8ನೇ ತರಗತಿ ಕನ್ನಡ ಸಣ್ಣ ಸಂಗತಿ ಪದ್ಯದ ನೋಟ್ಸ್ ಪ್ರಶ್ನೆ ಉತ್ತರ, 8th Class Kannada Sanna Sangati Poem Question Answer Notes Pdf Download
ತರಗತಿ : 8ನೇ ತರಗತಿ
ಪದ್ಯದ ಹೆಸರು : ಸಣ್ಣ ಸಂಗತಿ
ಕೃತಿಕಾರರ ಹೆಸರು : ಕೆ.ಎಸ್ . ನರಸಿಂಹಸ್ವಾಮಿ
Table of Contents
ಕೃತಿಕಾರರ ಪರಿಚಯ :
ಕೆ.ಎಸ್ . ನರಸಿಂಹಸ್ವಾಮಿ
ಕೆ.ಎಸ್.ನರಸಿಂಹಸ್ವಾಮಿ ಅವರು ೨೬-೦೧-೧೯೧೫ ರಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ಜನಿಸಿದರು . ಇವರ ಮೊದಲ ಕವನ ಸಂಕಲನ ‘ ಮೈಸೂರು ಮಲ್ಲಿಗೆ ‘ ೧೯೪೩ ರಲ್ಲಿ ಪ್ರಕಟವಾಯಿತು . ಇವರು ಶಿಲಾಲತೆ , ಐರಾವತ , ನವಪಲ್ಲವ , ಇರುವಂತಿಗೆ , ದೀಪದ ಮಲ್ಲಿ , ಮನೆಯಿಂದ ಮನೆಗೆ , ತೆರೆದ ಬಾಗಿಲು ಮೊದಲಾದ ಕವನ ಸಂಕಲನಗಳನ್ನು ರಚಿಸಿದ್ದಾರೆ . ಇವರ ತೆರೆದ ಬಾಗಿಲು ಎಂಬ ಕವನ ಸಂಗ್ರಹಕ್ಕೆ ೧೯೭೭ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ದುಂಡು ಮಲ್ಲಿಗೆ ಕವನ ಸಂಕಲನಕ್ಕೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿ ಲಭಿಸಿದೆ . ಇವರು ೧೯೯೦ ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು . ಇವರು ಪ್ರೇಮಕವಿ ಎಂದು ಹೆಸರಾಗಿದ್ದಾರೆ . ‘ ಸಣ್ಣ ಸಂಗತಿ ‘ ಈ ಕವನವನ್ನು ಕೆ.ಎಸ್.ನರಸಿಂಹಸ್ವಾಮಿ ಅವರ ‘ ಇರುವಂತಿಗೆ ‘ ಕವನ ಸಂಗ್ರಹದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ .
8th Class Kannada Sanna Sangati Poem Question Answer
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ಯಾವುದನ್ನು ಲೆಕ್ಕಿಸದೆ ಮಗು ಹೊದಿಕೆಯನ್ನು ಒದೆಯುತಿದೆ ?
ಉತ್ತರ : ನಿದ್ದೆ ಎಚ್ಚರಗಳಲ್ಲಿ ಪೊರೆವ ( ರಕ್ಷಿಸುವ ) ಕೈ ದುಡಿಯುವುದನ್ನು ಲೆಕ್ಕಿಸದೆ ಮಗು ಹೊದಿಕೆಯನ್ನು ಒದೆಯುತಿದೆ .
2. ಮೂಲೆಯಲ್ಲಿ ಇರುವುದೇನು ?
ಉತ್ತರ : ಮೂಲೆಯಲ್ಲಿ ದೀಪವಿದೆ .
3. ಹುಣ್ಣಿಮೆಯ ಕಣ್ಣು ಎಲ್ಲಿ ತೆರೆದಿದೆ ?
ಉತ್ತರ : ಹುಣ್ಣಿಮೆಯ ಕಣ್ಣು ನೀರು ತುಂಬಿದ ಕಪ್ಪು ಮೋಡಗಳ ನಡುವೆ ತೆರೆದಿದೆ .
4. ಪುಟ್ಟ ಮಗುವು ತೊಟ್ಟಿಲಲ್ಲಿ ಹೇಗೆ ಮಲಗಿದೆ ?
