ನು ಮಾಡುತ್ತಿದ್ದೇನೆ ಆದರೆ ನನ್ನನ್ನು ಕೊಲ್ಲಲು ಬಂದ ಹುಲಿಯು ಕೊಲ್ಲಲಾಗದೆ ಹಸಿವಿನಿಂದ ಬಳಲುತ್ತಿರಬಹುದು ಎಂದು ಶಾನುಭೋಗರು ಹೇಳುವುದು ಸ್ವಾರಸ್ಯಪೂರ್ಣವಾಗಿದೆ ,
3 , “ ಖಂಡವಿದೆಕೋ , ಮಾಂಸವಿದೆಕೋ , ಗುಂಡಿಗೆಯ ಬಿಸಿರಕ್ತವಿದೆಕೋ ”
ಆಯ್ಕೆ : – ಈ ವಾಕ್ಯವನ್ನು ಶ್ರೀ ಎ . ಎನ್ . ಮೂರ್ತಿರಾವ್ ಅವರು ರಚಿಸಿರುವ ‘ ಸಮಗ್ರ ಲಲಿತಪ್ರಬಂಧಗಳು ‘ ಕೃತಿಯಿಂದ ಆಯ್ದ ‘ ವ್ಯಾಘ್ರಗೀತೆ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಮದಲಿಂಗನ ಕಣಿವೆಯ ಕಾಲುದಾರಿಯಲ್ಲಿ ಶಾನುಭೋಗರ ಬೆನ್ನ ಹಿಂದೆ ಬಂದ ಹಲಿಯು ‘ ವೈರಿಯಾದರೂ ಸರಿಯೇ ಹಿಂದಿನಿಂದ ಹಾರಿ ಕೊಲ್ಲಬಾರದು ‘ ಎಂಬ ತನ್ನ ಧರ್ಮವನ್ನು ನೆನೆದು , ಗೊಂದಲದಲ್ಲಿ ಇದ್ದ ಸಂದರ್ಭದಲ್ಲಿ ಪುಣ್ಯಕೋಟಿಯ ಈ ಮಾತನ್ನು ಲೇಖಕರು ನೆನಪಿಸಿಕೊಳ್ಳುತ್ತಾರೆ .
ಸ್ವಾರಸ್ಯ : – ತನ್ನನ್ನು ತಿನ್ನಲು ಆಹ್ವಾನ ಕೊಟ್ಟಾಗಲೂ ಹುಲಿರಾಯ ಸತ್ಯವತೆಯಾದ ಪುಣ್ಯಕೋಟಿಯನ್ನು ತಿನ್ನದೆ ಪ್ರಾಣಬಿಟ್ಟು , ತನ್ನ ಆದರ್ಶವನ್ನು ಹಾಗೂ ಧರ್ಮಶ್ರದ್ಧೆಯನ್ನು ಮೆರೆಯಿತು ಎಂಬುದನ್ನು ಈ ವಾಕ್ಯದಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸಲಾಗಿದೆ
4. ” ಸ್ವಧರ್ಮೇ ನಿಧನಂ ಶ್ರೇಯ “
ಆಯ್ಕೆ : – ಈ ವಾಕ್ಯವನ್ನು ಶ್ರೀ ಎ . ಎನ್ . ಮೂರ್ತಿರಾವ್ ಅವರು ರಚಿಸಿರುವ ‘ ಸಮಗ್ರ ಲಲಿತಪ್ರಬಂಧಗಳು ‘ ಕೃತಿಯಿಂದ ಆಯ್ದ ‘ ವ್ಯಾಘ್ರಗೀತೆ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಮದಲಿಂಗನ ಕಣಿವೆಯ ಕಾಲುದಾರಿಯಲ್ಲಿ ಶಾನುಭೋಗರ ಬೆನ್ನ ಹಿಂದೆ ಬಂದ ಯಲಿಯು ‘ ವೈರಿಯಾದರೂ ಸರಿಯೇ ಹಿಂದಿನಿಂದ ಹಾರಿ ಕೊಲ್ಲಬಾರದು ‘ ಎಂಬ ತನ್ನ ಧರ್ಮವನ್ನು ನೆನೆದು , ಗೊಂದಲದಲ್ಲಿ ಇದ್ದ ಸಂದರ್ಭದಲ್ಲಿ ಹುಲಿಗೆ ಭಗವದ್ಗೀತೆಯ ಈ ಮಾತು ನೆನಪಿಗೆ ಬಂದಿತು .
ಸ್ವಾರಸ್ಯ : – ಸದ್ವಂಶದಲ್ಲಿ ಜನಿಸಿದ ಹುಲಿಯು ಶಾನುಭೋಗರ ಬೆನ್ನ ಹಿಂದಿನಿಂದ ಆಕ್ರಮಣ ಮಾಡದೆ ಭಗವದ್ಗೀತೆಯ ಈ ಮಾತನ್ನು ನೆನೆಯುವುದು ಸ್ವಾರಸ್ಯಪೂರ್ಣವಾಗಿದೆ .
5. “ ನಾನು ಮುಖ ಮೇಲಾಗಿ ಬಿದ್ದಿದ್ದನೇ ? ”
ಆಯ್ಕೆ : – ಈ ವಾಕ್ಯವನ್ನು ಶ್ರೀ ಎ . ಎನ್ . ಮೂರ್ತಿರಾವ್ ಅವರು ರಚಿಸಿರುವ ‘ ಸಮಗ್ರ ಲಲಿತಪ್ರಬಂಧಗಳು ‘ ಕೃತಿಯಿಂದ ಆಯ್ದ ‘ ವ್ಯಾಘ್ರಗೀತೆ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಶಾನುಭೋಗರು ಹುಲಿಯ ಆಕ್ರಮಣದಿಂದ ಹೆದರಿ , ಮರ ಹತ್ತಲು ಓಡುವಾಗ ಕಲ್ಲನ್ನು ಎಡವಿ ಬಿದ್ದು , ಪ್ರಜ್ಞೆ ತಪ್ಪಿದಾಗ , ಅದೇ ದಾರಿಯಲ್ಲಿ ಹೋಗುತ್ತಿದ್ದ ರೈತರು ಅವರ ಮುಖದ ಮೇಲೆ ನೀರೆರೆಚಿ ಎಚ್ಚರಿಸಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ .
ಸ್ವಾರಸ್ಯ : – “ ನಾನು ಪ್ರಜ್ಞೆ ತಪ್ಪಿ ಬಿದ್ದಿದ್ದಾಗ ಹುಲಿಯು ಏಕೆ ಎಳೆದುಕೊಂಡು ಹೋಗಲಿಲ್ಲ ? ” ಎಂಬ ಸಮಸ್ಯೆಗೆ ಶಾನುಭೋಗರು ಈ ಪ್ರಶ್ನೆಯ ಮೂಲಕ ಉತ್ತರ ಕಂಡುಕೊಳ್ಳುವುದು ಇಲ್ಲಿಯ ಸ್ವಾರಸ್ಯವಾಗಿದೆ .
ಉ) ಬಿಟ್ಟಿರುವ ಸ್ಥಳವನ್ನು ಸೂಕ್ತ ಉತ್ತರದಿಂದ ತುಂಬಿರಿ ,
೧ ) ಮಂತಿತ್ವ ಹೋಗಿ ಕೇವಲ ಶಾನುಭೋಗಿಕೆ ಮಾತ್ರ ಉಳಿದಿತ್ತು .
೨ ) ಖಿರ್ದಿ ಪುಸ್ತಕ ಶಾನುಭೋಗರ ಬ್ರಹ್ಮಾಸ್ತ್ರ
೩ ) ನೆಲದಿಂದ ಮೇಲೆದ್ದುಕೊಂಡಿದ್ದ ಕಲನ್ನು ಎಡವಿ ಶಾನುಭೋಗರು ಬಿದ್ದರು .
