8ನೇ ತರಗತಿ ಕನ್ನಡ ಅಮ್ಮ ಪಾಠದ ನೋಟ್ಸ್ | 8th Standard Kannada Amma Lesson Notes

8ನೇ ತರಗತಿ ಕನ್ನಡ ಅಮ್ಮ ಪಾಠದ ನೋಟ್ಸ್ ಪ್ರಶ್ನೋತ್ತರಗಳು, 8th Standard Amma Notes Question Answer Kseeb Solutions Pdf Download

ತರಗತಿ : 8ನೇ ತರಗತಿ

ಪಾಠದ ಹೆಸರು : ಅಮ್ಮ

ಕೃತಿಕಾರರ ಹೆಸರು : ಯು. ಆರ್‌. ಅನಂತಮೂರ್ತಿ

Table of Contents

ಕೃತಿಕಾರರ ಪರಿಚಯ :

ಡಾ ಯು.ಆರ್.ಅನಂತಮೂರ್ತಿ :

* ಡಾ ಯು.ಆರ್ . ಅನಂತಮೂರ್ತಿಯವರು ಇವರ ಪೂರ್ಣ ಹೆಸರು ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ,

* ಇವರ ಕಾಲ ಕ್ರಿ.ಶ. ೧೯೩೨-೨೦೧೪ , ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಗ್ರಾಮದಲ್ಲಿ ಜನಿಸಿದರು .

* ಇವರ ಪ್ರಮುಖ ಕೃತಿಗಳೆಂದರೆ ‘ ಸಂಸ್ಕಾರ ‘ , ‘ ಭವ ‘ , ‘ ಅವಸ್ಥೆ ‘ , ‘ ಭಾರತೀಪುರ ‘ ಮುಂತಾದ ಕಾದಂಬರಿಗಳು , ‘ ಆವಾಹನೆ ‘ ( ನಾಟಕ ) ‘ ಮೌನಿ ‘ ‘ ಪ್ರಶ್ನೆ ‘ ‘ ಎಂದೆಂದೂ ಮುಗಿಯದ ಕಥೆ ‘ ಕಥಾ ಸಂಕಲನಗಳು , ‘ ಮಿಥುನ ‘ , ‘ ಅಜ್ಜನ ಹೆಗಲ ಸುಕ್ಕುಗಳು ‘ ಮುಂತಾದ ಕವನಸಂಕಲನಗಳು ಹೀಗೆ ವಿವಿಧ ಸಾಹಿತ್ಯ ಪ್ರಕಾರದಲ್ಲಿ ನೂರಾರು ಕೃತಿಗಳನ್ನು ರಚಿಸಿದ್ದಾರೆ .

* ಇವರಿಗೆ ಗೌರವ ಡಿ.ಲಿಟ್ , ರಾಜ್ಯೋತ್ಸವ ಪ್ರಶಸ್ತಿ , ಭಾರತ ಸರ್ಕಾರದ ಪದ್ಮಭೂಷಣ ಪುರಸ್ಕಾರ , ೧೯೯೪ ರಲ್ಲಿ ‘ ಭಾರತೀಯ ಜ್ಞಾನಪೀಠ ಪ್ರಶಸ್ತಿ ‘ ಪುರಸ್ಕಾರಗಳು ಲಭಿಸಿವೆ . ೨೦೦೨ ರಲ್ಲಿ ತುಮಕೂರಿನಲ್ಲಿ ನಡೆದ ೬೬ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು . [ ಪ್ರಸ್ತುತ ಗದ್ಯಭಾಗವನ್ನು ಯು.ಆರ್.ಅನಂತಮೂರ್ತಿಯವರ ‘ ಸುರಗಿ ‘ ಎಂಬ ಆತ್ಮಕಥನದಿಂದ ಆಯ್ಕೆಮಾಡಿ ಕೊಳ್ಳಲಾಗಿದೆ . ]

8th Standard Amma Notes Question Answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,

1. ಸಣ್ಣ ಕುಳಿಯೊಳಗಿನ ಕಪ್ಪುಹುಳುವನ್ನು ಯಾವ ಹೆಸರಿನಿಂದ ಕರೆಯುತ್ತಾರೆ ?

ಉತ್ತರ : ಸಣ್ಣ ಕುಳಿಯೊಳಗಿನ ಕಪ್ಪುಹುಳುವನ್ನು ‘ ತನ್ನಾದೇವಿ ‘ , ‘ ಗುಬ್ಬಿ ‘ ಎಂಬೆಲ್ಲಾ ಹೆಸರಿನಿಂದ ಕರೆಯುತ್ತಾರೆ .

2. ಲೇಖಕರ ಬಾಲ್ಯದ ಮನರಾವರ್ತಿತ ದೈನಿಕ ಯಾವುದಾಗಿತ್ತು ?

ಉತ್ತರ : ಕೃಷ್ಣಪ್ಪಯ್ಯ ಮೇಷ್ಟಿಗಾಗಿ ಆತಂಕದಲ್ಲಿ ಕಾಯುತ್ತ ಇವತ್ತು ಮೇಷ್ಟಿಗೆ ಜ್ವರ ಬರಲಿ ದೇವರೇ ‘ ಎಂದು ಮನಸ್ಸಲ್ಲೇ ಪಾರ್ಥಿಸುತ್ತ ಇರುವುದೇ ಲೇಖಕರ ಬಾಲ್ಯದ ಮನರಾವರ್ತಿತ ದೈನಿಕವಾಗಿತ್ತು .

3. ಬಾಲ್ಯದಲ್ಲಿ ಲೇಖಕರು ಭಯವಾದಾಗ ಯಾವ ಮಂತ್ರವನ್ನು ಹೇಳಿಕೊಳ್ಳುತ್ತಿದ್ದರು ?

ಉತ್ತರ : ಬಾಲ್ಯದಲ್ಲಿ ಲೇಖಕರು ಭಯವಾದಾಗ ” ಆರ್ಜುನಃ ಫಲ್ಗುಣೋ ಪಾರ್ಥಃ ಕಿರೀಟೀ ಶ್ವೇತವಾಹನ ” ಎಂಬ ಮಂತ್ರವನ್ನು ಹೇಳಿಕೊಳ್ಳುತ್ತಿದ್ದರು .

4. ಲೇಖಕರ ಮೊದಲ ವಿದ್ಯಾಗುರು ಯಾರು ?

ಉತ್ತರ : ಲೇಖಕರ ಮೊದಲ ವಿದ್ಯಾಗುರು ಅವರ ಅಮ್ಮ .

5. ತಿಂಗಳಿಗೊಮ್ಮೆ ಕಾಫಿ ಬೀಜವನ್ನು ತಂದು ಕೊಡುತ್ತಿದ್ದವರು ಯಾರು ?

ಉತ್ತರ : ತಿಂಗಳಿಗೊಮ್ಮೆ ಕಾಫಿ ಬೀಜವನ್ನು ಬ್ಯಾರಿಯೊಬ್ಬರು ತಂದು ಕೊಡುತ್ತಿದ್ದರು .

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ ,

1. ಮಳೆಗಾಲದ ಆರಂಭಕ್ಕೆ ಮುನ್ನ ಮಲೆನಾಡಿನಲ್ಲಿ ಏನೆಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು ?