ಉತ್ತರ : ಪಟ್ಟ ಮಗುವು ತೊಟ್ಟಿಲಲ್ಲಿ ಕಣ್ಣನ್ನು ಅರ್ಧ ಮುಚ್ಚಿ ಮಲಗಿದೆ .
5. ನಿದ್ದೆ ಎಚ್ಚರಗಳಲ್ಲಿ ಯಾವ ಕೈ ದುಡಿಯುತಿದೆ ?
ಉತ್ತರ : ನಿದ್ದೆ ಎಚ್ಚರಗಳಲ್ಲಿ ಪೊರೆವ ( ರಕ್ಷಿಸುವ ) ಕೈ ದುಡಿಯುತಿದೆ .
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .
1. ಈ ಕವನದಲ್ಲಿ ಕವಿ ನೀಡಿರುವ ಪ್ರಾಕೃತಿಕ ಘಟನೆಗಳನ್ನು ತಿಳಿಸಿ .
ಉತ್ತರ : ಮಧ್ಯರಾತ್ರಿಯ ಸಮಯದಲ್ಲಿ ಆಕಾಶದಲ್ಲಿ ನೀರು ತುಂಬಿರುವ ಕರಿಮೋಡಗಳ ಮಧ್ಯದಲ್ಲಿ ಹುಣ್ಣಿಮೆಯ ಕಣ್ಣು ತೆರೆದಿರುವಂತೆ ಚಂದ್ರ ಕಾಣುತ್ತಿದ್ದಾನೆ . ಆ ಬಾನಿನ ಬೀದಿಗೆ ನಕ್ಷತ್ರಗಳು ಬಂದಿವೆ . ಸೋನೆ ಮಳೆಯ ಶ್ರುತಿಗೆ ಗಾಳಿಯೇ ಹಾಡುತ್ತಿದೆ . ಎಂದು ಕವಿ ಪ್ರಾಕೃತಿಕ ಘಟನೆಗಳನ್ನು ತಿಳಿಸಿದ್ದಾರೆ .
2. ತಾಯಿ ತನ್ನ ಮಗುವಿನ ಆರೈಕೆಯನ್ನು ಹೇಗೆ ಮಾಡುತ್ತಾಳೆ ವಿವರಿಸಿ .
ಉತ್ತರ : ಮಧ್ಯರಾತ್ರಿಯ ವೇಳೆ ತಾಯಿಯ ಪಕ್ಕದಲ್ಲಿ ಮಲಗಿರುವ ಮಗು ನಿದ್ದೆಗಣ್ಣಿನಲ್ಲಿ ಹೊದಿಕೆಯನ್ನು ಕಿತ್ತೆಸೆಯುತ್ತದೆ ; ಕಾಲಿನಿಂದ ಒದೆದು ಬರಿ ಮೈಯಲ್ಲಿ ಮಲಗುತ್ತದೆ . ಆಗ ತಾಯಿ ತಾನು ನಿದ್ದೆ ಮಾಡುತ್ತಿದ್ದರೂ ತನ್ನ ಕೈಯಿಂದ ಹೊದಿಕೆಯನ್ನು ಮತ್ತೆ ಮತ್ತೆ ಸರಿಪಡಿಸಿ ಮಗುವಿನ ಆರೈಕೆ ಮಾಡುತ್ತಾಳೆ . ೨. ಕವಿ ಯಾವ ಸಣ್ಣ ಸಂಗತಿಯನ್ನು ಈ ಕವನದಲ್ಲಿ ವಿವರಿಸಿದ್ದಾರೆ ? ಉತ್ತರ : ತಾಯಿಯ ಪಕ್ಕದಲ್ಲಿ ಮಲಗಿರುವ ಮಗು ಮಧ್ಯರಾತ್ರಿ ತನ್ನ ಹೊದಿಕೆಯನ್ನು ಕಿತ್ತೆಸೆದಾಗ , ಮತ್ತೆ ಮತ್ತೆ ತಾಯಿಯ ಕೈ ಮಗುವಿನ ಹೊದಿಕೆಯನ್ನು ಸರಿಪಡಿಸುವ ಸಣ್ಣ ಸಂಗತಿಯೊಂದನ್ನು ಕವಿ ಸಣ್ಣ ಸಂಗತಿ ಕವನದಲ್ಲಿ ವಿವರಿಸಿದ್ದಾರೆ .
ಇ ] ಈ ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .
1. “ ನಿದ್ದೆ ಎಚ್ಚರಗಳಲ್ಲಿ ಮೊರೆವ ಕೈ ದುಡಿಯುತಿದೆ . ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಕೆ.ಎಸ್.ನರಸಿಂಹಸ್ವಾಮಿ ಅವರು ಬರೆದಿರುವ ಇರುವಂತಿಗೆ ‘ ಕವನಸಂಗ್ರಹದಿಂದ ಆಯ್ಕೆಮಾಡಲಾದ ‘ ಸಣ್ಣ ಸಂಗತಿ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ತಾಯಿಯು ಹಗಲು – ಇರುಳು ಎನ್ನದೆ ತನ್ನ ಮಗುವನ್ನು ರಕ್ಷಿಸುವ ಮತ್ತು ಮಗುವಿಗಾಗಿ ಸದಾ ದುಡಿಯುವ ಬಗೆಯನ್ನು ತಿಳಿಸುವ ಸಂದರ್ಭದಲ್ಲಿ ಕವಿ ವರ್ಣಿಸಿದ್ದಾರೆ . ಸ್ವಾರಸ್ಯ : ತಾಯಿಯ ಮಾತೃ ವಾತ್ಸಲ್ಯ ಮತ್ತು ಅವಳು ಮಗುವಿಗಾಗಿ ಪಡುವ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
2. “ ತಾರೆ ಬಂದಿವೆ ಬಾನ ಬೀದಿಗೆ . ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಕೆ.ಎಸ್.ನರಸಿಂಹಸ್ವಾಮಿ ಅವರು ಬರೆದಿರುವ ಇರುವಂತಿಗೆ ‘ ಕವನಸಂಗ್ರಹದಿಂದ ಆಯ್ಕೆಮಾಡಲಾದ ‘ ಸಣ್ಣ ಸಂಗತಿ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿ ಮಧ್ಯರಾತ್ರಿಯ ಪ್ರಾಕೃತಿಕ ಘಟನೆಗಳನ್ನು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ . ಆ ಸಮಯದಲ್ಲಿ ಆಕಾಶದಲ್ಲಿ ನೀರು ತುಂಬಿರುವ ಕರಿಮೋಡಗಳ ಮಧ್ಯದಲ್ಲಿ ಹುಣ್ಣಿಮೆಯ ಕಣ್ಣು ತೆರೆದಿರುವಂತೆ ಚಂದ್ರ ಕಾಣುತ್ತಿದ್ದಾನೆ . ಆ ಬಾನಿನ ಬೀದಿಗೆ ನಕ್ಷತ್ರಗಳು ಬಂದಿವೆ ‘ ಎಂದು ಕವಿ ವರ್ಣಿಸಿದ್ದಾರೆ . ಸ್ವಾರಸ್ಯ : ಇಲ್ಲಿ ಬಾನನ್ನು ಬೀದಿಗೆ ಹೋಲಿಸಿ : ಆ ಬೀದಿಯಲ್ಲಿ ತಾರೆಗಳು ನಡೆದಾಡುತ್ತಿವೆ ಎಂದು ಕವಿ ಕಲ್ಪನೆ ಮಾಡಿ ವರ್ಣಿಸಿರುವುದು ಸ್ವಾರಸ್ಯವಾಗಿದೆ .
3. “ ತಾಯಿ ಕೈನೀಡಿ ಮತ್ತೆ ಹೊದಿಕೆಯನ್ನು ಸರಿಪಡಿಸುವಳು . ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಕೆ.ಎಸ್.ನರಸಿಂಹಸ್ವಾಮಿ ಅವರು ಬರೆದಿರುವ ‘ ಇರುವಂತಿಗೆ ‘ ಕವನಸಂಗ್ರಹದಿಂದ ಆಯ್ಕೆಮಾಡಲಾದ ‘ ಸಣ್ಣ ಸಂಗತಿ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ತಾಯಿಯ ಪಕ್ಕದಲ್ಲಿ ಮಲಗಿರುವ ಮಗು ಮಧ್ಯರಾತ್ರಿ ತನ್ನ ಹೊದಿಕೆಯನ್ನು ಕಿತ್ತೆಸೆದಾಗ , ಮತ್ತೆ ಮತ್ತೆ ತಾಯಿಯ ಕೈ ಮಗುವಿನ ಹೊದಿಕೆಯನ್ನು ಸರಿಪಡಿಸುವ ಬಗೆಯನ್ನು ಈ ಸಂದರ್ಭದಲ್ಲಿ ಕವಿ ವರ್ಣಿಸಿದ್ದಾರೆ . ಸ್ವಾರಸ್ಯ : ನಿದ್ರೆಯಲ್ಲೂ ತನ್ನ ಮಗುವನ್ನು ಕಾಪಾಡುವ ತಾಯಿಯ ವಾತ್ಸಲ್ಯ ಮತ್ತು ಮಾತೃ ಹೃದಯದ ತುಡಿತ ಮಿಡಿತಗಳು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
ಈ ] ಕೊಟ್ಟಿರುವ ಪ್ರಶ್ನೆಗೆ ಏಳೆಂಟು ವಾಕ್ಯಗಳಲ್ಲಿ ಉತ್ತರಿಸಿ .
1. ಕವಿ ಯಾವ ಸಣ್ಣ ಸಂಗತಿಯೊಂದನ್ನು ಪ್ರಕೃತಿಯ ಘಟನೆಗಳೊಂದಿಗೆ ಹೋಲಿಕೆ ಮಾಡಿದ್ದಾರೆಂಬುದನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .
ಸಣ್ಣ ಸಂಗತಿ ಕವನದಲ್ಲಿ ‘ ತಾಯ ಪಕ್ಕದಲ್ಲಿ ಮಲಗಿರುವ ಮಗು ಮಧ್ಯರಾತ್ರಿಯ ವೇಳೆ ತನ್ನ ಹೊದಿಕೆಯನ್ನು ಕಿತ್ತೆಸೆದಾಗ , ತಾಯಿಯ ಕೈ ಮತ್ತೆ ಮತ್ತೆ ಮಗುವಿನ ಹೊದಿಕೆಯನ್ನು ಸರಿಪಡಿಸುವ ಸಣ್ಣ ಸಂಗತಿಯೊಂದನ್ನು ಪ್ರಕೃತಿಯ ನೀರು ತುಂಬಿರುವ ಕರಿಮುಗಿಲ ನಡುವೆ ಹುಣ್ಣಿಮೆಯ ಕಣ್ಣುತೆರೆದಂತೆ ಚಂದ್ರನಿದ್ದಾನೆ . ಬಾನಿನ ಬೀದಿಗೆ ತಾರೆ ಬಂದಿವೆ . ಸೋನೆಯ ಶ್ರುತಿಗೆ ಗಾಳಿಯೇ ಹಾಡುತ್ತಿದೆ ‘ ಎಂದು ಮೊದಲಾದ ಪ್ರಾಕೃತಿಕ ದೊಡ್ಡ ಘಟನೆಗಳೊಂದಿಗೆ ಹೋಲಿಸಿ ಕವಿ ವರ್ಣಿಸಿದ್ದಾರೆ . ಹಗಲಿರುಳೆನ್ನದೆ ಸದಾ ತನ್ನ ವಿನ ಆರೈಕೆಗಾಗಿ ದುಡಿಯುವ ತಾಯಿ ಹೃದಯದ ತುಡಿತ – ಮಿಡಿತಗಳು ಸಣ್ಣ ಸಂಗತಿ ಕವನದಲ್ಲಿ ಮೂಡಿಬಂದಿವೆ . ತಾಯಿಯು ತನ್ನ ಮಗುವಿನ ಆರೈಕೆ , ಲಾಲನೆ – ಪಾಲನೆಗಳಲ್ಲಿಯೇ ತನ್ನೆಲ್ಲ ಸುಖ ಸಂತೋಷಗಳನ್ನು ಕಾಣುತ್ತಾಳೆ . ಹಾಗೂ ತನ್ನ ನೋವು , ಸಂಕಟಗಳನ್ನು ಮರೆಯುತ್ತಾಳೆ , ಎನ್ನುವುದು ಈ ಕವಿತೆಯ ಆಶಯವಾಗಿದೆ .
8th Class Kannada Sanna Sangati Poem Question Answer Notes Pdf
ಇತರೆ ಪಾಠಗಳು :