8ನೇ ತರಗತಿ ವಚನಾಮೃತ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 8th Class Vachanamrutha Kannada Notes, Vachanamrutha 8th Kannada Poem Questions and Answers Pdf Download
ತರಗತಿ : 8ನೇ ತರಗತಿ
ಪದ್ಯದ ಹೆಸರು : ವಚನಾಮೃತ
Table of Contents
ಕೃತಿಕಾರರ ಪರಿಚಯ :
ಆಯ್ದಕ್ಕಿ ಮಾರಯ್ಯ : ಈತನ ಕಾಲ ಕ್ರಿ.ಶ.ಸು ೧೧೬೦ , ಸ್ಥಳ : ರಾಯಚೂರು ಜಿಲ್ಲೆಯ ಅಮರೇಶ್ವರ , ಇವನು ಆಯ್ದಕ್ಕಿ ಲಕ್ಕಮ್ಮನ ಪತಿ , ಈತ ಆಯ್ದಕ್ಕಿ ಮಾರಯ್ಯ ಎಂದೇ ಪ್ರಸಿದ್ಧ , ಈವರೆಗೆ ಈತನ ಸುಮಾರು ೩೨ ವಚನಗಳು ದೊರೆತಿವೆ . ಈತನ ಅಂಕಿತ ‘ ಅಮರೇಶ್ವರಲಿಂಗ , ಬೀದಿಯಲ್ಲಿ ಬಿದ್ದ ಅಕ್ಕಿಯನ್ನು ಆಯ್ದುತಂದು ದಾಸೋಹ ಮಾಡುವುದೇ ಅವರ ಕಾಯಕವಾಗಿತ್ತು .
ಅಮುಗೆರಾಯಮ್ಮ : ಈಕೆಯ ಕಾಲ ಕ್ರಿ.ಶ. ಸುಮಾರು ೧೧೬೦ , ಸ್ಥಳ : ಹನ್ನೆರಡನೆಯ ಶತಮಾನದ ವಚನಕಾರ್ತಿಯರಲ್ಲಿ ಒಬ್ಬಳು . ಈಕೆ ಸೊನ್ನಲಿಗೆಯವಳು . ( ಈಗಿನ ಸೊಲ್ಲಾಪುರ ) , ಈಕೆಯ ಪತಿ ಅಮುಗೆ ದೇವಯ್ಯ , ನೇಯ್ಕೆ ಇವರ ಕಾಯಕ , ಈಕೆಯ ಅಂಕಿತನಾಮ ‘ ಅಮುಗೇಶ್ವರ ‘ .
ಶಿವಶರಣೆ ಲಿಂಗಮ್ಮ : ಈಕೆಯ ಕಾಲ ಕ್ರಿ.ಶ. ಸುಮಾರು ೧೧೬೦ , ಹನ್ನೆರಡನೆಯ ಶತಮಾನದ ವಚನಕಾರ್ತಿ ಯರಲ್ಲಿ ಒಬ್ಬಳು , ಕ್ಷೌರಿಕ ವೃತ್ತಿಯ ಹಡಪದ ಅಪ್ಪಣ್ಣನವರ ಧರ್ಮಪತ್ನಿ , ಈಕೆಯ ಅಂಕಿತನಾಮ ‘ ಅಪ್ಪಣ್ಣಪ್ರಿಯ ಚನ್ನಬಸವಣ್ಣ ‘ ಎಂಬುದು . [ ಇಲ್ಲಿರುವ ವಚನಗಳನ್ನು ಎಂ.ಎಂ.ಕಲಬುರ್ಗಿ ಅವರು ಸಂಪಾದಿಸಿರುವ ‘ ಸಮಗ್ರ ವಚನ ಸಂಪುಟ ‘ ಕೃತಿಯಿಂದ ಆರಿಸಿಕೊಳ್ಳಲಾಗಿದೆ .
Vachanamrutha Kannada Notes Question Answer
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ಆಯ್ದಕ್ಕಿ ಮಾರಯ್ಯನ ಪ್ರಕಾರ ಕೈಲಾಸ ಯಾವುದು ?
ಉತ್ತರ : ಆಯ್ದಕ್ಕಿ ಮಾರಯ್ಯನ ಪ್ರಕಾರ ಕಾಯಕವೇ ಕೈಲಾಸ
2. ಕಾಗೆಯು ಏನಾಗಲು ಸಾಧ್ಯವಿಲ್ಲ ?
ಉತ್ತರ : ಕಾಗೆಯು ಕೋಗಿಲೆಯಾಗಲು ಸಾಧ್ಯವಿಲ್ಲ .
3. ಶರಣರು ಕೆಡಿಸುವ ನಿದ್ದೆಯನ್ನು ಹೇಗೆ ಗೆದ್ದಿದ್ದಾರೆ ?
ಉತ್ತರ : ಶರಣರು ಕೆಡಿಸುವ ನಿದ್ದೆಯನ್ನು ಯೋಗ ಸಮಾಧಿಯನ್ನಾಗಿ ಮಾಡಿಕೊಂಡು ಗೆದ್ದಿದ್ದಾರೆ .
4. ಕಲಿಯುಗದಲ್ಲಿ ಗುರುವು ಶಿಷ್ಯನಿಗೆ ಹೇಗೆ ಬುದ್ಧಿಯನ್ನು ಹೇಳಬೇಕಿದೆ ?
ಉತ್ತರ : ಕಲಿಯುಗದಲ್ಲಿ ಗುರುವು ಶಿಷ್ಯನಿಗೆ ವಂದಿಸಿ ಬುದ್ಧಿಯನ್ನು ಹೇಳಬೇಕಿದೆ .
5. ಕಾಯಕದಲ್ಲಿ ನಿರತನಾದವನು ಯಾವುದನ್ನು ಮರೆಯಬೇಕು ?
ಉತ್ತರ : ಕಾಯಕದಲ್ಲಿ ನಿರತನಾದವನು ಗುರು ದರ್ಶನ , ಲಿಂಗಪೂಜೆಯನ್ನಾದರೂ ಮರೆಯಬೇಕು .
6. ಯಾರ ಮುಖವನ್ನು ನೋಡಲಾಗದು ?
ಉತ್ತರ : ನಾಮವನ್ನು ಹಾಕಿಕೊಂಡು ಜ್ಞಾನಿಯಂತೆ ಮೆರೆಯುವ ದಡ್ಡರ ಮುಖವನ್ನು ನೋಡಲಾಗದು .
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ ,
1. ಅರಿವು , ಆಚಾರ , ಸಮ್ಯಜ್ಞಾನದ ಬಗ್ಗೆ ಅಮುಗೆರಾಯಮ್ಮನ ಅನಿಸಿಕೆ ಏನು ?
ಉತ್ತರ : ಕಾಗೆಯ ಮರಿ ಎಂದಿಗೂ ಕೋಗಿಲೆ ಆಗಲು ಸಾಧ್ಯವಿಲ್ಲ . ಆಡಿನ ಮರಿ ಆನೆಯಾಗಲು ಸಾಧ್ಯವಿಲ್ಲ . ಕಾಡುನಾಯಿ ( ಸೀಳು ( ನಾಯಿ ) ಸಿಂಹದ ಮರಿಯಾಗಲು ಸಾಧ್ಯವಿಲ್ಲ . ಅರಿವು , ಸದಾಚಾರ ಹಾಗು ಒಳ್ಳೆಯ ವಿವೇಕ ಇಲ್ಲದೆ ಕೇವಲ ನಾಮವನ್ನು ಹಾಕಿಕೊಂಡು ಜ್ಞಾನಿಯಂತೆ ಮೆರೆಯುವವರು ದಡ್ಡರು . ಅಂತಹವರ ಮುಖ ನೋಡಲು ಅಸಹ್ಯವೆನಿಸುತ್ತದೆ ಎಂದು ಅಮುಗೆ ರಾಯಮ್ಮ ಜ್ಞಾನವಿಲ್ಲದ ಆಜ್ಞಾನಿಗಳ ಡಾಂಭಿಕ ಆಚರಣೆಗೆ ಮರುಳಾಗಬಾರದು ಎಂದು ಸಂದೇಶ ನೀಡಿದ್ದಾರೆ .
2. ಬುದ್ಧಿ ಹೀನರು ಹೇಗೆ ವಿದ್ಯೆಯನ್ನು ಸಂಪಾದಿಸುತ್ತಾರೆ ?
ಉತ್ತರ : ತಮ್ಮ ಮನವನ್ನು ಗೆದ್ದೆವೆಂದು ಯೋಗಿಯ ಸೋಗು ಹಾಕುವ ಬುದ್ಧಿಹೀನರಿಗೂ ನಿಜವಾಗಿ ತಮ್ಮ ಮನವನ್ನು ಗೆದ್ದ ಜಂಗಮರಿಗೂ ಇರುವ ವ್ಯತ್ಯಾಸವನ್ನು ಶಿವಶರಣೆ ಲಿಂಗಮ್ಮ ತಿಳಿಸುತ್ತಾ ಕೆಲವು ಬುದ್ಧಿ ಹೀನರು ಕಾಯಕ ಮಾಡದೆ ಕೇವಲ ದೈಹಿಕ ದಂಡನೆ ಮಾಡಿ , ಮನವನ್ನು ಶುದ್ಧಮಾಡಿಕೊಳ್ಳದೆ : ನಿದ್ದೆಗೆಟ್ಟು ವಿದ್ಯೆ ಕಲಿತಿರುವೆನೆಂದು ಹೇಳಿಕೊಳ್ಳುತ್ತಾರೆ .
3. ಶ್ರೀಗುರುವು ಶಿಷ್ಯರಿಗೆ ಬುದ್ಧಿ ಕಲಿಸುವುದು ಕಾಲಕಟ್ಟಳೆಗೆ ಹೇಗೆ ಒಳಪಟ್ಟಿದೆ ? ವಿವರಿಸಿ
ಉತ್ತರ : ಕೃತಯುಗದಲ್ಲಿ ಗುರುವು ಶಿಷ್ಯನಿಗೆ ಬಡಿದು ಬುದ್ದಿಯನ್ನು ಕಲಿಸಿದರೆ ಅದನ್ನು ಶಿಷ್ಯನು ಮಹಾ ಪ್ರಸಾದವೆಂದು ಸ್ವೀಕರಿಸಿದನು . ತ್ರೇತಾಯುಗದಲ್ಲಿ ಬೈದು ಬುದ್ಧಿಯನ್ನು ಕಲಿಸಿದರೆ ಅದನ್ನು ಮಹಾ ಪ್ರಸಾದವೆಂದು ಸ್ವೀಕರಿಸಿದನು . ದ್ವಾಪರ ಯುಗದಲ್ಲಿ ಗದರಿಸಿ , ಬುದ್ಧಿಯನ್ನು ಕಲಿಸಿದರೆ ಆಗ ಅದನ್ನು ಮಹಾ ಪ್ರಸಾದವೆಂದು ಸ್ವೀಕರಿಸಿದನು . ಆದರೆ ಈ ಕಲಿಯುಗದಲ್ಲಿ ಗುರುವು ಶಿಷ್ಯನಿಗೆ ವಂದಿಸಿ ಬುದ್ಧಿಯನ್ನು ಕಲಿಸಿದರೆ ಮಾತ್ರ ಅದನ್ನು ಶಿಷ್ಯನು ಮಹಾ ಪ್ರಸಾದವೆಂದು ಸ್ವೀಕರಿಸುತ್ತಾನೆ .
4. ಆಯ್ದಕ್ಕಿ ಮಾರಯ್ಯನು ಕಾಯಕದ ಮಹತ್ವವನ್ನು ಹೇಗೆ ನಿರೂಪಿಸಿದ್ದಾನೆ ?
ಉತ್ತರ : ಕಾಯಕ ನಿಷ್ಟೆ ಹೇಗಿರಬೇಕೆಂದರೆ ಕಾಯಕದಲ್ಲಿ ತೊಡಗಿದ್ದಾಗ ಗುರುದರ್ಶನ ಅಥವಾ ಲಿಂಗಪೂಜೆಯನ್ನಾದರೂ ಮರೆಯಬೇಕು . ಜಂಗಮ ಮುಂದೆ ನಿಂತಿದ್ದರೂ ಮೊದಲು ಕಾಯಕ ಮಾಡುವುದಕ್ಕೆ ಗಮನ ನೀಡಬೇಕು . ಏಕೆಂದರೆ ಕಾಯಕವು ಗುರು , ಲಿಂಗ , ಜಂಗಮಗಳನ್ನು ಮೀರಿದ್ದು , ‘ ಕಾಯಕವೇ ಕೈಲಾಸ ‘ ಎಂದು ಭಾವಿಸಿ ದೇವರಿಗಿಂತ ಕಾಯಕಕ್ಕೆ ಮೊದಲ ಪ್ರಾಶಸ್ತ್ರ ನೀಡಬೇಕೆಂದು ಆಯ್ದಕ್ಕಿ ಮಾರಯ್ಯನು ಕಾಯಕದ ಮಹತ್ವವನ್ನು ತಿಳಿಸಿದ್ದಾನೆ .
5. ಶಿವಶರಣರು ಜಗವನ್ನೇ ಗೆದ್ದಿಹ ವಿಚಾರದಲ್ಲಿ ಲಿಂಗಮ್ಮನ ಅನಿಸಿಕೆಯೇನು ?
ಉತ್ತರ : ಕಾಮ – ಕ್ರೋಧ – ಲೋಭ – ಮೋಹ – ಮದ – ಮತ್ಸರಗಳನ್ನು ಜಯಿಸಿ ; ಆಸೆ , ರೋಷ , ಜಗದ ಮೋಹವನ್ನು ಬಿಟ್ಟು ಕಾಯಕವನ್ನೆ ಪ್ರಸಾದವೆಂದು ತಿಳಿದು ; ನಿದ್ದೆಯನ್ನೆ ಯೋಗ ಸಮಾಧಿಯನ್ನಾಗಿ ಮಾಡಿಕೊಂಡು ; ಸುಖವನ್ನು ತೊರೆದು ಜಗತ್ತನ್ನೇ ಗೆದ್ದವರೆಂದರೆ ಶರಣರು , ಅಂತಹವರನ್ನು ಬುದ್ಧಿ ಹೀನರು ಹೇಗೆ ತಾನೆ ಅರಿಯಲು ಸಾಧ್ಯ ಎಂದು ಲಿಂಗಮ್ಮನವರು ಅಭಿಪ್ರಾಯಪಟ್ಟಿದ್ದಾರೆ .
ಕೊಟ್ಟಿರುವ ಪ್ರಶ್ನೆಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,
1. ವಚನಾಮೃತದಲ್ಲಿ ವ್ಯಕ್ತವಾಗಿರುವ ‘ ಕಾಯಕ ತತ್ವದ ಮಹತ್ವವನ್ನು ವಿವರಿಸಿ ,
ಉತ್ತರ : ಕಾಯಕ ನಿಷ್ಟೆ ಹೇಗಿರಬೇಕೆಂದರೆ ಕಾಯಕದಲ್ಲಿ ತೊಡಗಿದ್ದಾಗ ಗುರುದರ್ಶನವನ್ನಾದರೂ ಲಿಂಗಪೂಜೆಯನ್ನಾದರೂ ಮರೆಯಬೇಕು . ವಚನಕಾರರು ಜಂಗಮರಿಗೆ ಬಹಳ ಉನ್ನತ ಸ್ಥಾನವನ್ನು ನೀಡಲಾಗಿದ್ದು ಅಂತಹ ಜಂಗಮರು ಮುಂದೆ ನಿಂತಿದ್ದರೂ ಮೊದಲು ಕಾಯಕ ಮಾಡುವುದಕ್ಕೆ ಗಮನ ನೀಡಬೇಕು . ಏಕೆಂದರೆ ಕಾಯಕವು ಗುರು , ಲಿಂಗ , ಜಂಗಮಗಳನ್ನು ಮೀರಿದ್ದು , ‘ ಕಾಯಕವೇ ಕೈಲಾಸ ‘ ಎಂದು ಭಾವಿಸಿ ದೇವರಿಗಿಂತ ಕಾಯಕಕ್ಕೆ ಮೊದಲ ಪ್ರಾಶಸ್ತ್ರ ನೀಡಬೇಕೆಂದು ಆಯ್ದಕ್ಕಿ ಮಾರಯ್ಯ ಹೇಳಿದ್ದಾರೆ . ಕೆಲವರು ಕಾಯಕ ಮಾಡದೆ ಕೇವಲ ದೈಹಿಕ ದಂಡನೆ ಮಾಡಿ , ಮನವನ್ನು ಶುದ್ಧಮಾಡಿಕೊಳ್ಳದೆ : ನಿದ್ದಗೆಟ್ಟು ವಿದ್ಯೆ ಕಲಿತಿರುವೆನೆಂದು ಹೇಳಿಕೊಳ್ಳುತ್ತಾರೆ . ಆದರೆ ನಿಜವಾಗಿ ಕಾಯಕವನ್ನೆ ಪ್ರಸಾದವೆಂದು ತಿಳಿದು , ಸುಖವನ್ನು ತೊರೆದು ಜಗತ್ತನ್ನೇ ಗೆದ್ದವರೆಂದರೆ ಶರಣರು ಎಂದು ಶಿವಶರಣೆ ಲಿಂಗಮ್ಮ ಅಭಿಪ್ರಾಯಪಟ್ಟಿದ್ದಾರೆ .
ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,
1. “ ಕಾಯಕವನೆ ಪ್ರಸಾದ ಕಾಯಕ ಮಾಡಿ ಸಲಹಿದರು ”
ಉತ್ತರ : ಆಯ್ಕೆ : – ಈ ವಾಕ್ಯವನ್ನು ಎಂ.ಎಂ.ಕಲಬುರ್ಗಿ ಅವರು ಸಂಪಾದಿಸಿರುವ ‘ ಸಮಗ್ರ ವಚನ ಸಂಪುಟ ‘ ಕೃತಿಯಿಂದ ಆರಿಸಲಾದ ಶಿವಶರಣೆ ಲಿಂಗಮ್ಮ ಅವರ ವಚನದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : – ತಮ್ಮ ಮನವನ್ನು ಗೆದ್ದೆವೆಂದು ಯೋಗಿಯ ಸೋಗು ಹಾಕುವ ಬುದ್ಧಿಹೀನರಿಗೂ ನಿಜವಾಗಿ ತಮ್ಮ ಮನವನ್ನು ಗೆದ್ದ ಜಂಗಮರಿಗೂ ಇರುವ ವ್ಯತ್ಯಾಸವನ್ನು ತಿಳಿಸುವ ಸಂದರ್ಭದಲ್ಲಿ ಶಿವಶರಣೆ ಲಿಂಗಮ್ಮ ಅವರು ಈ ಮಾತನ್ನು ಹೇಳಿದ್ದಾರೆ . ಕೆಲವರು ಕಾಯಕ ಮಾಡದೆ ಕೇವಲ ದೈಹಿಕ ದಂಡನೆ ಮಾಡಿ , ಮನವನ್ನು ಶುದ್ಧಮಾಡಿಕೊಳ್ಳದೆ : ನಿದ್ದಗೆಟ್ಟು ವಿದ್ಯೆ ಕಲಿತಿರುವೆನೆಂದು ಹೇಳಿಕೊಳ್ಳುತ್ತಾರೆ . ಆದರೆ ನಿಜವಾಗಿ ಕಾಯಕವನ್ನೆ ಪ್ರಸಾದವೆಂದು ತಿಳಿದು ; ಸುಖವನ್ನು ತೊರೆದು ಜಗತ್ತನ್ನೇ ಗೆದ್ದವರೆಂದರೆ ಶರಣರು ಎಂದು ಶಿವಶರಣೆ ಲಿಂಗಮ್ಮ ಅಭಿಪ್ರಾಯಪಟ್ಟಿದ್ದಾರೆ .
ಸ್ವಾರಸ್ಯ : ದೈಹಿಕ ದಂಡನೆ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳುವುದರ ಬದಲು ಯಾವುದಾದರೊಂದು ಕಾಯಕ ಮಾಡಿದರೆ ಕೆಲಸದ ಜೊತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ ಎಂಬುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ .
2 , “ ನಾಮವನೊತ್ತುಕೊಂಡು ತಿರುಗುವ ಗಾವಿಲರ ಮುಖವ ನೋಡಲಾಗದು “
ಉತ್ತರ : ಆಯ್ಕೆ : – ಈ ವಾಕ್ಯವನ್ನು ಎಂ.ಎಂ.ಕಲಬುರ್ಗಿ ಅವರು ಸಂಪಾದಿಸಿರುವ ‘ ಸಮಗ್ರ ವಚನ ಸಂಪುಟ ‘ ಕೃತಿಯಿಂದ ಆರಿಸಲಾದ ಅಮುಗೆ ರಾಯಮ್ಮ ಅವರ ವಚನದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : – ಡಾಂಭಿಕ ಆಚರಣೆ ಮತ್ತು ಹುಟ್ಟುಗುಣವನ್ನು ಬದಲಿಸಲು ಸಾಧ್ಯವಿಲ್ಲ ಎಂದು ತಿಳಿಸುವ ಸಂದರ್ಭದಲ್ಲಿ ಅಮುಗೆ ರಾಯಮ್ಮ ಈ ಮಾತನ್ನು ಹೇಳಿದ್ದಾರೆ . ಕಾಗೆಯ ಮರಿ ಕೋಗಿಲೆ ಆಗಲು , ಆಡಿನ ಮರಿ ಆನೆಯಾಗಲು , ಕಾಡುನಾಯಿ ( ಸೀಳು ನಾಯಿ ) ಸಿಂಹದ ಮರಿಯಾಗಲು ಸಾಧ್ಯವಿಲ್ಲ . ಅರಿವು , ಸದಾಚಾರ ಹಾಗು ಒಳ್ಳೆಯ ವಿವೇಕ ಇಲ್ಲದೆ ಕೇವಲ ನಾಮವನ್ನು ಹಾಕಿಕೊಂಡು ಜ್ಞಾನಿಯಂತೆ ಮೆರೆಯುವವರು ದಡ್ಡರು . ಅಂತಹವರ ಮುಖ ನೋಡಲು ಸಾಧ್ಯವಾಗದು ಎಂದು ರಾಯಮ್ಮ ಹೇಳಿದ್ದಾರೆ .
ಸ್ವಾರಸ್ಯ : ಹುಟ್ಟುಗುಣ ಸುಟ್ಟರೂ ಹೋಗದು ಎಂಬುದನ್ನು ಇಲ್ಲಿ ಸ್ವಾರಸ್ಯಕರವಾಗಿ ಹೇಳಲಾಗಿದೆ .
1. “ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆ ”
ಉತ್ತರ : ಆಯ್ಕೆ : – ಈ ವಾಕ್ಯವನ್ನು ಆರಿಸಲಾದ ಅಲ್ಲಮಪ್ರಭುವಿನ ವಚನದಿಂದ ತೆಗೆದುಕೊಳ್ಳಲಾಗಿದೆ . ಎಂ.ಎಂ.ಕಲಬುರ್ಗಿ ಅವರು ಸಂಪಾದಿಸಿರುವ ‘ ಸಮಗ್ರ ವಚನ ಸಂಪುಟ ‘ ಕೃತಿಯಿಂದ ಸಂದರ್ಭ : – ವಿವಿಧ ಯುಗಗಳ ಕಾಲಘಟ್ಟಗಳಲ್ಲಿ ಗುರುಗಳು ಶಿಷ್ಯರಿಗೆ ಶಿಕ್ಷಣ ನೀಡುತ್ತಿದ್ದ ಬಗೆಯನ್ನು ವರ್ಣಿಸುವ ಸಂದರ್ಭದಲ್ಲಿ ಅಲ್ಲಮಪ್ರಭು ಈ ಮಾತನ್ನು ಹೇಳಿದ್ದಾರೆ . ಕೃತಯುಗದಲ್ಲಿ ಗುರುವು ಶಿಷ್ಯನಿಗೆ ಬಡಿದು , ತ್ರೇತಾಯುಗದಲ್ಲಿ ಬೈದು , ದ್ವಾಪರ ಯುಗದಲ್ಲಿ ಗದರಿಸಿ , ಬುದ್ಧಿಯನ್ನು ಕಲಿಸಿದರೆ ಆಗ ಅದನ್ನು ಮಹಾ ಪ್ರಸಾದವೆಂದು ಸ್ವೀಕರಿಸಿದನು . ಆದರೆ ಈ ಕಲಿಯುಗದಲ್ಲಿ ಗುರುವು ಶಿಷ್ಯನಿಗೆ ವಂದಿಸಿ ಬುದ್ಧಿಯನ್ನು ಕಲಿಸಿದರೆ ಮಾತ್ರ ಅದನ್ನು ಶಿಷ್ಯನು ಮಹಾ ಪ್ರಸಾದವೆಂದು ಸ್ವೀಕರಿಸುತ್ತಾನೆ ಎಂದು ಅಲ್ಲಮಪ್ರಭು ಅಭಿಪ್ರಾಯ ಪಟ್ಟಿದ್ದಾರೆ .
ಸ್ವಾರಸ್ಯ : ಕಾಲದಿಂದ ಕಾಲಕ್ಕೆ ಗುರುವಿನ ಬಗ್ಗೆ ಶಿಷ್ಯರಿಗಿರುವ ಗೌರವಭಾವನೆ ಕ್ಷೀಣಿಸುತ್ತಿರುವುದು ಮತ್ತು ಶಿಷ್ಯರಲ್ಲಿ ನೈತಿಕ ಮಟ್ಟ ಕುಸಿದಿರುವುದನ್ನು ಸ್ವಾರಸಪೂರ್ಣವಾಗಿ ವರ್ಣಿಸಲಾಗಿದೆ .
2. “ ಜಂಗಮ ಮುಂದೆ ನಿಂದಿದ್ದಡೂ ಹಂಗು ಹರಿಯಬೇಕು ”
ಉತ್ತರ : ` ಆಯ್ಕೆ : – ಈ ವಾಕ್ಯವನ್ನು ಎಂ.ಎಂ.ಕಲಬುರ್ಗಿ ಅವರು ಸಂಪಾದಿಸಿರುವ ‘ ಸಮಗ್ರ ವಚನ ಸಂಪುಟ ‘ ಕೃತಿಯಿಂದ ಆರಿಸಲಾದ ಆಯ್ದಕ್ಕಿ ಮಾರಯ್ಯ ಅವರ ವಚನದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : – ಕಾಯಕದ ಮಹತ್ವವನ್ನು ತಿಳಿಸುವ ಸಂದರ್ಭದಲ್ಲಿ ಆಯ್ದಕ್ಕಿ ಮಾರಯ್ಯ ಈ ಮಾತನ್ನು ಹೇಳಿದ್ದಾರೆ . ಕಾಯಕದಲ್ಲಿ ತೊಡಗಿದ್ದಾಗ ಗುರುದರ್ಶನ ಅಥವಾ ಲಿಂಗಪೂಜೆಯನ್ನಾದರೂ ಮರೆಯಬೇಕು . ಜಂಗಮ ಮುಂದೆ ನಿಂತಿದ್ದರೂ ಮೊದಲು ಕಾಯಕಕ್ಕೆ ಮಹತ್ವ ನೀಡಬೇಕು . ‘ ಕಾಯಕವೇ ಕೈಲಾಸ ‘ ಎಂದು ಭಾವಿಸಿ ದೇವರಿಗಿಂತ ಕಾಯಕಕ್ಕೆ ಮೊದಲ ಪ್ರಾಶಸ್ತ್ರ ನೀಡಬೇಕೆಂದು ಆಯ್ದಕ್ಕಿ ಮಾರಯ್ಯನು ಕಾಯಕದ ಮಹತ್ವವನ್ನು ತಿಳಿಸಿದ್ದಾನೆ .
ಸ್ವಾರಸ್ಯ : ಕಾಯಕ ಎಂದರೆ ಕೆಲಸ ಇಲ್ಲಿ ಕೆಲಸವೇ ದೇವರು ಎಂದು ಪ್ರತಿಪಾದಿಸಿರುವುದು ಸ್ವಾರಸ್ಯಪೂರ್ಣವಾಗಿದೆ
8th Class Vachanamrutha Kannada Notes, Vachanamrutha 8th Kannada Poem Questions and Answers Pdf
ಇತರೆ ಪದ್ಯಗಳು :