ಉತ್ತರ : ಮಳೆಗಾಲದ ಆರಂಭಕ್ಕೆ ಮೊದಲೇ ಮಲೆನಾಡುನಲ್ಲಿ ಹಲವಾರು ಸಿದ್ಧತೆಗಳು ನಡೆಯುತ್ತಿದ್ದವು . ಮನೆಯ ಕೆಲಸಕ್ಕೆ ಲೇಖಕರ ಸಂಬಂಧಿಕರು , ಅವರ ಅಪ್ಪನ ಸ್ನೇಹಿತರು ಒಣ ಸೌದೆ , ಆಕ್ಕಿ , ಬೇಳೆ , ಜೋನಿ ಬೆಲ್ಲವನ್ನು ಸಂಗ್ರಹಿಸುತ್ತಿದ್ದರು . ಜೊತೆಗೆ ಕಾಡು ಹಲಸಿನ ಹಣ್ಣು ಹಪ್ಪಳ , ಸಂಡಿಗೆಯಂತಹ ಅನೇಕ ತಿಂಡಿಗಳನ್ನು ಅಮ್ಮ ಒಣಗಿಸಿ ಇಡುತ್ತಿದ್ದರು .

2. ಲೇಖಕರ ಅಕ್ಷರಭ್ಯಾಸ ಆರಂಭವಾದದ್ದು ಹೇಗೆ ?

ಉತ್ತರ : ಕೆರೆಕೊಪ್ಪದ ಮನೆಯಲ್ಲಿದ್ದಾಗಲೇ ಲೇಖಕರ ಅಕ್ಷರಾಭ್ಯಾಸ ಪ್ರಾರಂಭವಾಯಿತು . ಆಗ ಸ್ಕೂಲ್ ಹತ್ತಿರ ಇರಲಿಲ್ಲ . ಹಬ್ಬದ ದಿನ “ ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ , ವಿದ್ಯಾರಂಭಂ ಕರಿಷ್ಯಾಮಿ | ಸಿದ್ಧಿರ್ಭವತು ಮೇ ಸದಾ ” ಎಂದು ಹೇಳಿ ಅವರ ಅಮ್ಮ ನೆಲದಲ್ಲಿ ಮರಳು ಹರಡಿ ಕೂರಿಸಿ ಬೆರಳನ್ನು ಹಿಡಿದುಕೊಂಡು ‘ ಆ ‘ ಎಂಬ ಅಕ್ಷರವನ್ನು ಬರೆಯಿಸಿದರು . ಹೀಗೆ ಲೇಖಕರ ಅಕ್ಷರಾಭ್ಯಾಸ ಆರಂಭವಾಯಿತು .

3. ನಸುಕಿನಲ್ಲಿ ಲೇಖಕರಿಗೆ ಖುಷಿ ಕೊಡುತ್ತಿದ್ದ ಸಂಗತಿಗಳಾವುವು ?

ಉತ್ತರ : ನಸುಕಿನಲ್ಲಿ ಎದ್ದು , ಮನೆಯೆದುರು ಆರಣ್ಯದ ಅಂಚಿನಲ್ಲಿ ಇದ್ದ ರಂಜದ ಮರವೊಂದರಿಂದ ನೆಲದ ಮೇಲೆ ಚೆಲ್ಲಿರುತ್ತಿದ್ದ ನಕ್ಷತ್ರದ ಆಕಾರದ ರಂಜದ ಹೂಗಳನ್ನು ಆರಿಸುವುದು , ದೂರ್ವೆಯನ್ನು ಹುಲ್ಲಲ್ಲಿ ಹುಡುಕಿ ಕಿತ್ತು ತರುವುದು , ಕೇದಗೆ ಅರಳಿದೆಯೆ , ಮರದ ಮೇಲಿನ ಗೂಡಲ್ಲಿ ಮೊಟ್ಟೆ ಮರಿಯಾಯಿತೆ ಎಂದು ಬಿದಿರಿನ ಸಂದಿಯಿಂದ ನಿತ್ಯ ನೊಡುವುದು ಲೇಖಕರಿಗೆ ಖುಷಿ ಕೊಡುತ್ತಿದ್ದ ಸಂಗತಿಗಳಾಗಿದ್ದವು .

4. ವಿಶೇಷ ಪದಾರ್ಥಗಳನ್ನು ಕಡವಾಗಿ ಪಡೆಯುತ್ತಿದ್ದ ಹಾಗೂ ತೀರಿಸುತ್ತಿದ್ದ ಬಗೆ ಹೇಗೆ ?

ಉತ್ತರ : ವಿಶೇಷ ಪದಾರ್ಥಗಳೆಲ್ಲವನ್ನೂ ಕಡವಾಗಿ ನಾವು ಪಡೆಯುವುದು ವರ್ಷಕ್ಕೊಮ್ಮೆ , ಅಂದರೆ ದೀಪಾವಳಿಯಿಂದ ಇನ್ನೊಂದು ದೀಪಾವಳಿಗೆ ಯುಗಾದಿಯಿಂದ ಇನ್ನೊಂದು ಯುಗಾದಿಗೆ , ಗೌರಿ ಹಬ್ಬದಿಂದ ಇನ್ನೊಂದು ಗೌರಿ ಹಬ್ಬದವರೆಗೆ ಈ ಕಡದ ಅವಧಿ , ಬೆಳೆದ ಅಡಿಕೆಯನ್ನೋ , ಭತ್ತವನ್ನೋ ಬದಲಿಗೆ ಕೊಟ್ಟು ಕಡವನ್ನು ತೀರಿಸುತ್ತಿದ್ದರು .

ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ

1. ‘ ಒರಿಜಿನಲ್ ‘ ಹಾಗೂ ಚರಟದ ಕಾಫಿಯನ್ನು ಸಿದ್ಧಗೊಳಿಸುತ್ತಿದ್ದ ಬಗೆಯನ್ನು ವಿವರಿಸಿ .

ಉತ್ತರ : ‘ ಒರಿಜಿನಲ್ ‘ ಕಾಫಿಮಡಿಯ ಕಾಫಿ ಬೀಜವನ್ನು ಆಗಲೇ ಹುರಿದು , ಆಗಲೇ ಪುಡಿಮಾಡಿ , ಆಗಲೇ ಕುದಿಯುವ ನೀರಿಗೆ ಬೆರಸಿ , ಮುಚ್ಚಿಟ್ಟು , ಅದರ ಗಸಿ ಇಳಿಯುವಷ್ಟು ಹೊತ್ತು ಕಾದು , ಅದಕ್ಕಾಗಿಯೇ ಇದ್ದ ಬಟ್ಟೆಗೆ ಸುರಿದು ಹಿಂಡಿ , ಡಿಕಾಕ್ಷನ್ ಇಳಿಯುವಾಗ ಕಳೆದುಕೊಂಡ ಉಷ್ಣಾಂಶವನ್ನು ಬಿಸಿಬಿಸಿ ಎಮ್ಮೆ ಹಾಲು ಬೆರೆಸಿ ಹದ ಮಾಡಿ ಕಾಫಿ ಮಾಡುವುದು ಸಾಮಾನ್ಯವಾಗಿತ್ತು . ಈ ಕಾಫಿಯ ಘಮಘಮದ ವಾಸನೆಯನ್ನು ಕೊಂಚವಾದರೂ ಉಳಿಸಿಕೊಂಡ ಆದರ ಚರಟವನ್ನು ಕುದಿಸಿ ಮಾಡಿದ ಕಾಫಿಯೇ ಚರಟದ ಕಾಫಿ ,

2. ಮಲೆನಾಡಿನಲ್ಲಿ ಹುಲಿಗಳಿಂದಾಗುತ್ತಿದ್ದ ತೊಂದರೆಯ ಬಗ್ಗೆ ಹೇಗೆ ವರ್ಣಿಸಲಾಗಿದೆ ?

