8ನೇ ತರಗತಿ ಭರವಸೆ ಪದ್ಯದ ಪ್ರಶ್ನೆ ಉತ್ತರ ನೋಟ್ಸ್, 8th Class Bharavase Kannada Notes Question answer Pdf Download, Bharavase Padya Notes
ತರಗತಿ : 8ನೇ ತರಗತಿ
ಪದ್ಯದ ಹೆಸರು : ಭರವಸೆ
ಕೃತಿಕಾರರ ಹೆಸರು : ಬಿ . ಟಿ . ಲಲಿತಾನಾಯಕ್
Table of Contents
ಕೃತಿಕಾರರ ಪರಿಚಯ :
ಬಿ . ಟಿ . ಲಲಿತಾನಾಯಕ್
ಶ್ರೀಮತಿ ಬಿ . ಟಿ . ಲಲಿತಾನಾಯಕ್ ಅವರು ಚಿಕ್ಕಮಗಳೂರು ಜಿಲ್ಲೆಯ ತಂಗಲಿ ತಾಂಡ್ಯದಲ್ಲಿ ೦೪.೦೪.೧೯೪೫ ರಲ್ಲಿ ಜನಿಸಿದರು . ಇವರ ಪ್ರಮುಖ ಕೃತಿಗಳೆಂದರೆ : ಚಂದ್ರ ಪರಾಭವ , ಭಟ್ಟನ ಕನಸು , ನೆಲೆಬೆಲೆ , ನಂ ರೂಫಿ , ಗತಿ , ಹಬ್ಬ ಮತ್ತು ಬಲಿ , ಇದೇ ಕೂಗು ಮತ್ತೆ ಮತ್ತೆ , ದೇವದುರ್ಗ ತಾಲೂಕು ದರ್ಶನ , ಒಡಲ ಬೇಗೆ -ಮೊದಲಾದವು . ಅಲ್ಲದೆ ಇವರು ಮಕ್ಕಳ ಕತೆ , ರೇಡಿಯೋ ನಾಟಕಗಳನ್ನೂ ರಚಿಸಿರುವರು . ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯೆಯಾಗಿಯೂ ಕರ್ನಾಟಕ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿಯೂ ಕಾರ ನಿರ್ವಹಿಸಿರುವರು . [ ಭರವಸೆ ಕವನವನ್ನು ಬಿ , ಟಿ . ಲಲಿತಾನಾಯಕ್ ಅವರ ‘ ಬಿದಿರು ಮೆಳೆ ಕಂಟೆಯಲಿ ‘ ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ . ]
8th Class Bharavase Kannada Notes Question answer Pdf
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,
1. ಕನ್ನಡ ಸಾರಸ್ವತ ಲೋಕಕ್ಕೆ ಬಿ.ಟಿ , ಲಲಿತಾನಾಯಕ್ ಅವರ ಕೊಡುಗೆ ಏನು ?
ಉತ್ತರ : ಬಂಡಾಯ ಹಾಗೂ ಸ್ತ್ರೀಸಂವೇದನೆಯ ಬರೆಹಗಳ ಮೂಲಕ ಖ್ಯಾತರಾದ ಬಿ.ಟಿ.
ಲಲಿತಾನಾಯಕ್ ಹಲವಾರು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ
2. ಕೋಗಿಲೆ ಕುಕಿಲರಾಗವನ್ನು ಯಾವಾಗ ಬೆರೆಸಿತು ?
ಉತ್ತರ : ಮಲ್ಲಿಗೆ ಮೊಗ್ಗು ಅರಳಿ ವಸಂತನ ಆಗಮನ ಸಾರಿದಾಗ ಕೋಗಿಲೆ ಕುಕಿಲರಾಗವನ್ನು ಬೆರೆಸಿತು .
3. ಮನುಷ್ಯ ಸ್ವಭಾವದ ಬಗ್ಗೆ ಕವಯಿತ್ರಿಯ ಅಭಿಪ್ರಾಯವೇನು ?
ಉತ್ತರ : ಮನುಷ್ಯ ಸ್ವಾರ್ಥದಲ್ಲಿ ಮುಳುಗಿದ್ದಾನೆ ಎಂಬುದು ಕವಯಿತ್ರಿಯವರ ಅಭಿಪ್ರಾಯವಾಗಿದೆ .
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .
1, ಕೋಗಿಲೆಯ ಆಶಾವಾದವೇನು ?
ಉತ್ತರ : “ ಮಾನವನ್ನು ಸ್ವಾರ್ಥಯಾಗಿ ಪ್ರಕೃತಿಯನ್ನು ನಾಶಪಡಿಸುತ್ತಿದ್ದಾನೆಂದು ಸೊರಗಬೇಕಾಗಿಲ್ಲ . ವಸಂತ ಋತುವಿನಲ್ಲಿ ಮಾವಿನ ಮರದ ಹಸಿರು , ಮಲ್ಲಿಗೆ ಹೂವಿನ ಸುವಾಸನೆ , ದುಂಬಿಗಳ ಝೇಂಕಾರ ಇವೆಲ್ಲಾ ಕವಿಯ ಕಲ್ಪನೆಯಲ್ಲಿ ಮೂಡಿಬರುವ ಗಾನ ಲಹರಿಯಂತೆ . ಅದಕ್ಕೆ ವಿನಾಶವಿಲ್ಲ . ಈ ಭೂಮಿಯು ಬರಡಲ್ಲ . ಈಗಲೂ ಅಲ್ಲಲ್ಲಿ ಅಮರ ಪ್ರೇಮದ ಒರತೆ ಹರಿಯುತ್ತಿರುವುದುಂಟು ” ಎಂಬುದು ಕೋಗಿಲೆಯ ಆಶಯವಾಗಿದೆ .
2 . ಮಲ್ಲಿಗೆ ಕೋಗಿಲೆಯನ್ನು ಕರೆದು ಏನು ಹೇಳಿತು ?
ಉತ್ತರ : ಮಲ್ಲಿಗೆ ಕೋಗಿಲೆಯನ್ನು ಕರೆದು “ ಪ್ರಿಯ ಗೆಳತಿ ಹಾಡೊಂದನ್ನು ಹಾಡು , ಬಾನಸಂಚಾರಿಣಿಯೇ , ಅನುಭವದ ಹೊನ್ನಿನ ಗಣಿಯೇ , ಲೋಕವಾರ್ತೆ ಏನೆಂಬುದನ್ನು ತಿಳಿಸು ‘ ಎಂದು ಹೇಳಿತು .
3. ಮಲ್ಲಿಗೆಯ ಕೋರಿಕೆಗೆ ಕೋಗಿಲೆ ಪ್ರಕೃತಿಯ ಬಗ್ಗೆ ಏನೆಂದು ಉತ್ತರ ನೀಡಿತು ?
ಉತ್ತರ : ಮಲ್ಲಿಗೆಯ ಕೋರಿಕೆಗೆ ಕೋಗಿಲೆಯು “ ಮಾನವನು ಸ್ವಾರ್ಥದಲ್ಲಿ ಮುಳುಗಿದ್ದು ಪ್ರಕೃತಿಯ ಸಿರಿ ಮುಡಿಯಾದ ಕಾಡಿಗೆ ಕೊಡಲಿ ಹಾಕಿದ್ದಾನೆ . ಮಣ್ಣಿನ ಸೊಗಡನ್ನು ಮರೆತು ಗೋಡೆಯ ಮೇಲೆ ಕೃತಕವಾಗಿ ಗಿಡ ಬಳ್ಳಿಯ ಚಿತ್ರಬಿಡಿಸುತ್ತಿದ್ದಾನೆ ” ಎಂದು ಪ್ರಕೃತಿಯ ಬಗ್ಗೆ ಹೇಳಿತು .
ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,
1. ಕೋಗಿಲೆ ತಿಳಿಸಿದ ಲೋಕವಾರ್ತೆ ಏನು ?
ವಿವರಿಸಿ ಉತ್ತರ : ಇಡೀ ಜಗತ್ತು ಕೃತಕತೆಯ ಬಲೆಯಲ್ಲಿ ಸಿಕ್ಕಿಕೊಂಡಿದೆ . ಇಲ್ಲಿ ನೈಜತೆಗೆ ಬೆಲೆ ಇಲ್ಲದಂತಾಗಿದೆ . ಮಾನವನು ತಾನೊಬ್ಬ ಬದುಕಿದರೆ ಸಾಕು , ಬೇರೆ ಏನಾದರೂ ತೊಮದರೆಯಿಲ್ಲ ಎಂಬ ಸ್ವಾರ್ಥದಲ್ಲಿ ಮುಳುಗಿದ್ದು ಪ್ರಕೃತಿಯ ಸಿರಿ ಮುಡಿಯಾದ ಕಾಡನ್ನು ನಾಶಪಡಿಸುತ್ತಿದ್ದಾನೆ . ಪ್ರಕೃತಿಯ ನಿಜವಾದ ಮಣ್ಣಿನ ಸೊಗಡನ್ನು ಮಾನವನು ಮರೆತಿದ್ದಾನೆ . ಎಲ್ಲವನ್ನು ನಾಶಮಾಡಿ ಗೋಡೆಯ ಮೇಲೆ ಕೃತಕವಾಗಿ ಗಿಡ – ಬಳ್ಳಿಯ ಚಿತ್ರಬಿಡಿಸುತ್ತಿದ್ದಾನೆ .
2. ಮಲ್ಲಿಗೆ ಮತ್ತು ಕೋಗಿಲೆಯ ಸಂಭಾಷಣೆಯನ್ನು ಬರೆಯಿರಿ
ಉತ್ತರ : ಮಲ್ಲಿಗೆ : “ ಪ್ರಿಯ ಗೆಳತಿ ಹಾಡೊಂದನ್ನು ಹಾಡು , ಬಾನಸಂಚಾರಿಣಿಯೇ , ಅನುಭವದ ಹೊನ್ನಿನ ಗಣಿಯೇ , ಲೋಕವಾರ್ತೆ ಏನೆಂಬುದನ್ನು ತಿಳಿಸು ಕೋಗಿಲೆ : ಚೆಲುವೆ , ನಾನು ಏನೆಂದು ಹಾಡಲಿ , ನಿನಗೆ ಏನನ್ನು ಹೇಳಲಿ , ನಾನು ಬಣ್ಣ ಬೆಡಗಿನ ಮೋಸದ ಮಾತನಾಡುವುದನ್ನು ತಿಳಿದಿಲ್ಲ . ಇಡೀ ಜಗತ್ತು ಕೃತಕತೆಯ ಬಲೆಯಲ್ಲಿ ಸಿಕ್ಕಿಕೊಂಡಿದೆ . ಇಲ್ಲಿ ನೈಜತೆಗೆ ಬೆಲೆ ಇಲ್ಲದಂತಾಗಿದೆ . ಮಾನವನು ಸ್ವಾರ್ಥದಲ್ಲಿ ಮುಳುಗಿದ್ದು ಪ್ರಕೃತಿಯ ಸಿರಿ ಮುಡಿಯಾದ ಕಾಡಿಗೆ ಕೊಡಲಿ ಹಾಕಿದ್ದಾನೆ . ಮಣ್ಣಿನ ಸೊಗಡನ್ನು ಮರೆತು ಗೋಡೆಯ ಮೇಲೆ ಕೃತಕವಾಗಿ ಗಿಡ – ಬಳ್ಳಿಯ ಚಿತ್ರಬಿಡಿಸುತ್ತಿದ್ದಾನೆ . ಹಾಗೆಂದು ನೀನು ಸೊರಗಬೇಕಾಗಿಲ್ಲ . ವಸಂತ ಋತುವಿನಲ್ಲಿ ಮಾವಿನ ಮರದ ಹಸಿರು , ಮಲ್ಲಿಗೆ ಹೂವಿನ ಸುವಾಸನೆ , ದುಂಬಿಗಳ ಝೇಂಕಾರ ಇವೆಲ್ಲಾ ಕವಿಯ ಕಲ್ಪನೆಯಲ್ಲಿ ಮೂಡಿಬರುವ ಗಾನ ಲಹರಿಯಂತೆ . ಅದಕ್ಕೆ ವಿನಾಶವಿಲ್ಲ . ಈ ಭೂಮಿಯು ಬರಡಲ್ಲ . ಈಗಲೂ ಅಲ್ಲಲ್ಲಿ ಅಮರ ಪ್ರೇಮದ ಒರತೆ ಹರಿಯುತ್ತಿರುವುದುಂಟು
ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .
1. “ ಅಮರ ಪ್ರೇಮದ ಒರತೆ ಹರಿಯುವುದು ಉಂಟು ಅಲ್ಲಲ್ಲಿ ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಬಿ . ಟಿ . ಲಲಿತಾನಾಯಕ್ ಅವರ ‘ ಬಿದಿರು ಮೆಳೆ ಕಂಟಿಯಲಿ ‘ ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾದ ‘ ಭರವಸೆ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಮಾನವನು ಸ್ವಾರ್ಥದಲ್ಲಿ ಮುಳುಗಿದ್ದು ಪ್ರಕೃತಿಯನ್ನು ನಾಶಪಡಿಸುತ್ತಿದ್ದಾನೆ ಎಂದು ಪ್ರಸ್ತುತ ಸ್ಥಿತಿಯನ್ನು ಹೇಳಿದ ಕೋಗಿಲೆಯು ತಾನೇ ಆಶಾವಾದದ ಮಾತನ್ನಾಡುತ್ತಾ ‘ ಈ ಭೂಮಿಯು ಬರಡಲ್ಲ . ಈಗಲೂ ಅಲ್ಲಲ್ಲಿ ಅಮರ ಪ್ರೇಮದ ಒರತೆ ಹರಿಯುತ್ತಿರುವುದುಂಟು ‘ ಎಂದು ಈ ಸಂದರ್ಭದಲ್ಲಿ ಹೇಳುತ್ತದೆ .
ಸ್ವಾರಸ್ಯ : ಜಗತ್ತು ಎಷ್ಟೇ ಬದಲಾದರೂ ಆಶಾವಾದದಿಂದ ಬದುಕಬೇಕು ಎಂಬುದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
2. “ ಬೆರೆಸಿತದರೊಳಗೊಂದು ಕುಕಿಲರಾಗ ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಬಿ . ಟಿ . ಲಲಿತಾನಾಯಕ್ ಅವರ ‘ ಬಿದಿರು ಮೆಳೆ ಕಂಟಿಯಲಿ ‘ ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾದ ‘ ಭರವಸೆ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಮಲ್ಲಿಗೆಯ ಮೊಗ್ಗು ಅರಳಿ , ಸುತ್ತಲೂ ಪರಿಮಳ ಬೀರಿ , ವಸಂತ ಋತುವಿನ ಆಗಮನವನ್ನು ಸಾರಿದಾಗ , ಮಾವಿನ ಮರದಲ್ಲಿ ಕುಳಿತಿದ್ದ ಕೋಗಿಲೆಯು ತನ್ನ ಕುಕಿಲರಾಗವನ್ನು ಬೆರೆಸಿತು ಎಂದು ವಣಿಸುವ ಸಂದರ್ಭದಲ್ಲಿ ಕವಯಿತ್ರಿ ಹೀಗೆ ಹೇಳಿದ್ದಾರೆ .
ಸ್ವಾರಸ್ಯ : ವಸಂತ ಋತುವಿನ ಆಗಮನದ ವರ್ಣನೆ ಕೋಗಿಲೆಯ ಗಾನದೊಂದಿಗೆ ಆಯಿತೆಂದು ವರ್ಣಿಸಿರುವುದು ಸ್ವಾರಸ್ಯವಾಗಿದೆ .
3. “ ನೈಜತೆಗೆ ಇಲ್ಲ ಬೆಲೆಯು ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಬಿ . ಟಿ . ಸಂಕಲನದಿಂದ ಆರಿಸಿಕೊಳ್ಳಲಾದ ‘ ಭರವಸೆ ‘ ಎಂಬ ಪದ್ಯಭಾಗದಿಂದ ದಿ ಲಲಿತಾನಾಯಕ್ ಅವರ ‘ ಬಿದಿರು ಮೆಳೆ ಕಂಟಿಯಲಿ ‘ ಎಂಬ ಕವನ ತೆಗೆದುಕೊಳ್ಳಲಾಗಿದೆ . ಸಂದರ್ಭ : ಮಲ್ಲಿಗೆಯು “ ಹಾಡೊಂದನ್ನು ಹೇಳು , ಲೋಕವಾರ್ತೆ ಏನೆಂಬುದನ್ನು ತಿಳಿಸು ಎಂದು ಕೋಗಿಲೆಯನ್ನು ಕೇಳಿದಾಗ ಅದು “ ನಾನು ಏನೆಂದು ಹಾಡಲಿ , ನಿನಗೆ ಏನನ್ನು ಹೇಳಲಿ , ಇಡೀ ಜಗತ್ತು ಕೃತಕತೆಯ ಬಲೆಯಲ್ಲಿ ಸಿಕ್ಕಿಕೊಂಡಿದೆ . ಇಲ್ಲಿ ನೈಜತೆಗೆ ಬೆಲೆ ಇಲ್ಲದಂತಾಗಿದೆ ” ಎಂದು ಹೇಳುವ ಸಂದರ್ಭವಾಗಿದೆ .
ಸ್ವಾರಸ್ಯ : ಪ್ರಸ್ತುತ ಮಾನವನು ಸಂಪೂರ್ಣವಾಗಿ ಎಲ್ಲಾರೀತಿಯಲ್ಲೂ ಕೃತಕತೆಯಿಂದ ಬದುಕುತ್ತಿರುವುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
8th Class Bharavase Kannada Notes Question answer Pdf
ಇತರೆ ಪದ್ಯಗಳು :