8ನೇ ತರಗತಿ ಗೆಳೆತನ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 8th Standard Geletana Kannada Poem Notes Question Answer Pdf Download
ತರಗತಿ : 8ನೇ ತರಗತಿ
ಪದ್ಯದ ಹೆಸರು : ಗೆಳೆತನ
ಕೃತಿಕಾರರ ಹೆಸರು : ಚೆನ್ನವೀರ ಕಣವಿ
ಕೃತಿಕಾರರ ಪರಿಚಯ :

ಚೆನ್ನವೀರ ಕಣವಿ
ಚೆನ್ನವೀರ ಕಣವಿ ಅವರು ೧೯೨೮ ರಲ್ಲಿ ಗದಗ ಜಿಲ್ಲೆಯ ಹೊಂಬಳದಲ್ಲಿ ಜನಿಸಿದರು . ಕೃತಿಗಳು : ಆಕಾಶಬುಟ್ಟಿ , ಭಾವಜೀವಿ , ಮಧುಚಂದ್ರ , ದೀಪಧಾರಿ , ಮಣ್ಣಿನ ಮೆರವಣಿಗೆ , ನೆಲಮುಗಿಲು , ಕಾವ್ಯಾಕ್ಷಿ , ಚಿರಂತನ ದಾಹ ಇತ್ಯಾದಿ . ಪ್ರಶಸ್ತಿ ಪುರಸ್ಕಾರಗಳು : ಕರ್ನಾಟಕ ಅಕಾಡೆಮಿ ಗೌರವ ಪ್ರಶಸ್ತಿ . ೧೯೮೧ ರಲ್ಲಿ ಜೀವಧ್ವನಿ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿವೆ . ೧೯೯೬ ರಲ್ಲಿ ಹಾಸನದಲ್ಲಿ ನಡೆದ ೬೫ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು . [ ಗೆಳೆತನ ಕವನವನ್ನು ಚೆನ್ನವೀರ ಕಣವಿ ಅವರ ‘ ಆಕಾಶಬುಟ್ಟಿ ‘ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ . ]
Geletana Kannada Poem Notes Question Answer
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ಗೆಳೆತನದ ಮನಸ್ಸಿನ ಭಾವನೆ ಹೇಗಿದೆ ?
ಉತ್ತರ : ಗೆಳೆತನದ ಮನಸ್ಸಿನ ಭಾವನೆಯು ಸ್ಪಟಿಕದಂತೆ , ಬೆಳದಿಂಗಳಿನಂತೆ ಪರಿಶುದ್ಧವಾಗಿದೆ .
2. ಕವಿ ಎಲ್ಲಿ ತಂಗಿದ್ದಾರೆ ?
ಉತ್ತರ : ಕವಿ ಗೆಳೆತನವೆಂಬ ಸುವಿಶಾಲ ಆಲದ ಮರದಡಿಯ ತಂಪಾದ ನೆರಳಿನಲ್ಲಿ ತಂಗಿದ್ದಾರೆ .
3. ಕವಿ ಮೌನದಲ್ಲಿ ಏನನ್ನು ನುಂಗಿದ್ದಾರೆ ?
ಉತ್ತರ : ಕವಿ , ಜೀವನದ ಅನಂತ ದುರ್ಭರ ಬವಣೆ ನೋವುಗಳನ್ನು ನುಂಗಿದ್ದಾರೆ .
4. ಉಪ್ಪು ಮತ್ತು ತಾಯಿಯ ಬಗೆಗಿರುವ ಗಾದೆ ಯಾವುದು ?
ಉತ್ತರ : ಉಪ್ಪಿಗಿಂತ ರುಚಿ ಇಲ್ಲ : ತಾಯಿಗಿಂತ ಬಂಧುವಿಲ್ಲ .
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .
1. ಜೀವನ ರಸಪಾಕವಾಗುವುದು ಹೇಗೆ ?
ಉತ್ತರ : ಗೆಳೆಯರು ಪ್ರೀತಿಯಿಂದ ಹೇಗೊ ಹೇಗೋ ಹೆಗಲುಗೊಟ್ಟು ಆಗು ಹೋಗುಗಳಿಗೆ ಸೋಲದೆ ಜೊತೆಗಿರುತ್ತಾರೆ . ಸುಖವಾದಾಗ ಸಂತಸಪಟ್ಟು , ದುಃಖವಾದಾಗ ಅದರಲ್ಲಿ ಸಹಭಾಗಿಯಾದರೆ ಜೀವನ ರಸದ ಪಾಕದಂತೆ ಆಗುತ್ತದೆ .
2. ಗೆಳೆತನದಲ್ಲಿ ಯಾವ ದುರ್ಗುಣಗಳು ಇಲ್ಲವೆಂದು ಹೇಳಲಾಗಿದೆ ?
ಉತ್ತರ : ಗೆಳೆತನದಲ್ಲಿ ವಂಚನೆ , ಚಂಚಲತೆ , ಮೇಲು ಕೀಳುಗಳೆಂಬ ಭೇದವಿಲ್ಲ . ಹಾಗು ಅಹಂಕಾರದ ನೆಪವಿಲ್ಲ . ದ್ವೇಷ ಗುಣವಿಲ್ಲ , ಸಣ್ಣತನ ಸಂಕೋಚ ಮುಂತಾದ ದುರ್ಗುಣಗಳು ಇಲ್ಲವೆಂದು ಕವಿ ಹೇಳಿದ್ದಾರೆ .
3. ಗೆಳೆತನದ ಶುಚಿರುಚಿ ಎಂಥದ್ದು ?
ಉತ್ತರ : ‘ ಉಪ್ಪಿಗಿಂತ ರುಚಿ ಇಲ್ಲ : ತಾಯಿಗಿಂತ ಬಂಧುವಿಲ್ಲ ‘ ಎಂಬ ಗಾದೆ ಮಾತು ಜನಪ್ರಿಯವಾಗಿದೆ . ಆದರೆ ಗೆಳೆತನದ ಶುಚಿ , ರುಚಿ ಆ ಗಾದೆ ಮಾತಿಗಿಂತಲೂ ಮಿಗಿಲಾಗಿದೆ ಎಂದರೆ ತಪ್ಪಾಗಲಾರದು .
ಇ ] ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು – ಐದು ವಾಕ್ಯಗಳಲ್ಲಿ ಉತ್ತರಿಸಿ .
1. ಗೆಳೆಯರ ಮನಸ್ಸಿನ ಭಾವನೆ ಹೇಗಿರುತ್ತದೆ ? ವಿವರಿಸಿ .
ಉತ್ತರ : ಗೆಳೆಯರ ಮನಸ್ಸಿನಲ್ಲಿ ವಂಚನೆ , ಚಂಚಲತೆ , ಮೇಲು ಕೀಳುಗಳೆಂಬ ಭೇದ , ಅಹಂಕಾರವಿಲ್ಲ . ದ್ವೇಷಭಾವನೆ , ಸಣ್ಣತನ , ಸಂಕೋಚ ಮುಂತಾದ ಭಾವನೆಗಳಿರುವುದಿಲ್ಲ . ಗೆಳೆತನದಲ್ಲಿ ಮನವು ಬಾನಿನಂತೆ ವಿಶಾಲವಾಗಿದ್ದು ಎದೆ ತಿಳಿಯಾದ ಕೊಳದಂತೆ ಪ್ರಶಾಂತವಾಗಿರುವತ್ತದೆ . ಹಾಗೂ ಭಾವನೆಯು ಸ್ಪಟಿಕದಂತೆ , ಬೆಳದಿಂಗಳಿನಂತೆ ಪರಿಶುದ್ಧವಾಗಿರುತ್ತದೆ .
2. ಗೆಳೆತನ ಇಹಲೋಕಕಿರುವ ಅಮೃತ ಹೇಗೆ ? ತಿಳಿಸಿ
ಉತ್ತರ : ಗೆಳೆತನದ ಆಲದ ಮರದ ತಂಪಿನಿಂದಾಗಿ ಜೀವನದಲ್ಲಿ ಎದುರಾಗುವ ಸಹಿಸಲಾಗದ ಕಷ್ಟಗಳನ್ನು ನುಂಗಲು ಸಾಧ್ಯವಾಗುತ್ತದೆ . ಗೆಳೆತನದಲ್ಲಿ ವಂಚನೆ , ಚಂಚಲತೆ , ಮೇಲು ಕೀಳುಗಳೆಂಬ ಭೇದವಿಲ್ಲ . ಅಹಂಕಾರವಿಲ್ಲ . ದ್ವೇಷಭಾವನೆ , ಸಣ್ಣತನ , ಸಂಕೋಚ ಮುಂತಾದ ದುರ್ಗುಣಗಳು ಇರುವುದಿಲ್ಲ . ಆದ್ದರಿಂದ ಗೆಳೆತನವು ಈ ಭೂಮಿಯಲ್ಲಿ ದೊರೆಯುವ ಅಮೃತವಾಗಿದೆ . ಅದು ಇಲ್ಲದಿದ್ದರೆ ಬದುಕಿದ್ದು ಸತ್ತಂತೆ .
3. ಗೆಳೆಯರು ಹೇಗೆ ಬಾಳುತ್ತಾರೆ ?
ಉತ್ತರ : ಗೆಳೆಯರು ಕಷ್ಟಸುಖಗಳಲ್ಲಿ ಭಾಗಿಯಾಗುತ್ತಾ , ಪ್ರೀತಿಯಿಂದ ಹೇಗೊ ಹೇಗೋ ಹೆಗಲುಗೊಟ್ಟು ನಡೆಯುತ್ತಾರೆ . ಯಾವುದೇ ಆಗು ಹೋಗುಗಳಿಗೆ ಸೋಲದೆ ಜೊತೆಗಿರುತ್ತಾರೆ . ಸುಖದ ಸಂದರ್ಭದಲ್ಲಿ ನಮ್ಮೊಂದಿಗೆ ಸಂತಸಪಟ್ಟು , ನಮಗೆ ದುಃಖವಾದಾಗ ತಾವೂ ಅದರಲ್ಲಿ ಸಹಭಾಗಿ ದುಃಖವನ್ನು ಹಂಚಿಕೊಳ್ಳುತ್ತಾರೆ . ಇಂತಹ ಗೆಳೆಯರಿಂದ ಜೀವನ ರಸದ ಪಾಕದಂತೆ ಮಧುರವಾಗುತ್ತದೆ .
ಈ ] ಕೊಟ್ಟಿರುವ ಪ್ರಶ್ನೆಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ
1. ಗೆಳೆತನದ ಮಹತ್ವವನ್ನು ಕಣವಿ ಅವರು ಹೇಗೆ ತಿಳಿಸಿದ್ದಾರೆ ?
ಗೆಳೆತನದ ಆಲದ ಮರದ ತಂಪಿನಿಂದಾಗಿ ಜೀವನದಲ್ಲಿ ಎದುರಾಗುವ ಸಹಿಸಲಾಗದ ಕಷ್ಟಗಳನ್ನು ನುಂಗಲು ಸಾಧ್ಯವಾಗುತ್ತದೆ . ಗೆಳೆತನದಲ್ಲಿ ವಂಚನೆ , ಚಂಚಲತೆ , ಮೇಲು ಕೀಳುಗಳೆಂಬ ಭೇದವಿಲ್ಲ . ಅಹಂಕಾರವಿಲ್ಲ . ದ್ವೇಷಭಾವನೆ , ಸಣ್ಣತನ , ಸಂಕೋಚ ಮುಂತಾದ ದುರ್ಗುಣಗಳು ಇರುವುದಿಲ್ಲ . ಆದ್ದರಿಂದ ಗೆಳೆತನವು ಈ ಭೂಮಿಯಲ್ಲಿ ದೊರೆಯುವ ಅಮೃತವಾಗಿದೆ . ಅದು ಇಲ್ಲದಿದ್ದರೆ ಬದುಕಿದ್ದು ಸತ್ತಂತೆ . ಗೆಳೆತನದಲ್ಲಿ ಮನವು ಬಾನಿನಂತೆ ವಿಶಾಲವಾಗಿದ್ದು ಎದೆ ತಿಳಿಯಾದ ಕೊಳದಂತೆ ಪ್ರಶಾಂತವಾಗಿರುತ್ತದೆ . ಹಾಗೂ ಭಾವನೆಯು ಸಟಕದಂತೆ , ಬೆಳದಿಂಗಳಿನಂತೆ ಪರಿಶುದ್ಧವಾಗಿರುತ್ತದೆ . ಗೆಳೆಯರು ಕಷ್ಟಸುಖಗಳಲ್ಲಿ ಭಾಗಿಯಾಗುತ್ತಾ , ಪ್ರೀತಿಯಿಂದ ಹೇಗೆ ಹೇಗೋ ಹೆಗಲುಗೊಟ್ಟು ನಡೆಯುತ್ತಾರೆ . ಯಾವುದೇ ಆಗು ಹೋಗುಗಳಿಗೆ ಸೋಲದೆ ಜೊತೆಗಿರುತ್ತಾರೆ . ಸುಖದ ಸಂದರ್ಭದಲ್ಲಿ ನಮ್ಮೊಂದಿಗೆ ಸಂತಸಪಟ್ಟು , ನಮಗೆ ದುಃಖವಾದಾಗ ತಾವೂ ಅದರಲ್ಲಿ ಸಹಭಾಗಿ ದುಃಖವನ್ನು ಹಂಚಿಕೊಳ್ಳುತ್ತಾರೆ . ಇಂತಹ ಗೆಳೆಯರಿಂದ ಜೀವನ ರಸದ ಪಾಕದಂತೆ ಮಧುರವಾಗುತ್ತದೆ . ಎಂದು ಕಣವಿಯವರು ಗೆಳೆತನದ ಮಹತ್ವವನ್ನು ತಿಳಿಸಿದ್ದಾರೆ .
ಉ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,
1. “ ಬಾಳುವರು ಗಂಧದೊಲು ಜೀವ ತೆಯ್ದು ! “
ಉತ್ತರ : ಆಯ್ಕೆ : ಈ ವಾಕ್ಯವನ್ನು ಚೆನ್ನವೀರ ಕಣವಿ ಅವರು ಬರೆದಿರುವ ‘ ಆಕಾಶಬುಟ್ಟಿ ‘ ಕವನ ಸಂಕಲನದಿಂದ ಆರಿಸಿಕೊಳ್ಳಲಾದ “ ಗೆಳೆತನ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಗೆಳೆಯರು ಕಷ್ಟ – ಸುಖಗಳಲ್ಲಿ ಹೇಗೆ ಹೆಗಲಿಗೆ ಹೆಗಲುಕೊಟ್ಟು ಭಾಗಿಯಾಗುತ್ತಾರೆ . ಗಂಧವು ತೇದಾಗ ಕಂಪು ನೀಡುವಂತೆ ಗೆಳೆಯರು ಹೇಗೆ ತ್ಯಾಗ ಮಾಡುತ್ತಾರೆ ಎಂಬುದನ್ನು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಗೆಳೆಯರ ತ್ಯಾಗ ಮನೋಭಾವನೆಯನ್ನು ಗಂಧ ತೇಯುವುದಕ್ಕೆ ಹೋಲಿಸಿರುವುದು ಇಲ್ಲಿನ ಸ್ವಾರಸ್ಯ
2. ” ಭಾವ ಶುದ್ಧ ಸ್ಪಟಿಕ , ಬೆಳದಿಂಗಳು ! “
ಉತ್ತರ : ಆಯ್ಕೆ : ಈ ವಾಕ್ಯವನ್ನು ಚೆನ್ನವೀರ ಕಣವಿ ಅವರು ಬರೆದಿರುವ ‘ ಆಕಾಶಬುಟ್ಟಿ ‘ ಕವನ ಸಂಕಲನದಿಂದ ಆರಿಸಿಕೊಳ್ಳಲಾದ ‘ ಗೆಳೆತನ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿ ಗೆಳೆತನದ ಬಗ್ಗೆ ಹೇಳುತ್ತಾ ಗೆಳೆತನದಲ್ಲಿ ಮನವು ಬಾನಿನಂತೆ ವಿಶಾಲವಾಗಿದ್ದು ಎದೆ ತಿಳಿಯಾದ ಕೊಳದಂತೆ ಪ್ರಶಾಂತವಾಗಿರುವತ್ತದೆ . ಹಾಗೂ ಭಾವನೆಯ ಸ್ಪಟಿಕದಂತೆ , ಬೆಳದಿಂಗಳಿನಂತೆ ಪರಿಶುದ್ಧವಾಗಿರುತ್ತದೆ . ಎಂದು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಗೆಳೆತನದ ಪರಿಶುದ್ಧತೆಯನ್ನು ಸಟಿಕ ಹಾಗೂ ಬೆಳದಿಂಗಳಿಗೆ ಹೋಲಿಸಿರುವುದು ಸ್ವಾರಸ್ವಪೂರ್ಣವಾಗಿದೆ .
3. “ಅದನುಳಿದರೇನಿಹುದು_ ಜೀವನ್ಮೃತ!”
ಉತ್ತರ : ಆಯ್ಕೆ : ಈ ವಾಕ್ಯವನ್ನು ಚೆನ್ನವೀರ ಕಣವಿ ಅವರು ಬರೆದಿರುವ ‘ ಆಕಾಶಬುಟ್ಟಿ ‘ ಕವನ ಸಂಕಲನದಿಂದ ಆರಿಸಿಕೊಳ್ಳಲಾದ “ ಗೆಳೆತನ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿ ಗೆಳೆತನವೆ ಇಹಲೋಕಕಿರುವ ಅಮೃತವಾಗಿದೆ . ಅದಿಲ್ಲದಿದ್ದರೆ ಬದುಕಿದ್ದು ಸತ್ತಂತೆ ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಗೆಳೆತನ ಜೀವನಕ್ಕೆ ಅತ್ಯವಶ್ಯಕ ಎಂಬುದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿದೆ .
4. “ ಕಂಡ ಕಂಡವರೇನು ಬಲ್ಲರಿದನು ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಚೆನ್ನವೀರ ಕಣವಿ ಅವರು ಬರೆದಿರುವ ‘ ಆಕಾಶಬುಟ್ಟಿ ‘ ಕವನ ಸಂಕಲನದಿಂದ ಆರಿಸಿಕೊಳ್ಳಲಾದ ‘ ಗೆಳೆತನ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿ ಗೆಳೆತನದ ಪರಿಶುದ್ಧತೆ ಮತ್ತು ಅದರ ಮಹತ್ವವನ್ನು ಕಂಡಕಂಡವರೆಲ್ಲ ತಿಳಿಯಲು ಸಾಧ್ಯವಿಲ್ಲ . ಗೆಳೆತನವನ್ನು ನಿಜವಾಗಿ ಅನುಭವಿಸಿದವರಿಗೆ ಮಾತ್ರ ತಿಳಿಯುತ್ತದೆ . ಎಂದು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಗೆಳೆತನದ ಬಗ್ಗೆ ಮಾತನಾಡುವವರಿಗೆಲ್ಲಾ ಅದರ ಮಹತ್ವ ತಿಳಿಯುವಲ್ಲ , ಅನುಭವದಿಂದ ಮಾತ್ರ ಅದನ್ನು ಅರಿಯಲು ಸಾಧ್ಯ ಎಂಬುದು ಇಲ್ಲಿ ಸ್ವಾರಸ್ಯವಾಗಿದೆ .
8th Standard Geletana Kannada Poem Notes Question Answer Pdf
ಇತರೆ ಪಾಠಗಳು :
Nice… Very useful ☺️👍