9ನೇ ತರಗತಿ ಕನ್ನಡ ತತ್ವಪದಗಳು ಪದ್ಯದ ಪ್ರಶ್ನೆ ಉತ್ತರಗಳು ನೋಟ್ಸ್, 9th Standard Tatva Padagalu Poem Notes Question Answer,9th Tatva Padagalu Kannada Notes Pdf Download
ತರಗತಿ : 9ನೇ ತರಗತಿ
ಪದ್ಯದ ಹೆಸರು : ತತ್ವಪದಗಳು
ಕೃತಿಕಾರರ ಹೆಸರು : ಕಡಕೋಳ ಮಡಿವಾಳಪ್ಪ
Table of Contents
ಕವಿ ಪರಿಚಯ :
ಕಡಕೋಳ ಮಡಿವಾಳಪ್ಪ
* ಕಡಕೋಳ ಮಡಿವಾಳಪ್ಪ ಅವರು ಕ್ರಿ.ಶ. ೧೭೬೫ ರಲ್ಲಿ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಬಿದನೂರ ಗ್ರಾಮದಲ್ಲಿ ಜನಿಸಿದರು .
* ಇವರ ತಾಯಿ ಗಂಗಮ್ಮ , ತಂದೆ ವಿರೂಪಾಕ್ಷಯ್ಯ , ಇವರು ಕಲಕೇರಿ ಮರುಳಾರಾಧ್ಯರಿಂದ ಲಿಂಗದೀಕ್ಷೆಯನ್ನು ಪಡೆದರು . ಇವರ ಅಂಕಿತನಾಮ : ‘ ಮಹಾಂತೇಶ ‘ ಕವಿ ಪರಿಚಯ : ಶಿಶುನಾಳ ಷರೀಫ
* ಸಂತ ಶಿಶುನಾಳ ಶರೀಫ ಅವರು ಕ್ರಿಸ್ತ ಶಕ ೧೮೧೯ ರಲ್ಲಿ ಧಾರವಾಡ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ , ಶಿಶುನಾಳದಲ್ಲಿ ಜನಿಸಿದರು .
* ಬಾಲ್ಯದ ಹೆಸರು ಮಹಮ್ಮದ್ ಶರೀಫ , ಗುರು ಕಳಸದ ಗೋವಿಂದ ಭಟ್ಟರು .
* ಇವರತು ಕರ್ನಾಟಕದ ಕಬೀರರೆಂದೇ ಶರೀಫರು ಪ್ರಸಿದ್ಧರಾಗಿದ್ದಾರೆ .
* ಇವರ ಅಂಕಿತ : ಶಿಶುನಾಳಾಧೀಶ , ಶಿಶುನಾಳೇಶ , ಇವರು ನೂರಾರು ತತ್ವಪದಗಳನ್ನು ರಚಿಸಿದ್ದಾರೆ .
9th Standard Tatva Padagalu Poem Notes Question Answer
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ತತ್ತ್ವಪದಕಾರರು ಯಾರ ಸೇವೆ ಮಾಡಬೇಕು ಎಂದಿದ್ದಾರೆ ?
ಉತ್ತರ : ತತ್ವಪದಕಾರರು ಸಾಧು – ಸತ್ಪುರುಷರ ಸೇವೆ ಮಾಡಬೇಕು ಎಂದಿದ್ದಾರೆ
2 , ಬಿದಿರು ಹೇಗೆ ಬೆಳೆಯಿತು ?
ಉತ್ತರ : ಹುಟ್ಟುತ್ತಾ ಹುಲ್ಲಾಗಿ ಬೆಳೆಯುತ್ತಾ ಮೈತುಂಬಿಕೊಳ್ಳುತ್ತದೆ .
3. ಯಾರ ಸ್ನೇಹವು ಸಾಯುವತನಕ ಬೇಡ ಎಂದಿದ್ದಾರೆ ?
ಉತ್ತರ : ಗುರುಕರುಣವಿಲ್ಲದವನ ಸ್ನೇಹವು ಸಾಯುವತನಕ ಬೇಡ ಎಂದಿದ್ದಾರೆ .
4. ಯಾರ ಸ್ನೇಹವನ್ನು ಮಾಡಿ ಕೆಡಬಾರದು ?
ಉತ್ತರ : ಹೀನ ಮನುಷ್ಯನ ಸ್ನೇಹವನ್ನು ಮಾಡಿ ಕೆಡಬಾರದು .
5. ಬಿದಿರಿನ ಚಪ್ಪರವು ಏನನ್ನು ಕೊಡುತ್ತದೆ ?
ಬಿದಿರಿನ ಚಪ್ಪರವು ನೆರಳನ್ನು ಕೊಡುತ್ತದೆ
6. ಬಿದಿರು ಶಿಶುನಾಳಾಧೀಶನಿಗೆ ಏನಾಗುತ್ತದೆ ?
ಉತ್ತರ : ಬಿದಿರು ಶಿಶುನಾಳಾಧೀಶನಿಗೆ ಓಲಗವನ್ನು ಕೊಡುತ್ತದೆ .
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ .
1. ತತ್ತ್ವಪದಕಾರರು ಸ್ನೇಹ ಮಾಡುವ ಬಗೆಗೆ ಏನೆಂದು ತಿಳಿಸಿದ್ದಾರೆ ?
ಉತ್ತರ : ತತ್ತ್ವಪದಕಾರರು ಸ್ನೇಹ ಮಾಡುವ ಬಗೆಗೆ ‘ ಗುರುಕರುಣವಿಲ್ಲದವನ ಸ್ನೇಹವನ್ನು ಸಾಯುವವರೆಗೂ ಮಾಡಬಾರದು . ಕೊಟ್ಟ ಮಾತಿನಂತೆ ನಡೆಯದವನ ಸ್ನೇಹ ಮಾಡಬಾರದು . ಹೀನ ಮನುಷ್ಯನ ಸ್ನೇಹ ಮಾಡಿ ಕೆಡಬಾರದು ಎಂದು ತಿಳಿಸಿದ್ದಾರೆ .
2. ‘ ಗುರುಕರುಣೆ ‘ ಪದ್ಯದ ಮೂರು ಮತ್ತು ನಾಲ್ಕನೆಯ ಚರಣದಲ್ಲಿ ಏನನ್ನು ಮಾಡಬಾರದೆಂದು ತತ್ತ್ವ ಸಾರಿದ್ದಾರೆ?
ಉತ್ತರ : ಅಕ್ಕ – ತಂಗಿಯರೆಂದು ಬಾಯಲ್ಲಿ ಕರೆದು ಅವರ ಬಗ್ಗೆ ಕೆಟ್ಟದಾಗಿ ಯೋಚಿಸಬಾರದು . ಸುಮ್ಮನೆ ಊಟಮಾಡಿಕೊಂಡು ಕುಳಿತು ಕಾಲಕಳೆಯಬಾರದು . ಹಳೆಯದೆಲ್ಲವು ಶ್ರೇಷ್ಠವಲ್ಲವೆಮದು ಕಡೆಗಣಿಸಿ , ಇಂದಿನದೇ ಶ್ರೇಷ್ಠವೆಂದು ಸರಿಮಾಡಬಾರದು ಎಂದು ಗುರುಕರುಣೆ ಪದ್ಧಯದಲ್ಲಿ ಹೇಳಲಾಗಿದೆ .
3. ಬಿದಿರು ಮಕ್ಕಳಿಗೆ , ರೈತರಿಗೆ , ಮಹಾತ್ಮರಿಗೆ ಯಾವ ರೀತಿಯಲ್ಲಿ ಉಪಯೋಗವಾಗುತ್ತದೆ ?
ಉತ್ತರ : ಬಿದಿರು ಮಕ್ಕಳಿಗೆ ತೂಗುವ ತೊಟ್ಟಿಲಾಗಿ , ರೈತರಿಗೆ ಬಿತ್ತುವ ಕೂರಿಗೆಯಾಗಿ , ಮಹಾತ್ಮರ ಕೈಗೆ ಬೆತ್ತವಾಗಿ ಉಪಯೋಗವಾಗುತ್ತದೆ .
4. ಧಾನ್ಯಗಳನ್ನು ಕುಟ್ಟಲು , ಬೀಸಲು , ಕೇರಲು ಬಿದಿರು ಹೇಗೆ ಸಹಾಯಕವಾಗಿರುತ್ತದೆ ?