೪ ) ರೈತರು ತಿಂಗಳ ಬೆಳಕಿನಲ್ಲಿ ಗಾಡಿ ಹೊಡೆಯುತ್ತಿದ್ದರು .
೫ ) ಶಾನುಭೋಗರು ಉಳಿದದ್ದು ಖಿರ್ದಿ ಪುಸ್ತಕದಿಂದಲ್ಲ ,
ಭಾಗ ಬಿ
ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ ಬರೆಯಿರಿ :
೧. ನಾಮಪದದ ಮೂಲ ರೂಪಕ್ಕೆ :
ಎ ) ಧಾತು ಬಿ ) ಭಾವನಾಮ ಸಿ ) ನಾಮಪ್ರಕೃತಿ ಡಿ) ಸರ್ವನಾಮ
೨. ‘ ವ್ಯಾಪಾರಿ ‘ – ಪದವು ಈ ನಾಮಪದಕ್ಕೆ ಉದಾಹರಣೆಯಾಗಿದೆ :
ಎ ) ರೂಢನಾಮ ಬಿ ) ಅಂಕಿತನಾಮ ಸಿ ) ಭಾವನಾಮ ಡಿ) ಅನ್ವರ್ಥನಾಮ
೩) ʼಹಿರಿಯʼದರ ಭಾವನಾಮ:
ಎ)ದೊಡ್ಡದು ಬಿ) ಕಿರಿದು ಸಿ) ಇಂಪು ಡಿ) ಹಿರಿಮೆ
೪ , ಆತನ ಓಟ ಚೆನ್ನಾಗಿತ್ತು ಈ ವಾಕ್ಯದಲ್ಲಿ ಗೆರೆ ಎಳೆದಿರುವ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ :
ಎ ) ಕೃದಂತಭಾವನಾಮ ಬಿ ) ತದ್ಧಿತಾಂತಭಾವನಾಮ ಸಿ ) ಕೃದಂತವ್ಯಯ ಡಿ ) ಕೃದಂತನಾಮ
೫ , ‘ ತಾನು – ತಾವು ‘ – ಪದಗಳು ಈ ಸರ್ವನಾಮಕ್ಕೆ ಉದಾಹರಣೆಯಾಗಿವೆ :
ಎ ) ಪ್ರಶ್ನಾರ್ಥಕ ಬಿ ) ಆತ್ಮಾರ್ಥಕ ಸಿ ) ಪುರುಷಾರ್ಥಕ ಡಿ ) ನಾಮಾತ್ಮಕ
೬ , ‘ ಮೂಡಣ ‘ – ಈ ನಾಮಪದಕ್ಕೆ ಉದಾಹರಣೆಯಾಗಿದೆ :
ಎ ) ದಿಗ್ವಾಚಕ ಬಿ ) ಗುಣವಾಚಕ ಸಿ ) ಪರಿಮಾಣವಾಚಕ ಡಿ ) ಸಂಖ್ಯಾವಾಚಕ
೭ ವಸ್ತು , ವ್ಯಕ್ತಿ , ಪ್ರಾಣಿ , ಪಕ್ಷಿ ಮುಂತಾದವುಗಳನ್ನು ಗುರುತಿಸಲು ಇಟ್ಟ ಹೆಸರು ಈ ನಾಮಪದವಾಗಿದೆ :
ಎ ) ರೂಢನಾಮ ಬಿ ) ಅಂಕಿತನಾಮ ಸಿ ) ಅನ್ವರ್ಥನಾಮ ಡಿ ) ಭಾವನಾಮ
೮ , ನಾನು , ನಾವು – ಪದಗಳು ಈ ಪುರುಷಾರ್ಥಕ ಸರ್ವನಾಮಗಳು –
ಎ ) ಉತ್ತಮಪುರುಷ ಬಿ ) ಪ್ರಥಮಪುರುಷ ಸಿ) ಮಧ್ಯಮಪುರುಷ ಡಿ) ಅಧಮಪುರುಷ
