1st Puc English Watchman of The Lake Notes Pdf | ಪ್ರಥಮ ಪಿ.ಯು.ಸಿ ಇಂಗ್ಲೀಷ್ ನೋಟ್ಸ್‌ Pdf

1st Puc English Watchman of The Lake Notes Pdf 11th Standard English 8th Poem Notes Pdf Karnataka First Puc 8thLesson Textbook Extract Questions Answer kseeb solutions for 1st puc english 8th lesson Watchman of The Lake lesson summary class 11 pdf download 2023

11th Standard English 8th Poem Notes Pdf Karnataka

Class : 1st Puc

Chapter Name: Watchman of The Lake

watchman of the lake question answer Download

1st Puc English Watchman of The Lake Notes Pdf
1st Puc English Watchman of The Lake Notes Pdf

Watchman of the Lake Summary of the Kannada

ನಾಟಕರೂಪದ ಈ ಕಥಾನಕದಲ್ಲಿ ಆರ್.‌ ಕೆ. ನಾರಾಯಣ್ ರವರು ಮಾರ ಎಂಬ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯದ ಜೀವಿತವನ್ನು ಚಿತ್ರಿಸಿದ್ದಾರೆ. ಈ ಪ್ರಹಸನವು ಐದು ದೃಶ್ಯಗಳಿಂದ ಕೂಡಿದೆ.
ದೃಶ್ಯ-1:
ಈ ದೃಶ್ಯದಲ್ಲಿ ಹಳ್ಳಿಯ ಗೌಡನು ಮಹಾರಾಜರ ಆಗಮನದ ಸಲುವಾಗಿ ಕೆಲಸಗಾರರಿಂದ ರಸ್ತೆಯನ್ನು ಸಿದ್ದಪಡಿಸುತ್ತಿದ್ದಾನೆ. ಸರಿಯಾಗಿ ಕೆಲಸ ಮಾಡದೆ ಸೋಮಾರಿತನದಿಂದ ಇರುವ ರಾಜ, ಭೀಮ, ಕುಳ್ಳ , ಮುಂತಾದ ಕೆಸಗಾರರನ್ನು ಗದರಿಸುತ್ತಾ ಅವರಿಂದ ಕೆಲಸ ತೆಗೆಯುತ್ತಿದ್ದಾನೆ. ಗೌಡ ಎಷ್ಟು ಬೈದರೂ ಇವರೆಲ್ಲಾ ನಗುತ್ತಲೇ ಇರುತ್ತಾರೆ. ಅದಕ್ಕೆ ಕಾರಣವೇನೆಂದು ಕೇಳಿದಾಗ ಮಾರ ಬಂಡೆಯ ಹಿಂದೆ ನಿಂತು ತಮಾಷೆ ಮಾಡುತ್ತಿರುವುದಾಗಿ ಅವರೆಲ್ಲ ಹೇಳುತ್ತಾರೆ. ಅವರೆಲ್ಲ ಹೇಳುತ್ತಾರೆ. ಗೌಡನ ಆಜ್ಞೆಯಂತೆ ಅವರೆಲ್ಲಾ ಮಾಡುತ್ತಿದ್ದ ಕೆಲಸವನ್ನು ಬಿಟ್ಟು, ಮಾರನು ಹಿಡಿದು ತರುತ್ತಾರೆ. ಕೆಲಸದ ಸ್ಥಳಕ್ಕೆ ಬರಬೇಡವೆಂದು ಹೇಳಿದ್ದರೂ ನೀನೆಕೆ ಇಲ್ಲಿಗೆ ಬಂದೆ? ಎಂದು ಗೌಡ ಮಾರನನ್ನು ಗದರಿಸುತ್ತಾನೆ,
ಆಗ ಮಾರ ತಾನು ತನ್ನ ಕೆಲಸದ ಮೇಲೆ ಬಂದಿರುವುದಾಗಿಯೂ ಅವರೆಲ್ಲಾ ಅವರ ಕೆಲಸವನ್ನು ಮಾಡಿಕೊಳ್ಳಲಿ ಎಂದು ಹೇಳುತ್ತಾನೆ. ಮಾರ ಒಬ್ಬ ಹುಚ್ಚನಾಗಿರುವುದರಿಂದ ಮಹಾರಾಜರ ಆಗಮನದ ವೇಳೆಯಲ್ಲಿ ಅವನು ಕಾಣಿಸಿಕೊಳ್ಳುವುದು ಬೇಡವೆಂಗುದು ಗೌಡನ ಎಣಿಕೆ. ಹಾಗಾಗಿ ಅವನು ಎರಡು ದಿನಗಳ ಕಾಲ ಈ ದಿಕ್ಕಿಗೆ ಬರಬಾರದೆಂದು ವಿಧವಿಧವಾಗಿ ಗೌಡ ಅವನ ಮನ ಒಲಿಸಲು ನೋಡುತ್ತಾನೆ. ಆದರೆ ಹೆದರಿಕೆ, ಆಮಿಷ ಯಾವುದಕ್ಕೂ ಒಪ್ಪದ ಮಾರ, “ಕಳೆದ ಕೆಲವು ದಿನಗಳಿಂದ ನದೀದೇವತೆಯು ತನ್ನ ಕನಸಿನಲ್ಲಿ ಬಂದು ವೇದಾನದಿಗೆ ಕಟ್ಟೆಯನ್ನು ಕಟ್ಟಲು ಆಜ್ಞಾಪಿಸುತ್ತಿದ್ದಾಳೆ. ಈ ವಿಷಯವನ್ನು ರಾಜನಿಗೆ ತಾನು ತಿಳಿಸಬೇಕು ಎನ್ನುತ್ತಾನೆ. ಈ ಮಾತನ್ನು ಈಗಾಗಲೇ ಹಲವು ಬಾರಿ ಮಾರ ಗೌಡನಿಗೆ ಹೇಳಿರುತ್ತಾನಾದ್ದರಿಂದ ಗೌಡ ಇದನ್ನು ಗಂಭೀರವಾಗಿ ಪರಿಗಣಿಸದೇ ಹುಚ್ಚನ ಬಡಬಡಿಕೆ ಎಂದು ಅಲಕ್ಷಿಸುತ್ತಾನೆ. ತನ್ನ ಮಾತಿಗೆ ಮಾರ ಒಪ್ಪದಿದ್ದಾಗ ಭೀಮ ಎಂಬ ಆಳನ್ನು ಕರೆದು ಮಾರನ ಕೈಕಾಲು ಕಟ್ಟಿ ಗುಡಿಯ ಹಿಂದಿನ ಬಂದೀಖಾನೆಯಲ್ಲಿ ಮುಂದಿನ ಎರಡು ದಿನಗಳವರೆಗೆ ಬಂಧನದಲ್ಲಿ ಇಡುವಂತೆ ಆಜ್ಞಾಪಿಸುತ್ತಾನೆ.
ದೃಶ್ಯ -2:
ರಾಜನ ಅಗಮನದೊಂದಿಗೆ ಎರಡನೆಯ ದೃಶ್ಯ ಆರಂಭವಾಗುತ್ತದೆ. ರಾಜನ ಮೆರವಣಿಗೆ ಒಂದು ಮರದ ಬಳಿಗೆ ಬಂದಾಗ ಒಬ್ಬ ವ್ಯಕ್ತಿ ಮರದ ಮೇಲಿಂದ ರಾಜನ ಮುಂದೆ ಧುಮುಕುತ್ತಾನೆ. ಅವನು ಮತ್ತಾರು ಆಗಿರದೆ ಜೈಲಿನಿಂದ ತಪ್ಪಿಸಿಕೊಂಡು ಬಂದ ಮಾರನಾಗಿರುತ್ತಾನೆ. ನಿನಗೇನು ಬೇಕು? ಎಂದು ರಾಜ ಕೇಳಿದಾಗ ಅವನು ತನ್ನ ಕನಸಿನ ಸಂಗತಿಯನ್ನು ವಿವರಿಸಲು ಅವಕಾಶ ನೀಡಬೆಕೆಂದು ಕೋರುತ್ತಾನೆ. ರಾಜ ಅದಕ್ಕೆ ಅಪ್ಪಣೆ ನೀಡಿದಾಗ “ಮಹಾಸ್ವಾಮಿ , ಈಗ ನೀವು ನಿಂತಿರುವ ಜಾಗ ಬಹಳ ಪವಿತ್ರವಾದದ್ದು.
ಹಿಂದೆ ರಾಮಾಯಣದ ಕಾಲದಲ್ಲಿ ಯುದ್ದಭೂಮಿಯಲ್ಲಿ ಲಕ್ಷ್ಮಣ ಮೂರ್ಛಿತನಾಗಿ ಬಿದ್ದಿದ್ದಾಗ ಹನುಮಂತ ಇಲ್ಲಿಯೇ ಪಕ್ಕದಲ್ಲಿರುವ ಪರ್ವತಕ್ಕೆ ಬಂದು ಸತ್ತವರನ್ನು ಬದುಕಿಸುವ ಸಂಜೀವಿನಿಯ್ನು ಹುಡುಕಿ ಒಯ್ದು ಲಕ್ಷ್ಮಣನನ್ನು ಬದುಕಿಸಿದೆ. ಆ ಸ್ಥಳದಲ್ಲಿ ಹುಟ್ಟಿದ್ದೇ ವೇದಾ ಎಂದು ಕರೆಯಲಾಗುವ ನದಿ. ಅದೆ ನಮ್ಮೆಲ್ಲರ ಜೀವಾಧಾರ. ಒಂದು ದಿನ ಕನಸಿನಲ್ಲಿ ನನಗೆ ದೇವಿ ಕಾಣಿಸಿಕೊಂಡು ಅತ್ಯಂತ ಪುಣ್ಯಪ್ರದವಾದ ಈ ವೇದಾನದಿಯು ನನ್ನದೇ ಸೃಷ್ಟಿ. ಮಳೆಗಾಲದಲ್ಲಿ ಈ ನದಿಯಿಂದ ನಿಮಗೆ ದೊರಕುವ ನೀರು ಸಾಕಷ್ಟೂ ಇತ್ತಾದರೂ ಬೇಸಿಗೆಯಲ್ಲಿ ಪಶುಪಕ್ಷಿಗಳೆಲ್ಲವೂ ಸೇರಿದಂತೆ ನೀವೆಲ್ಲರೂ ನೀರಿಲ್ಲದೆ ಬಳಲುತ್ತೀರಿ. ಹಾಗಾಗಿ ವೇದ ನದಿಗೆ ಒಂದು ತಡೆಯನ್ನು ನಿರ್ಮಿಸಿ ಅವಳಿಗೊಂದು ನೆಲೆ ನೀಡಿ ಎಂದು ಆಜ್ಞಾಪಿಸಿದಳು.
ಇದನ್ನು ನಿಮಗೆ ಹೇಳಲೆಂದೇ ನಾನು ಹೀಗೆ ಕಾದಿದ್ದೆ. ಇದು ನಿಮಗೆ ತಪ್ಪೆನಿಸಿದರೆ ಆನೆಯ ಕಾಲಿಗೆ ನನ್ನನ್ನು ಕೊಟ್ಟು ಕೊಂದು ಬಿಡಿ” ಎಂದನು. ರಾಜನು ಮಾರನ ಮಾತನ್ನು ಒಪ್ಪಿ ವೇದಾನದಿಗೆ ತಡೆಯನ್ನು ನಿರ್ಮಿಸಿ ಒಂದು ಸರೋವರವನ್ನು ಏರ್ಪಡಿಸುತ್ತಾನೆ. ಮತ್ತು ಮಾರನನ್ನೇ ಅದರ ಮೇಲ್ವಿಚಾರಣೆಗಾಗಿ ನೇಮಿಸುತ್ತಾನೆ.
ದೃಶ್ಯ -3:
ಎರಡನೇ ದೃಶ್ಯದ ಘಟನೆಗಳು ನಡೆದ ಹಲವಾರು ವರ್ಷಗಳ ನಂತರ ಮೂರನೆ ದೃಶ್ಯವು ನಡೆದಂತೆ ಲೇಖಕರು ಇಲ್ಲಿ ಚಿತ್ರಿಸಿದ್ದಾರೆ. ಈ ವೇಳೆಗೆ ಮಾರನಿಗೆ ಮದುವೆಯಾಗಿ ಅವನಿಗೆ 8-10 ವರ್ಷದ ಗಂಗಾ ಎಂಬ ಮಗನೂ ಇದ್ದಾನೆ. ಒಂದು ದಿನ ಮಾರ ತನ್ನ ಮಗನನ್ನು ಹುಡುಕುತ್ತಾ ಬರುತ್ತಾನೆಲ. ಅನೇಕ ಬಾರಿ ಅವನ ಹೆಸರನ್ನು ಕೂಗಿದ ಮೆಲೆ ಗಂಗಾತಂದೆಯಲ್ಲಿಗೆ ಬಂದು ” ತಾನು ಸರೋವರದಲ್ಲಿ ಯಾರೋ ಮೀನು ಹಿಡಿಯುವುದನ್ನು ನೋಡುತ್ತಿದ್ದೆ. ಎನ್ನುತ್ತಾನೆ. ಪವಿತ್ರವಾದ ಆ ಸರೋವರದಲ್ಲಿ ಯಾವ ಜೀವಜಂತುವನ್ನು ಕೊಲ್ಲಲು ಮಾರ ಬಿಡುತ್ತಿರಲಿಲ್ಲ. ಆದ್ದರಿಂದ ಅವನು ಕೂಡಲೇ ಮಗನೊಂದಿಗೆ ಅಪರಿಚಿತನೊಬ್ಬ ಮೀನುಹಿಡಿಯುತ್ತ್ದ್ದ ಸ್ಥಳಕ್ಕೆ ಓಡುತ್ತಾನೆ, ಮೀನು ಹಿಡಿಯುತ್ತಿದ್ದವನನ್ನು ಗದರಿಸಿ ಈ ಪವಿತ್ರ ಕೊಳದ ಮೀನನ್ನು ಹಿಡಿದರೆ ನಿನ್ನನ್ನು ನೀರಿಗೆ ತಳ್ಳಿಬಿಡುತ್ತೇವೆ. ಎಂದು ಹೆದರಿಸುತ್ತಾನೆ. ಆಗ ಆತ ನೀನೊಬ್ಬಸಾಮಾನ್ಯ ಕಾವಲುಗಾರ. ಆದರೆ ನೀನೆ ಈ ಕೊಳದ ಯಜಮಾನನಂತೆ ಮಾತನಾಡುತ್ತಿದ್ದೀಯಲ್ಲಾ? ಎಂದು ಪ್ರಶ್ನಿಸಿದಾಗ ಬಹಳ ಹೆಮ್ಮೆಯಿಂದ ಮಾರ ಆ ಸರೋವರ ನಿರ್ಮಾಣ ವಾದ ಹಿನ್ನೆಲ್ಲೆಯನ್ನೆಲ್ಲ. ವಿವರಿಸಿ ತಾನೆ ಆ ಸ್ಥಳದ ಒಡೆಯನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ

ಅಷ್ಟೇ ಅಲ್ಲದೆ ತನ್ನ ಮಗನಿಗೂ ತನ್ನ ಅನುಪಸ್ಥಿತಿಯಲ್ಲಿ ಯಾರು ಕೊಳದ ಜೀವಜಂತುಗಳಿಗೆ ತೊಂದರೆ ಮಾಡದಂತೆ ನೋಡಿಕೊಳ್ಳುವಂತೆ ಆದೇಶ ನೀಡುತ್ತಾನೆ. ಅದೆ ವೇಳಗೆ ಹಸುವಿಗೆ ನೀರು ಕುಡಿಸಲೆಂದು ಒಬ್ಬ ವ್ಯಕ್ತಿ ಕೊಳದ ಬಳಿ ಬಂದು ಆ ಜಾಗದಲ್ಲಿ ತುಂಬಾ ಆಳವಿರುವುದರಿಂದ ಬೇರೆಡೆಗೆ ಕರೆದೊಯ್ಯುವಂತೆ ತಿಳಿಸಲು ತನ್ನ ಮಗನಿಗೆ ಮಾರ ಹೇಳುತ್ತಾನೆ, ಮತ್ತು ದೂರದ ತಮ್ಮ ಹಳ್ಳಿಗೂ ನೀರಿನ ಸರಬರಾಜು ಮಾಡಿ ಕೋರಿ ಬಂದ ಹಳ್ಳಿಗನೊಬ್ಬನಿಗೆ ಕಾಲುವೆಗಳನ್ನು ತೋಡಿಕೊಳ್ಳಲು ಸಂತೋಷದಿಂದ ತಿಳಿಸುತ್ತಾನೆ. ಆ ವೇಳೆಗೆ ಜೋರಾದ ಮಳೆ ಆರಂಭವಾಗುವ ಎಲ್ಲ ಸೂಚನೆಗಳೂ ಕಂಡುಬರುತ್ತದೆ.
ದೃಶ್ಯ-4:
ಈ ದೃಶ್ಯವು ರಾಜನ ಅರಮನೆಯ ಅಂತಃಪುರದಲ್ಲಿ ನಡೆಯುತ್ತದೆ. ಅರ್ಧರಾತ್ರಿಯಲ್ಲಿ ರಾಜನನ್ನು ಮಾರ ಗಂಟೆ ಬಡಿದು ಎಬ್ಬಿಸುತ್ತಾನೆ. ಗಾಳಿ, ಮಳೆಗಳಿಗೆ ಸಿಕ್ಕು ತೊಯ್ದು ಹೋಗಿದ್ದ ಆತ ಸುರಿಯುತ್ತಿರುವ ಭೀಕರವಾದ ಮಳೆಯ ಕಾರಣದಿಂದಾಗಿ ವೇದಾ ನದಿಯು ಉಕ್ಕಿ ಹರಿಯುತ್ತಿದ್ದು ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ಅದಕ್ಕೆ ಕಟ್ಟಿರುವ ಕಟ್ಟೆ ಒಡೆದುಹೋಗಲಿದೆ. ಆಗ ರಾಜಧಾನಿಯ ಜನರು ಸೇರಿದಂತೆ ನದಿಪಾತ್ರದಲ್ಲಿರುವ ಎಲ್ಲರೂ ನೀರಿನಲ್ಲಿ ಕೊಚ್ಚಿಹೋಗಲಿದ್ದಾರೆ. ಎಂದು ವಿವರಿಸಿದ. ಮಾತ್ರವಲ್ಲದೆ ಹಿಂದೊಮ್ಮೆ ಅದಂತೆ ಇಂದೂ ದೆವಿಯು ತನಗೆ ಪ್ರತ್ಯಕ್ಷಳಾಗಿದ್ದಳು. ಬಹಳ ಕೋಪಗೊಂಡಿದ್ದ ಕ್ರೂರರೂಪಿಯಾದ ಅವಳು ಸರೋವರದ ಕಟ್ಟೆಯನ್ನು ಒಡೆದುಹಾಕುವುದಾಗಿ ಅರ್ಭಟಿಸಿದಳು. ನಾನು ಅವಳನ್ನು ಪ್ರಾರ್ಥಿಸಿದೆ. ಸಾವಿರಾರು ಹಳ್ಳಿ, ಊರುಗಳು ನೀರಿನಲ್ಲಿ ಕೊಚ್ಚಿಹೋಗುತ್ತವೆ. ಲಕ್ಷಾಂತರ ಮಂದಿ ಸಾವನ್ನಪ್ಪುತ್ತಾರೆ ಅದ್ದರಿಂದ ದಯಮಾಡಿ ಹಾಗೆ ಮಾಡಬೇಡ. ಎಂದು ಕೋರಿದೆ. ಆದರೆ ಆಕೆ ಒಪ್ಪಲಿಲ್ಲ.
ಕಡೆಗೆ ನಾಉ ರಾಜದಾನಿಗೆ ಓಡಿಹೋಗಿ ರಾಜನಿಗೆ ಈ ವಿಷಯವನ್ನು ತಿಳಿಸಿ ಹಿಂದಿರುಗಿ ಬರುವವರೆಗೂ ಸರೋವರವನ್ನು ಒಡೆದುಹಾಕಬೇಡ. ಎಂದು ಕೋರಿದ್ದೇನೆ. ದೇವಿಯೂ ಅದಕ್ಕೆ ಒಪ್ಪಿದ್ದಾಳೆ. ಆದ್ದರಿಂದ ನಿಮಗೆ ವಿಷಯ ತಿಳಿಸಲು ಓಡಿಬಂದೆ” ಎಂದು ವಿಸ್ತಾರವಾಗಿ ಸಂಗತಿಯನ್ನು ಅರುಹಿದೆ. ಸಂದರ್ಭದ ತೀವ್ರತೆಯನ್ನು ಅರಿತ ಮಹಾರಾಜ ತಾನು ಕೂಡಲೇ ಎಲ್ಲ ಕಡೆ ಡಂಗೂರವನ್ನು ಸಾರಿಸಿ ಎಲ್ಲರು ಸಿದ್ದರಾಗುವಂತೆ ತಿಳಿಸುವುದಾಗಿ ಮಾರನಿಗೆ ಹೇಳಿದ. ಆದರೆ ಮಾರ ರಾಜನಿಗೆ ಮತ್ತೊಂದು ಸಲಹೆಯನ್ನು ನೀಡಿದ ಅದೇನೆಂದರೆ ದೇವಿಯು ನೀಡಿರುವ ವರದಂತೆ ತಾನು ವಾಪಸ್ಸು ಸರೋವರದ ಬಳಿ ಹೋದರೆ ಮಾತ್ರ ಆಕೆ ಅದನ್ನು ಒಡೆದುಹಾಕುತ್ತಾಳೆ.
ಇಲ್ಲದಿದ್ದಲ್ಲಿ ತಾನು ಬರುವವರೆಗೆ ಕಾಯುತ್ತಾಳೆ. ಅದ್ದರಿಂದ ರಾಜ ತನ್ನನ್ನು ಇಲ್ಲಿಯೇ ಕತ್ತರಿಸಿ ಕೊಂದು ಬಿಟ್ಟರೆ ದೇವಿಗೆ ಸರೋವರವನ್ನು ಒಡೆಯುವ ಸಂದರ್ಭವೇ ಹುಟ್ಟುವುದಿಲ್ಲ. ಆಗ ಎಲ್ಲರೂ ಸುರಕ್ಷಿತವಾಗಿರಬಹುದು. ಎಂದನು. ಮೊದಲಿಗೆ ರಾಜ ಈ ಭಯಾನಕವಾದ ಸಲಹೆಗೆ ಒಪ್ಪಲಿಲ್ಲವಾದರೂ ಕಡೆಗೆ ಲಕ್ಷಾಂತರ ಜನರ ಜೀವನವನ್ನು ಉಳಿಸುವುದಕ್ಕಾಗಿ ಮಾರನನ್ನು ಸಂಹರಿಸಿದ. ಅವನ ಕೊನೆಯ ಕೋರಿಕೆಯಂತೆ ಅವನ ಪೀಳಿಗೆಯವರೇ ಮುಂದೆಂದೂ ಆ ಸರೋವರದ ಕಾವಲುಗಾರರಾಗಿರುವಂತೆ ಆದೇಶ ಹೊರಡಿಸಿದ
ದೃಶ್ಯ-5 :
ಈ ದೃಶ್ಯ ಆರಂಭವಾಗುವ ವೇಳೆಗೆ ಮಾರನ ಮಗನಾದ ಗಂಗಾ ಸಾಕಷ್ಟು ವಯಸ್ಸಿನವನಾಗಿದ್ದಾನೆ. ಅವನಿಗೆ ಒಬ್ಬ ಮಗನೂ ಇದಾನೆ. ರಾಜ ಸರೋವರದ ದಂಡೆಯ ಮೇಲೆ ದೇವಾಲಯವೊಂದನ್ನು ಕಟ್ಟಿಸಿದಾನೆ . ಪ್ರತಿ ಮಂಗಳ ಮತ್ತು ಶುಕ್ರವಾರಗಳಂದು ಸಂಜೆ ಅಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ.
ಅಂತಹ ಒಂದು ಪೂಜೆಯಲ್ಲಿ ತನ್ನ ಮಗ ಪಾಲ್ಗೊಳ್ಳದಿದ್ದುದನ್ನು ತಿಳಿದು ಗಂಗಾನಿಗೆ ಕೋಪ ಬರುತ್ತದೆ. “ಪೂಜೆಗೆ ಬರುವುದು ಮರೆತುಹೋಯಿತು” ಎಂದು ಹುಡುಗ ಹೇಳಿದಾಗ , ಆ ದೇವಾಲಯದ ನಿರ್ಮಾಣದ ಹಿನ್ನೆಲೆಯನ್ನು ಗಂಗಾ ಅವನಿಗೆ ವಿವರಿಸತ್ತಾನೆ. ತಾನು ಮಗನಿಗಿಂತಲೂ ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ಸರೋವರದ ಕಾವಲುಕಾಯುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದನು. ಹೇಳಿ ತನ್ನ ತಂದೆಯ ಬಲಿದಾನದ ಸ್ಮರಣೆಗಾಗಿ ಮಹಾರಾಜರು ಅ ದೇವಾಲಯವನ್ನು ಕಟ್ಟಿಸಿರುವ ಮತ್ತು ಅದರಲ್ಲಿ ದೇವಿಯ ಪಾದದ ಅಡಿ ಅತನ ವಿಗ್ರಹವಿರುವ ಸಂಗತಿಗಳನ್ನು ವಿವರಿಸುತ್ತಾನೆ.
ತನ್ನ ನಂತರ ನೀನೆ ಈ ಸರೋವರವನ್ನು ಕಾವಲು ಕಾಯಬೇಕು. ಎಂಬ ಸೂಚನೆಯನ್ನು ನೀಡಿ ಮಗನನ್ನು ಅತ ಪೂಜೆಗೆ ಕರೆದೊಯ್ಯುತ್ತಾನೆ.
ಬಾಬಾಬುಡನ್‌ ಗಿರಿಯ ಸಮೀಪದಲ್ಲಿರುವ ಸಕ್ಕರೆ ಪಟ್ಟಣ ಎಂಬ ಪುಟ್ಟ ಊರಿಗೆ ಸಮೀಪದಲ್ಲಿ ಇರುವ ಅಯ್ಯನಕೆರೆ ಎಂಬ ಕೆರೆಗೆ ಸಂಬಂಧಿಸಿದ ಜಾನಪದ ಐತಿಹ್ಯವನ್ನು ಆಧರಿಸಿ ಆರ್.‌ ಕೆ . ನಾರಾಯಣ್‌ ರವರು ಈ ಮನೋಜ್ಞವಾದ ನಾಟಕವನ್ನು ರಚಿಸಿದ್ದಾರೆ.

PDF Name1st Puc English Watchman of The Lake Notes Pdf
No. of Pages06
PDF Size84KB
LanguageEnglish
CategoryEnglish Notes
Download LinkAvailable ✓
Topics1st Puc English Watchman of The Lake Notes Pdf

First Puc Watchman of The Lake Textbook Questions Answers

Watchman of The Lake summary class 11 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

kseeb solutions for 1st puc english 8th lesson

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

Watchman of The Lake lesson summary class 11 pdf download

ಇಲ್ಲಿ ನೀವು Prathama Puc Watchman of The Lake Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು Watchman of The Lake 1st Puc Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

How does the king respond to Mara’s information about the tank?

The king instructed Mara to accompany him next day to his capital.

Mara was trembling at the king’s palace because

He was worried about the lake.

ಇತರೆ ವಿಷಯ :

All Subjects Notes

1st Puc All Subject

Leave your vote

-4 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh