9ನೇ ತರಗತಿ ರಂಜಾನ್ ಸುರಕುಂಬಾ ಕನ್ನಡ ಪೂರಕ ಪಾಠದ ಪ್ರಶ್ನೋತ್ತರಗಳು ನೋಟ್ಸ್, 9th Ramjan Surakumba Kannada Notes Question Answer Pdf Download
ತರಗತಿ : 9ನೇ ತರಗತಿ
ಪಾಠದ ಹೆಸರು : ರಂಜಾನ್ ಸುರಕುಂಬಾ
Table of Contents
9th Ramjan Surakumba Kannada Notes Question Answer
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
1. ಬಸವಕೇಂದ್ರದವರು ನಾಗರ ಪಂಚಮಿಯ ದಿನ ಮೈಕಿನಲ್ಲಿ ಏನೆಂದು ಹೇಳಿ ಜಾಗೃತಿ ಮೂಡಿಸುತ್ತಿದ್ದರು?
ಉತ್ತರ : ಬಸವಕೇಂದ್ರದವರು ನಾಗರ ಪಂಚಮಿಯ ದಿನ ಮೈಕಿನಲ್ಲಿ ‘ ಹುತ್ತಕ್ಕೆ ಸುರಿದ ಹಾಲನ್ನು ಹಾವು ಕುಡಿಯುವುದಿಲ್ಲ ‘ ಹೇಳಿ ಜಾಗೃತಿ ಮೂಡಿಸುತ್ತಿದ್ದರು .
2. ರಂಜಾನ್ ಹಬ್ಬದ ಸಡಗರವು ಯಾವಾಗ ಶುರುವಾಗುತ್ತದೆ ?
ಉತ್ತರ : ಚಾಂದ್ ( ಚಂದ್ರ ) ಮುಖದೋರಿದ ರಂಜಾನ್ ಮೇಲೆ ಹಬ್ಬದ ಸಡಗರ ಶುರುವಾಗುತ್ತದೆ .
3. ರಂಜಾನ್ ಹಬ್ಬದ ಸಮಯದಲ್ಲಿ ತಯಾರಿಸುವ ಖಾದ್ಯಗಳಾವುವು ?
ಉತ್ತರ : ರಂಜಾನ್ ಹಬ್ಬದ ಸಮಯದಲ್ಲಿ ತಯಾರಿಸುವ ಖಾದ್ಯಗಳೆಂದರೆ : ರುಚಿಯಾದ ಗುಲ್‌ಗುಲೆ ಮತ್ತು ರಹಮ್ , ಹಾಲಿನಿಂದ ತಯಾರಿಸಿದ ಸುರಕುಂಬಾ
4. ಹೆಂಗಸರು ಗೋಲಾಗಿ ನಿಂತು ಹಾಡುತ್ತಿದ್ದ ಭುಲಾಯಿ ಹಾಡು ಯಾವುದು ?
ಉತ್ತರ : ಹೆಂಗಸರು ಗೋಲಾಗಿ ನಿಂತು ಹಾಡುತ್ತಿದ್ದ ಭುಲಾಯಿ ಹಾಡು : ನಾರಾರ ಹಬ್ಬ ಏನು ಹುಬ್ಬ ಸುವ್ವನಾರಿ ಹಂಚಿಕೇನು ಮಾಡಲಿ ತಂಗಿ ಎಚ್ಚ ತರಲಾಕ ಈಗ ಮುಂಚಿನಂಗ ದಿನಮಾನಿಲ್ಲ ಎಲ್ಲಾ ಮಾಡೋದಕ ಸುವ್ವನಾರಿ
5. ಮುಸ್ಲಿಂಯೇತರ ಗೆಳೆತಿಯರು ಮುಸ್ಲಿಂ ಸೋದರಿಯರಿಗಾಗಿ ಯಾವ ಕೂಟವನ್ನು ಏರ್ಪಡಿಸುತ್ತಿದ್ದರು ?
ಉತ್ತರ : ಮುಸ್ಲಿಂಯೇತರ ಗೆಳೆತಿಯರು ಮುಸ್ಲಿಂ ಸೋದರಿಯರಿಗಾಗಿ ಇಲ್ಲಿಯಾರ್ ಕೂಟವನ್ನು ಏರ್ಪಡಿಸುತ್ತಿದ್ದರು .
9th Ramjan Surakumba Kannada Notes Question Answer Pdf
ಇತರೆ ಪದ್ಯಗಳು:
ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಪದ್ಯದ ನೋಟ್ಸ್