10ನೇ ತರಗತಿ ಸ್ವಾಮಿ ವಿವೇಕಾನಂದರ ಚಿಂತನೆಗಳು ನೋಟ್ಸ್,10th Class Swami Vivekananda Chintanegalu in Kannada notes Question Answer Pdf
ಪಠ್ಯಪೂರಕ ಅಧ್ಯಯನ -೧
ಸ್ವಾಮಿ ವಿವೇಕಾನಂದರ ಚಿಂತನೆಗಳು
Swami Vivekananda Chintanegalu in Kannada notes
Table of Contents
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ಸರ್ವಧರ್ಮ ಸಮ್ಮೇಳನವು ಎಲ್ಲಿ ನಡೆಯಿತು ?
ಉತ್ತರ : ಸರ್ವಧರ್ಮ ಸಮ್ಮೇಳನವು ಚಿಕಾಗೋದಲ್ಲಿ ನಡೆಯಿತು
2. ವಿವೇಕಾನಂದರೆಂದರೆ ಯಾವುದರ ರೂಪಕವಾಗಿದೆ ?
ಉತ್ತರ : ವಿವೇಕಾನಂದರೆಂದರೆ ಸಾಮಾಜಿಕ ಸಂಕಟ , ಸಿಟ್ಟು , ಸ್ಫೋಟ , ಸ್ಪಷ್ಟತೆಗಳ ರೂಪಕವಾಗಿದೆ .
3. ವಿವೇಕಾನಂದರು ಮೊದಲನೆ ಆದ್ಯತೆ ಯಾವುದಕ್ಕೆ ನೀಡಬೇಕೆಂದಿದ್ದಾರೆ ?
ಉತ್ತರ : ವಿವೇಕಾನಂದರು ದೈಹಿಕ ಹಸಿವನ್ನು ಇಂಗಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕೆಂದಿದ್ದಾರೆ .
4. ವಿವೇಕಾನಂದರು ಯಾವ ವ್ಯವಸ್ಥೆಯನ್ನು ವಿರೋಧಿಸುತ್ತಾರೆ ?
ಉತ್ತರ : ವಿವೇಕಾನಂದರು ಜಾತಿ ಮತ್ತು ವರ್ಗ ವ್ಯವಸ್ಥೆಯನ್ನು ವಿರೋಧಿಸಿದರು .
5. ಜಾತಿ ವ್ಯವಸ್ಥೆಯ ಕೌರ್ಯಕ್ಕೆ ತುತ್ತಾಗಿರುವವರು ಯಾರು ?
ಉತ್ತರ : ಶೂದ್ರರು , ಅಸ್ಪೃಶ್ಯರು ಜಾತಿ ವ್ಯವಸ್ಥೆಯ ಕೌರ್ಯಕ್ಕೆ ತುತ್ತಾಗಿದ್ದಾರೆ .
6. ವಿವೇಕಾನಂದರನ್ನು ‘ ಮಾನವತಾಮಿತ್ರ ‘ ರೆಂದು ಕರೆದವರಾರು ?
ಉತ್ತರ : ಕುವೆಂಪು ಅವರು ವಿವೇಕಾನಂದರನ್ನು ‘ ಮಾನವತಾಮಿತ್ರ ‘ ಎಂದು ಕರೆದರು .
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ ,
1. ವಿವೇಕಾನಂದರು ಕೋಮುವಾದದ ಕಟ್ಟಾ ವಿರೋಧಿಯಾಗಿದ್ದರು . ಏಕೆ ?
ಉತ್ತರ : ಕೋಮುವಾದವು ಏಕಧರ್ಮ ಮತ್ತು ಏಕಸಂಸ್ಕೃತಿಯೇ ಶ್ರೇಷ್ಠವೆಂದೂ ಅದೇ ಅಂತಿಮವೆಂದೂ ನಂಬುತ್ತ ನಂಬಿಸುತ್ತ , ಪರಮಧರ್ಮ ದ್ವೇಷವನ್ನು ಬಿತ್ತಿ ಬೆಳೆಸುತ್ತದೆ . ಆದ್ದರಿಂದ ವಿವೇಕಾನಂದರು ಕೋಮುವಾದದ ಕಟ್ಟಾ ವಿರೋಧಿಯಾಗಿದ್ದರು .
2. ವಿವೇಕಾನಂದರು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಹೇಳಿದ್ದೇನು ?
ಉತ್ತರ : ಚಿಕಾಗೊದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡುತ್ತ ಅವರು “ ಸ್ವಮತಾಭಿಮಾನ , ಅನ್ಯ ಮತದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನಗಳು ಈ ಸುಂದರ ಜಗತ್ತನ್ನು ಆವರಿಸಿಕೊಂಡಿವೆ . ಇಂತಹ ಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೆ ಇದ್ದರೆ ಮಾನವ ಜನಾಂಗ ಇಂದಿಗಿಂತ ಎಷ್ಟೋ ಮುಂದುವರೆಯುತ್ತಿತ್ತು ” ಎಂದು ಹೇಳಿದರು .
3. ಜಾತಿ ವ್ಯವಸ್ಥೆಯ ಬಗ್ಗೆ ವಿವೇಕಾನಂದರ ಅಭಿಪ್ರಾಯವೇನು ?
ಉತ್ತರ : ಜಾತಿ ವ್ಯವಸ್ಥೆಯ ಬಗ್ಗೆ ವಿವೇಕಾನಂದರು “ ಜಾತಿ ಎಂಬುದು ಸಮಾಜದ ಒಂದು ಆಂತರಿಕ ಭಾಗವಾಗಿದೆ . ಹಿಂದೆ ಅದು ವಿಕಾಸವಾಗುತ್ತಿತ್ತು . ಈಗ ಅದು ಘನೀಭೂತವಾಗಿದೆ . ಅದರ ದುರ್ಗಂಧದಿಂದ ಭಾರತದ ವಾತಾವರಣವೆಲ್ಲ ತುಂಬಿದೆ ” ಎಂದು ಅಭಿಪ್ರಾಯಪಟ್ಟಿದ್ದಾರೆ
10th Class Swami Vivekananda Chintanegalu in Kannada notes Question Answer Pdf
ಇತರೆ ಪಾಠಗಳು: