9th Standard The Enchanted Pool English Notes Pdf

9th Standard The Enchanted Pool English Notes Pdf 9th Class The Enchanted Pool Extract Questions Answers Pdf kseeb solutions English Notes Class 9 English Chapter 1 The Enchanted Pool 9th Summary In Kannada

9th Standard The Enchanted Pool English Notes Pdf

Class : 9th Standard

Chapter Name: The Enchanted Pool

The Enchanted Pool in English Pdf

9th Standard The Enchanted Pool English Notes Pdf
9th Standard The Enchanted Pool English Notes Pdf

The Enchanted Pool 9th Summary In Kannada

ಕನ್ನಡ ಸಾರಾಂಶ:
ಪಾಂಡವರು ಪಗಡೆ ಆಟದಲ್ಲಿ ಕೌರವರಿಗೆ ಸೋತು ರಾಜ್ಯ ಮತ್ತು ಕೋಶ ಎಲ್ಲವನ್ನು ಕಳೆದುಕೊಂಡು ಹನ್ನೆರಡು ವರ್ಷ ವನವಾಸ ಮಾಡಬೇಕಾಗುತ್ತದೆ. ಈ ಅವಧಿಯಲ್ಲಿ ಅವರು ಆಹಾರವನ್ನು ಹುಡುಕುತ್ತಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅಲೆಯುತ್ತಾರೆ. ವನವಾಸದ ಹನ್ನೆರಡನೇ ವರ್ಷದಲ್ಲಿ ಒಂದು ದಿನ ಅವರು ಜಿಂಕೆಯೊಂದನ್ನು ಬೇಟೆಯಾಡಲು ಬೆನ್ನಟ್ಟುತ್ತಾ ಕಾಡಿನ ಮಧ್ಯೆ ಹೋಗುತ್ತಾರೆ. ಸುಡು ಬಿಸಿಲಿನಿಂದ ಅವರಿಗೆ ಬಳಲಿಕೆ ಹಾಗೂ ಬಾಯಾರಿಕೆಯಾಗುತ್ತದೆ.
ಯುಧಿಷ್ಟಿರ ವಿಶ್ರಾಂತಿಗಾಗಿ ಮರದ ಕೆಳಗೆ ಕುಳಿತುಕೊಳ್ಳುತ್ತಾ ನಕುಲನಿಗೆ ಮರವನ್ನು ಹತ್ತಿ ಹತ್ತಿರ ಯಾವುದಾದರು ಕೊಳ ಅಥವಾ ನದಿ ಇದೇಯೇ ನೋಡು ಎಂದು ಹೇಳುತ್ತಾನೆ. ನಕುಲ ಮರವನ್ನು ಹತ್ತಿ ಸುತ್ತಲು ನೋಡಿದಾಗ ಸ್ವಲ್ಪ ದೂರದಲ್ಲಿ ನೀರಿನ ಗಿಡಗಳು ಮತ್ತು ಕೊಕ್ಕರೆ ಕಾಣಿಸುತ್ತಿವೆ, ಆದ್ದರಿಂದ ಅಲ್ಲಿ ನೀರು ಇರಬಹುದು ಎಂದು ಹೇಳುತ್ತಾನೆ.
