9ನೇ ತರಗತಿ ನನ್ನಾಸೆ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 9th Standard Nannase Kannada Notes Pdf Question Answer Download,
ತರಗತಿ : 9ನೇ ತರಗತಿ
ಪಾಠದ ಹೆಸರು : ನನ್ನಾಸೆ
Table of Contents
9th Standard Nannase Kannada Notes Question Answer
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
1. ನನ್ನಾಸೆ ಕವನದಲ್ಲಿ ಕವಯಿತ್ರಿಯವರ ಆಸೆಗಳೇನು ?
ಉತ್ತರ : ನನ್ನಾಸೆ ಕವನದಲ್ಲಿ ಕವಯಿತ್ರಿಯವರು ತಾವು ಬೆಳಕು ನೀಡುವ ಬತ್ತಿಯಾಗಬೇಕು . ಮರವಾಗಿ ಪುಣ್ಯವಂತರಿಗೆ ನೆರಳಾಗಬೇಕು , ದಾಹಗೊಂಡವರ ತನುವ ತಣಿಸುವಂತಾಗಲು ಸದಾ ಚಿಮ್ಮುವ ಚಿಲುಮೆಯಾಗಬೇಕು . ಆಮ್ಮನ ಕಂಠದ ಜೋಗುಳವಾಗಬೇಕು . ಮಾನವನ ಅಜ್ಞಾನತೆ ತೊಲಗಿಸಲು ವಾಗ್ಗೇವಿಯ ಕೈಯಲ್ಲಿಯ ಗ್ರಂಥವಾಗಿ ಧನ್ಯವಾಗಬೇಕು . ಮುಸ್ಸಂಜೆ ಹೊಸ್ತಿಲಲ್ಲಿ ದಿಕ್ಕಿಲ್ಲದೆ ನರಳಾಡುವ ದೀನರ ಊರುಗೋಲು ನಾನಾಗಬೇಕು. ‘ ಎಂದು ಆಶಿಸಿದ್ದಾರೆ .
2. ಅಜ್ಞಾನ ತೊಲಗಿಸಲು ಕವಯಿತ್ರಿ ಏನಾಗ ಬಯಸಿದ್ದಾರೆ ?
ಉತ್ತರ : ಅಜ್ಞಾನ ತೊಲಗಿಸಲು ಕವಯಿತ್ರಿ ವಾಗ್ಗೇವಿಯ ಕೈಯಲ್ಲಿಯ ಗ್ರಂಥವಾಗ ಬಯಸಿದ್ದಾರೆ .
3. ಸದಾ ಚಿಮ್ಮುವ ಚಿಲುಮೆಯಾಗಬೇಕು , ಏಕೆ ?
ಉತ್ತರ : ದಾಹಗೊಂಡವರ ತನುವ ತಣಿಸುವಂತಾಗಲು ಸದಾ ಚಿಮ್ಮುವ ಚಿಲುಮೆಯಾಗಬೇಕು ಎಂದಿದ್ದಾರೆ .
9th Standard Nannase Kannada Notes Pdf Question Answer
ಇತರೆ ಪಾಠಗಳು:
ಗುಣಸಾಗರಿ ಪಂಡರಿಬಾಯಿ ಕನ್ನಡ ನೋಟ್ಸ್