9ನೇ ತರಗತಿ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ Notes, Adarsh Shikshak Sarvepalli Radhakrishnan Notes Question Answer Pdf Download
ತರಗತಿ : 9ನೇ ತರಗತಿ
ಪಾಠದ ಹೆಸರು : ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್
Table of Contents
ಕೃತಿಕಾರರ ಪರಿಚಯ :
ಪ್ರಕೃತ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ವ್ಯಕ್ತಿಚಿತ್ರ ಗದ್ಯ ಭಾಗವನ್ನು ಕೆ . ಎಸ್ , ರತ್ನಮ್ಮ ಅವರ ಡಾ . ಎಸ್ . ರಾಧಾಕೃಷ್ಣನ್ – ಜೀವನ ಸಾಧನೆ ಮತ್ತು ಎ.ಎನ್ . ಮೂರ್ತಿರಾವ್ ಅವರ ಚಿತ್ರಗಳು – ಪತ್ರಗಳು ಕೃತಿಗಳ ಆಧಾರದಿಂದ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿ , ನಿಗದಿ ಮಾಡಿದೆ .
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,
1. ರಾಷ್ಟ್ರಪತಿಗಳಾಗಿ ಪಡೆಯುತ್ತಿದ್ದ ವೇತನವನ್ನು ರಾಧಾಕೃಷ್ಣನ್ ಅವರು ಹೇಗೆ ಸದುಪಯೋಗಪಡಿಸಿಕೊಂಡರು ?
ಉತ್ತರ : ರಾಧಾಕೃಷ್ಣನ್ ಅವರಿಗೆ ಬರುತ್ತಿದ್ದ ಹತ್ತು ಸಾವಿರ ರೂಪಾಯಿಗಳ ವೇತನದಲ್ಲಿ ಎರಡು ಸಾವಿರದ ಐನೂರು ರುಪಾಯಿಗಳನ್ನು ಮಾತ್ರ ಪಡೆದು , ಉಳಿದ ಹಣವನ್ನು ಪಧಾನಮಂತ್ರಿಗಳ ಪರಿಹಾರನಿಧಿಗೆ ವಂತಿಗೆಯಾಗಿ ನೀಡುತ್ತಿದ್ದರು.
2. ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಯಾವ ಹೆಸರಿನಿಂದ ಆಚರಿಸಲಾಗುತ್ತಿದೆ ?
ಉತ್ತರ : ರಾಧಾಕೃಷ್ಣನ್ ಅವರ ಜನ್ಮದಿನವನ್ನು ‘ ರಾಷ್ಟ್ರೀಯ ಶಿಕ್ಷಕರ ದಿನ ‘ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ .
3. ರಾಧಾಕೃಷ್ಣನ್ ಅದರ ತಂದೆತಾಯಿಯರ ಹೆಸರೇನು ?
ಉತ್ತರ : ರಾಧಾಕೃಷ್ಣನ್ ಅವರ ತಂದೆ ವೀರಸ್ವಾಮಿ , ತಾಯಿ ಸೀತಮ್ಮ ,
4. ರಾಧಾಕೃಷ್ಣನ್ ಅವರ ತಂದೆಯ ಅಪೇಕ್ಷೆ ಏನಾಗಿತ್ತು ?
ಉತ್ತರ : ದೇಶೀ ಭಾಷೆಯಾಗಿದ್ದ ಸಂಸ್ಕೃತವನ್ನು ಕಲಿಯಲಿ ಎಂಬುದು ರಾಧಾಕೃಷ್ಣನ್ ಅವರ ತಂದೆಯ ಅಪೇಕ್ಷೆಯಾಗಿತ್ತು .
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1. ರಾಧಾಕೃಷ್ಣನ್ ಅವರ ವಿದ್ಯಾಭ್ಯಾಸ ಎಲ್ಲೆಲ್ಲಿ ನಡೆಯಿತು ?
ಉತ್ತರ : ರಾಧಾಕೃಷ್ಣನ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತಿರುಪತಿಯ ಹರ್ಮನ್ಸ್ ಬರ್ಗ್ ಮಿಷನರಿ ಶಾಲೆಯಲ್ಲಿ , ಅಲ್ಲಿ ಮುಗಿಸಿದರು . ವೆಲ್ಲೂರಿನ ವೂರ್ ಕಾಲೇಜಿನಲ್ಲಿ ಬಿ . ಎ . ಪೂರ್ವದ ಎರಡು ವರ್ಷಗಳ ಕಲಾ ಪದವಿ ಮುಗಿಸಿದರು . ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ.ಎ. ಪದವಿಗೆ ಸೇರಿದರಲ್ಲದೆ ತತ್ವಶಾಸ್ತ್ರದ ಉತ್ತಮ ವಿದ್ಯಾರ್ಥಿ ಎನಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು .
2. ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಏನು ಹೇಳಿದರು ?
ಉತ್ತರ : “ ನೀವೊಬ್ಬರೇ ನನ್ನನ್ನು ಒಬ್ಬ ಮನುಷ್ಯನಂತೆ ಕಂಡು ವರ್ತಿಸಿದವರು . ನೀವು ನಮ್ಮನ್ನು ಬಿಟ್ಟು ಹೋಗುತ್ತಿರುವಿರಿ . ನನಗೆ ಇದು ದುಃಖ ನೀಡಿದೆ . ನೀವು ಹೆಚ್ಚು ಕಾಲ ಬಾಳಬೇಕೆಂಬುದೇ ನನ್ನಾಸೆ , ನಾನು ಹೆಚ್ಚು ಕಾಲ ಬಾಳುವುದಿಲ್ಲ ” ಎಂದು ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರಿಗೆ ಮಾಸ್ಕೋದಲ್ಲಿ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಹೇಳಿದರು .
3. ಶಿಕ್ಷಣದ ಮಹತ್ತ್ವವನ್ನು ಕುರಿತು ರಾಧಾಕೃಷ್ಣನ್ ಅವರು ಏನು ಹೇಳಿದ್ದಾರೆ ?
ಉತ್ತರ : ರಾಧಾಕೃಷ್ಣನ್ ಅವರು ಶಿಕ್ಷಣದ ಮಹತ್ವವನ್ನು ಕುರಿತು “ ಶಿಕ್ಷಣವು ಜೀವನದ ಅವಿಭಾಜ್ಯ ಅಂಗ , ಅದು ಮಾನವನನ್ನು ಪರಿಪೂರ್ಣತೆ ಹಾಗೂ ಸುಸಂಸ್ಕೃತಿಯತ್ತ ಒಯ್ಯುವ ಸಾಧನ ಮಾರ್ಗ ” ಎಂದು ಹೇಳಿದ್ದಾರೆ .
4. ರಾಧಾಕೃಷ್ಣನ್ ಅವರ ವೇಷಭೂಷಣಗಳ ಬಗ್ಗೆ ಬರೆಯಿರಿ ,
ಉತ್ತರ : ರಾಧಾಕೃಷ್ಣನ್ ಅವರ ಬಾಹ್ಯರೂಪ ಎತ್ತರವಾದ ನಿಲುವು , ಬಿಸ್ಕೆಟ್ ಬಣ್ಣದ ರೇಷ್ಮೆಯ ನಿಲುವಂಗಿ , ಬಿಳಿಯ ಪಂಚೆ ಮತ್ತು ರುಮಾಲು ಇವು ಭಾರತೀಯರೆಲ್ಲರಿಗೂ ಪರಿಚಿತ , ಪ್ರಪಂಚದ ಫ್ಯಾಷನ್ ಎಷ್ಟೇ ಬದಲಾದರೂ ರಾಧಾಕೃಷ್ಣನ್ ತಮ್ಮ ವೇಷಭೂಷಣಗಳನ್ನು ಕೊನೆಯವರೆಗೂ ಜತನವಾಗಿ ಉಳಿಸಿಕೊಂಡಿದ್ದರು .
5. ರಾಧಾಕೃಷ್ಣನ್ ಅವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಯಾವುವು ?
ಉತ್ತರ : ರಾಧಾಕೃಷ್ಣನ್ ಅವರ ಸ್ಮರಣೀಯ ಸೇವೆಯನ್ನು ಗುರುತಿಸಿ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ‘ ಭಾರತರತ್ನ ‘ ವನ್ನು ನೀಡಿ ಗೌರವಿಸಲಾಯಿತು . ಬ್ರಸೆಲ್ಸ್‌ನ ಫ್ರೀ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ , ಭಾರತೀಯ ವಿದ್ಯಾಭವನದ ‘ ಬ್ರಹ್ಮವಿದ್ಯಾಭಾಸ್ಕರ ‘ ‘ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ‘ ಹೀಗೆ ಅವರಿಗೆ ದೇಶ ವಿದೇಶಗಳ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರಕಿದವು .
ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,
1. ರಾಧಾಕೃಷ್ಣನ್ ಅವರು ಅಧ್ಯಾಪಕರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ವಿವರಿಸಿ .
ಉತ್ತರ : ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತತ್ತ್ವಶಾಸ್ತ್ರದ ಉಪಪ್ರಾಧ್ಯಾಪಕರಾಗಿ ಹಾಗೂ ಕೋತಾದಲ್ಲಿ ( ಹಿಂದಿನ ಕಲ್ಕತ್ತಾ ) ಪ್ರಾಧ್ಯಾಪಕರಾಗಿ ಸಲ್ಲಿಸಿದ ಸೇವೆ ಸ್ಮರಣೀಯ . ಅಲ್ಲದೆ ಆಂಧ್ರ , ದೆಹಲಿ , ಬನಾರಸ್ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿ , ಅವುಗಳ ಪುರೋಭಿವೃದ್ಧಿಗೆ ಶ್ರಮಿಸಿದರು . ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲದಲ್ಲೂ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು . ರಾಧಾಕೃಷ್ಣನ್ ಅವರ ಬೋಧನಾ ಶೈಲಿ , ನಿರರ್ಗಳತೆ , ವಿಷಯದ ಮೇಲಿನ ಪ್ರಭುತ್ವ ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು . ತಮ್ಮ ಪ್ರಾಧ್ಯಾಪಕತ್ವವನ್ನು ಯಾವಾಗಲೆಂದರೆ ಆವಾಗ ಕಳಚಿ ಏರು ಜವ್ವನದ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು .
2. ಹಿಂದೂ ಧರ್ಮ ಮತ್ತು ತತ್ತ್ವಶಾಸ್ತ್ರದ ಬಗ್ಗೆ ರಾಧಾಕೃಷ್ಣನ್ ಅಭಿಪ್ರಾಯವೇನು ? ವಿವರಿಸಿ ,
ಉತ್ತರ : ರಾಧಾಕೃಷ್ಣನ್ ಅವರು ಹಿಂದೂ ಧರ್ಮದ ತತ್ತ್ವಶಾಸ್ತ್ರ ಮತ್ತು ಸಾಹಿತ್ಯವನ್ನೆಲ್ಲ ಅಧ್ಯಯನ ಮಾಡಿದರು . ಸ್ವಾಮಿ ವಿವೇಕಾನಂದರ ವಿಚಾರಧಾರೆ ಅವರ ಮನವನ್ನು ಆಕರ್ಷಿಸಿತು . ಅವರು “ ಹಿಂದೂ ಧರ್ಮವು ಒಂದು ವೈಚಾರಿಕ ಜೀವನ ಮಾರ್ಗವೆಂದೂ , ನೈತಿಕ ಗುಣಾತ್ಮಕ ವಿಷಯಗಳಿಂದ ಕೂಡಿದ್ದು , ಮಾನವನ ಆಂತರಿಕ ಜೀವನದ ಬಗ್ಗೆ ಪ್ರಾಮುಖ್ಯತೆವುಳ್ಳದ್ದಾಗಿದೆ . ಹಿಂದೂಧರ್ಮವಾಗಲಿ , ವೇದಾಂತವಾಗಲಿ ಅಸತ್ಯವನ್ನು ಹೇಳುವುದಿಲ್ಲ . ಭಾರತೀಯ ಚಿಂತನೆಗಳು ಯಾವುದೋ ವಿಚಿತ್ರ ಮತ್ತು ನಿಗೂಢ ಪರಿಕಲ್ಪನೆಗಳಾಗಿಲ್ಲ . ಜೀವನದ ನಾಡಿಮಿಡಿತಗಳನ್ನು ಸೂಕ್ಷ್ಮ ಮನಸ್ಸಿನ ಚಿಂತನೆಗಳನ್ನು ತಿಳಿಯಪಡಿಸುವುದಾಗಿದೆ ” ಎಂದು ಸರಳವಾಗಿ ಹೇಳಿದರು .
3. ರಾಧಾಕೃಷ್ಣನ್ ಅವರಿಗೆ ಮೈಸೂರಿನಲ್ಲಿ ನೀಡಿದ ಬೀಳ್ಕೊಡುಗೆಯ ವಿಶೇಷತೆಯನ್ನು ಕುರಿತು ವಿವರಿಸಿ ,
ಉತ್ತರ : ರಾಧಾಕೃಷ್ಣನ್ ಅವರು ಕೋತ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ ಮೈಸೂರಿನಿಂದ ಹೊರಟ ದಿನ ಅವರಿಗೆ ಕೊಟ್ಟಂತಹ ವೈಭವದ ಬೀಳ್ಕೊಡುಗೆ ಯಾವ ಚಕ್ರವರ್ತಿಗೂ ದೊರೆತಿರಲಾರದು . ರಾಧಾಕೃಷ್ಣನ್ ಅವರನ್ನು ಮಹಾರಾಜ ಕಾಲೇಜಿನಿಂದ ರೈಲು ನಿಲ್ದಾಣಕ್ಕೆ ಕರೆದೊಯ್ಯುವಾಗ ಸಾರೋಟಿಗೆ ಕುದುರೆಯನ್ನು ಕಟ್ಟಲಿಲ್ಲ . ಸ್ವತಃ ವಿದ್ಯಾರ್ಥಿಗಳೇ ಎಳೆದೊಯ್ದರು . ರಾಧಾಕೃಷ್ಣನ್ ಅವರಿಗಾಗಿ ಕಾದಿರಿಸಿದ್ದ ಕಂಪಾರ್ಟ್‌ಮೆಂಟನ್ನು , ಒರಗುದಿಂಬು ಹಾಗೂ ರತ್ನಗಂಬಳಿಯನ್ನು ಹಾಸಿ ಮಲಗುವ ಸೀಟನ್ನು ನೆಲವನ್ನು ಹೂವಿನಿಂದ ಸುಪ್ಪತ್ತಿಗೆಯಂತೆ ಮಾಡಿ ದೈವಮಂದಿರವನ್ನು ಭಕ್ತರು ಅಲಂಕರಿಸುವಂತೆ ಅಲಂಕರಿಸಲಾಗಿತ್ತು , ” ರಾಧಾಕೃಷ್ಣನ್ ಅವರಿಗೆ ಜಯವಾಗಲಿ ” ಎಂಬ ಕೂಗು ರೈಲ್ವೆ ಸ್ಟೇಷನ್ನಿನ ಆವರಣದಲ್ಲೆಲ್ಲ ಮೊಳಗುತ್ತಿತ್ತು . ಆ ದಿನ ಭಾವೋದ್ರೇಕದಿಂದ ಎಷ್ಟೋ ಜನ ಅತ್ತರು . ವಿದ್ಯಾರ್ಥಿಗಳು ತೋರಿದ ವಿಶ್ವಾಸ ಅವರ ಕಣ್ಣಿನಲ್ಲೂ ನೀರು ತಂದಿತು ,
ಈ ] ಕೊಟ್ಟಿರುವ ವಾಕ್ಯಗಳ ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .
1 , “ ಆರ್ಥಿಕ ಪರಿಸ್ಥಿತಿ ತಮ್ಮ ಸಾಧನೆಯಲ್ಲಿ ನಿವಾರಿಸಲಾಗದ ತೊಡಕೆಂದು ಭಾವಿಸಲಿಲ್ಲ ”
ಉತ್ತರ : ಆಯ್ಕೆ : ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ರಾಧಾಕೃಷ್ಣನ್ ಅವರು ವಿದ್ಯಾಭ್ಯಾಸ ಮಾಡುತ್ತಿದ್ದಾಗ ಅವರ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿಲ್ಲ . ಆದರೂ ಅದು ಅವರ ಸಾಧನೆಗೆ ಅಡ್ಡಿ ಉಂಟು ಮಾಡಲಿಲ್ಲ . ಮನೆಯ ಜವಾಬ್ದಾರಿ ಹೊತ್ತ ಅವರು ಕಿರಿಯ ಸಹಪಾಠಿಗಳಿಗೆ ಮನೆಯ ಪಾಠ ಹೇಳಿ ಹಣಗಳಿಸುತ್ತಿದ್ದರು . ಬಡತನದಲ್ಲಿದ್ದರೂ ತತ್ತ್ವಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಸ್ವಾರಸ್ಯ : ನಾವು ಮನಸ್ಸು ಮಾಡಿದರೆ ಯಾವ ಅ ಇಲ್ಲಿ ಸ್ವಾರಸ್ಯಪೂರ್ಣವಾಗಿದೆ . ಪಡೆದರು . ಪರಿಸ್ಥಿತಿಯನ್ನು ತೊಡಕೆಂದು ಭಾವಿಸದೆ ಸಾಧನೆ ಮಾಡಬಹುದು ಎಂಬುದು ಅವರು
2. “ ನೀವೊಬ್ಬರೇ ನನ್ನನ್ನು ಒಬ್ಬ ಮನುಷ್ಯನಂತೆ ಕಂಡು ವರ್ತಿಸಿದವರು “
ಉತ್ತರ : ಆಯ್ಕೆ : ಪಠ್ಯಪುಸ್ತಕ ರಚನಾಸಮಿತಿ ಸಿದ್ಧಪಡಿಸಿರುವ ‘ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಈ ಮಾತನ್ನು ರಷ್ಯಾದ ಅಧ್ಯಕ್ಷರಾಗಿದ್ದ ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರನ್ನು ಬೀಳ್ಕೊಡುವ ಸಂದರ್ಭದಲ್ಲಿ ಹೇಳಿದರು . ಭಾರತದ ರಾಯಭಾರಿಯಾಗಿದ್ದ ರಾಧಾಕೃಷ್ಣನ್ ಅವರು ಸ್ಟಾಲಿನ್ ಅವರೊಡನೆ ನಡೆದುಕೊಂಡ ರೀತಿಯನ್ನು ಸ್ಮರಿಸುತ್ತಾ ಈ ರೀತಿ ಹೇಳಿದ್ದಾರೆ . ಸ್ವಾರಸ್ಯ : ಸ್ಟಾಲಿನ್ ಅವರ ಈ ಮಾತಿನಲ್ಲಿ ರಾಧಾಕೃಷ್ಣನ್ ಅವರ ಸ್ನೇಹಪರತೆ , ಸನ್ನಡತೆಗಳು ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿವೆ .
3. “ ಅಶೋಕನು ಕಳಿಂಗ ಯುದ್ಧದ ಅನಂತರ ಶ್ರೇಷ್ಠ ಮನುಷ್ಯನಾದಂತೆ ನೀವೂ ಆಗುವಿರಿ ”
ಉತ್ತರ : ಆಯ್ಕೆ : ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ‘ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ರಷ್ಯಾದ ಅಧ್ಯಕ್ಷರಾಗಿದ್ದ ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರನ್ನು ಬೀಳ್ಕೊಡುವ ಸಂದರ್ಭದಲ್ಲಿ “ ನೀವೊಬ್ಬರೇ ನನ್ನನ್ನು ಒಬ್ಬ ಮನುಷ್ಯನಂತೆ ಕಂಡು ವರ್ತಿಸಿದವರು ” ಎಂದು ಹೇಳುತ್ತಾ ತಮಗೆ ಪ್ರಥಮ ಭೇಟಿಯಲ್ಲಿ ರಾಧಾಕೃಷ್ಣನ್ ಅವರು ಹೇಳಿದ ಈ ಮಾತನ್ನು ಸ್ಮರಿಸಿದರು . ಸ್ವಾರಸ್ಯ : ರಾಧಾಕೃಷ್ಣನ್ ಅವರು ಪ್ರಥಮ ಭೇಟಿಯ ಮಾತುಗಳಲ್ಲೇ ಸ್ಟಾಲಿನ್ ಅವರ ಮನಗೆದ್ದಿರುವುದು ಇಲ್ಲಿ ಸ್ವಾರಸ್ಯಪೂರ್ಣವಾಗಿದೆ .
4. “ ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ ”
ಉತ್ತರ : ಆಯ್ಕೆ : ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ರಾಧಾಕೃಷ್ಣನ್ ಅವರು ಕೆನಡಾದ ರೇಡಿಯೋ ಭಾಷಣ ಮಾಡುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ . ಇಡೀ ವಿಶ್ವದಲ್ಲಿ ಶಾಂತಿ ಸೌಹಾರ್ಧತೆ ನೆಲೆಸಬೇಕಾದರೆ ವಿಶ್ವದ ಪ್ರತಿಯೊಬ್ಬರೂ ಮಾನವತೆಯನ್ನು ಅನುಸರಿಸಬೇಕೆಂದು ಅವರು ತಮ್ಮ ಭಾಷಣದಲ್ಲಿ ಸ್ವಾರಸ್ಯ : ವಿಶ್ವದ ಸರ್ವ ಸಮಸ್ಯೆಗಳಿಗೂ ಮಾನವೀಯತೆ ಇಲ್ಲದಿರುವುದೇ ಕಾರಣ . ಆದ್ದರಿಂದ ಮಾನವೀಯತೆ ಹೊಂದಬೇಕೆಂಬುದು ಇಲ್ಲಿ ಸ್ವಾರಸ್ಯಪೂರ್ಣವಾಗಿದೆ .
5. “ ಏರು ಜವ್ವನದ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು ”
ಉತ್ತರ : ಆಯ್ಕೆ : ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ರಾಧಾಕೃಷ್ಣನ್ ಅವರ ಬೋಧನಾ ಶೈಲಿ , ನಿರರ್ಗಳತೆ , ವಿಷಯದ ಮೇಲಿನ ಪ್ರಭುತ್ವ ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು . ಎಂದು ವಿವರಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಲಾಗಿದೆ . ರಾಧಾಕೃಷ್ಣನ್ ಅವರು ತಾವು ಪ್ರಾಧ್ಯಾಪಕ ಎಂಬ ಗತ್ತನ್ನು ತೋರದೆ ವಿದ್ಯಾರ್ಥಿಗಳೊಂದಿಗೆ ಏರು ಜವ್ವನದ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು . ಸ್ವಾರಸ್ಯ : ವಿದ್ಯಾರ್ಥಿಗಳೊಂದಿಗೆ ರಾಧಾಕೃಷ್ಣನ್ ಅವರ ಸ್ನೇಹಪೂರ್ವಕ ಬಾಂಧವ್ಯ , ನಿರಹಂಕಾರ ಮನೋಭಾವ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ
ಉ ) ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ .
1. ರಾಧಾಕೃಷ್ಣನ್ ಅವರ ಸಾಧನೆಯಲ್ಲಿ ವಿಶೇಷ ಸಹಕಾರ ನೀಡಿದವರು…………………………….
( ತಂದೆ , ತಾಯಿ , ಪತ್ನಿ , ಸಹೋದರಿ )
2.ಮದ್ರಾಸಿನ ಕಿಶ್ಚಿಯನ್ ಶಾಲೆಯಲ್ಲಿ ರಾಧಾಕೃಷ್ಣನ್ ಅವರು ಉತ್ತಮ ವಿದ್ಯಾರ್ಥಿ ಎಂದು ಪರಿಗಣಿಸಲ್ಪಟ್ಟ ವಿಷಯ………………………
( ಸಮಾಜಶಾಸ್ತ್ರ , ರಾಜ್ಯಶಾಸ್ತ್ರ , ಧರ್ಮಶಾಸ್ತ್ರ , ತತ್ತ್ವಶಾಸ್ತ್ರ )
3. ರಾಧಾಕೃಷ್ಣನ್ ಅವರು ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ವಿಶ್ವವಿದ್ಯಾನಿಲಯ…………….
( ಬನಾರಸ್ , ಕೇಂಬ್ರಿಡ್ , ಆಕ್ಸ್‌ಫರ್ಡ್ , ಉಸ್ಮಾನಿಯ )
4 , “ ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ ” ಎಂದು ರಾಧಾಕೃಷ್ಣನ್ ಅವರು ರೇಡಿಯೋ ಪ್ರಸಾರ ಭಾಷಣ ಮಾಡಿದ ದೇಶ………………………
( ಇಂಗ್ಲೆಂಡ್ , ಕೆನಡಾ , ಆಮೇರಿಕ , ರಷ್ಯಾ )
5. ಭಾರತ ಮತ್ತು ರಷ್ಯಾದ ಬಾಂಧವ್ಯವನ್ನು ವೃದ್ಧಿಗೊಳಿಸಿದ ರಾಧಾಕೃಷ್ಣನ್ ಅವರನ್ನು ಪ್ರಶಂಸಿಸಿದವರು…………….
( ಮಹಾತ್ಮಗಾಂಧೀಜಿ , ಜವಾಹರಲಾಲ್ ನೆಹರು ಸ್ಟಾಲಿನ್ , ಸಿಇ.ಎಂ , ಜೋಡ್ )
ಸರಿಯುತ್ತರಗಳು ,
I , ಪತ್ನಿ
2. ತತ್ವಶಾಸ್ತ್ರ
3 , ಆಕ್ಸ್ ಫರ್ಡ್
4 ಕಿನಂಶ
5 , ಜವಾಹರಲಾಲ್ ನೆಹರು
9ನೇ ತರಗತಿ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ Notes, Adarsh Shikshak Sarvepalli Radhakrishnan Notes Question Answer Pdf
ಇತರೆ ವಿಷಯಗಳು: