9th Class Ranji’s Wonderful Bat Supplementary English Notes Pdf

9th Class Ranji’s Wonderful Bat Supplementary English Notes Pdf kseeb solutions for class 9 Supleementry english Notes 3 Ranji’s Wonderful Bat question answer english 9th Standard Ranji’s Wonderful Bat lesson Summary in kannada Ranji’s Wonderful Bat pdf download 9th Std 2023

Ranji’s Wonderful Bat pdf download 9th Std

Class : 9th Standard

Name: Ranji’s Wonderful Bat

9th Class Ranji’s Wonderful Bat Supplementary English Notes Pdf
9th Class Ranji’s Wonderful Bat Supplementary English Notes Pdf

Ranji’s Wonderful Bat Summary In Kannada

ಪ್ರೋತ್ಸಾಹ, ನಂಬಿಕೆ, ಮತ್ತು ಅತ್ಮವಿಶ್ವಾಸಗಳಿಂದ ನಾವು ನಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದೆಂದು ಈ ಪಾಠದಲ್ಲಿ ವಿಸ್ತರಿಸಲಾಗಿದೆ.
ರಂಜಿಯ ಶಾಲೆಯಲ್ಲಿ ಅಂತರ ಶಾಲಾ ಕ್ರಿಕೆಟ್‌ ಮ್ಯಾಚ್‌ ನಡೆಯುತ್ತಿರುತ್ತದೆ, ರಂಜಿ ಟೀಮಿನ ನಾಯಕ ಸೂರಜ್‌ ಆಗುತ್ತಾನೆ. ಆಗ ರಂಜಿಯ ಟೀಮ್‌ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ ಐವತ್ತ್ಮೂರು ರನ್‌ ಗಳಿಸಿರುತ್ತಾರೆ. ಅವರು ಜಯಗಳಿಸಲು ಇನ್ನೂ ಅರವತ್ತು ರನ್‌ ಬೇಕಾಗಿರುತ್ತದೆ. ಒಬ್ಬ ಮಾತ್ರ ಉತ್ತಮ ಬ್ಯಾಟ್ಸ್ ಮನ್‌ ಇರುತ್ತಾನೆ. ಉಳಿದವರೆಲ್ಲ. ಹೆಚ್ಚು ರನ್‌ ಗಳಿಸಲು ಸಾಧ್ಯವಿಲ್ಲದ ಬೌಲರ್ ಗಳು. ಇಂತಹ ಸಮಯದಲ್ಲಿ ರಂಜಿ ಬ್ಯಾಟ್‌ ಮಾಡುವ ಸರದಿ ಬರುತ್ತದೆ, ಆ ಆಟದ ಗುಂಪಿನಲ್ಲಿ ರಂಜಿ ಹನ್ನೊಂದು ವರ್ಷದ ಆದರೆ ಧೈರ್ಯವಂತ ಕಿರಿಯ ಆಟಗಾರ. ಆದರೆ ರಂಜಿ ಎದುರಿಸಿದ ಮೊದಲ ಚಂಡಿಗೆ ಎಲ್.ಬಿ.ಡಬ್ಲ್ಯೂ ಆಗಿ ಔಟ್‌ ಆಗುತ್ತಾನೆ.ತಂಡದ ನಾಯಕ ರಂಜಿಯ ಬೆನ್ನುತಟ್ಟಿ ಮುಂದಿನ ಸರಿ ಚೆನ್ನಾಗಿ ಆಡಬೇಕೆಂದು ಇಲ್ಲದಿದ್ದರೆ ತಂಡದಿಂದ ಕೈಬಿಡಲಾಗುತ್ತದೆ ಎಂದು ಹೇಳುತ್ತಾನೆ. ರಂಜಿಗೆ ತುಂಬಾ ಬೇಸರವಾಗುತ್ತದೆ. ಪ್ರತಿನಿತ್ಯ ಚೆನ್ನಾಗಿ ಅಭ್ಯಾಸ ಮಾಡಿದರು ಸಹ ಮುಖ್ಯವಾದ ಆಟದಲ್ಲಿ ಹೆಚ್ಚು ರನ್‌ ಗಳಿಸಲು ವಿಫಲನಾಗುತ್ತಾನೆ.
ರಂಜಿ ಮನೆಗೆ ಹೋಗುವ ದಾರಿಯಲ್ಲಿ ಮಿ.ಕುಮಾರ್‌ ಆಟದ ಸಾಮಾನುಗಳ ಅಂಗಡಿ ಇರುತ್ತದೆ. ರಂಜಿ ಅಗಾಗ್ಗೆ ಅಲ್ಲಿಗೆ ಭೇಟಿ ನೀಡಿ ಕುಮಾರ್‌ ಜೊತೆ ಮಾತನಾಡಿ ಮತ್ತು ಎಲ್ಲಾ ಆಟದ ಸಾಮಾನುಗಳನ್ನು ನೋಡುವ ಅಭ್ಯಾಸವಿರುತ್ತದೆ. ಕುಮಾರ್‌ ಒಬ್ಬ ರಾಜ್ಯ ಮಟ್ಟದ ಕ್ರಿಕೆಟ್‌ ಆಟಗಾರ, ಒಮ್ಮೆ ಆತ ತಾಂಜೆನಿಯ ವಿರುದ್ದ ನೂರು ರನ್‌ ಗಳಿಸಿರುತ್ತಾನೆ. ಆದರೆ ರಂಜಿ ಕಂಡ ಆಟದಲ್ಲಿ ಸೋತ ದಿನ ರಂಜಿ ಕುಮಾರ್‌ ಅಂಗಡಿ ಕಡೆ ನೋಡದೆ ಹೋಗುತ್ತಿರುತ್ತಾನೆ. ಆದರೆ ಕುಮಾರ್‌ ರಂಜಿಯನ್ನು ಕರೆದಲು ಅಂದಿನ ಅಟದ ಬಗ್ಗೆ ವಿಚಾರಿಸುತ್ತಾನೆ. ಒಂದು ರನ್‌ ಗಳಿಸಲಿಲ್ಲ ಎಂದು ರಂಜಿ ಹೇಳುತ್ತಾನೆ.
ಕಳೆದ ಮೂರು ಆಟಗಳಲ್ಲಿ ರಂಜಿ ಹೆಚ್ಚು ರನ್‌ ಮಾಡಿರಲಿಲ್ಲ ಮುಂದಿನ ಆಟಗಳಲ್ಲಿ ರಂಜಿ ಚೆನ್ನಾಗಿ ಆಡದಿದ್ದರೆ ತಂಡದಿಂದ ಕೈಬಿಡುತ್ತಾರೆ. ಎಂದು ರಂಜಿ ಕುಮಾರ್‌ ಗೆ ಹೇಳುತ್ತಾನೆ. ಹಾಗೆ ಅಗದಿರುವ ಹಾಗೆ ಏನಾದರೂ ಮಾಡೋಣ ಎಂದು ಕುಮಾರ್‌ ತನ್ನ ಅಂಗಡಿಯಲ್ಲಿದ್ದ ಹಳೆ ಬ್ಯಾಟ್ ಗಳಲ್ಲಿ ಒಂದನ್ನು ಆರಿಸಿ ರಂಜಿಗೆ ಕೊಡುತ್ತಾನೆ. ತನ್ನ ಹಳೆಯ ಬ್ಯಾಟ್‌ ಗಳಲ್ಲಿ ಇದು ತುಂಬಾ ಅದೃಷ್ಟವಂತ ಬ್ಯಾಟ್‌ ಮತ್ತು ಅದರಿಂದ ನೂರು ರನ್‌ ಗಳಿಸಿದ್ದೇನೆಂದು ಕುಮಾರ್‌ ರಂಜಿಗೆ ಹೇಳುತ್ತಾನೆ. ರಂಜಿಯು ಸಹ ಅದರಿಂದ ನೂರು ರನ್‌ ಗಳಿಸಬಹುದೆಂದು ಕುಮಾರ್‌ ರಂಜಿಯನ್ನು ಪ್ರೋತ್ಸಾಹಿಸುತ್ತಾನೆ. ರಂಜಿ ಶನಿವಾರ ನಡೆಯುವ ಮ್ಯಾಚ್‌ ಗಾಗಿ ಕಾಯುತ್ತಿರುತ್ತಾನೆ. ಪಕ್ಕದ ಮನೆಯ ಹುಡುಗಿ ಕೋಕಿಯಿಂದ ಬೌಲ್‌ ಮಾಡಿಸಿಕೊಂಡು ಚೆನ್ನಾಗಿ ಅಭ್ಯಾಸ ಮಾಡುತ್ತಾನೆ. ಶನಿವಾರದ ಆಟದಲ್ಲಿ ರಂಜಿ ತಂಡದ ನಾಯಕ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಲು ತೀರ್ಮಾನಿಸುತ್ತಾನೆ. ಆರಂಭದ ಆಟಗಾರರು ಮೂವತ್ತು ರನ್‌ ಗಳಿಸುತ್ತಾನೆ, ನಂತರ ಒಂದೇ ಓವರ್‌ನಲ್ಲಿ ಎರಡು ಆಟಗಾರರು ಔಟ್‌ ಆಗುತ್ತಾರೆಲ. ನಾಯಕ ಸೂರಜ್‌ ಸಹ ಕೆಲವು ರನ್‌ ಗಳಿಸಿ ಔಟ್‌ ಆಟ ಕಳೆದುಕೊಳ್ಳುತ್ತಾನೆ.ಆಗ ರಂಜಿ ಆಟಕ್ಕೆ ಬರುತ್ತಾನೆ. ರಂಜಿ ಎದುರಿಸಿದ ಮೊದಲ ಚಂಡನ್ನು ಬೌಂಡರಿ ಗೆರೆ ದಾಟಿಸಿ ನಾಲ್ಕು ರನ್‌ ಗಳಿಸುತ್ತಾರೆ. ನಂತರ ರಂಜಿ ತನಗೆ ಗೊತ್ತಿದ್ದ ಎಲ್ಲಾ ರೀತಿ ಹೊಡೆತಗಳನ್ನು ಬಾರಿಸುತ್ತಾನೆ. ಫೀಲ್ಡ್ ಗಳು ಎಲ್ಲಾ ಕಡೆಯ ಮೂಲೆ ಮೂಲೆಗೆ ಓಡುವ ಹಾಗೆ ಮಾಡುತ್ತಾನೆ. ಮದ್ಯಾಹ್ನ ಊಟದ ನಂತರ. ಸೂರಜ್‌ ಆಟ ನಿಲ್ಲಿಸಿದಾಗ ರಂಜಿ ಆಟವನ್ನು ಕಳೆದುಕೊಳ್ಳದೆ 58ರನ್‌ ಗಳನ್ನು ಗಳಿಸುತ್ತಾನೆ. ರಂಜಿ ಶಾಲೆಯ ತಂಡ ಆಟವನ್ನು ಗೆಲ್ಲುತ್ತದೆ.
ಅಂದು ಮನೆಗೆ ಹೋಗುವಾಗ ರಂಜಿ ಮಿ. ಕುಮಾರ್‌ ನ ಅಂಗಡಿಗೆ ಭೇಟಿ ಕೊಟ್ಟು ತಾವು ಆಟದಲ್ಲಿ ಗೆದ್ದುದ್ದನ್ನು ತಿಳಿಸುತ್ತಾನೆ. ಇನ್ನು ಹೆಚ್ಚು ರನ್‌ ಗಳಿಸಬಹುದೆಂದು ಕುಮಾರ್‌ ರಂಜಿಯನ್ನು ಪ್ರೋತ್ಸಾಹಿಸುತ್ತಾನೆ, ರಂಜಿ ತುಂಬಾ ಉತ್ಸುಕವಾಗಿ ಹುಮ್ಮಸ್ಸಿನಿಂದ ಮನೆಗೆ ಹೊರಡುತ್ತಾನೆ. ತುಂಬಾ ಸಂತೋಷವಾಗಿದ್ದರಿಂದ ಜಮ್ಮ ಸಿಹಿತಿಂಡಿ ಅಂಗಡಿಗೆ ಹೋಗಿ ಎರಡು ಲಾಡುಗಳನ್ನು ಕೋಕಿಗಾಗಿ ಕೊಂಡುಕೊಳ್ಳುತ್ತಾನೆ.
ಮುಂದಿನ ಆಟದಲ್ಲಿ ರಂಜಿ 40ರನ್‌ ಗಳಿಸುತ್ತಾನೆ. ರಂಜಿ ಇನ್ನು ಹೆಚ್ಚು ರನ್‌ ಗಳಿಸಬಹುದಿತ್ತು. ಆದರೆ ಅಜಾಗರೂಕತೆಯಿಂದ ಆಡಿದ್ದರಿಂದ ಆಡ ಕಳೆದುಕೊಳ್ಳುತ್ತಾನೆ. ಎಲ್ಲರೂ ರಂಜಿಯ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂತೋಷಪಡುತ್ತಾರೆ. ಆದರೆ ಯಾರಿಗೂ ರಂಜಿಯ ಅದೃಷ್ಟದ ಬ್ಯಾಟ್‌ ಬಗ್ಗೆ ಗೊತ್ತಿರುವುದಿಲ್ಲ. ಒಂದು ದಿನ ಸಂಜೆ ಆಟ ಮುಗಿದ ನಂತರ ರಂಜಿ ಮನೆಗೆ ಹೋಗಲು ಬಸ್‌ ಹತ್ತುತ್ತಾನೆ. ಆದರೆ ಬ್ಯಾಟ್‌ ನ್ನು ಮರೆತು ಬಸ್‌ ನಲ್ಲಿ ಬಿಟ್ಟುಬರುತ್ತಾನೆ. ಅದು ಅವನಿಗೆ ಪುನಃ ಸಿಗುವುದಿಲ್ಲ. ಆ ಬ್ಯಾಟನ್ನು ಕಳೆದುಕೊಳ್ಳುತ್ತಾನೆ. ರಂಜಿಯ ತಂಡ ಬರುವ ಶನಿವಾರ ದೆಹಲಿ ಪಬ್ಲಿಕ್‌ ಶಾಲೆಯ ವಿರುದ್ದ. ಮುಖ್ಯವಾದ ಆಟವನ್ನು ಆಡಬೆಕಾಗಿರುತ್ತದೆ.
ಮರುದಿನ ರಂಜಿ ಕುಮಾರ್‌ ಹತಿರ ಹೋಗಿ ತಾನು ಆ ಬ್ಯಾಟ ನ್ನು ಕಳೆದು ಕೊಂಡಿರುವುದಾಗಿ ತಿಳಿಸುತ್ತಾನೆ. ಕುಮಾರ್‌ ಮೊದಲು ಚಿಂತಿಸದಂತೆ ಮಾಡಿ ನಂತರ ನಗತ್ತಾ ರಂಜಿ ಇನ್ನು ಹೆಚ್ಚಿನ ರನ್‌ ಗಳಿಸಲು ಸಾದ್ಯ ಎಂದು ಹೇಳುತ್ತಾನೆ. ಯಾವುದೆ ಬ್ಯಾಟಿನಿಂದಲಾದರೂ ರಂಜಿ ಹೆಚ್ಚು ರನ್‌ ಗಳಿಸಬಹುದು. ಬ್ಯಾಟ್ಸ ನ ಮಾಂತ್ರಿಕನಾಗಿದ್ದಾಗ ಮಾತ್ರ ಬ್ಯಾಟ್‌ ಮಾಂತ್ರಿಕವಾಗಲು ಸಾಧ್ಯ. ಇದೆಲ್ಲದಕ್ಕೂ ಆಟಗಾರನಿಗೆ ನಂಬಿಕೆ, ನಿರ್ಧಾರ, ಮತ್ತು ದೈರ್ಯ ಬೇಕು. ಆ ಬ್ಯಾಟ್‌ ಅದೃಷ್ಟ ವುಳ್ಳದ್ದು ಎಂದು ನಂಬಿದ್ದರಿಂದ ರಂಜಿ ತನ್ನ ಆತ್ಮ ಸೈನ್ಯವನ್ನು ಪುನಃ ಪಡೆದುಕೊಂಡಿರುವುದಾಗಿ ಕುಮಾರ್‌ ರಂಜಿಗೆ ಹೇಳುತ್ತಾನೆ. ತಾನು ಉತ್ತಮ ಆಟಗಾರ ಎಂದು ತನ್ನಲ್ಲಿ ನಂಬಿಕೆ ಇಟ್ಟುಕೊಂಡು ಆಟವಾಡಿದರೆ , ಆ ಬ್ಯಾಟ್‌ ನಿಂದಾದರು ರಂಜಿ ಹೆಚ್ಚು ರನ್‌ ಗಳಿಸಬಹುದೆಂದು ಕುಮಾರ್‌ ರಂಜಿಯನ್ನು ಪ್ರೋತ್ಸಾಹಿಸಿ ಧೈರ್ಯ ತುಂಬುತ್ತಾನೆ.
ಶನಿವಾರ ಆಟ ಆರಂಭವಾಗುತ್ತದೆ, ರಂಜಿ ಶಾಲೆಯ ತಂಡ ಎರಡು ರನ್‌ ಗಳಿಸಿದಾಗ ಮೊದಲು ವಿಕೆಟ್‌ ಕಳೆದುಕೊಳ್ಳುತ್ತದೆ. ಆಗ ರಂಜಿ ಸೂರಜ್‌ ನಿಂದ ಪಡೆದುಕೊಂಡಿದ್ದ ಬ್ಯಾಟನ್ನು ತೆಗೆದುಕೊಂಡು ಆಟಕ್ಕೆ ಬರುತ್ತಾನೆ. ಆತ ಎದುರಿಸಿದ ಮೊದಲ ಚೆಂಡನ್ನೆ ಬೌಂಡರಿ ಗೆರೆ ಆಚೆ ದಾಟಿಸಿ ಆರು ರನ್‌ ಗಳಿಸುತ್ತಾನೆ. ಎಲ್ಲರೂ ಹರ್ಷಪಟ್ಟ್ಟು ಜಯಘೋಷ ಕೂಗುತ್ತಾರೆ. ರಂಜಿ ಅಂದು ಅಧ್ವುತವಾಗಿ ಆಡುತ್ತಾನೆ. ರಂಜಿ ಎಪ್ಪತ್ತೈದು ರನ್‌ ಗಳಿಸುತ್ತಾನೆ, ಅಂದಿನ
ಆಟ ಡ್ರಾ ಆಗುತ್ತದೆ. ಆದರೆ ಶಾಲೆಯಲ್ಲಿ ಎಲ್ಲರೂ ರಂಜಿಯ ಆಟದ ಬಗ್ಗೆಯೇ ಮಾತಾಡುತ್ತಿರುತ್ತಾರೆ. ಅಂದು ರಂಜಿ ಮನೆಗೆ ಹೋಗುವಾಗ 6 ಲಾಡು ಕೋಕೀಗೋಸ್ಕರ ಮತ್ತು 6 ಲಾಡು ಮಿ.ಕುಮಾರ್‌ ಗೋಸ್ಕರ ಒಟ್ಟು 12 ಲಾಡುಗಳನ್ನು ಕೊಂಡುಕೊಳ್ಳುತ್ತಾನೆ.

9th class Ranji’s Wonderful Bat supplementary english notes pdf

PDF Name9th English Ranji’s Wonderful Bat Notes Pdf
No. of Pages03
PDF Size64KB
LanguageEnglish
CategoryEnglish Notes
Download LinkAvailable ✓
Topics9th Class English Ranji’s Wonderful Bat Notes Pdf

9th Ranji’s Wonderful Bat lesson question and answer

9th Standard Ranji’s Wonderful Bat Supleementry English Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

Ranji’s Wonderful Bat question and answer english 9th Standard

Ranji’s Wonderful Bat Supleementry summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Ranji’s Wonderful Bat lesson in kannada

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

kseeb solutions for class 9 Supleementry english Notes 3

ಇಲ್ಲಿ ನೀವು 9th Standard Ranji’s Wonderful Bat Supleementry Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 9th Ranji’s Wonderful Bat Supleementry Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

Who was the youngest member of the team?

Ranji was the youngest member of the team, only eleven but strong and bold.

What did Mr. Kumar give Ranji?

Mr. Kumar gave Ranji an old bat of his, by which he scored a century.

How many runs did Ranji score in the first match?

Ranji scored no runs in the first match.


ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.