ಯುಧಿಷ್ಟಿರ ನಕುಲನನ್ನು ನೀರು ತರಲು ಕಳಿಸುತ್ತಾನೆ. ನಕುಲನು ಆ ಸ್ಥಳಕ್ಕೆ ಬಂದಾಗ ಕೊಳವನ್ನು ನೋಡಿ ಸಂತೋಷವಾಗುತ್ತದೆ. ತನ್ನ ಸಹೋದರರಿಗೆ ಬತ್ತಳಿಕೆಯಲ್ಲಿ ನೀರನ್ನು ತುಂಬಿಕೊಳ್ಳುವುದಕ್ಕೂ ಮುನ್ನ ನಕುಲ ತನ್ನ ಬಾಯಾರಿಕೆನ್ನು ತಣಿಸಿಕೊಳ್ಳಲು ಯೋಚಿಸುತ್ತಾನೆ.
ತಿಳಿ ನೀರಿನಲ್ಲಿ ಕೈಯನ್ನು ಅದ್ದುತ್ತಿದ್ದಂತೆಯೇ ಅಶರೀರವಾಣಿಯೊಂದು ಅವನಿಗೆ ಕೇಳಿಸುತ್ತದೆ. ನಕುಲ ನಿಲ್ಲು ನೀರನ್ನು ಕುಡಿಯಬೇಡ ಈ ಕೊಳ ನನಗೆ ಸೇರಿದ್ದು ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರಿಸಿ ನಂತರ ನೀರನ್ನು ಕುಡಿ” ಎಂದು ಅಶರೀರವಾಣಿ ಹೇಳುತ್ತದೆ. ನಕುಲನಿಗೆ ಆಶ್ಚರ್ಯವಾಗುತ್ತದೆ. ಅದರೆ ಅತೀವ ಬಾಯಾರಿಕೆಯಾದುದರಿಂದ ಅಶರೀರವಾಣಿಗೆ ಗಮನ ನೀಡದೆ ನಕುಲ ನೀರನ್ನು ಕುಡಿಯುತ್ತಾನೆ. ತಕ್ಷಣವೆ ಅವನು ಪ್ರಜ್ಞಾಹೀನನಾಗಿ ಸತ್ತವನಂತೆ ಬೀಳುತ್ತಾನೆ.
ತುಂಬ ಸಮಯವಾದರೂ ನಕುಲ ಬಾರದೆ ಇರುವುದನ್ನು ನೋಡಿ ಯುಧಿಷ್ಟಿರ ಸಹದೇವನನ್ನು ಕಳುಹಿಸುತ್ತಾನೆ. ಸಹದೇವನು ಸಹ ಅಶರೀರವಾಣಿಯ ನಿಬಂಧನೆಗೆ ಗಮನ ನೀಡದೆ ನೀರನ್ನು ಕುಡಿಯುತ್ತಾನೆ. ಅವನೂ ಸಹ ಪ್ರಜ್ಞಾಹೀನನಾಗಿ ಬೀಳುತ್ತಾನೆ. ಸಹದೇವನು ಸಹ ಬಾರದಿರುವುದನ್ನು ನೋಡಿ ಯುಧೀಷ್ಟಿರ ಅರ್ಜುನನ್ನು ಕಳುಹಿಸುತ್ತಾನೆ. ಅರ್ಜುನ ವೇಗವಾಗಿ ಹೋಗುತ್ತಾನೆ. ಸಹೋದರರು ಕೊಳದ ಹತ್ತಿರ ಸತ್ತು ಬಿದ್ದಿರುವುದನ್ನು ಅವನು ನೋಡುತ್ತಾನೆ. ದುಃಖದಿಂದ ಹೃದಯ ಒಡೆದು ಹೋದಂತಾಗೆ ಅವನು ತನ್ನ ಸಹೋದರರ ಸಾವಿಗೆ ಕಾರಣವಾದರವರ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ದರಿಸುತ್ತಾನೆ.
ಆದರೆ ಅತೀವ ಬಾಯಾರಿಕೆ ಆಗಿದ್ದರಿಂದ ಅವನು ಮೊದಲು ನೀರು ಕುಡಿಯಲು ಮೃತ್ಯು ಕೊಳದ ಹತ್ತಿರ ಹೋಗುತ್ತಾನೆ. ಪುನಃ ಅಶರೀರವಾಣಿಯ ಎಚ್ಚರಿಕೆಯ ಧ್ವನಿ ಕೇಳಿಸುತ್ತದೆ. “ನೀರು ಕುಡಿಯುವ ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರಿಸು ಈ ಕೊಳ ನನ್ನದು, ನೀನು ನನಗೆ ಅವಿಧೇಯನಾದರೆ ನಿನ್ನ ಸಹೋದರರಿಗೆ ಆದ ಗತಿ ನಿನಗೂ ಆಗುತ್ತದೆ”. ಎಂದು ಅಶರೀರವಾಣಿಯ ಎಚ್ಚರಿಕೆಯ ಧ್ವನಿ ಅರ್ಜುನನಿಗೆ ಕೇಳಿಸುತ್ತದೆ. ಅರ್ಜುನ ಕೊಪಗೊಂಡು ಯಾರು ನೀನು ನನ್ನ ಮುಂದೆ ಬಂದು ನಿಲ್ಲು.
ನಿನ್ನನ್ನು ಕೊಲ್ಲುತ್ತೇನೆ. ಎಂದು ಕೂಗುತ್ತಾನೆ. ಹರಿತವಾದ ಬಾಣವನ್ನು ಧ್ವನಿ ಬಂದ ದಿಕ್ಕಿಗೆ ಬಿಡುತ್ತಾನೆ. ಅಶರೀರವಾಣಿ ಅವನನ್ನು ಗೇಲಿಮಾಡಿ ನಗುತ್ತಾ, ನಿನ್ನ ಬಾಣ ನನಗೆ ತಾಗಲು ಸಾಧ್ಯವಿಲ್ಲ.ಎಂದು ಹೇಳುತ್ತದೆ. ಕಾಣದೆ ಇರುವ ಶಿಶುವನ್ನು ಸಂಹರಿಸಲು ನಿರ್ಧರಿಸಿ, ಮೊದಲು ತನ್ನ ಬಾಯಾರಿಕೆಯನ್ನು ತಣಿಸಲು ನೀರನ್ನು ಕುಡಿಯುತ್ತಾನೆ. ಅವನು ಸಹ ಪ್ರಜ್ಞಾಹೀನನಾಗಿ ಸತ್ತಂತೆ ಬೀಳುತ್ತಾನೆ.
ಅರ್ಜುನನು ಸಹ ಬಾರದೆ ಇರುವುದನ್ನು ನೊಡಿ ಯುಧಿಷ್ಟಿರ ಕಳವಳಗೊಳ್ಳುತ್ತಾನೆ. ಸಹೋದರರಿಗೆ ಯಾವುದೋ ವಿಪತ್ತು ಸಂಭವಿಸಿರಬಹುದೆಂದು ತಕ್ಷಣ ಹೋಗಿ ನೋಡಲು ಯುಧಿಷ್ಟಿರ ಭೀಮನಿಗೆ ಹೇಳುತ್ತಾನೆ. ಭೀಮ ಅವಸರವಾಗಿ ಹೋಗುತ್ತಾನೆ. ಅವನೂ ಸಹ ಅಶರೀರವಾಣಿಯ ಅಪ್ಪಣೆಯನ್ನು ತಿರಸ್ಕರಿಸಿ ಸುತ್ತಲೂ ನೋಡುತ್ತಾ ನೀರನ್ನು ಕುಡಿಯುತ್ತಾನೆ ತಕ್ಷಣವೇ ಅವನ ಶಕ್ತಿಯೆಲ್ಲ ಮೈಮೆಲಿನ ಬಟ್ಟೆ ಜಾರಿದ ಹಾಗೆ ಉಡುಗಿ ಹೋಗಿ ಪ್ರಜ್ಞಾಹೀನನಾಗಿ ಸತ್ತು ಸಹೋದರರ ಮಧ್ಯೆ ಬೀಳುತ್ತಾನೆ.
ಯಾವ ಸಹೋದರರೂ ಬಾರದೆ ಇರುವುದನು ನೋಡಿ ಯುಧಿಷ್ಟಿರ ದಿಣ್ಣಿಮೆ ಮತ್ತು ಅತಂಕಗೊಂಡು ಅವರು ಹೋದ ದಿಕ್ಕಿಗೆ ಹೆಜ್ಜೆ ಹಾಕುತ್ತಾನೆ. ಅವನು ಕೊಳದ ಹತ್ತಿರ ಬಂದಾಗ ಸಹೋದರರಲ್ಲಿ ಸತ್ತವರ ಹಾಗೆ ಬಿದ್ದಿರುವುದನ್ನು ನೋಡಿ ತಳಮಳಗೊಳ್ಳುತ್ತಾನೆ. ಬಾಯಾರಿಕೆಯನ್ನು ತಣಿಸಿಕೊಳ್ಳಲು ಕೊಳಕ್ಕೆ ಇಳಿಯುತ್ತಾನೆ. ತಕ್ಷಣ ಅಶರೀರವಾಣಿ ಅವನಿಗೆ ನಿನ್ನ ಸಹೋದರರು ನನ್ನ ಮಾತಿಗೆ ಗಮನ ನೀಡದೆ ನೀರನ್ನು ಕುಡಿದಿದ್ದರಿಂದ ಅವರೆಲ್ಲಾ ಸತ್ತು ಬಿದ್ದಿದ್ದಾರೆ. ಅವರನ್ನು ಅನುಸರಿಸಬೇಡ. ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರಿಸು ನಂತರ ನೀರು ಕುಡಿದು ಬಾಯಾರಿಕೆಯನ್ನು ತಣಿಸಿಕೊ, ಇದು ತನಗೆ ಸೇರಿದ ಕೊಳ ಎಂದು ಎಚ್ಚರಿಕೆ ನೀಡುತ್ತದೆ.
ಇದು ಯಕ್ಷನ ಮಾತುಗಲೂ ಎಂದು ಯುಧಿಷ್ಟಿರನಿಗೆ ಗೊತ್ತಾಗುತ್ತೆ ತನ್ನ ಸಹೋದರರಿಗೆ ಏನಾಗಿರಬಹುದುದೆಂದು ಊಹಿಸುತ್ತಾನೆ. ಕಷ್ಟದ ಪರಿಸ್ಥಿತಿಯಿಂದ ಹೊರಬರುವ ಮಾರ್ಗೋಪಾಯದ ಬಗ್ಗೆ ಯೋಚಿಸುತ್ತಾನೆ. ಪ್ರಶ್ನೆಗಳನ್ನು ಕೇಳಲು ಅಶರೀರವಾಣಿಗೆ ಹೇಳುತ್ತಾನೆ.
ಯಕ್ಷ: ಸೂರ್ಯ ಪ್ರತಿನಿತ್ಯ ಪ್ರಕಾಶಿಸಲು ಕಾರಣವೇನು?
ಯುಧೀಷ್ಠಿರ: ದೇವರ ದಯೆ ಮತ್ತು ಶಕ್ತಿ
ಯಕ್ಷ: ಮನುಷ್ಯ ಕಷ್ಟದಲ್ಲಿದ್ದಾಗ ಯಾವುದು ಅವನನ್ನು ರಕ್ಷಿಸುತ್ತದೆ?
ಯುಧಿಷ್ಟಿರ: ಧೈಯ್ಯ
ಯಕ್ಷ: ಭೂಮಿಗಿಂತ ಸಹನೆಯುಳ್ಳವಳು ಯಾರು?
ಯುಧಿಷ್ಟಿರ: ಮಕ್ಕಳನ್ನು ಹೆತ್ತು ಬೆಳೆಸುವ ತಾಯಿ
ಯಕ್ಷ: ಗಾಳಿಗಿಂತ ವೇಗವುಳ್ಳದ್ದು ಯಾವುದು?

ಯುಧೀಷ್ಟಿರ: ಮನಸ್ಸು
ಯಕ್ಷ: ಪ್ರಯಾಣಿಕನಿಗೆ ಯಾವುದು ಸ್ನೇಹಿತನಾಗುತ್ತದೆ?
ಯುಧಿಷ್ಟಿರ: ಕಲಿಕೆ
ಯಕ್ಷ: ಗೃಹಸ್ಥ ಮನೆಯಲ್ಲಿರುವಾಗ ಯಾರು ಸ್ನೇಹಿತರಾಗುತ್ತಾರೆ?
ಯುಧಿಷ್ಟಿರ:ಹೆಂಡತಿ
ಯಕ್ಷ: ಯಾವುದು ಮನುಷ್ಯನ ಸಾವಿನ ಜೊತೆಗೂಡುತ್ತದೆ?
ಯುಧಿಷ್ಟಿರ: ಧರ್ಮ ಸಾವಿನ ನಂತರ ಆತ್ಮದ ಜೊತೆಗೆ ಪ್ರಯಾಣಿಸುವುದು ಧರ್ಮವೊಂದೇ
ಯಕ್ಷ: ಅತ್ಯಂತ ದೊಡ್ಡ ಪಾತ್ರ ಯಾವುದು?
ಯುಧಿಷ್ಟಿರ: ತನ್ನ ಒಡಲಲ್ಲಿ ಎಲ್ಲವನ್ನೂ ತುಂಬಿಕೊಡಿರುವ “ಭೂಮಿ”
ಯಕ್ಷ: ಸಂತೋಷ ಎಂದರೇನು?
ಯುಧೀಷ್ಡಿರ : ಉತ್ತಮ ನಡತೆಯ ಸುಖ ಸಂತೋಷಕ್ಕೆ ದಾರಿ
ಯಕ್ಷ: ಯಾವುದನ್ನು ಬಿಟ್ಟರೆ ಮನುಷ್ಯ ಎಲ್ಲರ ಪ್ರೀತಿಗೆ ಪಾತ್ರನಾಗುತ್ತಾನೆ.
ಯುಧಿಷ್ಟಿರ: “ಅಹಂಕಾರ” ವನ್ನು ಬಿಟ್ಟರೆ ಮನುಷ್ಯ ಎಲ್ಲರ ಪ್ರೀತಿಗೆ ಪಾತ್ರನಾಗುತ್ತಾನೆ?
ಯಕ್ಷ: ಯಾವುದನ್ನು ಬಿಟ್ಟರೆ ದುಃಖಕ್ಕಿಂತ ಸಂತೋಷ ಬರುತ್ತದೆ?
ಯುಧಿಷ್ಟಿರ: ಕೋಪ
ಯಕ್ಷ: ಯಾವುದನ್ನು ಬಿಟ್ಟರೆ ಮನುಷ್ಯನು ನೆಮ್ಮದಿಯಾಗಿರುತ್ತಾನೆ.
ಯುಧೀಷ್ಟಿರ: ಆಶೆ
ಯಕ್ಷ: ನಿಜವಾದ ಬ್ರಾಹ್ಮಣನಾರು? ಇದು ಹುಟ್ಟಿನಿಂದ ಸನ್ನಡತೆಯಿಂದ ಬರುತ್ತದೆಯೇ ಅಥವಾ ಕಲಿಕೆಯಿಂದ ಬರುತ್ತದೆಯೇ?
ಯುಧೀಷ್ಟಿರ: ಬ್ರಾಹ್ಮಣತ್ವ ಹುಟ್ಟಿನಿಂದ ಸನ್ನಡತೆಯಿಂದ ಬರುತ್ತದೆಯೇ ಅಥವಾ ಕಲಿಕೆಯಿಂದ ಬರುತ್ತದೆ. ದುರಭ್ಯಾಸಕ್ಕೆ ದಾಸನಾಗದೆ ಇರುವ ವ್ಯಕ್ತಿಗೆ ಕಲಿಕೆಯಿಂದಲೂ ಸಹ ಬ್ರಾಹ್ಮಣತ್ವ ಬರುತ್ತದೆ.
ಯಕ್ಷ: ಈ ಪ್ರಪಂಚದಲ್ಲಿ ಆಶ್ಚರ್ಯಕರ ಸಂಗತಿ ಯಾವುದು?
ಯುಧಿಷ್ಟಿರ: ಪ್ರತಿನಿತ್ಯ ಮನುಷ್ಯರು, ಜೀವಗಳು ಸತ್ತು ಯಮನ ಸ್ಥಳಕ್ಕೆ ಹೋಗುವುದನ್ನು ನೋಡುತ್ತಿದ್ದರೂ ಸಹ ತಾವು ಶಾಶ್ವತವಾಗಿ ಜೀವಿಸುವರಂತೆ ಕಾಣುತ್ತಾರೆ. ಇದು ನಿಜಕ್ಕೂ ದೊಡ್ಡ ಆಶ್ಚರ್ಯ.
ಹೀಗೆ ಯಕ್ಷನು ಕೇಳಿದ ಅನೇಕ ಪ್ರಶ್ನೆಗಳಿಗೆ ಯುಧಿಷ್ಷಿರ ಉತ್ತರಿಸುತ್ತಾನೆ. ಸತ್ತು ಹೋಗಿರುವ ನಿನ್ನ ಸಹೋದರರಲ್ಲಿ ಒಬ್ಬನನ್ನು ಮಾತ್ರ ಬದುಕಿಸುತ್ತೇನೆ. ಯಾರು ಬದುಕಬೇಕು ಎಂದು ನೀನು ಇಚ್ಚಿಸುತ್ತೀಯೋ,ಅವನು ಬದುಕುತ್ತಾನೆ. ಎಂದು ಯಕ್ಷ ಯುಧೀಷ್ಟೀರನಿಗೆ ಹೇಳುತ್ತಾನೆ.
ಮೋಡದ ಮುಖಛಾಯಿಯುಳ್ಳ ಕಮಲದಂತ ಕಣ್ಣುಗಳಿರುವ, ಅಗಲವಾದ ಎದೆಯುಳ್ಳ ನೀಳವಾದ ತೋಳುತಗಳುಳ್ಳ ಕರಿಮರದ ಹಾಗೆ ಬಿದ್ದಿರುವ ನಕುಲ ಏಳಲಿ ಎಂದು ಯುಧಿಷ್ಟಿರ ಯೋಚಿಸಿ ಹೇಳುತ್ತಾನೆ.

ಯಕ್ಷನಿಗೆ ತುಂಬಾ ಸಂತೋಷವಾಗುತ್ತದೆ. ಯಕ್ಷ ಯುಧಿಷ್ಟಿರನಿಗೆ ಹೀಗೆ ಕೇಳುತ್ತಾನೆ. ಭೀಮ ನಿನಗೆ ಪ್ರೀತಿಪಾತ್ರನಾದವನೂ ಅದ ಭೀಮನು, ಹದಿನಾರು ಸಾವಿರ ಆನೆಗಳ ಬಲವುಳ್ಳವನ ಬದಲು ನಕುಲನನ್ನು ಏಕ್‌ ಆರಿಸಿದೆ? ನಿನಗೆ ರಕ್ಷಣೆ ಕೊಡುವ ಚಾಣಾಕ್ಷನಾದ ಅರ್ಜುನನ್ನು ಏಕೆ ಆರಿಸಲಿಲ್ಲ ನಕುಲನನ್ನೇ ಅರಿಸಲು ಕಾರಣವೇನು?
ಅದಕ್ಕೆ ಯುಧಿಷ್ಟಿರ ಹೀಗೆ ಉತ್ತರಿಸುತ್ತಾನೆ. ನನ್ನ ತಂದೆಗೆ ಕುಂತಿ ಮತ್ತು ಮಾದ್ರಿ ಇಬ್ಬರು ಮಡದಿಯರು , ನಾನು ಕುಂತಿಯ ಮಗ ಬದುಕಿದ್ದೇನೆ ಆದ್ದರಿಂದ ಕುಂತಿಗೆ ದುಃಖವಾಗುವುದಿಲ್ಲ ನ್ಯಾಯಸಮ್ಮತವಾಗಿ ಮಾದ್ರಿಯ ಮಗ ನಕುಲ ಬದುಕುವುದು ಸರಿ ಯಕ್ಷನಿಗೆ ಯುಧೀಷ್ಟಿರನ ನ್ಯಾಯಪರತೆ ಸಂತೋಷವನ್ನುಂಟು ಮಾಡಿದ್ದರಿಂದ ಎಲ್ಲಾ ಸಹೋದರರು ಮರಲಳಿ ಬದುಕುವ ಹಾಗೆ ಮಾಡುತ್ತಾನೆ.
ತನ್ನ ಮಗನಾದ ಯುಧಿಷ್ಟಿರನನ್ನು ನೋಡಿ ಪರೀಕ್ಞಿಸಲು ಸಾವಿರ ಒಡೆಯನಾದ ಯಮ ಜಿಂಕೆ ಮತ್ತು ಯಕ್ಷನ ರೂಪವನ್ನು ತಳೆದಿರುತ್ತಾನೆ. ನಿಜರೂಪ ತಿಳಿದು ಯುಧಿಷ್ಟಿರನನ್ನೂ ಅಲಂಗಿಸಿ ಆಶೀರ್ವದಿಸುತ್ತಾನೆ. ನಿಗದಿಯಾದ ವನವಾಸ ಮುಗಿಯಲು ಇನ್ನು ಕೆಲವೇ ದಿನಗಳಿವೆ. ಹದಿಮೂರನೆ ವರ್ಷವೂ ಮುಗಿಯುತ್ತಾ ಬಂದಿವೆ. ಶತ್ರುಗಳು ಯಾರೂ ನಿಮ್ಮನ್ನು ಯಾವ ವೇಷದಲ್ಲಿದ್ದರೂ ಗುರುತಿಸುವುದಿಲ್ಲ ನೀನು ಕೈಗೊಂಡ ಕಾರ್ಯ ಯಶಸ್ವಿಯಾಗಿ, ಪೂರ್ಣಗೊಳ್ಳುತ್ತದೆ. ಎಂದು ಹೇಳಿ ಯಕ್ಷ ಕಣ್ಮರೆಯಾಗುತ್ತಾನೆ.

The Enchanted Pool Pdf 9th Standard

PDF Name9th English The Enchanted Pool Notes Pdf
No. of Pages06
PDF Size78KB
LanguageEnglish
CategoryEnglish Notes
Download LinkAvailable ✓
Topics9th Class English The Enchanted Pool Notes Pdf

9th Class The Enchanted Pool Extract Questions Answers Pdf

9th Standard The Enchanted Pool Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

kseeb solutions English Notes Class 9 English Chapter 1

The Enchanted Pool summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

English class 9th pdf Download

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

The Enchanted Pool English Chapter Noes Pdf Read Online

Read Online

The Enchanted Pool English Chapter Noes Pdf Download Now

Download Now

FAQ:

Why do you think the voice did not allow Arjuna to drink water?

The voice wanted answers from Arjuna and it wanted test them. So it did not allow Arjuna to drink water.

Why did the invisible being laughed at Arjuna?

Arjuna angrily cried at the voice that he would kill it and he shot the arrows in the direction of the voice. The arrows did not hurt it. So it laughed.

ಇತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

10ನೇ ತರಗತಿ ಕನ್ನಡ ನೋಟ್ಸ್

Leave your vote

-3 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh