8ನೇ ತರಗತಿ ಸಾರ್ಥಕ ಬದುಕಿನ ಸಾಧಕ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 8 Class Sarthaka Badukina Sadhaka Kannada Notes Question Answer Kseeb Solutions Guide Pdf Download, Sarthaka Badukina Sadhaka Notes
ತರಗತಿ : 8ನೇ ತರಗತಿ
ಪಾಠದ ಹೆಸರು : ಸಾರ್ಥಕ ಬದುಕಿನ ಸಾಧಕ
ಕೃತಿಕಾರರ ಹೆಸರು : ಎನ್. ಎಸ್. ಲಕ್ಷ್ಮೀನಾರಾಯಣಭಟ್ಟ
Table of Contents
ಕೃತಿಕಾರರ ಪರಿಚಯ :
ಎನ್ . ಎಸ್ . ಲಕ್ಷ್ಮೀನಾರಾಯಣಭಟ್ಟ
* ಡಾ . ಎನ್.ಎಸ್.ಲಕ್ಷ್ಮೀನಾರಾಯಣಭಟ್ಟ ಅವರು ದಿನಾಂಕ : ೨೯.೧೦.೧೯೩೬ ರಲ್ಲಿ ಶಿವಮೊಗ್ಗದಲ್ಲಿ ಜನಿಸಿದರು . ತಂದೆ ಶಿವರಾಮ ಭಟ್ಟ , ತಾಯಿ ಮೂಕಾಂಬಿಕೆ .
* ಇವರ ಕವನ ಸಂಕಲನಗಳು : ವೃತ್ತ , ಚಿತ್ರಕೂಟ , ಸುಳಿ , ಇವರ ಪ್ರಸಿದ್ಧ ಧ್ವನಿ ಸುರುಳಿಗಳು : ದೀಪಿಕಾ , ಭಾವಸಂಗಮ , ಬಂದೇಬರತಾವ ಕಾಲ , ಬಾರೋ ವಸಂತ , ಅಭಿನಂದನ , ಭಾವೋತ್ಸವ , ಪ್ರೇಮಧಾರೆ , ಮಕ್ಕಳ ಧ್ವನಿ ಸುರುಳಿಗಳು : ನಂದನ , ಕಿನ್ನರಿ , ನವಿಲುಗರಿ , ಕಿಶೋರಿ ಮುಂತಾದವು .
* ಹತ್ತಾರು ಸಾಹಿತ್ಯ ಸಾಧಕರ ಜೀವನ ಘಟನೆಗಳ ಬಗೆಗೆ ಬೆಳಕು ಚೆಲ್ಲುವ ಸಾಹಿತ್ಯ ರತ್ನ ಸಂಪುಟ ಕೃತಿಯನ್ನು ರಚಿಸಿದ್ದಾರೆ .
* ಪ್ರಶಸ್ತಿ – ಪುರಸ್ಕಾರಗಳು : ೨೦೦೦ ದಲ್ಲಿ ಹೊಸನ್ನಿನಲ್ಲಿ ನಡೆದ ಪಥಮ ಅಮೆರಿಕಾ ವಿಶ್ವ ಕನ್ನಡ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಶಿವರಾಮ ಕಾರಂತ ಪ್ರಶಸ್ತಿ , ರಾಜ್ಯೋತ್ಸದ ಪ್ರಶಸ್ತಿ , ಮಾಸ್ತಿ ಪ್ರಶಸ್ತಿ , ಆಳ್ವಾಸ್ ನುಡಿಸಿರಿ ಪ್ರಶಸ್ತಿ , ಆರ್ಯಭಟ ಪ್ರಶಸ್ತಿ ಡಾ . ಎನ್ . ಎಸ್ . ಲಕ್ಷ್ಮೀನಾರಾಯಣ ಭಟ್ಟ ಅವರ ಸಾಹಿತ್ಯ ರತ್ನ ಸಂಪುಟ ಕೃತಿಯಿಂದ ಪ್ರಸ್ತುತ ಗದ್ಯ ಭಾಗವನ್ನು ಆರಿಸಿಕೊಳ್ಳಲಾಗಿದೆ
Sarthaka Badukina Sadhaka Kannada Notes Question Answer
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ವಿಶ್ವೇಶ್ವರಯ್ಯ ಅವರು ಮೈಸೂರು ಸರ್ಕಾರದಲ್ಲಿ ಅಲಂಕರಿಸಿದ್ದ ಹುದ್ದೆ ಯಾವುದು ?
ಉತ್ತರ : ವಿಶ್ವೇಶ್ವರಯ್ಯ ಅವರು ಮೈಸೂರು ಸರ್ಕಾರದಲ್ಲಿ ದಿವಾನ ಹುದ್ದೆಯನ್ನು ಅಲಂಕರಿಸಿದ್ದರು .
2. ಡಿವಿಜಿ ಅವರ ಮನಸ್ಸಿನ ಮೇಲೆ ಪ್ರಭಾವ ಬೀರಿದವರು ಯಾರು ?
ಉತ್ತರ : ಡಿವಿಜಿ ಅವರ ಮನಸ್ಸಿನ ಮೇಲೆ ಪ್ರಭಾವ ಬೀರಿದವರು ಅಜ್ಜಿ ಸಾಕಮ್ಮ ಮತ್ತು ಸೋದರ ಮಾವ ತಿಮ್ಮಪ್ಪ .
3. ಡಿವಿಜಿ ಅವರು ಸ್ಥಾಪಿಸಿದ ಸಂಸ್ಥೆ ಯಾವುದು ?
ಉತ್ತರ : ಡಿವಿಜಿ ಅವರು ಸ್ಥಾಪಿಸಿದ ಸಂಸ್ಥೆ : ಗೋಖಲೆ ಸಾರ್ವಜನಿಕ ಸಂಸ್ಥೆ
4. ಡಿವಿಜಿ ಅವರ ಹುಟ್ಟೂರು ಯಾವುದು ?
ಉತ್ತರ : ಡಿವಿಜಿ ಅವರ ಹುಟ್ಟೂರು ಕೋಲಾರ ಜಿಲ್ಲೆಗೆ ಸೇರಿದ ಮುಳಬಾಗಿಲು ,
5. ಡಿವಿಜಿ ಅವರನ್ನು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಕಳುಹಿಸಿದವರು ಯಾರು ?
ಉತ್ತರ : ಡಿವಿಜಿ ಅವರನ್ನು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಕಳುಹಿಸಿದವರು ರಸೂಲ್ ಖಾನ್ ,
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ,
1. ಡಿವಿಜಿ ಅವರ ಶ್ರೀಮತಿ ಅವರು ಬಂಧುಗಳ ಮನೆಯಲ್ಲಿ ನಡೆದ ಉತ್ಸವಕ್ಕೆ ಏಕೆ ಹೋಗಿರಲಿಲ್ಲ ?
ಉತ್ತರ : ಡಿವಿಜಿ ಅವರ ಶ್ರೀಮತಿಯವರ ಹತ್ತಿರ ಇದ್ದದ್ದು ಒಂದೇ ಒಂದು ಸೀರೆ , ಆದೂ ಒಂದೆರಡು ಕಡೆ ಹರಿದಿತ್ತು . ಅವರು ಆ ಬಟ್ಟೆಯಲ್ಲಿ ಹೊರಗೆ ಕಾಣಿಸಿಕೊಂಡರೆ ಜನ ಡಿವಿಜಿಯವರನ್ನು ಕುರಿತು ಆಡಿಕೊಳ್ಳುತ್ತಾರೆ . ಬಂಧುಗಳ ಮನೆಗೆ ಹೋಗಿ ಬರುವುದು ಹೇಗೆ ತಮಗೆ ಕರ್ತವ್ಯವೋ ಹಾಗೇ ಡಿವಿಜಿ ಅವರ ಮರ್ಯಾದೆಗೆ ಊನಬಾರದಂತೆ ನಡೆದುಕೊಳ್ಳುವುದೂ ತಮ್ಮ ಕರ್ತವ್ಯ ” ಎಂದು ಅವರು ಬಂಧುಗಳ ಮನೆಯಲ್ಲಿ ನಡೆದ ಉತ್ಸವಕ್ಕೆ ಹೋಗಲಿಲ್ಲ .
2. ವಿಶ್ವೇಶ್ವರಯ್ಯ ಅವರು ತಮ್ಮ ಕಾರ್ಯದರ್ಶಿಗೆ ಏನು ಹೇಳಿದರು ?
ಉತ್ತರ : ವಿಶ್ವೇಶ್ವರಯ್ಯ ಅವರು ತಮ್ಮ ಕಾರ್ಯದರ್ಶಿಗೆ “ ಈ ಮನುಷ್ಯನ ರೀತಿಯೇ ಬೇರೆ . ಇವರಿಗೆ ನಾವು ಹಣ ಕೊಡಲು ಬರುವುದಿಲ್ಲ . ಅದನ್ನು ಹಿಂದಕ್ಕೆ ತೆಗೆದುಕೊಂಡು ಬಿಡಿ ” ಎಂದು ಹೇಳಿದರು .
3. ರಸೂಲ್ ಖಾನ್ ಅವರು ಡಿವಿಜಿ ಅವರ ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಹಾಯವೇನು ?
ಉತ್ತರ : ಗುಂಡಪ್ಪನ ಓದು ಇಲ್ಲಿಗೆ ಸಾಕು ಎಂದು ಅವರ ತಂದೆ , ಆಜ್ಞೆ ತೀರ್ಮಾನಿಸಿದರು . ಆದರೆ ರಸೂಲ್ ಖಾನ್ ” ಗುಂಡಣ್ಣ ತುಂಬ ಚುರುಕಾದ ಹುಡುಗ , ಅವನು ಮುಂದೆ ಓದಲೇಬೇಕು ” ಅಂತ ಹಟ ಹಿಡಿದನು . ಅಲ್ಲದೆ ತನ್ನ ಬಂಡಿಯಲ್ಲಿ ಕೂರಿಸಿಕೊಂಡು ಹೋಗಿ ಗುಂಡಪ್ಪನವರಿಗೆ ರೈಲ್ವೆ ಟಿಕೆಟ್ ಕೊಡಿಸಿ : ಖರ್ಚಿಗೆ ಹಣನೀಡಿ : ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಕಳುಹಿಸಲು ಸಹಾಯ ಮಾಡಿದನು .
4. ಎಲ್ಲರೊಂದಿಗೆ ಹೇಗೆ ಬಾಳಬೇಕೆಂದು ಡಿವಿಜಿ ಹೇಳಿದ್ದಾರೆ ?
ಉತ್ತರ : ಡಿವಿಜಿ ಅವರು ‘ ಬೆಟ್ಟದಡಿಯಲ್ಲಿ ಹುಲ್ಲಾಗಬೇಕು . ಮನೆಗೆ ಮಲ್ಲಿಗೆಯಾಗಬೇಕು , ವಿಧಿ ಹಲವಾರು ಕಷ್ಟಗಳ ಮಳೆಯನ್ನು ನಮ್ಮ ಮೇಲೆ ಸುರಿಯುತ್ತದೆ . ಆಗ ನಾವು ಕಲ್ಲಾಗಿ ಅವನ್ನೆಲ್ಲಾ ಸಹಿಸಬೇಕು , ಹಾಗೆಯೇ ದೀನ – ದುರ್ಬಲರಿಗೆ ಬೆಲ್ಲದಂತೆ ಸಕ್ಕರೆಯಂತೆ ಸಿಹಿಯಾಗಿ , ಹಿತವಾಗಿ , ಎಲ್ಲರೊಳಗೆ ಒಂದಾಗಿರಬೇಕು ‘ ಎಂದು ಹೇಳಿದ್ದಾರೆ .
5. ಡಿವಿಜಿ ಅವರು ಏಕೆ ಸಂಭಾವನೆಯನ್ನು ಪಡೆಯಲಿಲ್ಲ ?
ಉತ್ತರ : “ ವರದಿ ಮಾಡುವುದು ಪತ್ರಕರ್ತರ ಕರ್ತವ್ಯ . ಅದಕ್ಕೆ ಖರ್ಚಾದರೆ ಪತ್ರಿಕೆಯವರು ಕೊಡಬೇಕು . ಸರ್ಕಾರವಲ್ಲ . ಆದ್ದರಿಂದ ತಮಗೆ ಈ ಹಣ ಖಂಡಿತ ಬೇಡವೇ ಬೇಡ ” ಎಂದು ಡಿವಿಜಿಯವರು ಸಂಭಾವನೆ ಪಡೆಯಲಿಲ್ಲ .
ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಏಳು – ಎಂಟು ವಾಕ್ಯಗಳಲ್ಲಿಉತ್ತರಿಸಿ .
1. ಡಿವಿಜಿ ಅವರಿಗೂ ಅವರ ಶ್ರೀಮತಿ ಅವರಿಗೂ ನಡೆದ ಸಂಭಾಷಣೆಯನ್ನು ಬರೆಯಿರಿ .
ಉತ್ತರ : ಒಮ್ಮೆ ಡಿವಿಜಿಯ ಬಂಧುಗಳೊಬ್ಬರ ಮನೆಯಲ್ಲಿ ಒಂದು ಉತ್ಸವ ನಡೆಯಿತು . ಆರತಿ ಅಕ್ಷತೆಯ ಹೊತ್ತಾದರೂ ಹೆಂಡತಿ ಮನೆಯಲ್ಲೇ ಇದ್ದಾರೆ . ಆಗ ಡಿವಿಜಿ ಅವರು ಕೇಳಿದರು .. ಡಿವಿಜಿ : “ ನೀನು ಉತ್ಸವಕ್ಕೆ ಹೋಗುವುದಿಲ್ಲವೇ ? ” ಶ್ರೀಮತಿ : ‘ ಇಲ್ಲ ‘ ‘ ಯಾಕೆ ‘ ? ‘ ಮಕ್ಕಳನ್ನು ಕಳಿಸಿದ್ದೇನಲ್ಲ ‘ ಡಿವಿಜಿ : “ ಅದು ಸರಿ ನೀನೂ ಹೋಗಬೇಕಷ್ಟೆ , ಅವರು ನಮಗೆ ಬಹಳ ಬೇಕಾದವರು . ನೀನು ಹೋಗದಿದ್ದರೆ ಬೇಸರಪಡುವುದಿಲ್ಲವೇ ? ” ಶ್ರೀಮತಿ : ” ಮನೆಯಲ್ಲಿ ಯಾರಾದರೂ ಇರಬೇಕಲ್ಲ ” ಡಿವಿಜಿ : “ ನಾನು ಇರುತ್ತೇನೆ . ನೀನು ಹೋಗಿ ಬಾ . ” ಶ್ರೀಮತಿ : “ ನಾನು ಹೇಳಬಾರದೆಂದಿದ್ದೆ . ನೀವು ಪಟ್ಟುಹಿಡಿದು ನನ್ನ ಬಾಯಿ ಬಿಡಿಸುತ್ತಿದ್ದೀರಿ . ನನ್ನ ಹತ್ತಿರ ಇರುವುದು ಇದೊಂದೇ ಸೀರೆ . ಇದೂ ಒಂದೆರಡು ಕಡೆ ಹರಿದಿದೆ . ನಾನು ಈ ಬಟ್ಟೆಯಲ್ಲಿ ಹೊರಗೆ ಕಾಣಿಸಿಕೊಂಡರೆ ಜನ ನಿಮ್ಮನ್ನು ಕುರಿತು ಆಡಿಕೊಳ್ಳುವುದಿಲ್ಲವೇ ? ಬಂಧುಗಳ ಮನೆಗೆ ಹೋಗಿಬರುವುದು ಹೇಗೆ ನನಗೆ ಕರ್ತವ್ಯವೋ ಹಾಗೇ ನಿಮ್ಮ ಮರ್ಯಾದೆಗೆ ಊನಬಾರದಂತೆ ನಡೆದುಕೊಳ್ಳುವುದೂ ನನಗೆ ಕರ್ತವ್ಯವೇ ಅಲ್ಲವೇ ? ” ಎಂದು ಹೇಳಿದರು .
2. ಡಿವಿಜಿ ಅವರ ವ್ಯಕ್ತಿತ್ವವನ್ನು ಸಂಗ್ರಹಿಸಿ ಬರೆಯಿರಿ .
ಉತ್ತರ : ಡಿವಿಜಿ ಅವರೇನು ದೊಡ್ಡದೊಡ್ಡ ಡಿಗ್ರಿ ಪಡೆದವರಲ್ಲ , ಎಸ್.ಎಸ್.ಎಲ್.ಸಿ , ಕೂಡ ದಾಟದ ಓದು , ಭಾರಿ ಶ್ರೀಮಂತರೋ ಎಂದರೆ ದಿನದಿನದ ಅಗತ್ಯ ಪೂರೈಸಿದ್ದೇ ಹೆಚ್ಚು ಎನ್ನುವಂಥ ಕೆಲಸ , ಸರ್ಕಾರಿ ಉದ್ಯೋಗವಲ್ಲವಾಗಿ ದೊಡ್ಡ ಅಧಿಕಾರದ ಮಾತಂತೂ ಇಲ್ಲವೇ ಇಲ್ಲ . ಆದರೆ ಮೈಸೂರು ರಾಜ್ಯದ ಪರಮೋಚ್ಚ ಅಧಿಕಾರ ಹಿಡಿದಿದ್ದ ಮಿರ್ಜಾ ಸಾಹೇಬರೂ ಅವರ ಸ್ನೇಹ ತಪ್ಪಿತನಿಸಿ ಕಳವಳಗೊಂಡಿದ್ದರು . ಎಷ್ಟೇ ಬಡತನದಲ್ಲಿದ್ದರೂ ಅವರು ಎಂದಿಗೂ ಹಣಕ್ಕಾಗಿ ಆಸೆಪಡಲಿಲ್ಲ . ಇಂಥಾ ಸತ್ವಶಾಲಿ ವ್ಯಕ್ತಿತ್ವ ಡಿವಿಜಿಗೆ ಬಂದದ್ದು ಕೇವಲ ಅವರ ಶೀಲ , ವಿವೇಕ , ನಿಸ್ಪೃಹತೆ , ಸ್ವಯಂ ಆರ್ಜಿತ ಪಾಂಡಿತ್ಯ , ಸಾರ್ವಜನಿಕ ಹಿತಾಸಕ್ತಿಗಳ ಬಲದಿಂದ , ಮಿರ್ಜಾರ ಕಾಲಕ್ಕೆ ಡಿವಿಜಿ ದೊಡ್ಡ ಮೇಧಾವಿಯೆಂದು ವಿದ್ಯಾವಂತರ ವಲಯದಲ್ಲಿ ಹೆಸರಾಗಿದ್ದರು . ಡಿವಿಜಿ ಅವರದ್ದು ಹೋಲಿಕೆ ಇಲ್ಲದ ಅಪೂರ್ವ ವ್ಯಕ್ತಿತ್ವ , ಹೆಸರಾಂತ ಪತ್ರಕರ್ತರಾಗಿದ್ದರು . ಹಿರಿಯ ವೇದಾಂತಿಯಾಗಿದ್ದರು . ರಾಜ್ಯಶಾಸ್ತ್ರದಲ್ಲಿ ಆಳವಾದ ತಿಳಿವಳಿಕೆಯುಳ್ಳವರಾಗಿದ್ದರು . ಅವರನ್ನು ‘ ಮಹಾಧೀಮಂತ ‘ ಎಂಬ ಮಾತಿನಿಂದ ವರ್ಣಿಸಿದರೆ ಸರಿಯಾಗುತ್ತದೆ .
ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .
1. ” ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಲಕ್ಷ್ಮೀನಾರಾಯಣಭಟ್ಟ ಅವರು ಬರೆದಿರುವ ‘ ಸಾಹಿತ್ಯ ರತ್ನ ಸಂಪುಟ ‘ ಕೃತಿಯಿಂದ ಆರಿಸಲಾಗಿರುವ ‘ ಸಾರ್ಥಕ ಬದುಕಿನ ಸಾಧಕ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಲೇಖಕರು ಡಿವಿಜಿ ಅವರ ‘ ಮಂಕುತಿಮ್ಮನ ಕಗ್ಗ ಕೃತಿಯಿಂದ ಆರಿಸಲಾಗಿರುವ ಕವನದ ಸಾಲುಗಳನ್ನು ಉದಾಹರಿಸಲಾಗಿದ್ದು ‘ ಮಾನವನ್ನು ಎಲ್ಲರೊಳಗೆ ಒಂದಾಗಿ ಹೇಗೆ ಬಾಳಬೇಕೆಂಬುದನ್ನು ತಿಳಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ದೀನ – ದುರ್ಬಲ ವರ್ಗದವರ ಕಷ್ಟ – ನೋವುಗಳಿಗೆ ಬೆಲ್ಲ – ಸಕ್ಕರೆಯಂತೆ ಸಿಹಿಯಾಗಿ ಸ್ಪಂದಿಸಬೇಕೆಂಬುದು ಇಲ್ಲಿನ ಸ್ವಾರಸ್ಯವಾಗಿದೆ .
2. “ ನೀನು ಉತ್ಸವಕ್ಕೆ ಹೋಗುವುದಿಲ್ಲವೇ ? “
ಉತ್ತರ : ಆಯ್ಕೆ : ಈ ವಾಕ್ಯವನ್ನು ಲಕ್ಷ್ಮೀ ನಾರಾಯಣಭಟ್ಟ ಅವರು ಬರೆದಿರುವ ‘ ಸಾಹಿತ್ಯ ರತ್ನ ಸಂಪುಟ ‘ ಕೃತಿಯಿಂದ ಆರಿಸಲಾಗಿರುವ ‘ ಸಾರ್ಥಕ ಬದುಕಿನ ಸಾಧಕ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಒಮ್ಮೆ ಡಿವಿಜಿಯ ಬಂಧುಗಳೊಬ್ಬರ ಮನೆಯಲ್ಲಿ ಒಂದು ಉತ್ಸವ ನಡೆಯಿತು . ಆರತಿ ಆಕ್ಷತೆಯ ಹೊತ್ತಾದರೂ ಹೆಂಡತಿ ಮನೆಯಲ್ಲೇ ಇದ್ದಾರೆ . ಆ ಸಂದರ್ಭದಲ್ಲಿ ಡಿವಿಜಿ ಅವರು ಶ್ರೀಮತಿಯವರನ್ನು ಹೀಗೆ ಪ್ರಶ್ನಿಸುತ್ತಾರೆ .
ಸ್ವಾರಸ್ಯ : ಡಿವಿಜಿಯವರು ನಿಜ ಸಂಗತಿ ತಿಳಿಯದೆ ; ತಮ್ಮ ಹೆಂಡತಿ ಬಂಧುಗಳ ಮನೆಗೆ ಹೋಗುವುದಿಲ್ಲವೇ ಎಂದು ಪ್ರಶ್ನಿಸುವುದು ಇಲ್ಲಿನ ಸ್ವಾರಸ್ಯವಾಗಿದೆ .
3. ” ನನ್ನ ಹತ್ತಿರ ಇರುವುದು ಇದೊಂದೇ ಸೀರೆ ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಲಕ್ಷ್ಮೀನಾರಾಯಣಭಟ್ಟ ಅವರು ಬರೆದಿರುವ ‘ ಸಾಹಿತ್ಯ ರತ್ನ ಸಂಪುಟ ‘ ಕೃತಿಯಿಂದ ಆರಿಸಲಾಗಿರುವ ‘ ಸಾರ್ಥಕ ಬದುಕಿನ ಸಾಧಕ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಡಿವಿಜಿ ಅವರ ಹೆಂಡತಿಯವರು ತಾವು ಬಂಧುಗಳ ಮನೆಯ ಉತ್ಸವಕ್ಕೆ ಹೋಗದಿರುವುದಕ್ಕೆ ಕಾರಣಗಳನ್ನು ಕೋಡುತ್ತಾ ಹೋದಾಗ ಡಿವಿಜಿ ಅವರು ಪಟ್ಟುಬಿಡದೆ ಸವಾಲು ಕೊಡುತ್ತಾ “ ನಾನು ಮನೆಯಲ್ಲಿರುತ್ತೇನೆ . ನೀನು ಹೋಗಿಬಾ ” ಎಂದು ಹೇಳಿದ ಸಂದರ್ಭದಲ್ಲಿ ಅವರ ಶ್ರೀಮತಿಯವರು “ ನನ್ನ ಹತ್ತಿರ ಇರುವುದು ಇದೊಂದೇ ಸೀರೆ ” ಎಂದು ನಿಜಸಂಗತಿ ಒಪ್ಪಿಕೊಳ್ಳುತ್ತಾರೆ .
ಸ್ವಾರಸ್ಯ : ಹಣಕ್ಕೆ ಆಸೆ ಪಡದೆ ಬಡತನದಲ್ಲೇ ಸರಳ ಜೀವನ ನಡೆಸಿದ ಡಿವಿಜಿಯವರ ಗೌರವ ಕಾಯಬೇಕೆಂದು ಬಯಸಿದ ಅವರ ಶ್ರೀಮತಿಯವರ ಸದ್ಗುಣ ಈ ಸಂದರ್ಭದಲ್ಲಿ ಸ್ವಾರಸ್ಯವಾಗಿ ಮೂಡಿಬಂದಿದೆ .
4. “ ಏನು ಬಂದಿರಿ ಗುಂಡಪ್ಪ ? ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಲಕ್ಷ್ಮೀನಾರಾಯಣಭಟ್ಟ ಅವರು ಬರೆದಿರುವ ‘ ಸಾಹಿತ್ಯ ರತ್ನ ಸಂಪುಟ ‘ ಕೃತಿಯಿಂದ ಆರಿಸಲಾಗಿರುವ ‘ ಸಾರ್ಥಕ ಬದುಕಿನ ಸಾಧಕ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ದಸರಾ ಉತ್ಸವ ಕುರಿತು ವರದಿ ಮಾಡಿದ್ದಕ್ಕಾಗಿ ಗುಂಡಪ್ಪನವರಿಗೆ ಸರ್ಕಾರದಿಂದ ಸಂಭಾವನೆ ಬಂದಾಗ ಅದನ್ನು ಇಷ್ಟಪಡದೆ ಡಿವಿದೆ ಅವರು ಹಣವನ್ನು ಹಿಂದಿರುಗಿಸಲು ಸರ್.ಎಂ.ವಿಶ್ವೇಶ್ವರಯ್ಯ ಅವರ ಬಳಿಗೆ ಹೋದ ಸಂದರ್ಭದಲ್ಲಿ ಸರ್.ಎಂ.ವಿ ಅವರು ಡಿವಿಜಿಯವರನ್ನು ಆತ್ಮೀಯತೆಯಿಂದ ಹೀಗೆ ಪ್ರಶ್ನಿಸುತ್ತಾರೆ .
ಸ್ವಾರಸ್ಯ : ಮೈಸೂರು ಸರ್ಕಾರದ ದಿವಾನ ಹುದ್ದೆಯಲ್ಲಿದ್ದ ಸರ್.ಎಂ.ವಿಶ್ವೇಶ್ವರಯ್ಯನವರಂತಹವರೂ ಡಿವಿಜಿ ಅವರ ಮೇಲೆ ಹೊಂದಿದ್ದ ವಿಶ್ವಾಸ ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತಗೊಂಡಿದೆ .
೪. “ ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ “
ಉತ್ತರ : ಆಯ್ಕೆ : ಈ ವಾಕ್ಯವನ್ನು ಲಕ್ಷ್ಮೀನಾರಾಯಣಭಟ್ಟ ಅವರು ಬರೆದಿರುವ ‘ ಸಾಹಿತ್ಯ ರತ್ನ ಸಂಪುಟ ‘ ಕೃತಿಯಿಂದ ಆರಿಸಲಾಗಿರುವ ‘ ಸಾರ್ಥಕ ಬದುಕಿನ ಸಾಧಕ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಲೇಖಕರು ಡಿವಿಜಿ ಅವರ ‘ ಮಂಕುತಿಮ್ಮನ ಕಗ್ಗ ‘ ಕೃತಿಯಿಂದ ಆರಿಸಲಾಗಿರುವ ಕವನದ ಸಾಲುಗಳನ್ನು ಉದಾಹರಿಸಿದ್ದು ‘ ಭುಮಿಯಲ್ಲಿ ಬೀಜ ಮೊಳಕೆ ಒಡೆದು ಬೆಳೆದು ಫಲಬಿಟ್ಟರೂ ಇಡೀ ಭೂಮಿಗೆ ಬೆಳಕನ್ನ ಕೊಡುವ ಸೂರ್ಯಚಂದ್ರರು ತಾವು ಬೆಳಕು ನೀಡಿದರೂ ಗರ್ವ ಪಡುವುದಿಲ್ಲ . ಆದ್ದರಿಂದ ಗರ್ವ ಪಡುವ ಮಾನವನನ್ನು ಕವಿ ನಿನ್ನ ತುಟಿಗಳನ್ನು ಹೊಲಿದಿಕೋ ‘ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ .
ಸ್ವಾರಸ್ಯ : ಸ್ವಲ್ಪ ಮಾಡಿದರೂ ಏನೋ ದೊಡ್ಡದ್ದನ್ನು ಮಾಡಿದೆನೆಂದು ಗರ್ವ ಪಡುವ ಮಾನವನನ್ನು ನಿನ್ನ ಬಾಯಿಮುಚ್ಚು ಎಂದು ಪರೋಕ್ಷವಾಗಿ , ಸ್ವಾರಸ್ಯವಾಗಿ ಹೇಳಲಾಗಿದೆ .
ಉ ] ಬಿಟ್ಟ ಸ್ಥಳ ತುಂಬಿ ,
೧. ಮೈಸೂರು ರಾಜ್ಯದ ಪರಮೋಚ್ಚ ಅಧಿಕಾರ ಹಿಡಿದಿದ್ದವರು ಮಿರ್ಜಾ ಇಸ್ಮಾಯಿಲ್
೨. ಮಿರ್ಜಾ ಅವರ ಕಾಲಕ್ಕೆ ಡಿವಿಜೆ ದೊಡ್ಡ ಮೇಧಾವಿ ಎಂದು ವಿದ್ಯಾವಂತರ ವಲಯದಲ್ಲಿ ಹೆಸರಾಗಿದ್ದರು .
೩. ಮುಳಬಾಗಿಲು ಕೋಲಾರ ಜಿಲ್ಲೆಗೆ ಸೇರಿದೆ .
೪. ಡಿವಿಜಿ ಅವರು ಮುಳಬಾಗಿಲಿನ ಆಂಗ್ಲೋ ವರ್ನಾಕ್ಯುಲರ್ ಶಾಲೆಯಲ್ಲಿ ಲೋಯರ್ ಸೆಕೆಂಡರಿ ಪೂರ್ತಿಗೊಳಿಸಿದರು .
೫.ಡಿವಿಜಿ ಅವರು ಕನ್ನಡ ಸಾರಸ್ವತ ಲೋಕದ ಭೀಷ್ಮ ಎಂದು ಕರೆಸಿಕೊಂಡರು .
8 Class Sarthaka Badukina Sadhaka Kannada Notes Question Answer Pdf
ಇತರೆ ಪಾಠಗಳು :
ನೀರು ಕೊಡದ ನಾಡಿನಲ್ಲಿ ಕನ್ನಡ ನೋಟ್ಸ್