8ನೇ ತರಗತಿ ಮಗಳಿಗೆ ಬರೆದ ಪತ್ರ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 8th Standard Magalige Bareda Patra Kannada Notes Question Answer Pdf Download
ತರಗತಿ : 8ನೇ ತರಗತಿ
ಪೂರಕ ಪಾಠದ ಹೆಸರು : ಮಗಳಿಗೆ ಬರೆದ ಪತ್ರ
Table of Contents
Magalige Bareda Patra Kannada Notes Question Answer
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
೧. ಈ ಪತ್ರವನ್ನು ನೆಹರುರವರು ಯಾರಿಗೆ ಬರೆದಿದ್ದಾರೆ ?
ಈ ಪತ್ರವನ್ನು ನೆಹರುರವರು ತಮ್ಮ ಮಗಳಾದ ಇಂದಿರಾ ಪ್ರಿಯದರ್ಶಿನಿಗೆ ಬರೆದಿದ್ದಾರೆ .
೨. ಹೂಯಾನ್ ತ್ಸಾಂಗ್ ಭರತಖಂಡಕ್ಕೆ ಏಕೆ ಬಂದನು ?
ಹೂಯಾನ್‌ತ್ಸಾಂಗ್ ಭರತಖಂಡಕ್ಕೆ ಜ್ಞಾನಾರ್ಜನೆಗಾಗಿ , ವಿವೇಕಸಾಧನೆಗಾಗಿ ಬಂದನು .
೩. ನಲಂದ ವಿಶ್ವವಿದ್ಯಾನಿಲಯವು ಎಲ್ಲಿತ್ತು ?
ನಲಂದ ವಿಶ್ವವಿದ್ಯಾನಿಲಯವು ಪಾಟಲೀಪುತ್ರದ ಬಳಿ ಇತ್ತು .
೪. ದಕ್ಷಿಣ ದೇಶದಿಂದ ಬಂದ ಯಾತ್ರಿಕ ‘ ಅವನ ವೇಷದ ಬಗ್ಗೆ ಏನು ಹೇಳುತ್ತಿದ್ದ ?
ದಕ್ಷಿಣ ದೇಶದಿಂದ ಬಂದ ಯಾತ್ರಿಕ ಅವನ ವೇಷದ ಬಗ್ಗೆ , “ ನನ್ನ ಜ್ಞಾನವಷ್ಟಿದೆ . ಈ ತಾಮ್ರದ ರೇಕುಗಳನ್ನು ಬಿಗಿಸದೆಹೋದೆನಾದರೆ ನನ್ನ ಹೊಟ್ಟೆ ಬಿರಿದೀತು . ನನ್ನ ಸುತ್ತ ಸುಳಿವ ಅಜ್ಞಾನಿಗಳ ಕಂಡೆನಗೆ ‘ ಅಯ್ಯೋ ‘ ಅನಿಸುತ್ತದೆ . ಆವರೆಲ್ಲ ಕತ್ತಲೆಯಲ್ಲಿ ತಡವಿ ಆಡುತ್ತಿದ್ದಾರೆ . ಅವರಿಗಾಗಿ ನಾ ನನ್ನ ನೆತ್ತಿಯಮೇಲೆ ದೀಪ ಹೊತ್ತಿದ್ದೇನೆ ” ಎನ್ನುತ್ತಿದ್ದನು .
೫. ಬಾಪೂಜಿಯವರ ವ್ಯಕ್ತಿತ್ವದ ಬಗ್ಗೆ ನೆಹರೂರವರು ಏನು ಹೇಳಿದ್ದಾರೆ ?
“ ಭಾರತದಲ್ಲಿ ಮತ್ತೊಬ್ಬ ಮಹಾನಾಯಕ ಬಂದ ; ಕನಿಷ್ಠುರಗಳಿಗೆ ಸಿಕ್ಕಿದವರೆಂದರೆ ಆತನ ಪ್ರೇಮ ಅಪಾರ ; ಅವರಿಗೆ ಸಹಾಯಮಾಡಲು ಉಗ್ರ ಆವೇಶದ ಆತುರ ಅವನಿಗೆ , ಆತ ನಮ್ಮ ಜನರಿಗೆಲ್ಲ ಮಹಾತ್ಕಾರ್ಯ ಸಾಧನೆಮಾಡಲೂ , ಗಂಭೀರ ಬಲಿದಾನಮಾಡಲು ಸ್ಪೂರ್ತಿಕೊಡುತ್ತಿದ್ದಾನೆ . ಬಲಿದಾನಮಾಡಿ ನಾವು ಸ್ವಾತಂತ್ರ್ಯ ಪಡೆಯಬೇಕು . ಹಸಿವಿನಿಂದ ಕೊರಗುತ್ತಿರುವವರು , ಬಡವರು , ಅನ್ಯಾಯಕ್ಕೆ ತುತ್ತಾದವರೇ ಮೊದಲಾದವರ ದುಃಖದ ಭಾರವಿಳಿಸಬೇಕು ; ಇದು ಆತನಾಸೆ . ” ಎಂದು ಬಾಪೂಜಿಯವರ ವ್ಯಕ್ತಿತ್ವದ ಬಗ್ಗೆ ನೆಹರೂ ಅವರು ಹೇಳಿದ್ದಾರೆ .
೬. ತೆರೆಮರೆಯಲ್ಲಿ ಕೆಲಸ ಮಾಡಿದರೆ ಯಾವ ಅರ್ಥ ಬರುತ್ತದೆ ?
ಉತ್ತರ : ತೆರೆಮರೆಯಲ್ಲಿ ಕೆಲಸ ಮಾಡಿದರೆ ‘ ಭಯವಿದೆ ‘ ಎಂಬ ಅರ್ಥ ಬರುತ್ತದೆ .
8th Standard Magalige Bareda Patra Kannada Notes Question Answer Pdf
ಇತರೆ ಪದ್ಯಗಳು :