೯. ‘ ಮಾಡಲಿಕ್ಕೆ ‘ – ಇದು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ :
ಎ ) ಕೃದಂತನಾಮ ಬಿ ) ಕೃದಂತ ಭಾವನಾಮ ಸಿ ) ಕೃದಂತಾವ್ಯಯ ಡಿ) ತದ್ದಿತಾಂತವ್ಯಯ
೧೦. ‘ ಬರೆಯದ ‘ – ಪದವು ಈ ಕೃದಂತಕ್ಕೆ ಉದಾಹರಣೆ :
ಎ ) ವರ್ತಮಾನ ಕೃದಂತ ಬಿ ) ಭೂತಕಾಲಕೃದಂತ ಸಿ ) ನಿಷೇಧಕೃದಂತ ಡಿ) ಕೃದಂತಭಾವನಾಮ
1 ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೇಯ ಪದಕ್ಕೆ ಸಂಬಂಧಿಸಿದ ನಾಲ್ಕನೆಯ ಪದ ಬರೆಯಿರಿ :
೧. ದೃಷ್ಟಿ : ದಿಟ್ಟಿ : : ಧರ್ಮ: ದಮ್ಮ
೨. ಪುಸ್ತಕ : ಹೊತ್ತಿಗೆ : : ಪ್ರಾಣ : ಹರಣ
೩. ಸ್ಪರ್ಶೇಂದ್ರಯ : ಚರ್ಮ : : ಘ್ರಾಣೇಂದ್ರಿಯ: ಮೂಗು
೪. ಗಂಧ : ಸುವಾಸನೆ : : ಲಾಂಛನ : ಗುರುತು
೫. ಹನ್ನೆರಡು : ಸಂಖ್ಯಾವಾಚಕ : : ಹನ್ನೆರಡನೆಯ : ಸಂಖ್ಯಾವಾಚಕ
೬ , ನೋಡುವುದರ ಭಾವ : ನೋಟ : : ನೆನೆಯುವುದರ ಭಾವ : ನೆನಪು
೭. ಓಡಿದ : ಭೂತಕಾಲಕೃದಂತ : : ಓಡಿದ : ವರ್ತಮಾನಕೃದಂತ
೮. ಮನುಷ್ಯ : ರೂಢನಾಮ : : ವಿಜ್ಞಾನಿ : ಅನ್ವರ್ಥನಾಮ
೯. ತಮ್ಮ : ಆತ್ಮಾರ್ಥಕ ಸರ್ವನಾಮ : : ಯಾರು : ಪ್ರಶ್ನಾರ್ಥಕ ಸರ್ವನಾಮ
೧೦. ರಾಜಭಕ್ತಿ : ತತ್ಪುರುಷಸಮಾಸ : : ಇಮ್ಮಡಿ : ದ್ವಿಗುಸಮಾಸ
೧೧. ಬ್ರಹ್ಮಾಸ್ತ್ರ : ಸವರ್ಣದೀರ್ಘಸಂಧಿ : : ಪಂಚೇಂದ್ರಿಯ : ಗುಣಸಂಧಿ
೧೨. ಮಾಂಸವನ್ನು : ದ್ವಿತೀಯವಿಭಕ್ತಿ : : ಹುಲಿಯಲ್ಲಿ : ಸಪ್ತಮಿವಿಭಕ್ತಿ
೧೩. ನಾಮಪ್ರಕೃತಿ : ನಾಮಪದ : : ಧಾತು : ಕ್ರಿಯಾಪದ
10th Vyagra Geethe Kannada Lesson Notes Question Answer Pdf Download
ಇತರ ಪಾಠಗಳು: