10ನೇ ತರಗತಿ ಕನ್ನಡ ಲಂಡನ್ ನಗರ ನೋಟ್ಸ್ ಪ್ರಶ್ನೆ ಉತ್ತರಗಳು ,10th Kannada 3rd Lesson Notes, Chapter 3 Question Answer Pdf Download Kseeb Solutions 2022
ತರಗತಿ : 10ನೇ ತರಗತಿ
ಪಾಠದ ಹೆಸರು : ಲಂಡನ್ ನಗರ
ಕೃತಿಕಾರರ ಹೆಸರು : ವಿ.ಕೃ.ಗೋಕಾಕ್
Table of Contents
10th Standard Kannada London Nagara Notes
ಲೇಖಕರ ಪರಿಚಯ :
ಡಾ.ವಿ.ಕೃ.ಗೋಕಾಕ್ ವಿನಾಯಕ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಡಾ . ವಿನಾಯಕ ಕೃಷ್ಣ ಗೋಕಾಕ ( ಕ್ರಿಶ .೧೯೦೯ ) ಇವರು ಹಾವೇರಿ ಜಿಲ್ಲೆಯ ಸವಣೂರಿನವರು . ವಿ.ಕೃ.ಗೋಕಾಕ ಅವರು ಸಮುದ್ರಗೀತೆಗಳು , ಪಯಣ , ಉಗಮ , ಇಷ್ಟೊಡು , ಸಮರಸವೇ ಜೀವನ , ಭಾರತ ಸಿಂಧುರಶ್ಮಿ ಮೊದಲಾದ ಕೃತಿಗಳನನ್ನು ರಚಿಸಿದ್ದಾರೆ . ಇವರ ‘ ದ್ಯಾವಾ ಪೃಥಿವೀ ‘ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ . ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ , ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ , ಸಮಗ್ರ ಸಾಹಿತ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿ , ಭಾರತ ಸರ್ಕಾರ ಪದ್ಮಶ್ರೀ : ಮುಂತಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ .
10th Kannada 3rd Lesson Notes Question Answer
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1. ‘ ವೆಸ್ಟ್ ಮಿನ್‌ಸ್ಟರ್ ಆಬೆ ‘ ಯಾರ ಸ್ಮಾರಕವಾಗಿದೆ ?
ಉ : ವೆಸ್ಟ್ ಮಿನ್‌ಸ್ಟರ್ ಅಬೆ ‘ ಸತ್ತುಹೋಗಿರುವ ಸಾರ್ವಭೌಮರ , ಕವಿಪುಂಗವರ ಸ್ಮಾರಕವಾಗಿದೆ .
2. ಆಂಗ್ಲ ಸಾಮ್ರಾಜ್ಯದ ವೈಭವ ಕಂಡುಬರುವ ಓಣಿ ಯಾವುದು ?
ಉ : ” ಚೇರಿಂಗ್ ಕ್ರಾಸ್ ‘ ಎಂಬುದು ಅಂಗ್ಲ ಸಾಮಾಜ್ಯದ ವೈಭವ ಕಂಡುಬರುವ ಓಣಿಯಾಗಿದೆ .
3. ಲಂಡನ್ನಿನ ರಸ್ತೆಗಳಲ್ಲಿ ನಿಲ್ಲುವುದನ್ನು ತಪ್ಪಿಸಲು ಮಾಡಿರುವ ವ್ಯವಸ್ಥೆಯೇನು ?
ಉ : ಲಂಡನ್ನಿನ ರಸ್ತೆಗಳಲ್ಲಿ ನಿಲ್ಲುವುದನ್ನು ತಪ್ಪಿಸಲು ಭೂಗರ್ಭದಲ್ಲಿ ಗಾಡಿಗಳನ್ನು ಹಾಕಿದ್ದಾರೆ .
4. ನೆಲ್ಸನ್‌ರವರ ಮೂರ್ತಿಯಿರುವ ಸ್ಥಳದ ಹೆಸರೇನು ?
ಉ : ನೆಲ್ಸನ್‌ರವರ ಮೂರ್ತಿಯಿರುವ ಸ್ಥಳದ ಹೆಸರು ‘ Trafalgar Square ‘ ( ತ್ರಾಫಲ್ಗಾರ್ ಸ್ಕ್ವೇರ್) ,
ಆ ) ಕೊಟ್ಟಿರುವ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ
1. ಟೊಪ್ಪಿಗೆಯ ವಿಶೇಷತೆಯನ್ನು ಲೇಖಕರು ಹೇಗೆ ದಾಖಲಿಸಿದ್ದಾರೆ ?
ಉ : ಲಂಡನ್ನಿನಲ್ಲಿ ಹೆಣ್ಣುಮಕ್ಕಳು ಧರಿಸುವ ಟೊಪ್ಪಿಗೆಯ ವಿಶೇಷತೆಯನ್ನು ತಿಳಿಸುತ್ತಾ ಲೇಖಕರು “ ಒಂದು ಟೊಪ್ಪಿಗೆಯಂತೆ ಇನ್ನೊಂದಿರುವುದಿಲ್ಲ . ಸಿಕ್ಕಿಸಿದ ಪುಚ್ಚವಾದರೂ ಕನಿಷ್ಠಪಕ್ಷಕ್ಕೆ ಬೇರೆಯಾಗಿರುತ್ತದೆ . ಕೋಟ್ಯಾವಧಿ ಟೊಪ್ಪಿಗೆಗಳನ್ನು ಬೇಕಾದರೆ ಪರೀಕ್ಷಿಸಿ ಇದನ್ನು ಮನಗಾಣಬಹುದು . ಮನುಷ್ಯನಂತೆ ಟೊಪ್ಪಿಗೆಯಲ್ಲವೆ ? ಒಬ್ಬ ಮನುಷ್ಯಳಂತೆ ಇನ್ನೊಬ್ಬಳಿಲ್ಲ . ” ಎಂದು ದಾಖಲಿಸಿದ್ದಾರೆ .
2. ವೂಲವರ್ಥ ಅಂಗಡಿಯಲ್ಲಿ ಸಿಗುವ ವಸ್ತುಗಳಾವುವು ?
ಉ : ‘ ವೂಲವರ್ಥ ‘ ಎಂಬ ಸ್ಟೇಷನರಿ ಅಂಗಡಿಯಲ್ಲಿ ಬೂಟು , ಕಾಲುಚೀಲ , ಚಣ್ಣ , ಸಾಬೂನು , ಔಷಧ , ಮಸ್ತಕ , ಆಡಿಗೆಯ ಪಾತ್ರೆ , ಇಲೆಕ್ಟಿಕ್ ದೀಪದ ಸಾಮಾನು , ಫೋಟೋ , ಅಡವಿಯ ಹೂವು , ಯುದ್ಧಸಾಮಗ್ರಿ ಎಲ್ಲವೂ ಇಲ್ಲಿ ದೊರೆಯುತ್ತವೆ .
3. ಲಂಡನ್ನಿನ ಹೆಣ್ಣು ಮಕ್ಕಳು ಯಾವ ಯಾವ ಕೆಲಸದಲ್ಲಿ ನಿಯುಕ್ತರಾಗಿರುತ್ತಾರೆ ?
ಉ : ಲಂಡನ್ನಿನ ಯಾವುದಾದರೊಂದು ದೊಡ್ಡ ಅಂಗಡಿಗೆ ಹೋದರೆ ಅಲ್ಲಿಯ ಟೈಪಿಸ್ ಕಾರಕೂನ , ಒಬ್ಬ ಹೆಣ್ಣು ಮಗಳು , ಸಿನಿಮಾ ಗೃಹದಲ್ಲಿ ನಿಮ್ಮ ಜಾಗವನ್ನು ಹುಡುಕಿಕೊಡುವವರು ಹೆಣ್ಣು ಕಾಲೇಜಿನಲ್ಲಿ ಸಹ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಸಿಪಾಯಿಣಿಯರನ್ನು ಇಟ್ಟಿದ್ದಾರೆ !
4. ಪೊಯೆಟ್ ಕಾರ್ನರ್ ನಲ್ಲಿ ಯಾವ ಯಾವ ಕವಿಗಳ ಸಮಾಧಿಗಳಿವೆ ?
ಉ : ಪೊಯೆಟ್ ಕಾರ್ನರ್ ನಲ್ಲಿ ಕಿಪ್ಲಿಂಗ್ , ಹಾರ್ಡಿ , ಮ್ಯಾಕಾಲೆ , ಜಾನ್ಸನ್ , ಗೋಲ್ಡ್‌ಸ್ಟಿಕ್ , ಡ್ರಾಯ್ಡನ್ , ಬೆನ್‌ಜಾನ್ಸನ್ , ವರ್ಡ್ಸ್‌ವರ್ತ್ , ಮೊದಲಾದ ಕವಿಗಳ ಸಮಾಧಿಗಳಿವೆ .
5. ಸಾಮ್ರಾಟರ ರಾಜ್ಯಾಭಿಷೇಕವಾಗುವ ಸಿಂಹಾಸನದ ಮೇಲಿರುವ ಕಲ್ಲುಪಾಟಿಯ ವಿಶೇಷತೆಯೇನು ?
ಸಾಮ್ರಾಟರ | ರಾಜ್ಯಾಭಿಷೇಕವಾಗುವಾಗ ಅವರ ಸಿಂಹಾಸನದ ಮೇಲೆ ಒಂದು ಕಲ್ಲು ಪಾಟಿಯನ್ನು ಹಾಕುತ್ತಾರೆ . ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮಾಟರು . ಇದರ ಮೇಲೆ ಕೂಡಬೇಕು . ಈ ಶಿಲೆಯನ್ನು ಒಳಗೊಂಡ ಸಿಂಹಾಸನವು ವೆಸ್ಟ್‌ಮಿನ್‌ಸ್ಟರ್ ಮಂದಿರದಲ್ಲಿಯ ಒಂದು ಭಾಗದಲ್ಲಿದೆ . ‘ ಸ್ಟೋನ್ ಆಫ್ ಸೈನ್ ‘ ಎಂದು ಇದರ ಹೆಸರು , ೩ ನೇ ಎಡ್ವರ್ಡನು ಸ್ಕಾಟ್‌ಲೆಂಡಿನ ಅರಸರಿಂದ ಇದನ್ನು ಕಿತ್ತುಕೊಂಡು ಬಂದಂತೆ ಕಾಣುತ್ತದೆ . ಅಂದಿನಿಂದ ಎಲ್ಲ ಸಾಮ್ರಾಟರ ಅಭಿಷೇಕವು ಈ ಕಲ್ಲಿನ ಮೇಲೆಯೇ ಆಗಿದೆ .
ಇ ) ಈ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
1. ಲಂಡನ್ ನಗರ ವೀಕ್ಷಣೆಯಲ್ಲಿ ಲೇಖಕರು ಗುರುತಿಸಿರುವ ವಿಶೇಷತೆಗಳೇನು ?
ಉ : ವಿ.ಕೃ.ಗೋಕಾಕ್ ಅವರು ಲಂಡನ್ ನಗರದಲ್ಲಿ ಹಲವಾರು ವಿಶೇಷತೆಗಳನ್ನು ಕಂಡರು . ಲಂಡನ್ ಪಟ್ಟಣವೆಂದರೆ ಒಂದು ಸ್ವತಂತ್ರ ಜಗತ್ತು . ಅಲ್ಲಿಯ ರಸ್ತೆಗಳಲ್ಲಿ ವ್ಯಾಪಾರವು ತುಂಬಿ ಟಾಮ್ ಬಸ್ಸುಗಳಿಗೆ ಸುಗಮವಾಗಿ ಸಂಚರಿಸಲು ಸಾಧ್ಯವಾಗುವುದಿಲ್ಲ : ಬಹಳ ಹೊತ್ತು ನಡುನಡುವೆ ನಿಲ್ಲಬೇಕಾಗುತ್ತದೆ . ಅದನ್ನು ತಪ್ಪಿಸುವುದಕ್ಕಾಗಿ ಭೂಗರ್ಭದಲ್ಲಿ ಗಾಡಿಯನ್ನು ಓಡಿಸುತ್ತಾರೆ . ‘ ವೂಲವರ್ಥ ‘ ಎಂಬ ಸ್ಟೇಷನರಿ ” ಅಂಗಡಿಯು ವಿಶೇಷವಾಗಿದ್ದು ಅಲ್ಲಿ ಬೂಟು , ಕಾಲುಚೀಲ , ಚಣ್ಣ , ಸಾಬೂನು , ಔಷಧ , ಪುಸ್ತಕ , ಅಡಿಗೆಯ ಪಾತ್ರೆ , ಇಲೆಕ್ಟಿಕ್ ದೀಪದ ಸಾಮಾನು , ಫೋಟೋ , ಅಡವಿಯ ಹೂವು , ಯುದ್ಧಸಾಮಗ್ರಿ ಎಲ್ಲವೂ ದೊರೆಯುತ್ತವೆ . ಎಲ್ಲ ಅಂಗಡಿಗಳಲ್ಲಿ ಸಾಮಾನ್ಯವಾಗಿ ಸ್ತ್ರೀಯರೇ ಕೆಲಸ ಮಾಡುತ್ತಾರೆ . ‘ ಚೇರಿಂಗ್ ಕ್ರಾಸ್ ‘ ಎಂಬ ಓಣಿಯಲ್ಲಿ ಆಂಗ್ಲರ ಸಾಮಾಜ್ಯ ವೈಭವವು ಕಂಡುಬರುತ್ತದೆ . ಇಂಡಿಯಾ ಆಫೀಸಿನ ಹತ್ತಿರ ಆಫ್ರಿಕನ್ ಕಚೇರಿ , ಇನ್ನೊಂದು ವಸಾಹತಿನ ಕಚೇರಿ , ನೂರೆಂಟು ಬ್ಯಾಂಕ್‌ಗಳು ದೊಡ್ಡ ಕಂಪೆನಿಗಳ ಕಚೇರಿಗಳು , ಎಲ್ಲವೂ ದಂಗುಬಡಿಸುವಂತೆ ನೆರೆದಿವೆ . ನಗರದ ಪ್ರತಿಯೊಂದು ಕೂಟಕ್ಕೆ ಒಂದು ಹೆಸರೇನಾದರೂ ಇದ್ದೇ ಇರುತ್ತದೆ . ಅಲ್ಲಿನ ಹೆಣ್ಣುಮಕ್ಕಳು ಧರಿಸುವ ಟೊಪ್ಪಿಗೆಗಳು ವಿಶೇಷವಾಗಿದ್ದು ಒಂದು ಟೊಪ್ಪಿಗೆಯಂತೆ ಇನ್ನೊಂದಿರುವುದಿಲ್ಲ . ‘ ವೆಸ್ಟ್ ಮಿನ್ಸ್ಟರ್ ಆದೆ ‘ ಎಂಬ ಪ್ರಾರ್ಥನಾ ಮಂದಿರ ಕನಿಷ್ಠ ಒಂದು ಸಾವಿರ ವರ್ಷದಷ್ಟು ಮರಾತನವಾದ ಮಂದಿರ . ಅಲ್ಲಿ ಪ್ರಸಿದ್ಧ ಕವಿಗಳ , ಸಾರ್ವಭೌಮರ , ವಿಜ್ಞಾನಿಗಳ ಸ್ಮಾರಕಗಳಿವೆ .ಅಲ್ಲಿನ ಅರಸರ ಅರಮನೆ ವಿಶೇಷವಾಗಿದ್ದು , ಅದಕ್ಕೆ Royal Chapel ( ರಾಜವಿಭಾಗ ) ಎಂದು ಹೆಸರು . ಸಾಮಾಟರ ರಾಜ್ಯಾಭಿಷೇಕವಾಗುವಾಗ ಅವರ ಸಿಂಹಾಸನದ ಮೇಲೆ ಒಂದು ಕಲ್ಲುಪಾಟಿಯನ್ನು ಹಾಕುತ್ತಾರೆ . ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮಾಟರು ಇದರ ಮೇಲೆ ಕೂಡಬೇಕು . ‘ ಸ್ಟೋನ್ ಆಫ್ ಸ್ಕೋನ್ ‘ ಎಂದು ಇದರ ಹೆಸರು .
2. ‘ ವೆಸ್ಟ್ ಮಿನ್‌ಸ್ಟರ್ ಅಭೆ ‘ ಪ್ರಾರ್ಥನಾ ಮಂದಿರ ಒಂದು ವಿಶೇಷ ಸ್ಮಾರಕ ವಿವರಿಸಿ ,
ಉ : ‘ ವೆಸ್ಟ್ ಮಿನ್‌ಸ್ಟರ್ ಅಜೆ ‘ ಎಂಬ ಪ್ರಾರ್ಥನಾ ಮಂದಿರ ಕನಿಷ್ಟ ಒಂದು ಸಾವಿರ ವರ್ಷದಷ್ಟು ಪುರಾತನವಾದ ಮಂದಿರ , ಕೆಲವೊಂದು ಭಾಗಗಳ ದುರಸ್ತಿಯನ್ನು ಬಿಟ್ಟರೆ ಇಂದಿಗೂ ಅಚ್ಚಳಿಯದೆ ಉಳಿದಿದೆ . ಇಲ್ಲಿ ಸಂತ , ಸಾರ್ವಭೌಮರು ಮಲಗಿರುವರು ; ಕವಿಪುಂಗವರು ಒರಗಿರುವರು . ಸತ್ತವರ ಸ್ಮಾರಕವೆಂದು ಇದಕ್ಕಿಂತ ಘನತರವಾದ ಮಂದಿರವು ಜಗತ್ತಿನಲ್ಲಿ ಇನ್ನೆಲ್ಲಿಯೂ ಇರಲಾರದು . ” Mortality behold and fear What a litt’r of tombs is here . ” ( ಮರ್ತ್ಯತ್ವವೇ ಎಷ್ಟು ಗೋರಿಗುಂಪುಗಳಿವೆ ನೋಡಿ ಅಂಜು ) ಎಂದು ೩೦೦ ವರ್ಷಗಳ ಹಿಂದೆ ಬ್ಯೂಮಾಂಟ್ ಎಂಬ ಕವಿಯು ಹಾಡಿದನು , ಗೋಲ್ಡ್‌ಸ್ಟಿತ್ ಹಾಗು ಎಡಿಸನ್ ಎಂಬ ಪ್ರಖ್ಯಾತ ಸಾಹಿತಿಗಳು Visit to West Minster Abbey . ( ವೆಸ್ಟ್‌ಮಿನ್‌ಸ್ಟರ್ ಅಬೆಯ ಸಂದರ್ಶನ ) ಎಂಬ ವಿಷಯದ ಮೇಲೆ ಉತ್ತಮವಾದ ನಿಬಂಧಗಳನ್ನು ಬರೆದಿದ್ದಾರೆ . ಇಂದಿಗೂ ಇದು ಕಬ್ಬಿಗರ ಸ್ಫೂರ್ತಿಯ ತವರುಮನೆಯಾಗಿದೆ . ಹೊರಗಿನಿಂದ ಉತ್ತಮವಾಗಿ ಶೃಂಗರಿಸಲಾಗಿದ್ದು ಒಳಗೆ ಕಟ್ಟಡವು ಭವ್ಯವಾಗಿದೆ . ಅಲ್ಲಿ ಸಾಗುವ ಹಾದಿಯ ಎಡಬಲಕ್ಕೆ ರಾಜಕಾರಣ ಚತುರರ ಶಿಲಾಮೂರ್ತಿಗಳಿವೆ . ಅಲ್ಲಿ Earl of Chatham ( ಅರ್ಲ್ ಆಫ್ ಚಾಟ್ಹಾಂ ) ಗ್ಯಾಡ್‌ಸ್ಟನ್ , ಮಾಲ್ಟ್ ಡಿಸ್‌ರೇಲಿ ಮೊದಲಾದವರ ಪ್ರತಿಮೆಗಳಿವೆ . ಪಾದ್ರಿಯ ಆಸನದ ಕಡೆಗೆ ಉತ್ತಮವಾದ ಕೆತ್ತನೆಯ ಕೆಲಸವು ಕಣ್ಣಗೆ ಬಿತ್ತು , ಬಂಗಾರದ ಬಣ್ಣವನ್ನು ಅದಕ್ಕೆ ಕೊಟ್ಟಿದ್ದರು .
ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,
1 , ” ಹೊತ್ತು ! ಹೊತ್ತು ! ಹೊತ್ತೇ ಹಣ “
ಉ : ಆಯ್ಕೆ : ಈ ವಾಕ್ಯವನ್ನು ವಿ.ಕೃ. ಗೋಕಾಕ ಆವರ ‘ ಸಮುದ್ರದಾಚೆಯಿಂದ ‘ ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ ‘ ಲಂಡನ್ ನಗರ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಲಂಡನ್ ನಗರದ ಬೀದಿಯಲ್ಲಿ ಲಕ್ಷಾನುಲಕ್ಷ ಜನರು ಅವಸರದಿಂದ ಓಡಾಡುತ್ತಿರುವುದನ್ನು ನೋಡಿ time ! timel time is money ( ಹೊತ್ತು ಹೊತ್ತು ಹೊತ್ತೇ ಹಣ ) ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ .
ಸ್ವಾರಸ್ಯ : ಸಮಯಕ್ಕೆ ಬಹಳ ಪ್ರಾಮುಖ್ಯತೆ ಇದೆ . ಅದರಲ್ಲೂ ವಿದೇಶಗಳಲ್ಲಿ ಸಮಯವೇ ಹಣ ಎಂಬ ಮಾತು ಅಕ್ಷರಶಃ ನಿಜವಾಗಿದೆ ಎಂಬ ಮಾತು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
2. ” ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ ”
ಉ : ಆಯ್ಕೆ : ಈ ವಾಕ್ಯವನ್ನು ವಿ.ಕೃ.ಗೋಕಾಕ ಅವರ ‘ ಸಮುದ್ರದಾಚೆಯಿಂದ ‘ ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ ‘ ಲಂಡನ್ ನಗರ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ ; ಲಂಡನ್ ನಗರ ಪ್ರವಾಸ ಕಥನದ ಕೊನೆಯಲ್ಲಿ ಪ್ರವಾಸದ ಶೈಕ್ಷಣಿಕ ಮಹತ್ವವನ್ನು ತಿಳಿಸುವ ಸಂದರ್ಭದಲ್ಲಿ ಪ್ರವಾಸದಿಂದ ತಮ್ಮ ಮನಸ್ಸು ವಿಕಾಸಹೊಂದಿ , ದೃಷ್ಟಿಕೋನ ವಿಶಾಲವಾದ ಬಗ್ಗೆ ‘ ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ ‘ ಎಂದು ಬೇಕನ್ ಹೇಳಿದ ಮಾತನ್ನು ಇಲ್ಲಿ ಲೇಖಕರು ಉದಾಹರಿಸಿದ್ದಾರೆ .
ಸ್ವಾರಸ್ಯ : ‘ ದೇಶ ಸುತ್ತು ಕೋಶ ಓದು ‘ ಎಂಬ ಮಾತಿನಂತೆ ಪರಿಪೂರ್ಣ ಶಿಕ್ಷಣಕ್ಕೆ ಪ್ರವಾಸ ಅತಿ ಮುಖ್ಯ . ಆದ್ದರಿಂದ ಈ ಮಾತು ಪ್ರವಾಸದ ಮಹತ್ವವನ್ನು ತಿಳಿಸುತ್ತದೆ .
3. “ ಯಾರನ್ನು ತುಳಿದರೇನು ! ಎಲ್ಲಿ ಹೆಜ್ಜೆ ಹಾಕಿದರೇನು ? ಎಲ್ಲವೂ ಅಷ್ಟೆ ! ಮಣ್ಣು ಮಣ್ಣು ! ”
ಉ : ಆಯ್ಕೆ : ಈ ವಾಕ್ಯವನ್ನು ವಿ.ಕೃ.ಗೋಕಾಕ ಅವರ ‘ ಸಮುದ್ರದಾಚೆಯಿಂದ ‘ ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ ‘ ಲಂಡನ್ ನಗರ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ‘ ವೆಸ್ಟ್ ಮಿನ್‌ಸ್ಟರ್ ಅಬೆ ‘ ಎಂಬ ಪಾರ್ಥನಾ ಮಂದಿರದ ಆವರಣದಲ್ಲಿ ಸ್ಥಾಪಿಸಲಾಗಿದ್ದ ಕವಿಗಳ , ಸಾರ್ವಭೌಮರ ನೆನಪಿಗಾಗಿ ಕಲ್ಲುಹಾಸುಗಳನ್ನು ಇಟ್ಟಿದ್ದು ಅವುಗಳ ಮೇಲೆ ನಡೆದು ಹೋಗಬೇಕಾಗಿತ್ತು . ಅವುಗಳ ಬಳಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಲೇಖಕರು ” ಯಾರನ್ನು ತುಳಿದರೇನು ? ಎಲ್ಲಿ ಹೆಜ್ಜೆ ಹಾಕಿದರೇನು ? ಎಲ್ಲವೂ ಅಷ್ಟೆ ಮಣ್ಣು , ಮಣ್ಣು ! ಎಂದು ಮನಸ್ಸಿಗೆ ಬಂದಂತೆ ಮನುಷ್ಯನು ನಡೆಯಹತ್ತುತ್ತಾನೆ ” ಎಂದು ಹೇಳಿದ್ದಾರೆ .
ಸ್ವಾರಸ್ಯ : ಸಾಧಕರ ಮಾರ್ಗದಲ್ಲಿ ನಡೆವಾಗ ಮಾನವನ್ನು ದಿಕ್ಕುತಪ್ಪಿದಂತಾದಾಗ “ ಎಲ್ಲವೂ ಅಷ್ಟೇ ! ಬರಿಯ ಮಣ್ಣು ” ಎಂದು ಮನಸ್ಸಿನಲ್ಲಿ ಮೂಡುತ್ತದೆ . ನಶ್ವರವಾಗಿ ಕಾಣುತ್ತದೆ ಎಂಬುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
4. “ ನಿಮ್ಮ ದೇಶದ ಗೌರವವನ್ನು ಕಾಯಿರಿ ! ಇದು ದೊಡ್ಡದಾದ ರಾಷ್ಟ್ರ
” ಉ : ಆಯ್ಕೆ : ಈ ವಾಕ್ಯವನ್ನು ವಿ.ಕೃ. ಗೋಕಾಕ ಅವರ ‘ ಸಮುದ್ರದಾಚೆಯಿಂದ ‘ ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ ಲಂಡನ್ ನಗರ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಲೇಖಕರು ಲಂಡನ್ ನಗರದ ಬೀದಿಬೀದಿಯಲ್ಲೂ ಇತಿಹಾಸ ಪ್ರಸಿದ್ಧ ಪುರುಷರ ಪ್ರತಿಮೆಗಳನ್ನು ನೋಡಿ ‘ ತಮ್ಮ ದೇಶಕ್ಕಾಗಿ ಜೀವನವನ್ನು ಲೆಕ್ಕಿಸದೆ ದುಡಿದವರು ನಿಂತು ಕೈಯೆತ್ತಿ “ ನಿಮ್ಮ ದೇಶದ ಗೌರವವನ್ನು ಕಾಯಿರಿ ! ಇದು ದೊಡ್ಡದಾದ ರಾಷ್ಟ್ರ ” ಎಂದು ಹೇಳುತ್ತಿರುವಂತೆ ತೋರುತ್ತದೆ ‘ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ .
ಸ್ವಾರಸ್ಯ : ರಾಷ್ಟ್ರಕ್ಕಾಗಿ ದುಡಿದ ಮಹನೀಯರಿಗೆ ಲಂಡನ್ ನಗರದಲ್ಲಿ ಅಲ್ಲಿನ ಜನ ತೋರಿಸಿರುವ ಗೌರವಭಾವನೆ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
ಉ ) ಇಲ್ಲಿ ಬಿಟ್ಟಿರುವ ಪದಗಳನ್ನು ಸರಿಯಾದ ಪದಗಳಿಂದ ತುಂಬಿರಿ ,
1. ಲಂಡನ್ ಪಟ್ಟಣವೆಂದರೆ ಒಂದು ಸ್ವತಂತ್ರ ಜಗತ್ತು .
2. ವೂಲವರ್ಥ ಎಂಬುದು ಸ್ಟೇಷನರಿ ಅಂಗಡಿ ,
3. ಮನೆ ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ್ದೇ
4, ಅಬೆಯಲ್ಲಿರುವ ಸಿಂಹಾಸನಕ್ಕೆ ಸ್ಟೋನ್ ಆಫ್ ಸ್ಕೋನ್ ಎಂದು ಹೆಸರು .
ಊ ) ಈ ಪದಗಳನ್ನು ಬಿಡಿಸಿ ಸಂಧಿಯ ಹೆಸರನ್ನು ಬರೆಯಿರಿ ,
1. ಒಮ್ಮೊಮ್ಮೆ = ಒಮ್ಮೆ + ಒಮ್ಮೆ – ಲೋಪಸಂಧಿ
2. ಜಾಗವನ್ನು = ಜಾಗ + ಅನ್ನು – ಆಗಮ ಸಂಧಿ ( ವ್ )
3. ಅತ್ಯಾದರ = ಅತಿ + ಆದರ – ಯಣ್ ಸಂಧಿ
4. ವಾಚನಾಲಯ = ವಾಚನ + ಆಲಯ – ಸವರ್ಣದೀರ್ಘಸಂಧಿ
5. ಸಂಗ್ರಹಾಲಯ = ಸಂಗ್ರಹ + ಆಲಯ – ಸವರ್ಣದೀರ್ಘಸಂಧಿ ,
6 , ಓಣಿಯಲ್ಲಿ = ಓಣಿ + ಅಲ್ಲಿ – ಆಗಮ ಸಂಧಿ
ಭಾಷಾ ಚಟುವಟಿಕೆ
ಕೊಟ್ಟಿರುವ ಸೂಚನೆಯಂತೆ ಉತ್ತರಿಸಿ ,
1. ವೆಸ್ಟ್‌ಮಿನ್‌ಸ್ಟರ್ ಆಬೆ ನೋಡಿಕೊಂಡು ಬಂದೆವು . ( ಭವಿಷ್ಯತ್ ಕಾಲಕ್ಕೆ ಪರಿವರ್ತಿಸಿ )
ಉ : ವೆಸ್ಟ್‌ಮಿನ್‌ಸ್ಟರ್ ಆಜಿ ನೋಡಿಕೊಂಡು ಬರುವವು .
2. ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುವರು . ( ವರ್ತಮಾನಕಾಲಕ್ಕೆ ಪರಿವರ್ತಿಸಿ )
ಉ : ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುತ್ತಾರೆ .
3. ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆಯುತ್ತವೆ . ( ಭೂತಕಾಲಕ್ಕೆ ಪರಿವರ್ತಿಸಿ )
ಉ : ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆತವು .
10ನೇ ತರಗತಿ ಕನ್ನಡ ಲಂಡನ್ ನಗರ ನೋಟ್ಸ್ ಪ್ರಶ್ನೆ ಉತ್ತರಗಳು ,10th Kannada 3rd Lesson Notes, Chapter 3 Question Answer Pdf Download
ಇತರೆ ಪಾಠಗಳು :
Super answer
And thankyou so much