ಉತ್ತರ : ಲೇಖಕರ ಊರಿನಲ್ಲಿ ಹುಲಿಗಳ ಕಾಟ ಬಹಳ ಇತ್ತು. ಲೇಖಕರ ತಾಯಿಗೆ ದೂರದಲ್ಲಿ ಎಲ್ಲೊ ಹುಲಿ
ಕೂಗಿದರೆ ತಟ್ಟನೆ ತಿಳಿದು ಬಿಡುತ್ತಿತ್ತು. ಹುಲಿಗಳ ಶಬ್ದಕ್ಕೆ ತುಂಬಾ ಸೂಕ್ಷ್ಮವಾಗಿದ್ದ  ಜೀವಿಗಳೆಂದರೆ ದನಗಳು.
ಅವು ಹುಲಿ ಬಂದ ತಕ್ಷಣ ಗಡಗಡ ನಡುಗಲು ಶುರುಮಾಡುತ್ತಿದ್ದವು. ಕೊರಳಿನ ಘಂಟೆ ಜೋರು ಶಬ್ದ
ಮಾಡುತ್ತಿದ್ದರಿಂದ ಹುಲಿ ಬಂದ ಸೂಚನೆಯು ತಿಳಿಯುತ್ತಿತ್ತು. ಲೇಖಕರ ತಾಯಿ, ಅಜ್ಜಿ, ಸೀಮೆಎಣ್ಣೆ ದೀಪದ
ಬೆಳಕಿನಲ್ಲಿ ಮನೆಯ ಒಳಗಡೆ ಕೂತು ಹುಲಿ ಎಲ್ಲಿ ಬಂದು ಬಿಡುತ್ತದೆಯೋ ಎಂದು ಕಾಯುತ್ತಿದ್ದರು.
ಇವರೆಲ್ಲರೂ ತುಂಬಾ ಭಯವಾದಾಗ “ಅರ್ಜುನಃ ಫಲ್ಗಣೋ ಪಾರ್ಥಃ ಕಿರೀಟೀ ಶ್ವೇತವಾಹನಃ” ಎಂದು
ಅಜ್ಜಿ ಹೇಳಿಕೊಟ್ಟಿದ್ದ ಅರ್ಜುನನ ಮಂತ್ರವನ್ನು ಹೇಳಿದರೆ ಭಯ ನಿವಾರಣೆಯಾಗುತ್ತಿತ್ತು . ಈ ಮಂತ್ರವನ್ನು
ಹೇಳುತ್ತ ಹೇಳುತ್ತ ಎಲ್ಲರೂ ನಿದ್ದೆ ಹೋಗುತ್ತಿದ್ದೆವೆ. ಬೆಳಗ್ಗೆ ಎದ್ದು ಕೊಟ್ಟಿಗೆಯಲ್ಲಿಎಲ್ಲ ದನಗಳಿವೆ ಎಂದು
ಗೊತ್ತಾದಾಗ ಮನಸ್ಸಿಗೆ ಸಮಾಧಾನ. ನಿತ್ಯವು ಲೇಖಕರ ಮನೆಗೆ ಆಳುಗಳು ಬಂದಾಗ ಮಾತು
ಆರಂಭವಾಗುತ್ತಿತ್ತು ಯಾವುದೋ ಹುಲಿ ಯಾವುದೋ ಮನೆಯ ದನವನ್ನು ಹಿಡೀತು. ಅವರ ಮನೆ ದನ
ಹೋಯಿತು ಇವರ ಮನೆ ದನ ಹೋಯಿತು  ಎಂದು ಮಾತನಾಡುವುದು ಸಾಮಾನ್ಯವಾಗಿತ್ತು.

ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

1. “ ನನಗೂ ಹೆಣ್ಣು ಮಕ್ಕಳಂತೆ ಉದ್ದ ಕೂದಲಿತ್ತು ”