ಉತ್ತರ : ಧಾನ್ಯಗಳನ್ನು ಕುಟ್ಟಲು ಒನಕೆಯಾಗಿ ಬೀಸುವ ಕಲ್ಲಿಗೆ ಗೂಟವಾಗಿ , ಕೇರಲು ಮರವಾಗಿ ಬಿದಿರು ಸಹಾಯಕವಾಗಿರುತ್ತದೆ .
ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ .
1. ‘ ಬಿದಿರು ‘ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .
ಉತ್ತರ : ಪ್ರಕೃತಿಯಲ್ಲಿರುವ ಬಹೂಪಯೋಗಿ ಪರಿಕರಗಳಲ್ಲಿ ಬಿದಿರು ಸಹ ಒಂದಾಗಿದೆ . ಬಿದಿರು ಮಾನವನ ಜೀವನದಲ್ಲಿ ಹಲವಾರು ವಿಧದಲ್ಲಿ ಉಪಯೋಗಕ್ಕೆ ಬರುತ್ತದೆ . ಅದನ್ನು ಮಾನವನ ಹುಟ್ಟಿನಿಂದ ಸಾಯುವ ಕಾಲದವರೆಗೂ ಬಳಸಲಾಗುತ್ತದೆ . ಶಿಶುನಾಳ ಶರೀಫರು ಬಿದಿರಿನ ಬಗ್ಗೆ ಈ ತತ್ವಪದದಲ್ಲಿ ತಿಳಿಸಿದ್ದಾರೆ . ಹುಟ್ಟುತ್ತ ಹುಲ್ಲಾಗಿ ಬೆಳೆಯುತ್ತಾ ಬೆಳೆಯುತ್ತಾ ಮೈತುಂಬಿಕೊಳ್ಳುತ್ತದೆ . ಮಕ್ಕಳನ್ನು ತೂಗುವ ತೊಟ್ಟಿಲಾಗಿ , ಪಲ್ಲಕ್ಕಿಯಾಗಿ , ಹೂ – ಪತ್ರೆಗಳಿಗೆ ಬುಟ್ಟಿಯಾಗಿ , ಮಹಾತ್ಮರ ಕೈಗೆ ಬೆತ್ತವಾಗಿ ಬಳಕೆಯಾಗುತ್ತದೆ . ಕುಟ್ಟುವ ಒನಕೆಯಾಗಿ , ಅಂಬಿಗನಿಗೆ ದೋಣಿ ನಡೆಸಲು ಕೋಲಾಗಿ , ರೈತನಿಗೆ ಹೊಲದಲ್ಲಿ ಬಿತ್ತನೆ ಮಾಡಲು ಉಪಯುಕ್ತವಾದ ಕೂರಿಗೆಯಾಗಿ ಬಳಕೆಯಾಗುತ್ತದೆ . ಬೀಸುವ ಕಲ್ಲಿನ ಗೂಟವಾಗಿ , ಧಾನ್ಯ ಕೇರುವ ಮರವಾಗಿ , ಮುದುಕರಿಗೆ ಊರುಗೋಲಾಗಿ , ಕೋಲಾಟ ಆಡಲು ಬಳಸುವ ಕೋಲಾಗಿ , ಎತ್ತಿನ ಬಂಡಿಯಾಗಿ , ಜಾತ್ರೆಗಳಲ್ಲಿ ಬಳಸುವ ನಂದಿಕೋಲಾಗಿ ನೆರಳಿಗೆ ಚಪ್ಪರವಾಗಿ , ಏಕದಂಡಿ ಎಂಬ ವಾದ್ಯವಾಗಿ , ಓಲಗ ( ಶಹನಾಯಿ ) ಆಗಿ ಬಿದಿರು ಬಹು ರೂಪದಲ್ಲಿ ಮಾನವನಿಗೆ ಉಪಕಾರಿಯಾಗಿದೆ .
2. ‘ ಗುರುಕರುಣೆ ‘ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .
ಉತ್ತರ : ಕಡಕೋಳ ಮಡಿವಾಳಪ್ಪನವರು ‘ ಗುರುಕರುಣೆ ‘ ಎಂಬ ತತ್ವಪದದಲ್ಲಿ ಸ್ನೇಹ , ಸಂಬಂಧ , ಸೇವೆ ಮುಂತಾದ ವಿಷಯಗಳನ್ನು ಕುರಿತು ಹೇಳಿದ್ದಾರೆ . ಯಾವ ವ್ಯಕ್ತಿಯು ಗುರುಗಳ ಬಗ್ಗೆ ಗೌರವವನ್ನು ಹೊಂದಿಲ್ಲವೋ , ಅವರ ಕೃಪೆಯನ್ನು ಗಳಿಸಿಲ್ಲವೋ ಅಂತಹವನ ಸ್ನೇಹವನ್ನು ಸಾಯುವವರೆಗೂ ಮಾಡಬಾರದು . ಕೊಟ್ಟ ಮಾತಿನಂತೆ ನಡೆಯದವನ ಸ್ನೇಹ ಮಾಡಬಾರದು . ಕೆಟ್ಟ ಮನುಷ್ಯನ ಸ್ನೇಹ ಮಾಡಿ ಕೆಡಬಾರದು . ಸಾಧು – ಸತ್ಪುರುಷರ ಸೇವೆ ಮಾಡುವುದರ ಮೂಲಕ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಬೇಕು . ಅಕ್ಕ – ತಂಗಿಯರೆಂದು ಬಾಯಲ್ಲಿ ಕರೆದು ಅವರ ಬಗ್ಗೆ ಕೆಟ್ಟದಾಗಿ ಯೋಚಿಸಬಾರದು . ಸುಮ್ಮನೆ ಊಟಮಾಡಿಕೊಂಡು ಕುಳಿತು ಸೋಮಾರಿಯಾಗಿ ಕಾಲ ಕಳೆಯಬಾರದು . ಹಳೆಯದೆಲ್ಲವು ಶ್ರೇಷ್ಟವಲ್ಲವೆಮದು ಕಡೆಗಣಿಸಿ , ಇಂದಿನದೇ ಶ್ರೇಷ್ಠವೆಂದು ಸರಿಮಾಡಬಾರದು .
ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,
1. “ ಮಹಾತ್ಮರ ಕೈಗೆ ಬೆತ್ತ ನಾನಾದೆ ”
ಆಯ್ಕೆ : ಈ ವಾಕ್ಯವನ್ನು ಶಿಶುನಾಳ ಶರೀಫರು ಬರೆದಿರುವ ‘ ಬಿದಿರು ‘ ಎಂಬ ತತ್ವಪದದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಬಿದಿರಿನ ಉಪಯೋಗಗಳನ್ನು ವರ್ಣಿಸುವ ಸಂದರ್ಭದಲ್ಲಿ ಶಿಶುನಾಳ ಶರೀಫರು ಈ ಮಾತನ್ನು ಹೇಳಿದ್ದಾರೆ . ಸ್ವಾರಸ್ಯ : ಬಹೂಪಯೋಗಿಯಾದ ಬಿದಿರು ಅನೇಕ ರೀತಿಯಲ್ಲಿ ಮಾನವನ ಜೀವನದಲ್ಲಿ ಬಳಸಲ್ಪಡುತ್ತದೆ . ಹಾಗೆಯೇ ಅದು ಮಹಾತ್ಮರು ಬಳಸುವ ಬೆತ್ತವಾಗಿಯೂ ಬಳಕೆಯಾಗುವ ಶ್ರೇಷ್ಠತೆಯನ್ನು ಹೊಂದಿದೆ ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ .
2. “ ಬೆಳೆ ಬೆಳೆಯುತ್ತ ದಿವಿನಾದೆ ”
ಆಯ್ಕೆ : ಈ ವಾಕ್ಯವನ್ನು ಶಿಶುನಾಳ ಶರೀಫರು ಬರೆದಿರುವ ‘ ಬಿದಿರು ‘ ಎಂಬ ತತ್ವಪದದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಬಿದಿರು ಬೆಳೆಯುವ ಬಗೆಯನ್ನು ವರ್ಣಿಸುವ ಸಂದರ್ಭದಲ್ಲಿ ಶಿಶುನಾಳ ಶರೀಫರು ಈ ಮಾತನ್ನು ಹೇಳಿದ್ದಾರೆ . ಸ್ವಾರಸ್ಯ : ಬೃಹದಾಕಾರವಾಗಿ ಬೆಳೆಯುವ ಬಿದಿರು ಹುಟ್ಟುವಾಗ ಹುಲ್ಲಾಗಿ ಹುಟ್ಟುತ್ತದೆ . ( ಇದು ಹುಲ್ಲಿನ ವರ್ಗಕ್ಕೆ ಸೇರಿದ ದೊಡ್ಡ ಸಸ್ಯ ) ಆದರೆ ಬೆಳೆಬೆಳೆಯುತ್ತಾ ಮೈತುಂಬಿಕೊಳ್ಳುತ್ತದೆ . ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ .
3. “ ಹೀನ ಮನುಷ್ಯನ ಸ್ನೇಹ ಮಾಡಿ ನೀನು ಕೆಡಲಿಬೇಡ “
ಆಯ್ಕೆ : ಈ ವಾಕ್ಯವನ್ನು ಕಡಕೋಳ ಮಡಿವಾಳಪ್ಪನವರು ಬರೆದಿರುವ ‘ ಗುರುಕರುಣ ‘ ಎಂಬ ತತ್ವಪದದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಎಂತಹ ಜನರ ಸ್ನೇಹ ಮಾಡಬಾರದು ಎಂದು ತಿಳಿಸುವ ಸಂದರ್ಭದಲ್ಲಿ ಮಡಿವಾಳಪ್ಪನವರು ಈ ಮಾತನ್ನು ಹೇಳಿದ್ದಾರೆ . ಸ್ವಾರಸ್ಯ : ತತ್ವಪದಕಾರರು ಸ್ನೇಹ ಮಾಡುವ ಬಗೆಗೆ ‘ ಗುರುಕರುಣವಿಲ್ಲದವನ ಸ್ನೇಹವನ್ನು ಸಾಯುವವರೆಗೂ ಮಾಡಬಾರದು . ಕೊಟ್ಟ ಮಾತಿನಂತೆ ನಡೆಯದವನ ಸ್ನೇಹ ಮಾಡಬಾರದು . ಹೀನ ಮನುಷ್ಯನ ಸ್ನೇಹ ಮಾಡಿ ಕೆಡಬಾರದು ಎಂದು ತಿಳಿಸಿದ್ದಾರೆ . ೨. “ ನಿತ್ಯಕಾಲದಲ್ಲಿ ಅಶನವ ಉಂಡು ಹೊತ್ತು ಗಳಿಯಲಿಬೇಡ ” ಆಯ್ಕೆ : ಈ ವಾಕ್ಯವನ್ನು ಕಡಕೋಳ ಮಡಿವಾಳಪ್ಪನವರು ಬರೆದಿರುವ ‘ ಗುರುಕರುಣ ‘ ಎಂಬ ತತ್ವಪದದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಸುಮ್ಮನೆ ವ್ಯರ್ಥವಾಗಿ ಕಾಲಕಳೆಯಬಾರದೆಂಬುದನ್ನು ತಿಳಿಸುವ ಸಂದರ್ಭದಲ್ಲಿ ಮಡಿವಾಳಪ್ಪನವರು ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಯಾವುದೇ ವ್ಯಕ್ತಿಯಾದರೂ ಸರಿ ಸುಮ್ಮನೆ ಊಟಮಾಡಿಕೊಂಡು ಕುಳಿತು ಸೋಮಾರಿಯಾಗಿ ಕಳೆಯಬಾರದು . ಅಂದರೆ ಏನಾದರು ಉಪಯುಕ್ತವಾದ ಕೆಲಸ ಮಾಡಬೇಕು ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ .
ಈ ] ಕೊಟ್ಟಿರುವ ಪದಗಳಲ್ಲಿ ಸೂಕ್ತಪದವನ್ನು ಆರಿಸಿ ಬರೆಯಿರಿ .
1. ‘ ಆಶನ ‘ ಪದದ ಅರ್ಥ ಬಟ್ಟೆ
2. ‘ ಬೆತ್ತ ‘ ಪದದ ತತ್ಸಮ ರೂಪ ವೇತ್ರ
3. ‘ ಕರುಣೆ ‘ ಪದದ ವಿರುದ್ಧಾರ್ಥಕ ಪದ ನಿಷ್ಕರುಣೆ
4. ‘ ಅಂಬಿಗ ‘ ಎಂದರೆ ದೋಣಿ ನಡೆಸುವವ
9th Tatva Padagalu Kannada Notes Pdf
ಇತರೆ ವಿಷಯಗಳು:
ನಿಯತಿಯನಾರ್ ಮೀರಿದಪರ್ ಪದ್ಯದ ನೋಟ್ಸ್