ಉತ್ತರ : ಆಯ್ಕೆ : – ಈ ವಾಕ್ಯವನ್ನು ಯು.ಆರ್.ಆನಂತಮೂರ್ತಿಯವರ ‘ ಸುರಗಿ ‘ ಎಂಬ ಆತ್ಮಕಥನದಿಂದ ಆಯ್ಕೆಮಾಡಿಕೊಳ್ಳಲಾಗಿರುವ ‘ ಅಮ್ಮ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ~ ಲೇಖಕರು ತಮಗೆ ಚೌಲವಾಗುವುದಕ್ಕೆ ಮೊದಲು ರಂಜದ ಹೂವನ್ನು ಮುಡಿದುಕೊಳ್ಳುತ್ತಿದ್ದುದರ ಬಗ್ಗೆ ತಿಳಿಸುವ ಸಂದರ್ಭದಲ್ಲಿ ತಮಗೆ ಉದ್ದ ಕೂದಲಿದ್ದುದನ್ನು ಸ್ಮರಿಸುತ್ತಾ ಈ ಮಾತನ್ನು ಹೇಳುತ್ತಾರೆ . ಲೇಖಕರಿಗೆ ಹೆಣ್ಣು ಮಕ್ಕಳಂತೆ ಉದ್ದ ಕೂದಲಿತ್ತು . ಮಗಳು ಬೇಕೆಂಬುದು ಅವರ ಅಮ್ಮನ ಆಸೆಯೂ ಆಗಿತ್ತು . ಅವರು ಒಂದೊಂದು ಸಾರಿ ಲೇಖಕರಿಗೆ ಹುಡುಗಿಯರ ಉಡುಪು ತೊಡಿಸಿ ರಂಜದ ಹೂವು ಮುಡಿಸುತ್ತಿದ್ದರು .

ಸ್ವಾರಸ್ಯ : – ಲೇಖಕರು ತಮಗೂ ಉದ್ದ ಕೂದಲಿದ್ದುದು ಹಾಗೂ ಇಷ್ಟಪಟ್ಟು ರಂಜದ ಹೂವನ್ನು ಮುಡಿಯುತ್ತಿದ್ದುದು ಸ್ವಾರಸ್ಯಪೂರ್ಣವಾಗಿದೆ .

2. ‘ ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣಿ ”

ಉತ್ತರ : ಆಯ್ಕೆ : – ಈ ವಾಕ್ಯವನ್ನು ಯು.ಆರ್.ಅನಂತಮೂರ್ತಿಯವರ ‘ ಸುರಗಿ ‘ ಎಂಬ ಆತ್ಮಕಥನದಿಂದ ಆಯ್ಕೆಮಾಡಿಕೊಳ್ಳಲಾಗಿರುವ ‘ ಅಮ್ಮ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಲೇಖಕರಿಗೆ ಅವರ ಅಮ್ಮ ಅಕ್ಷರಾಭ್ಯಾಸ ಪ್ರಾರಂಭಿಸಿದ ಬಗ್ಗೆ ವಿವರಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ . ಲೇಖಕರ ಅಮ್ಮ ಕೆರೆಕೊಪ್ಪದ ಮನೆಯಲ್ಲಿದ್ದಾಗಲೇ ಹಬ್ಬದ ದಿನ “ ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ , ವಿದ್ಯಾರಂಭಂ ಕರಿಷ್ಯಾಮಿ | ಸಿದ್ಧಿರ್ಭವತು ಮೇ ಸದಾ ಎಂದು ಹೇಳಿ ನೆಲದಲ್ಲಿ ಮರಳು ಹರಡಿ ಕೂರಿಸಿ ಬೆರಳನ್ನು ಹಿಡಿದುಕೊಂಡು ‘ ಆ ‘ ಎಂಬ ಅಕ್ಷರವನ್ನು ಬರೆಯಿಸಿದರು .

ಸ್ವಾರಸ್ಯ : – ಮನೆಯೇ ಮೊದಲ ಪಾಠಶಾಲೆ , ಜನನಿತಾನೆ ಮೊದಲ ಗುರುವು … ‘ ಎಂಬುದು ಈ ಸಂದರ್ಭದಲ್ಲಿ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ .

3. ” ಇವತ್ತು ಮೇಷ್ಟಿಗೆ ಜ್ವರ ಬರಲಿ ದೇವರೇ “

ಉತ್ತರ : ಆಯ್ಕೆ : – ಈ ವಾಕ್ಯವನ್ನು ಯು.ಆರ್.ಆನಂತಮೂರ್ತಿಯವರ ‘ ಸುರಗಿ ‘ ಎಂಬ ಆತ್ಮಕಥನದಿಂದ ಆಯ್ಕೆಮಾಡಿಕೊಳ್ಳಲಾಗಿರುವ ‘ ಅಮ್ಮ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಲೇಖಕರಿಗೆ ಬಾಲ್ಯದಲ್ಲಿ ಕೃಷ್ಣಪ್ಪಯ್ಯ ಎಂಬ ಮೇಷ್ಟ್ರು ಮನೆಪಾಠ ಹೇಳಿಕೊಡುತ್ತಿದ್ದರು . ಅವರು ಬಹಳ ಕಟ್ಟುನಿಟ್ಟು , ಹಾಗಾಗಿ ಲೇಖಕರಿಗೆ ಅವರು ಪಾಠ ಹೇಳಲು ಬರುವುದು ಇಷ್ಟವಿರಲಿಲ್ಲ . ಆದ್ದರಿಂದ ” ಇವತ್ತು ಮೇಷ್ಟಿಗೆ ಜ್ವರ ಬರಲಿ ದೇವರೇ ” ಎಂದು ಮನಸ್ಸಿನಲ್ಲೇ ಪ್ರಾರ್ಥಿಸುತ್ತಿದ್ದ ಬಗ್ಗೆ ಈ ಸಂದರ್ಭದಲ್ಲಿ ಹೇಳಿದ್ದಾರೆ .

ಸ್ವಾರಸ್ಯ : – ಮೇಷ್ಟಿಗೆ ಜ್ವರ ಬಂದರೆ ಅವರು ಪಾಠ ಹೇಳಿಕೊಡಲು ಬರುವುದಿಲ್ಲ ಎಂದು ಲೇಖಕರು ಹೇಳುವ ಮಾತು ಬಹಳ ಸ್ವಾರಸ್ಯಕರವಾಗಿದೆ .

4. “ ನನಗೂ ಎಲ್ಲೋ ಒಂದೊಂದು ಸಾರಿ ಈ ಕಾಫಿಯ ಮುಣ್ಯ ಸಿಗುತ್ತಿತ್ತು “

ಉತ್ತರ : ಆಯ್ಕೆ : – ಈ ವಾಕ್ಯವನ್ನು ಯು.ಆರ್.ಅನಂತಮೂರ್ತಿಯವರ ‘ ಸುರಗಿ ‘ ಎಂಬ ಆತ್ಮಕಥನದಿಂದ ಆಯ್ಕೆಮಾಡಿಕೊಳ್ಳಲಾಗಿರುವ ‘ ಅಮ್ಮ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಲೇಖಕರಿಗೆ ಅವರ ಅಮ್ಮ ಚರಟದ ಕಾಫಿಕೊಟ್ಟು ತಂದೆಗೆ ‘ ಒರಿಜಿನಲ್ ‘ ಕಾಫಿ ಕೊಡುತ್ತಿದ್ದ ಬಗ್ಗೆ ಹೇಳುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ . ಮನೆಯಲ್ಲಿ ಎಲ್ಲರಿಗೂ ಕಾಫಿ ಮಾಡುವಷ್ಟು ಅನುಕೂಲ ಇರುತ್ತಿರಲಿಲ್ಲ . ಆದ್ದರಿಂದ ತಂದೆಗೆ ಮಾತ್ರ ಶುದ್ಧ ಕಾಫಿ ಕೊಟ್ಟು ಮನೆಯ ಉಳಿದವರಿಗೆ ಚರಟದ ಕಾಫಿ ನೀಡುತ್ತಿದ್ದರು . ಅಪರೂಪಕ್ಕೆಂಬಂತೆ ಒಂದೊಂದು ಸಾರಿ ಮಾತ್ರ ಒಳ್ಳೆಯ ಕಾಫಿ ಸಿಗುತ್ತಿತ್ತೆಂದು ಲೇಖಕರು ಹೇಳಿದ್ದಾರೆ . ಸ್ವಾರಸ್ಯ : – ಮನೆಯವರೆಲ್ಲರೂ ಒಳ್ಳೆಯ ಕಾಫಿ ಬೀಜದಿಂದ ಮಾಡಿದ ಕಾಫಿ ಕುಡಿಯುವುದಕ್ಕೂ ಕಷ್ಟವಾಗಿದ್ದ ಅಂದಿನ ಆರ್ಥಿಕ ಪರಿಸ್ಥಿತಿ ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿದೆ .

5. ” ನನಗೆ ಚರಟದಲ್ಲಿ ಕಾಫಿಯೋ ? ”

ಉತ್ತರ : ಆಯ್ಕೆ : – ಈ ವಾಕ್ಯವನ್ನು ಯು.ಆರ್.ಅನಂತಮೂರ್ತಿಯವರ ‘ ಸುರಗಿ ‘ ಎಂಬ ಆತ್ಮಕಥನದಿಂದ ಆಯ್ಕೆಮಾಡಿಕೊಳ್ಳಲಾಗಿರುವ ‘ ಅಮ್ಮ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಲೇಖಕರ ಮನೆಯಲ್ಲಿ ಅವರ ತಂದೆಗೆ ‘ ಒರಿಜಿನಲ್ ಕಾಫಿ ಕಾಫಿಕೊಟ್ಟು ಉಳಿದವರಿಗೆ ಶರಟದ ಕಾಫಿ ಕೊಡುತ್ತಿದ್ದ ಬಗ್ಗೆ ಹೇಳುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ . ಈ ರೀತಿ ಚರಟದ ಕಾಫಿ ನೀಡಿದಾಗ ಮನೆಯ ಯಜಮಾನನಾದ ನನಗೇ ಚರಟದ ಕಾಫಿಯೋ ? ಎಂದು ಪ್ರಶ್ನಿಸುತ್ತಿದ್ದರು .

ಸ್ವಾರಸ್ಯ : – ಲೇಖಕರ ಮನೆಯಲ್ಲಿ ಅವರ ಅಜ್ಜನಿಗಿಂತ ಹೆಚ್ಚಾಗಿ ಅವರ ತಂದೆಯವರಿಗೆ ಘನತೆ – ಗೌರವ ಹೆಚ್ಚಾಗಿದ್ದ ಸಂಗತಿ ಇಲ್ಲಿ ಸ್ವಾರಸ್ಯಕರವಾಗಿ ಮೂಡಿಬಂದಿದೆ .

ಈ ] ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ

1. ಅಧಿಕೃತವಾಗಿ ಲೇಖಕರ ಮೊದಲ ಶಿಕ್ಷಕರು ಕೃಷ್ಣಪ್ಪಯ್ಯ

2. ಮಳೆಗಾಲದಲ್ಲಿ ಮಲೆನಾಡಿನಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದ ಹಣ್ಣು ಹಲಸಿನ ಹಣ್ಣು

3. ‘ ಪಟ್ಟಾಂಗ ‘ ಈ ಪದದ ಅರ್ಥ ಹರಟೆ

4. ‘ ಕಡೆಗೋಲು ‘ ಪದವು ಆದೇಶಸಂಧಿ ಸಂಧಿಗೆ ಉದಾಹರಣೆಯಾಗಿದೆ .

5, ‘ ಸಕ್ಕರೆ ‘ ಪದದ ತತ್ಸಮ ರೂಪ ಶರ್ಕರಾ

8th Standard Amma Notes Question Answer Kseeb Solutions Pdf

ಇತರೆ ಪಾಠಗಳು :

ಯಶೋಧರೆ ಕನ್ನಡ ನೋಟ್ಸ್‌

ಹೂವಾದ ಹುಡುಗಿ ಕನ್ನಡ ನೋಟ್ಸ್

Leave your vote

26 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh